ದಟ್ಸನ್ ಗೊ ಪ್ಲಸ್ ಎಂಪಿವಿ ದೇಶದ ರಸ್ತೆಗೆ ಚೊಚ್ಚಲ ಎಂಟ್ರಿ

By Nagaraja

ಹ್ಹಾಂ, ಇದೇನಿದು ಬಿಡುಗಡೆಗೂ ಮುನ್ನ ದಟ್ಸನ್ ಗೊ ಬಹು ಬಳಕೆಯ ವಾಹನ (ಎಂಪಿವಿ) ಭಾರತೀಯ ರಸ್ತೆಗೆ ಹೇಗೆ ಪ್ರವೇಶಿಸಿದೆ ಅಂತೀರಾ? ಗಾಬರಿಯಾಗದಿರಿ ಮುಂದಿನ ಕೆಲವೇ ತಿಂಗಳೊಳಗೆ ಬಿಡುಗಡೆಯಾಗಲಿರುವ ದಟ್ಸನ್‌ನ ಬಹುನಿರೀಕ್ಷಿತ ಗೊ ಪ್ಲಸ್ ಎಂಪಿವಿ ಕಾರು ಚೆನ್ನೈನಲ್ಲಿ ಟೆಸ್ಟಿಂಗ್ ವೇಳೆ ಕ್ಯಾಮೆರಾ ಕಣ್ಣುಗಳಿಗೆ ಸೆರೆ ಸಿಕ್ಕಿವೆ.

ಮನೋಜ್ ಪ್ರಭಾಕರನ್ ಎಂಬ ಆಟೋ ಉತ್ಸಾಹಿ ದಟ್ಸನ್ ಗೊ ಪ್ಲಸ್ ನೈಜ ಕಾರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂದ ಹಾಗೆ ಈ ಬಹುನಿರೀಕ್ಷಿತ ಕಾರು ದೀಪಾವಳಿ ಹಬ್ಬದ ವೇಳೆಯಲ್ಲಿ ಬಿಡುಗಡೆಯಾಗುವ ನಿರೀಕ್ಷಿಯಿದ್ದು, ಚೆನ್ನೈನಲ್ಲಿ ಸ್ಥಿತಗೊಂಡಿರುವ ನಿಸ್ಸಾನ್-ರೆನೊ ಘಟಕದಲ್ಲಿ ಉತ್ಪಾದನೆಯಾಗಲಿದೆ.

ದಟ್ಸನ್ ಗೊ ಪ್ಲಸ್ ಎಂಪಿವಿ ದೇಶದ ರಸ್ತೆಗೆ ಚೊಚ್ಚಲ ಎಂಟ್ರಿ

ನಿಸ್ಸಾನ್‌ನ ಬಜೆಟ್ ಕಾರು ಬ್ರಾಂಡ್ ಆಗಿರುವ ದಟ್ಸನ್, ಈಗಾಗಲೇ ಗೊ ಹ್ಯಾಚ್‌ಬ್ಯಾಕ್ ಕಾರನ್ನು ಬಿಡುಗಡೆಗೊಳಿಸಿದ್ದು, ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ.

ದಟ್ಸನ್ ಗೊ ಪ್ಲಸ್ ಎಂಪಿವಿ ದೇಶದ ರಸ್ತೆಗೆ ಚೊಚ್ಚಲ ಎಂಟ್ರಿ

ಗೊ ಪ್ಲಸ್ ಇದು ದಟ್ಸನ್‌ನಿಂದ ಆಗಮನವಾಗಲಿರುವ ಎರಡನೇ ಮಾದರಿಯಾಗಿರಲಿದೆ. ಇದಕ್ಕೂ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು.

ದಟ್ಸನ್ ಗೊ ಪ್ಲಸ್ ಎಂಪಿವಿ ದೇಶದ ರಸ್ತೆಗೆ ಚೊಚ್ಚಲ ಎಂಟ್ರಿ

ನಿಸ್ಸಾನ್ ಮೈಕ್ರಾ ಮೂಲ ವಿನ್ಯಾಸ ಪಡೆದುಕೊಂಡಿರುವ ಗೊ ಸಣ್ಣ ಕಾರಿನ ತಲಹದಿಯಲ್ಲಿ ಗೊ ಪ್ಲಸ್ ಎಂಪಿವಿ ನಿರ್ಮಾಣಗೊಳ್ಳಲಿದೆ. ಇದರ 3995 ಎಂಎಂ ಉದ್ದಳತೆ ಪ್ರಮುಖ ವೈಶಿಷ್ಟ್ಯವಾಗಿರಲಿದೆ.

ದಟ್ಸನ್ ಗೊ ಪ್ಲಸ್ ಎಂಪಿವಿ ದೇಶದ ರಸ್ತೆಗೆ ಚೊಚ್ಚಲ ಎಂಟ್ರಿ

1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಗೊ ಪ್ಲಸ್ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ನೆರವಾಗಲಿದೆ. ಇದು ಸಣ್ಣ ಮಿಡ್ ಸೈಜ್ ಕಾರಾಗಿರಲಿದ್ದು ಅಬಕಾರಿ ಸುಂಕ ಶೇಕಡಾ 20ರಿಂದ 8ಕ್ಕೆ ಇಳಿಕೆಯಾಗುವಾಗುವ ಸಾಧ್ಯತೆಯಿದೆ.

ದಟ್ಸನ್ ಗೊ ಪ್ಲಸ್ ಎಂಪಿವಿ ದೇಶದ ರಸ್ತೆಗೆ ಚೊಚ್ಚಲ ಎಂಟ್ರಿ

ಗೊ ಹ್ಯಾಚ್‌ಬ್ಯಾಕ್‌ನಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಪಡೆದುಕೊಂಡಿರುವ ಗೊ ಪ್ಲಸ್ ಎಂಪಿವಿ, 68 ಪಿಎಸ್ ಪವರ್ (104 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಲ್ಲದೆ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದುಕೊಳ್ಳಲಿದೆ.

ದಟ್ಸನ್ ಗೊ ಪ್ಲಸ್ ಎಂಪಿವಿ ದೇಶದ ರಸ್ತೆಗೆ ಚೊಚ್ಚಲ ಎಂಟ್ರಿ

ಇನ್ನು ಸಂಸ್ಥೆಯ ಪ್ರಕಾರ ದಟ್ಸನ್ ಗೊ ಪ್ಲಸ್ ಎಂಪಿವಿ, ಪ್ರತಿ ಲೀಟರ್‌ಗೆ 20.63 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದು ದೇಶದ ರಸ್ತೆ ಪರಿಸ್ಥಿತಿಯಲ್ಲಿ ಯೋಗ್ಯವೆನಿಸಿದೆ. ಹಾಗೆಯೇ ಸೆಗ್ಮೆಂಟ್ ಲೀಡರ್ ಮಾರುತಿ ಎರ್ಟಿಗಾ ಹಾಗೂ ಷೆವರ್ಲೆ ಎಂಜಾಯ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ಫೋಟೊ ಕೃಪೆ: ಫೇಸ್ ಬುಕ್

Most Read Articles

Kannada
Story first published: Thursday, May 29, 2014, 18:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X