ಕುಸಿದ ಮಾರುಕಟ್ಟೆ ಉತ್ತೇಜಿಸಲು 'ಅಂಬಿ' ಪುರ್ನಜನ್ಮ

Posted By:

ಸಮಕಾಲೀನ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಭಾರತೀಯ ಪ್ರಯಾಣಿಕ ಕಾರು ಮಾರುಕಟ್ಟೆ ತೀರಾ ಕುಸಿತದಲ್ಲಿದೆ ಎಂಬುದು ನಮೆಗೆಲ್ಲರಿಗೂ ತಿಳಿದ ವಿಚಾರ. ಹಾಗಿರುವಾಗ ಕುಸಿದ ಮಾರುಕಟ್ಟೆಯನ್ನು ಉತ್ತೇಜಿಸಲು ಭಾರತದ ಕಾರುಗಳ ರಾಜ 'ಅಂಬಾಸಿಡರ್' ಪುರ್ನಜನ್ಮ ಪಡೆಯುತ್ತಿದೆ.

ನಾಲ್ಕು ಮೀಟರ್ ಉದ್ದ ಪರಿಮಿತಿಯೊಳಗೆ ಆಗಮನವಾಗಲಿರುವುದು ಅಂಬಾಸಿಡರ್ ಅಗ್ಗದ ದರಗಳಲ್ಲಿ ದೊರಕಲು ನೆರವಾಗಲಿದೆ. ಅಷ್ಟೇ ಅಲ್ಲದೆ ಒಂದು ಕಾಲದಲ್ಲಿ ದೇಶದ ರಸ್ತೆಯ ರಾಜ ಎಂದೇ ಎನಿಸಿಕೊಂಡಿದ್ದ ಅಂಬಿ, ನೂತನ 'ಬಿಎಸ್ IV' ಡೀಸೆಲ್ ಎಂಜಿನ್ ಕೂಡಾ ಪಡೆಯಲಿದೆ.

ಅಷ್ಟಕ್ಕೂ ಅಂಬಾಸಿಡರ್ ಫ್ಲಾಟ್‌ಫಾರ್ಮ್‌ನಲ್ಲೇ ನಿರ್ಮಾಣವಾಗಲಿರುವ ನೂತನ ಸೆಡಾನ್ ವೆರಿಯಂಟ್, ಅಂಬಿ ಸಾಂಪ್ರದಾಯಕ ವಿನ್ಯಾಸವನ್ನು ಕಾಪಾಡಿಕೊಳ್ಳಲಿದೆ. ಹಾಗಿದ್ದರೂ ನೂತನ ಕಾರು ಯಾವ ನಾಮದಿಂದ ಹೆಸರಿಸಿಕೊಳ್ಳಲಿದೆ ಎಂಬುದನ್ನು ಹಿಂದೂಸ್ತಾನ್ ಮೋಟಾರ್ಸ್ ರಹಸ್ಯವಾಗಿಟ್ಟಿದೆ.

ಉತ್ತಮ್ ಬೋಸ್ ಸ್ಪಷ್ಟನೆ

ಉತ್ತಮ್ ಬೋಸ್ ಸ್ಪಷ್ಟನೆ

ಹಿಂದೂಸ್ತಾನ್ ಮೋಟಾರ್ಸ್ ಮಹಾ ನಿರ್ದೇಶಕ ಹಾಗೂ ಸಿಇಒ ಆಗಿರುವ ಉತ್ತಮ್ ಬೋಸ್ ಇದನ್ನು ಸ್ಪಷ್ಟಪಡಿಸಿದ್ದು, ಇಡೀ ದೇಶವೇ ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿರುವ ಅಂಬಾಸಿಡರ್ ಕಾರನ್ನು 2014-15 ಆರ್ಥಿಕ ಸಾಲಿನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಬಿಎಸ್ IV ಎಂಜಿನ್

ಬಿಎಸ್ IV ಎಂಜಿನ್

ಟ್ಯಾಕ್ಸಿ ಸೆಗ್ಮೆಂಟ್‌ನಲ್ಲಿ ಈಗಾಗಲೇ ಕಾಲಿಸಿರುವ ಅಂಬಾಸಿಡರ್ ಎನ್‌ಕೋರ್ 4.98 ಲಕ್ಷ ರು.ಗಳ ಅಸುಪಾಸಿನಲ್ಲಿದೆ. ಇದೇ ಬಿಎಸ್ IV ಎಂಜಿನ್ ನೂತನ ಅಂಬಾಸಿಡರ್‌ನಲ್ಲಿ ಆಳವಡಿಸಲಾಗುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ಬಿಎಸ್-III ನಿಷೇಧ

ಬಿಎಸ್-III ನಿಷೇಧ

ನಿಮ್ಮ ಮಾಹಿತಿಗಾಗಿ, ಹೆಚ್ಚು ಮಾಲಿನ್ಯವನ್ನಂಟು ಮಾಡುವ ಹಿನ್ನಲೆಯಲ್ಲಿ ಅಂಬಾಸಿಡರ್ ಬಿಎಸ್-III ಕಾರನ್ನು 2012 ಎಪ್ರಿಲ್‌ನಲ್ಲಿ ನಿಷೇಧಿಸಲಾಗಿತ್ತು. ಇದು ಅಂಬಾಸಿಡರ್ ಮಾರಾಟಕ್ಕೆ ದೊಡ್ಡ ಪೆಟ್ಟು ನೀಡುವಂತಾಗಿತ್ತು.

ಎಸಿ, ಪವರ್ ಸ್ಟೀರಿಂಗ್

ಎಸಿ, ಪವರ್ ಸ್ಟೀರಿಂಗ್

ನೂತನ 1.5 ಲೀಟರ್ ಬಿಎಸ್-IV ಡೀಸೆಲ್ ಎಂಜಿನ್‌ ಕಾರಿನಲ್ಲಿ ಆರಾಮದಾಯಕ ಪಯಣಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎಸಿ ಹಾಗೂ ಪವರ್ ಸ್ಟೀರಿಂಗ್‌ಗಳಂತಹ ಆಧುನಿಕ ವೈಶಿಷ್ಟ್ಯಗಳನ್ನು ಆಳವಡಿಸಲಾಗುವುದು.

ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ವಿಶ್ವದ ಅತ್ಯುತ್ತಮ ಟ್ಯಾಕ್ಸಿ

ಇತ್ತೀಚೆಗಷ್ಟೇ ಲಂಡನ್‌ನಲ್ಲಿ ನಡೆಸಲಾದ ಜಾಗತಿಕ ಆಟೋಮೋಟಿವ್ ರೇಸ್‌ನಲ್ಲಿ, ಅಂಬಾಸಿಡರ್ 'ವಿಶ್ವದ ಅತ್ಯುತ್ತಮ ಟ್ಯಾಕ್ಸಿ' ಪಟ್ಟ ಗಿಟ್ಟಿಸಿಕೊಂಡಿತ್ತು.

English summary
Hindustan Motors is gearing up for the launch of a small car in the next fiscal. The new sub-four meter small car will be manufactured on the Ambassador platform and will be only in sedan variant, company MD and CEO Uttam Bose said to reporters.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark