ಡಿಸಿ ಡಿಸೈನ್ ಗರಡಿಯಲ್ಲಿ ಪಳಗಿ ಬಂದ ಮಾರುತಿ ಸ್ವಿಫ್ಟ್‌

Written By:

ಭಾರತ ವಾಹನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಒಂದಾಗಿದೆ. ಅಷ್ಟಕ್ಕೂ ನೀವು ಕೂಡಾ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರಿನ ಅಭಿಯಾನಿಯೇ? ಹಾಗಿದ್ದರೆ ನಿಮಗಿದೋ ಸಿಹಿ ಸುದ್ದಿಯೊಂದನ್ನು ನಾವಿಲ್ಲಿ ಬಿತ್ತರಿಸಲಿದ್ದೇವೆ.

ದೇಶದ ನಂ.1 ವಾಹನ ಮಾರ್ಪಾಡು ಸಂಸ್ಥೆಯಾಗಿರುವ ಡಿಸಿ ಡಿಸೈನ್, ದೇಶದ ಜನಪ್ರಿಯ ಸ್ವಿಫ್ಟ್ ಮಾದರಿಗೆ ಹೊಸ ರೂಪ ಕಲ್ಪಿಸಿದೆ. ವಾಹನವನ್ನು ಕಸ್ಟಮೈಸ್ಡ್ ಮಾಡುವಲ್ಲಿ ಸದಾ ಒಂದು ಹೆಜ್ಜೆ ಮುಂದಿರುವ ದಿಲೀಪ್ ಚಾಬ್ರಿಯಾ ನೇತೃತ್ವದ ಡಿಸಿ ಡಿಸೈನ್ ಗರಡಿಯಲ್ಲಿ ಮಾರುತಿ ಸ್ವಿಫ್ಟ್‌ ಕಾರಿಗೆ ಐಷಾರಾಮಿ ಸ್ಪರ್ಶವನ್ನು ನೀಡಲಾಗಿದೆ.

ಡಿಸಿ ಡಿಸೈನ್ ಗರಡಿಯಲ್ಲಿ ಪಳಗಿದ ಮಾರುತಿ ಸ್ವಿಫ್ಟ್‌

ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಮೊದಲ ನೋಟದಲ್ಲಿ ಇದು ನೈಜ ಮಾರುತಿ ಸ್ವಿಫ್ಟ್ ಕಾರೇ? ಎಂಬ ಗೊಂದಲಕ್ಕೆ ಕಾರಣವಾಗಬಹುದು. ಆದರೆ ನಾವಿಲ್ಲಿ ಸ್ಪಷ್ಟಪಡಿಸಲು ಬಯಸುವುದೇನೆಂದರೆ ಡೇಟೈಮ್ ರನ್ನಿಂಗ್ ಎಲ್‌ಇಡಿ ಲೈಟ್‌ನಿಂದ ಹಿಡಿದು ಸಂಪೂರ್ಣ ಐಷಾರಾಮಿ ಮಾರ್ಪಾಡನ್ನು ಹೊಸ ಸ್ವಿಫ್ಟ್‌ನಲ್ಲಿ ಆಸ್ವಾದಿಸಬಹುದಾಗಿದೆ.

ಡಿಸಿ ಡಿಸೈನ್ ಗರಡಿಯಲ್ಲಿ ಪಳಗಿದ ಮಾರುತಿ ಸ್ವಿಫ್ಟ್‌

ಮುಂಭಾಗದಿಂದ ಸೂಕ್ಷ್ಮವಾಗಿ ವೀಕ್ಷಿಸಿದಾಗ ಸಾಮಾನ್ಯ ಸ್ವಿಫ್ಟ್ ಹಾಗೂ ಡಿಸಿ ಡಿಸೈನ್ ಸ್ವಿಫ್ಟ್ ಆವೃತ್ತಿಗೆ ತುಂಬಾನೇ ವ್ಯತ್ಯಾಸ ಕಂಡುಬರುತ್ತದೆ. ಇದು ಡಿಸಿ ಲಾಂಛನದ ಜೊತೆಗೆ ಸಂಪೂರ್ಣ ಹೊಸತಾದ ಫ್ರಂಟ್ ಗ್ರಿಲ್ ಪಡೆದುಕೊಂಡಿದೆ. ಇಲ್ಲಿ ಕಾರಿನ ಒಟ್ಟಾರೆ ವಿನ್ಯಾಸದಲ್ಲಿ ಡಿಸಿ ತನ್ನೆಲ್ಲ ಸಾಮರ್ಥ್ಯವನ್ನು ಬಳಸಿಕೊಂಡಿದೆ.

ಡಿಸಿ ಡಿಸೈನ್ ಗರಡಿಯಲ್ಲಿ ಪಳಗಿದ ಮಾರುತಿ ಸ್ವಿಫ್ಟ್‌

ಹಿಂಬದಿಯಲ್ಲಿ ಸ್ಪೋರ್ಟ್ಸ್ ಕಾರಿನಲ್ಲಿ ಕಾಣಸಿಗುವಂತಹ ಏರ್ ಡ್ಯಾಮ್, ರಿಯರ್ ಸ್ಪಾಯ್ಲರ್ ಹಾಗೂ ಲೈಟಿಂಗ್ ವಿನ್ಯಾಸ ನೋಡಬಹುದಾಗಿದೆ. ಇನ್ನು ಹೆಚ್ಚಿನ ಗ್ರೌಂಡ್ ಕ್ಲಿಯರನ್ಸ್ ಸಹ ಕಾಯ್ದುಕೊಳ್ಳಲಾಗಿದೆ.

ಡಿಸಿ ಡಿಸೈನ್ ಗರಡಿಯಲ್ಲಿ ಪಳಗಿದ ಮಾರುತಿ ಸ್ವಿಫ್ಟ್‌

ಅಂತೆಯೇ ಕಾರಿನೊಳಗೆ ಕೆಂಪು ಬಿಳುಪು ವರ್ಣದ ಮಿಶ್ರಣವನ್ನು ಕಾಣಬಹುದಾಗಿದೆ. ಸಂಪೂರ್ಣ ಲೆಥರ್ ಸ್ಪರ್ಶದ ಡಿಸಿ ಡಿಸೈನ್ ಸ್ವಿಫ್ಟ್ ಸ್ಟೀರಿಂಗ್ ವೀಲ್‌ನಲ್ಲೇ ಸಂಪೂರ್ಣ ನಿಯಂತ್ರಣವನ್ನು ಹೊಂದಬಹುದಾಗಿದೆ. ಇನ್ನು ಫಿನಿಶಿಂಗ್ ಗುಣಮಟ್ಟವನ್ನು ಮಗದೊಮ್ಮೆ ಒತ್ತಿ ಹೇಳಬೇಕಾಗುತ್ತದೆ.

ಡಿಸಿ ಡಿಸೈನ್ ಗರಡಿಯಲ್ಲಿ ಪಳಗಿದ ಮಾರುತಿ ಸ್ವಿಫ್ಟ್‌

ಡಿಸಿ ಡಿಸೈನ್ ಸ್ವಿಫ್ಟ್ ಸಂಪೂರ್ಣ ಹೊಸತನದ ಕಿಟ್ ಹೊಂದಿದೆ. ಇಲ್ಲಿ ಹೆಚ್ಚಿನ ಸೌಲಭ್ಯದ ಇನ್ಪೋಟೈನ್ಮೆಂಟ್ ಸಿಸ್ಟಂ ಕೊಡಲಾಗಿದೆ. ಇನ್ನು ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕೊಟ್ಟಿರುವ ಡಿಸಿ ಡಿಸೈನ್ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು +91- 9582133333. ಇನ್ನು ಡಿಸಿ ಕಿಟ್ ಪಡೆದ ಸ್ವಿಫ್ಟ್ ಎಷ್ಟು ದುಬಾರಿಯಾಗಲಿದೆ ಎಂಬುದು ಕೂಡಾ ತಿಳಿದು ಬಂದಿಲ್ಲ.

English summary
Watch out for the new ‪‎DC‬ Kit for Maruti Suzuki Swift
Story first published: Monday, February 9, 2015, 7:09 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark