ನ್ಯಾನೋ ಸೂಪರ್‌ಚಾರ್ಜ್ಡ್, ಹೈಬ್ರಿಡ್ ಮಾದರಿ ನಿರೀಕ್ಷಿಸಿ

Posted By:

ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಗುಜರಾತ್‌ನ ಸನಂದ್ ಘಟಕದಲ್ಲಿನ ನ್ಯಾನೋ ಸಣ್ಣ ಕಾರಿನ ತಯಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರಬಹುದು. ಆದರೆ ಜಗತ್ತಿನ ಅತ್ಯಂತ ಅಗ್ಗದ ಕಾರಿನ ಅಭಿವೃದ್ಧಿ ಕಾರ್ಯದಿಂದ ಮಾತ್ರ ಹಿಂದೆ ಸರಿದಿಲ್ಲ.

ಅದ್ಯಾಕೊ ನ್ಯಾನೋ ಟಾಟಾ ಸಂಸ್ಥೆಯ ಟ್ರೇಡ್ ಮಾರ್ಕ್ ಆಗಿದಂತಿದೆ. ಮಾರಾಟ ಅಂಕಿಅಂಶದಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳಲು ನ್ಯಾನೋ ವಿಫಲವಾದರೂ ಸಹ ಇಂತಹದೊಂದು ಯೋಜನೆಯನ್ನು ಕೈಬಿಡಲು ಮಾತ್ರ ಟಾಟಾ ತಯಾರಿಲ್ಲ. ನ್ಯಾನೋ ಸೂಪರ್ ಚಾರ್ಜ್ಡ್ ಮತ್ತು ಹೈಬ್ರಿಡ್ ಮಾಹಿತಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

To Follow DriveSpark On Facebook, Click The Like Button
ನ್ಯಾನೋ ಸೂಪರ್‌ಚಾರ್ಜ್ಡ್, ಹೈಬ್ರಿಡ್ ಕಾರು ನಿರೀಕ್ಷಿಸಿ

ಇತ್ತೀಚೆಗಷ್ಟೇ ನ್ಯಾನೋ ಟ್ವಿಸ್ಟ್ ಪವರ್ ಸ್ಟೀರಿಂಗ್ ಪ್ರದರ್ಶಿಸಿದ್ದ ಟಾಟಾ ಇನ್ನೇನು ಕೆಲವೇ ತಿಂಗಳುಗಳಲ್ಲಿ ಟ್ವಿಸ್ಟ್ ಆಟೋಮ್ಯಾಟಿಕ್ ವರ್ಷನ್ ಜೊತೆ ಹಿಂದುಗಡೆ ಡೋರ್ ತೆಗೆದುಕೊಳ್ಳಬಹುದಾದ ಮಾದರಿಯನ್ನು ಬಿಡುಗಡೆ ಮಾಡಲಿದೆ. ಇದು ದೇಶದಲ್ಲೇ ಅತ್ಯಂತ ಕಡಿಮೆ ಬೆಲೆಯ ಆಟೋಮ್ಯಾಟಿಕ್ ಕಾರು ಎನಿಸಿಕೊಳ್ಳಲಿದೆ.

ನ್ಯಾನೋ ಸೂಪರ್‌ಚಾರ್ಜ್ಡ್, ಹೈಬ್ರಿಡ್ ಕಾರು ನಿರೀಕ್ಷಿಸಿ

ಹಾಗಿರಬೇಕೆಂದರೆ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ, ಇನ್ನೆರಡು ಮಹತ್ತರ ಯೋಜನೆಯನ್ನು ಕೈಗೆತ್ತಿಗೊಂಡಿದೆ. ಅದೇನಂತೀರಾ? ಹೌದು, ನ್ಯಾನೋ ಸೂಪರ್ ಚಾರ್ಜ್ಡ್ ಎಂಜಿನ್ ಮತ್ತು ಹೈಬ್ರಿಡ್ ವರ್ಷನ್ ಅನ್ನು ಪರಿಚಯಿಸಲಿದೆ.

ನ್ಯಾನೋ ಸೂಪರ್‌ಚಾರ್ಜ್ಡ್, ಹೈಬ್ರಿಡ್ ಕಾರು ನಿರೀಕ್ಷಿಸಿ

ಪ್ರಸ್ತುತ ನ್ಯಾನೋ 624ಸಿಸಿ 2 ಸಿಲಿಂಡರ್ ಟರ್ಬೊಚಾರ್ಜ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 38 ಅಶ್ವಶಕ್ತಿ ಉತ್ಪಾದಿಸುತ್ತದೆ. ಅಂದರೆ ಹೊಸತಾಗಿ ಬರಲಿರುವ ಸೂಪರ್ ಚಾರ್ಜ್ಡ್ ಎಂಜಿನ್ ಇನ್ನಷ್ಟು ಶಕ್ತಿಶಾಲಿ ಎನಿಸಿಕೊಳ್ಳಲಿದೆ.

ನ್ಯಾನೋ ಸೂಪರ್‌ಚಾರ್ಜ್ಡ್, ಹೈಬ್ರಿಡ್ ಕಾರು ನಿರೀಕ್ಷಿಸಿ

ಈ ಬಹುನಿರೀಕ್ಷಿತ ಕಾರಿಗಾಗಿ ಗ್ರಾಹಕರು ಹೆಚ್ಚು ಸಮಯ ಕಾಯಬೇಕಾಗಿಲ್ಲ. ವರದಿಗಳ ಪ್ರಕಾರ ನ್ಯಾನೋ ಸೂಪರ್‌ಚಾರ್ಜ್ಡ್ ಎಂಜಿನ್ ಮುಂಬರುವ ಹಬ್ಬದ ಆವೃತ್ತಿಯಲ್ಲೇ ಬಿಡುಗಡೆಯಾಗಲಿದೆ.

ನ್ಯಾನೋ ಸೂಪರ್‌ಚಾರ್ಜ್ಡ್, ಹೈಬ್ರಿಡ್ ಕಾರು ನಿರೀಕ್ಷಿಸಿ

ಅದೇ ರೀತಿ ನ್ಯಾನೋ 'ಇ-ರೆವ್' ಹೈಬ್ರಿಡ್ ಕಾರಿನ ಅಭಿವೃದ್ಧಿಯಲ್ಲೂ ಸಂಸ್ಥೆ ತೊಡಗಿಸಿಕೊಂಡಿದೆ. ಇದು ಇನ್ನು ಪ್ರಾಥಮಿಕ ಹಂತದಲ್ಲಿದ್ದು, ಸದ್ಯದಲ್ಲೇ ಬಿಡುಗಡೆ ಮಾಡುವ ಯೋಜನೆಗಳಿಲ್ಲ. ಹೆಚ್ಚು ಪರಿಸರ ಸ್ನೇಹಿ ಹಸಿರು ಕಾರುಗಳನ್ನು ತಯಾರಿಸುವುದರ ಭಾಗವಾಗಿ ಎಲೆಕ್ಟ್ರಿಕ್ ಮೋಟಾರು ಹೊಂದಿರುವ ಹೈಬ್ರಿಡ್ ವಾಹನ ಬಿಡುಗಡೆ ಮಾಡಲು ಸಂಸ್ಥೆ ಯೋಜನೆ ಹೊಂದಿದೆ.

English summary
Tata Nano With Supercharged & Hybrid Engines Under Development-Rumour
Story first published: Wednesday, June 18, 2014, 10:16 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark