ದಟ್ಸನ್ ಗೊ ಪ್ಲಸ್ ಎಂಪಿವಿ ಬರಮಾಡಿಕೊಳ್ಳಲು ಸಜ್ಜಾಗಿರಿ

Posted By:

ಇತ್ತೀಚೆಗಷ್ಟೇ ದೆಹಲಿಯಲ್ಲಿ ಗೊ ಹ್ಯಾಚ್‌ಬ್ಯಾಕ್ ಕಾರು ಪ್ರದರ್ಶನ ಮಾಡಿದ್ದ ದಟ್ಸನ್, ಜಾಗತಿಕ ಮಾರುಕಟ್ಟೆಗೆ ಭರ್ಜರಿ ರಿ ಎಂಟ್ರಿ ಕೊಟ್ಟಿತ್ತು. ಇದರ ಬೆನ್ನಲ್ಲೇ ದಟ್ಸನ್ 'ಗೊ ಪ್ಲಸ್' ಮಲ್ಟಿ ಪರ್ಪಸ್ ವೆಹಿಕಲ್ (ಎಂಪಿವಿ) ಇಂಡೋನೇಷ್ಯಾದಲ್ಲಿ ಅದ್ದೂರಿಯಾಗಿ ಅನಾವರಣಗೊಂಡಿದೆ.

ಇಂಡೋನೇಷ್ಯಾದ ಜಕರ್ತಾದಲ್ಲಿ ಪ್ರದರ್ಶನ ಕಂಡಿರುವ ದಟ್ಸನ್ ಗೊ ಪ್ಲಸ್ ಹಾಗೂ ಗೊ ಹ್ಯಾಚ್‌ಬ್ಯಾಕ್ ಕಾರುಗಳು ಮುಂದಿನ ವರ್ಷ ಮಾರುಕಟ್ಟೆ ಪ್ರವೇಶಿಸಲಿದೆ. ಇದು ನಿಕಟ ಪ್ರತಿಸ್ಪರ್ಧಿಗಳಿಗೆ ಕಠಿಣ ಪೈಪೋಟಿ ನೀಡುವಲ್ಲಿ ನೆರವಾಗಲಿದೆ.

ಸಬ್ ಫೋರ್ ಮೀಟರ್ ಪರಿಧಿಯೊಳಗೆ ಆಗಮನವಾಗಿರುವ ದಟ್ಸನ್ ಗೊ ಪ್ಲಸ್ ಎಂಪಿವಿ, 5+2 ಸಿಟ್ಟಿಂಗ್ ವ್ಯವಸ್ಥೆಯನ್ನು ಹೊಂದಿರಲಿದೆ. ಇಂಡೋನೇಷ್ಯಾದಲ್ಲಿ 5.5 ಲಕ್ಷ ರು.ಗಳ ಅಸುಪಾಸಿನಲ್ಲಿ ಆಗಮನವಾಗಿರುವ ಗೊ ಪ್ಲಸ್, ಭಾರತದಲ್ಲಿ ಮಾರುತಿಯ ಜನಪ್ರಿಯ ಎರ್ಟಿಗಾ ಹಾಗೂ ಷೆವರ್ಲೆ ಎಂಜಾಯ್‌ಗೆ ನೇರ ಪೈಪೋಟಿ ಎಸಗಲಿದೆ.

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

ಇದರಲ್ಲಿ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಆವೃತ್ತಿಗೆ ಸಮಾನವಾದ 1.2 ಲೀಟರ್ ಎಂಜಿನ್‌ ಆಳವಡಿಸಲಾಗಿದೆ. ಇದು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ. ಆದರೆ ಡೀಸೆಲ್ ಎಂಜಿನ್ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

ಸೀಟು ವ್ಯವಸ್ಥೆ

ಸೀಟು ವ್ಯವಸ್ಥೆ

5+2 ಸಿಟ್ಟಿಂಗ್ ವ್ಯವಸ್ಥೆ ಹೊಂದಿರುವ ದಟ್ಸನ್ ಗೊ ಪ್ಲಸ್, ದೊಡ್ಡ ಕುಟುಂಬಗಳಿಗೆ ಆರಾಮದಾಯಕ ಪಯಣವನ್ನು ಒದಗಿಸಲಿದೆ. ಹಾಗೆಯೇ ಈ ಕಡಿಮೆ ದರದ ಕಾರು ಮೊಬೈಲ್ ಡಾಕಿಂಗ್ ಸ್ಟೇಷನ್ ಕೂಡಾ ಹೊಂದಿರಲಿದೆ. (ಡಾಕಿಂಗ್ ಸ್ಟೇಷನ್ ಎಂಬುದು ಸ್ಮಾರ್ಟ್ ಫೋನ್‌ಗಳಿಗೆ ಸಂಪರ್ಕ ಕಲ್ಪಿಸುವ ಪ್ಲನ್ ಇನ್ ವ್ಯವಸ್ಥೆಯಾಗಿದೆ.)

ಲೆಗ್ ರೂಂ

ಲೆಗ್ ರೂಂ

ಕಾರಿನ ಮೊದಲೆರಡು ಸಾಲುಗಳು ಉತ್ತಮ ಲೆಗ್ ರೂಂ ಹೊಂದಿವೆ. ಆದರೆ ಕೊನೆಯ ಸಾಲು ಸ್ವಲ್ಪ ಇಕ್ಕಟ್ಟಾಗಿ ಗೋಚರಿಸುತ್ತಿದ್ದು, ಹೆಡ್ ರೆಸ್ಟ್‌ ಕೊರತೆಯನ್ನು ಅನುಭವಿಸುತ್ತಿದೆ. ಹಾಗಿದ್ದರೂ ಮಕ್ಕಳಿಗೆ ಕುಳಿತುಕೊಳ್ಳಲು ಬೇಕಾದಷ್ಟು ಸ್ಥಳಾವಕಾಶವನ್ನು ಇದರಲ್ಲಿ. ಇನ್ನು ಬೂಟ್ ಸ್ಪೇಸ್ ಹೆಚ್ಚಿಸುವ ನಿಟ್ಟಿನಲ್ಲಿ ಇದನ್ನು ಮಡಚಿಡಬಹುದಾಗಿದೆ.

ದಟ್ಸನ್ ಗೊ ಪ್ಲಸ್ ಎಂಪಿವಿ ಬರಮಾಡಿಕೊಳ್ಳಲು ಸಜ್ಜಾಗಿರಿ

ಸ್ಮರ್ಧಾತ್ಮಕ ದರಗಳಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಗೊ ಹ್ಯಾಚ್ ಬ್ಯಾಕ್ ಕಾರಿನ ಡೋರ್ ಕೂಡಾ ಬಳಸಲಾಗಿದೆ. ಒಟ್ಟಾರೆಯಾಗಿ ಆಕರ್ಷಕ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ನಿಸ್ಸಾನ್ ಬ್ರಾಂಡ್

ನಿಸ್ಸಾನ್ ಬ್ರಾಂಡ್

ದಟ್ಸನ್‌ನಿಂದ ಆಗಮನವಾಗಿರುವ ಈ ಎರಡನೇ ಕಾರು, ಇಂಡೋನೇಷ್ಯಾದಲ್ಲಿ ಹೊಸ ಸಗ್ಮೆಂಟ್ ಸೃಷ್ಟಿಮಾಡಲಿದೆ. ಅಲ್ಲದೆ ನಿಸ್ಸಾನ್‌ನ ಘಟಕದಲ್ಲಿ ಉತ್ಪಾದನೆಯಾಗಲಿದೆ.

ಆಯಾಮ

ಆಯಾಮ

ಒಟ್ಟು ಉದ್ದ: 3,995 ಎಂಎಂ

ಒಟ್ಟು ಅಗಲ: 1635 ಎಂಎಂ

ಒಟ್ಟು ಎತ್ತರ: 1485 ಎಂಎಂ

ವೀಲ್ ಬೇಸ್: 2,450 ಎಂಎಂ

ದಟ್ಸನ್ ಗೊ ಪ್ಲಸ್ ಎಂಪಿವಿ ಬರಮಾಡಿಕೊಳ್ಳಲು ಸಜ್ಜಾಗಿರಿ

2016ರ ವೇಳೆಗೆ ನಿಸ್ಸಾನ್ ಮೋಟಾರ್ಸ್‌ನ ಶೇಕಡಾ 50ರಷ್ಟು ಮಾರಾಟ ತಲುಪುವುದು ದಟ್ಸನ್ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕಡಿಮೆ ದರದ ಕಾರನ್ನು ಪರಿಚಯಿಸುವ ಮೂಲಕ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ಯೋಜನೆ ಹೊಂದಿದೆ.

ದಟ್ಸನ್ ಗೊ ಪ್ಲಸ್ ಎಂಪಿವಿ ಬರಮಾಡಿಕೊಳ್ಳಲು ಸಜ್ಜಾಗಿರಿ

ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಹಾಗೂ ಗೊ ಪ್ಲಸ್ ಎಂಪಿವಿ ಕಾರುಗಳು ಭಾರತ ಮಾರುಕಟ್ಟೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ದಟ್ಸನ್ ಬ್ರಾಂಡ್ ಮುಖಾಂತರ ಬೆಳೆದು ಬರುತ್ತಿರುವ ಭಾರತದಂತಹ ಏಷ್ಯಾ ರಾಷ್ಟ್ರಗಳಲ್ಲಿ ಭದ್ರ ನೆಲೆ ಸ್ಥಾಪಿಸುವ ಗುರಿಯನ್ನು ನಿಸ್ಸಾನ್ ಹೊಂದಿದೆ.

ವೀಡಿಯೊ ವೀಕ್ಷಿಸಿ

English summary
Unveiled in Jakarta on Sep 18, 2013 was Datsun's second new model, am MPV. Its simply called the Datsun GO+, a sub-4 meter MPV that will appeal to buyers from Indonesia as well as India. The new MPV along with the GO hatchback will be hit the road next year.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark