ದಟ್ಸನ್ ಗೊ ಸಣ್ಣ ಕಾರು ಕಣ್ತುಂಬ ನೋಡಿಕೊಳ್ಳಿರಿ

Posted By:

ಕಣ್ತುಂಬ ನೋಡಿಕೊಳ್ಳಿರಿ ಆಮೇಲೆ ಇಂತಹ ಸದಾವಕಾಶ ಮಿಸ್ ಆದಿತು. ಕಳೆದೊಂದು ದಶಕಗಿಂತಲೂ ಹೆಚ್ಚು ಕಾಲ ಭಾರತೀಯ ರಸ್ತೆಗಳಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ಮಾರುತಿ ಅಧಿಪತ್ಯ ಕೊನೆಗೊಳಿಸಲು ಹೊಸ ಕಾರು ಎಂಟ್ರಿ ಕೊಡುತ್ತಿದೆ.

ಹಾಗೆಂದು ಆಟೋ ವಲಯಗಳಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗುತ್ತದೆ. ಅಷ್ಟಕ್ಕೂ ಮಾರುತಿ ಏಕಾಧಿಪತ್ಯಕ್ಕೆ ಟಕ್ಕರ್ ನೀಡುವಷ್ಟು ಬಲ ಯಾರಿಗಿದೆ ಅಂತೀರಾ? ಹೌದು, ಕೆಲವೇ ತಿಂಗಳುಗಳ ಹಿಂದೆಯಷ್ಟೇ ಅಂದರೆ ಜುಲೈ ತಿಂಗಳಲ್ಲಿ ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದ ನಿಸ್ಸಾನ್ ನಿಯಂತ್ರಣದಲ್ಲಿರುವ ದಟ್ಸನ್ ಬ್ರಾಂಡ್‌ನ ಹೊಚ್ಚ ಹೊಸತಾದ ಗೊ ಕಾರು 2014ರಲ್ಲಿ ಎಂಟ್ರಿ ಕೊಡಲಿದೆ.

ಈ ಎಲ್ಲ ಬೆಳವಣಿಗೆಗಳನ್ನು ಆಟೋ ಜಗತ್ತು ಬಹಳ ಕುತೂಹಲದಿಂದ ಎದುರು ನೋಡುತ್ತಿದೆ. ಏತನ್ಮಧ್ಯೆ ಗೊ ಬಿರುಗಾಳಿ ಎದುರಿಸಲು ಮಾರುತಿ ಆಲ್ಟೊ ಯಾವ ರೀತಿ ಸನ್ನದ್ಧವಾಗಲಿದೆ ಎಂಬುದುಕ್ಕೂ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.

ದಟ್ಸನ್ ಗೊ ಸಣ್ಣ ಕಾರು ಕಣ್ತುಂಬ ನೋಡಿಕೊಳ್ಳಿರಿ

ದಟ್ಸನ್ ದೂರದೃಷ್ಟಿಯಂತೆ ಗೊ ಸಣ್ಣ ಹ್ಯಾಚ್‌ಬ್ಯಾಕ್ ಕಾರು ಈಗಾಗಲೇ ಯಶಸ್ವಿ ಪರೀಕ್ಷೆ ಹಂತದಲ್ಲಿದ್ದು, ತನ್ನ ನಿಕಟ ಪ್ರತಿಸ್ಪರ್ಧಿಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

ಫೋಟೊ ಕೃಪೆ: ಟೀಮ್ ಬಿಎಚ್‌ಪಿ

ದಟ್ಸನ್ ಗೊ ಸಣ್ಣ ಕಾರು ಕಣ್ತುಂಬ ನೋಡಿಕೊಳ್ಳಿರಿ

ಅಷ್ಟಕ್ಕೂ ಸ್ಮರ್ಧಾತ್ಮಕ ದರಗಳಲ್ಲಿ ಆಗಮಿಸಿದರೆ ಮಾತ್ರ ಭಾರತ ಮಾರುಕಟ್ಟೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂಬುದನ್ನು ದಟ್ಸನ್ ಚೆನ್ನಾಗಿ ಅರಿತಿದೆ. ಇದರತ್ತ ಗೊ ಕಣ್ಣಾಯಿಸುವುದು ಒಳಿತು.

ಫೋಟೊ ಕೃಪೆ: ಟೀಮ್ ಬಿಎಚ್‌ಪಿ

ದಟ್ಸನ್ ಗೊ ಸಣ್ಣ ಕಾರು ಕಣ್ತುಂಬ ನೋಡಿಕೊಳ್ಳಿರಿ

ಈ ಎಲ್ಲ ವಿಷಯಗಳು ಒಂದೆಡೆಯಾದರೆ ಆಲ್ಟೊ ಮಗುಚಿ ಹಾಕುವುದು ಅಷ್ಟು ಸುಲಭದ ಕೆಲಸವಲ್ಲ. ಯಾಕೆಂದರೆ ಆಲ್ಟೊ ಈಗಾಗಲೇ ಜನಸಾಮಾನ್ಯರ ಕಾರು ಎಂಬ ಮನ್ನಣೆಗೆ ಪಾತ್ರವಾಗಿದೆ. ಈ ಬಿರುದನ್ನು ಅಳಿಸಿ ಹಾಕುವುದು ಸ್ವಲ್ಪ ಕಠಿಣ ಸಂಗತಿ.

ಫೋಟೊ ಕೃಪೆ: ಟೀಮ್ ಬಿಎಚ್‌ಪಿ

ದಟ್ಸನ್ ಗೊ ಸಣ್ಣ ಕಾರು ಕಣ್ತುಂಬ ನೋಡಿಕೊಳ್ಳಿರಿ

ಅಂದ ಹಾಗೆ ಮುಂದಿನ ವರ್ಷ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ದಟ್ಸನ್ ಗೊ ಭರ್ಜರಿ ಎಂಟ್ರಿ ಕೊಡಲಿದೆ. ಇದು ಚೆನ್ನೈನ ಓರಗಡಂ ಘಟಕದಲ್ಲಿ ಉತ್ಪಾದನೆಯಾಗಲಿದೆ.

ದಟ್ಸನ್ ಗೊ ಸಣ್ಣ ಕಾರು ಕಣ್ತುಂಬ ನೋಡಿಕೊಳ್ಳಿರಿ

ನಿಸ್ಸಾನ್ ಮೈಕ್ರಾಗಿಂತ ಕೆಳಗಡೆ ಬಿ ಸೆಗ್ಮೆಂಟ್‌ನಲ್ಲಿ ಗುರುತಿಸಿಕೊಳ್ಳಲಿರುವ ದಟ್ಸನ್ ಗೊ, ಪ್ರಾರಂಭಿಕ ದರ 3.5 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

ದಟ್ಸನ್ ಗೊ ಸಣ್ಣ ಕಾರು ಕಣ್ತುಂಬ ನೋಡಿಕೊಳ್ಳಿರಿ

ಇನ್ನು ಬೆಲೆ ಕಡಿಮೆ ಮಾಡುವ ನಿಟ್ಟಿನಲ್ಲಿ ದಟ್ಸನ್ ಗೊ, ನಿಸ್ಸಾನ್ ಮೈಕ್ರಾ ಜತೆ ಫ್ಲ್ಯಾಟ್‌ಫಾರ್ಮ್ ಹಂಚಿಕೊಂಡಿದೆ. ಅಂದರೆ ಮೈಕ್ರಾದಲ್ಲಿರುವದಕ್ಕೆ ಸಮಾನವಾದ 1.2 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಹಾಗೆಯೇ 2450 ಎಂಎಂ ವೀಲ್ ಬೇಸ್ ಪಡೆದುಕೊಳ್ಳಲಿದೆ.

ದಟ್ಸನ್ ಗೊ ಸಣ್ಣ ಕಾರು ಕಣ್ತುಂಬ ನೋಡಿಕೊಳ್ಳಿರಿ

ಹಾಗಿದ್ದರೆ ದಟ್ಸನ್ ಗೊ ಮಾರಾಟ ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬ ಆಂತಕವಿದೆಯೇ? ಅದಕ್ಕೂ ಮಾರ್ಗವಿದೆ. ಮೇಲೆ ಸೂಚಿಸಿದ ರೀತಿಯಲ್ಲಿಯೇ ನಿಸ್ಸಾನ್ ಡೀಲರ್‌ಶಿಪ್ ಮೂಲಕ ದಟ್ಸನ್ ಗೊ ಮಾರಾಟ ನಡೆಯಲಿದೆ.

ದಟ್ಸನ್ ಗೊ ಸಣ್ಣ ಕಾರು ಕಣ್ತುಂಬ ನೋಡಿಕೊಳ್ಳಿರಿ

ರೆನೊ-ನಿಸ್ಸಾನ್ ಘಟಕದ ಮುಖಾಂತರ ಪ್ರಾರಂಭದಲ್ಲಿ ವರ್ಷಂಪ್ರತಿ 10,000 ಯುನಿಟ್ ಉತ್ಪಾದಿಸುವುದು ದಟ್ಸನ್ ಗುರಿಯಾಗಿದೆ.

ದಟ್ಸನ್ ಗೊ ಸಣ್ಣ ಕಾರು ಕಣ್ತುಂಬ ನೋಡಿಕೊಳ್ಳಿರಿ

ಅಂದ ಹಾಗೆ ಇತ್ತೀಚೆಗಷ್ಟೇ ಇಂಡೋನೇಷ್ಯಾದಲ್ಲಿ ನಡೆದ ಅಂತರಾಷ್ಟ್ರೀಯ ಮೋಟಾರ್ ಶೋದಲ್ಲಿ (ಐಐಎಂಎಸ್) ಗೊ ಪ್ಲಸ್ ಹ್ಯಾಚ್‌ಬ್ಯಾಕ್ ಕಾರನ್ನು ನಿಸ್ಸಾನ್ ಅನಾವರಣಗೊಳಿಸತ್ತು. ಈ ಎಂಪಿವಿ ಕಾರು ಗೊ ಬೆನ್ನಲ್ಲೇ ಭಾರತಕ್ಕೆ ಎಂಟ್ರಿ ಕೊಡಲಿದೆ.

ದಟ್ಸನ್ ಗೊ ಸಣ್ಣ ಕಾರು ಕಣ್ತುಂಬ ನೋಡಿಕೊಳ್ಳಿರಿ

ಈ ನಡುವೆ 2015ನೇ ಇಸವಿಯಲ್ಲಿ ಆಲ್ಟೊ ಹಾಗೂ ಹ್ಯುಂಡೈ ಇಯಾನ್‌ಗೆ ನೇರ ಪ್ರತಿಸ್ಪರ್ಧಿಯೊಂದು ಸಿದ್ಧಗೊಳ್ಳಲಿದೆ. ರೆನೊ ಎ ಎಂಟ್ರಿ ಜತೆ ಫ್ಲ್ಯಾಟ್‌ಫಾರ್ಮ್ ಹಂಚಿಕೊಂಡಿರುವ ನೂತನ ಸಣ್ಣ ಕಾರಿನ ಅಭಿವೃದ್ಧಿಯಲ್ಲಿ ತೊಡಗಿದೆ.

English summary
Datsun Go hatchback has already hit the testing circuit in and around the Renault-Nissan factory at Oragadam, off Chennai.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark