2015ರಲ್ಲಿ ರೆನೊ ಹ್ಯಾಚ್‌ಬ್ಯಾಕ್ ಮತ್ತು ಎಂಪಿವಿ ಲಾಂಚ್
ಮುಂದಿನ ಆರ್ಥಿಕ ಸಾಲಿನಲ್ಲಿ ದೇಶದ ವಾಹನೋದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡುಬರಲಿದೆ. ಭಾರತದಲ್ಲಿ ಈಗಾಗಲೇ ತನ್ನ ಸಾನಿಧ್ಯ ವ್ಯಕ್ತಪಡಿಸಿರುವ ಫ್ರಾನ್ಸ್ ಮೂಲದ ರೆನೊ, ನಾಲ್ಕು ಲಕ್ಷ ರು.ಗಳ ಬಜೆಟ್‌ನಲ್ಲಿ ನೂತನ ಹ್ಯಾಚ್‌ಬ್ಯಾಕ್ ಮತ್ತು ಎಂಪಿವಿ ವಾಹನವನ್ನು ಪರಿಚಯಿಸಲು ಹೊರಟಿದೆ.
ಸದ್ಯ ಬಂದಿರುವ ಮಾಹಿತಿ ಪ್ರಕಾರ ರೆನೊ ನೂತನ ಹ್ಯಾಚ್‌ಬ್ಯಾಕ್ ಎಕ್ಸ್‌ಬಿಎ ಎಂಬ ಕೋಡ್ ಪಡೆದುಕೊಂಡಿದೆ. ಅದೇ ಹೊತ್ತಿಗೆ ನೂತನ ಎಂಪಿವಿ ರೆನೊ/ಡ್ಯಾಸಿಯಾ ಲೊಡ್ಜಿ ಎನಿಸಿಕೊಳ್ಳುವ ಸಾಧ್ಯತೆಯಿದೆ.|

ಭಾರತ ಮಾರುಕಟ್ಟೆಯನ್ನು ಪರಿಗಣಿಸಿದರೆ ಡಸ್ಟರ್ ಹೊರತುಪಡಿಸಿದರೆ ಉಳಿದ ರೆನೊ ಮಾದರಿಗಳು ಅಷ್ಟೊಂದು ಪ್ರಭಾವಿ ಎನಿಸಿಕೊಂಡಿಲ್ಲ. ಇನ್ನೊಂದೆಡೆ ದಟ್ಸನ್ ಗೊ ಉತ್ತಮ ಮಾರುಕಟ್ಟೆ ಗಿಟ್ಟಿಸಿಕೊಂಡರೂ ಸಹ ನಂಬಿಕೆಯನ್ನು ಉಳಿಸಿಕೊಳ್ಳುವುದು ಅತಿ ಮುಖ್ಯವೆನಿಸಿದೆ.

ನೂತನ ಹ್ಯಾಚ್‌ಬ್ಯಾಕ್ ಕಾರು ರೆನೊ ಸಿಎಂಎಫ್-ಎ ಮೊಡ್ಯುಲರ್ ತಲಹದಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಮಾದರಿಯಾಗಿದೆ. ಇದು ದಟ್ಸನ್ ಗೊಗಿಂತ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದ್ದು, ದರ ಸ್ವಲ್ಪ ದುಬಾರಿಯೆನಿಸಲಿದೆ.
(ಸಾಂದರ್ಭಿಕ ಚಿತ್ರ ಬಳಕೆ)
ಎಕ್ಸ್‌ಬಿಎ ಬೆನ್ನಲ್ಲೇ ಇದೇ ಸಿಎಂಎಫ್-ಎ ಮೊಡ್ಯುಲರ್ ಫ್ಲ್ಯಾಟ್‌ಫಾರ್ಮ್‌ನಲ್ಲಿ ಅನೇಕ ನೂತನ ಮಾದರಿಗಳನ್ನು ಪರಿಚಯಿಸಲು ರೆನೊ ಯೋಜನೆ ಹೊಂದಿದೆ. ಇದು ರೆನೊ-ನಿಸ್ಸಾನ್‌ನ ಚೆನ್ನೈ ಘಟಕದಲ್ಲಿ ಉತ್ಪಾದನೆಯಾಗಲಿದೆ.
(ಸಾಂದರ್ಭಿಕ ಚಿತ್ರ ಬಳಕೆ)
ಅದೇ ರೀತಿ ಈ ನಾಲ್ಕು ಲಕ್ಷ ರು.ಗಳೊಳಗಿನ ಹ್ಯಾಚ್‌ಬ್ಯಾಕ್ ಕಾರು ಅತ್ಯಂತ ಹೆಚ್ಚು ಇಂಧನ ಕ್ಷಮತೆಯ 1.0 ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ.
(ಸಾಂದರ್ಭಿಕ ಚಿತ್ರ ಬಳಕೆ)

ಇನ್ನೊಂದೆಡೆ ಮಲ್ಟಿ ಪರ್ಪಸ್ ವಾಹನದ ವಿಚಾರಕ್ಕೆ ಬಂದರೆ, ನೂತನ ಏಳು ಸೀಟಿನ ಲಾಡ್ಜಿ ಎಂಪಿವಿ ಡಸ್ಟರ್‌ನ ಎಮ್0 ತಲಹದಿಯಲ್ಲಿ ರೂಪುಗೊಳ್ಳಲಿದೆ. ಇದು ಪ್ರಮುಖವಾಗಿಯೂ ಮಾರುತಿ ಎರ್ಟಿಗಾ ಹಾಗೂ ಹೋಂಡಾ ಮೊಬಿಲಿಯೊ ಸಾಲಿನಲ್ಲಿ ಕಾಣಿಸಿಕೊಳ್ಳಲಿದೆ. ಆದರೆ ಬಿಡುಗಡೆ ವೇಳೆ ವಿಭಿನ್ನ ಹೆಸರಿನಿಂದ ಗುರುತಿಸಿಕೊಳ್ಳಲಿದೆ.


Click it and Unblock the Notifications








