ಟಾಪ್ 10 ವಿಶ್ವಾಸಾರ್ಹ ಕಾರು ಎಂಜಿನ್‌ಗಳು

Written By:

ಕಾರು ಖರೀದಿ ಮಾಡುವುದು ಪ್ರತಿಯೊಬ್ಬನ ಕನಸಾಗಿರುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಅನೇಕ ಬ್ರಾಂಡ್ ಕಾರುಗಳಿರುವುದರಿಂದ ಯಾವ ಮಾಡೆಲ್ ಉತ್ತಮ ಎಂಬುದನ್ನು ತಿಳಿಯುವುದು ಕಷ್ಟ. ಹಾಗಾಗಿ ಇಂತಹ ಗೊಂದಲಗಳನ್ನು ನಿವಾರಿಸಲು ಬಹಳ ಎಚ್ಚರಿಕೆಯಿಂದ ಸಂಶೋಧನೆ ಮಾಡುವುದು ಅತಿ ಅಗತ್ಯವಾಗಿದೆ.

ಕಾರು ಖರೀದಿ ಮಾಡುವಾಗ ಎಂಜಿನ್ ಬಹಳ ಹೆಚ್ಚು ಪ್ರಾಮುಖ್ಯತೆ ವಹಿಸುತ್ತದೆ. ಎಂಜಿನ್ ಕ್ಷಮತೆ ಮೇಲೆ ಕಾರಿನ ನಿರ್ವಹಣೆಯು ಅಡಗಿರುತ್ತದೆ. ಇದರಂತೆ ಇಂದಿನ ಈ ಲೇಖನದಲ್ಲಿ ಟಾಪ್ 10 ವಿಶ್ವಾಸಾರ್ಹ ಎಂಜಿನ್‌ಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಇದು ನಿಮ್ಮ ನೆರವಿಗೆ ಬರುವ ವಿಶ್ವಾಸವನ್ನು ಡ್ರೈವ್ ಸ್ಪಾರ್ಕ್ ಹೊಂದಿದೆ.

ಯಾವುದು ಶ್ರೇಷ್ಠ..?

ಬ್ರಿಟನ್‌ನ ಪ್ರಮುಖ ಆಟೋಮೊಬೈಲ್ ವಿಮಾ ಕಂಪನಿ ಆಗಿರುವ ವಾರಂಟಿ ಡೈರೆಕ್ಟ್, ಈ ಟಾಪ್ 10 ವಿಶ್ವಾಸಾರ್ಹ ಎಂಜಿನ್‌ಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ವ್ಯಾರಂಟಿ ಡೈರೆಕ್ಟ್ ಪ್ರಕಾರ ಜಪಾನ್ ಕಾರು ತಯಾರಕ ಸಂಸ್ಥೆಯಾದ ಹೋಂಡಾ ಕಾರು ಖರೀದಿ ಮಾಡುವುದು ಉತ್ತಮ. ಇದು ಜರ್ಮನಿಯ ಆಡಿ, ಬಿಎಂಡಬ್ಲ್ಯು ಹಾಗೂ ಫೋಕ್ಸ್‌ವ್ಯಾಗನ್‌ಗಳಂತಹ ದೈತ್ಯ ಕಾರು ಉತ್ಪಾದಕ ಸಂಸ್ಥೆಗಳನ್ನು ಹಿಂದಿಕ್ಕಿರುವುದು

ಅಚ್ಚರಿಗೆ ಕಾರಣವಾಗಿದೆ.

ಅಂದ ಹಾಗೆ ಸುಮ್ನೆ ಸುಮ್ನೆ ಈ ಸಮೀಕ್ಷಾ ವರದಿಯನ್ನು ಬಿಡುಗಡೆಗೊಳಿಸಿಲ್ಲ. ಬದಲಾಗಿ 50,000ದಷ್ಟು ಗ್ರಾಹಕರಿಂದ ಮಾಹಿತಿ ಸಂಗ್ರಹಿಸಿದ ಬಳಿಕ ಈ ರೇಟಿಂಗ್ ಬಿಡುಗಡೆಗೊಳಿಸಲಾಗಿದೆ. ಹಾಗಿದ್ದರೆ ಬನ್ನಿ ಫೋಟೊ ಫೀಚರ್ ಮೂಲಕ ಹೆಚ್ಚು ಮಾಹಿತಿ ಪಡೆಯೋಣ...

10. ಲ್ಯಾಂಡ್ ರೋವರ್

10. ಲ್ಯಾಂಡ್ ರೋವರ್

ಬ್ರಿಟನ್‌ನ ಎಸ್‌ಯುವಿ ಬ್ರಾಂಡ್ ಆಗಿರುವ ಲ್ಯಾಂಡ್ ರೋವರ್ ವೈಫಲ್ಯ ರೇಟಿಂಗ್ ಶೇಕಡಾ 1.38ರಷ್ಟಾಗಿದೆ.

9. ನಿಸ್ಸಾನ್

9. ನಿಸ್ಸಾನ್

ಮೈಕ್ರಾ, ಸನ್ನಿಗಳಂತಹ ಆವೃತ್ತಿ ಹೊಂದಿರುವ ನಿಸ್ಸಾನ್ ವೈಫಲ್ಯ ರೇಟಿಂಗ್ ಶೇಕಡಾ 1.32 ಆಗಿದ್ದು, ಪಟ್ಟಿನಲ್ಲಿ ಒಂಬತ್ತನೇ ಸ್ಥಾನ ಪಡೆದುಕೊಂಡಿದೆ.

8. ಫೋರ್ಡ್

8. ಫೋರ್ಡ್

ಅಮೆರಿಕದ ಪ್ರಮುಖ ಬ್ರಾಂಡ್ ಫೋರ್ಡ್ 8ನೇ ಸ್ಥಾನದಲ್ಲಿದ್ದು, ವೈಫಲ್ಯ ರೇಟಿಂಗ್ ಶೇಕಡಾ 1.25 ಆಗಿದೆ.

 7. ಫಿಯೆಟ್

7. ಫಿಯೆಟ್

ಇಟಲಿಯ ಪ್ರತಿಷ್ಠಿತ ಕಾರು ತಯಾರಕರಾದ ಪುಂಟೊ ವೈಫಲ್ಯ ರೇಟಿಂಗ್ ಶೇಕಡಾ 1.17 ಆಗಿದೆ.

6. ಲೆಕ್ಸಾಸ್

6. ಲೆಕ್ಸಾಸ್

ಲೆಕ್ಸಾಸ್ ಆರನೇ ಸ್ಥಾನದಲ್ಲಿದ್ದು, ವೈಫಲ್ಯ ರೇಟಿಂಗ್ ಶೇಕಡಾ 0.99 ಆಗಿದೆ.

5. ಜಾಗ್ವಾರ್

5. ಜಾಗ್ವಾರ್

ಟಾಟಾ ಒಡೆತನದಲ್ಲಿರುವ ಜಾಗ್ವಾರ್ ಐದನೇ ಸ್ಥಾನ ಪಡೆಯುವ ಮೂಲಕ ಉತ್ತಮ ಬ್ರಾಂಡ್ ಎನಿಸಿಕೊಂಡಿದೆ. ಜಾಗ್ವಾರ್ ವೈಫಲ್ಯ ರೇಟಿಂಗ್ ಶೇಕಡಾ 0.98 ಆಗಿದೆ.

4. ವೊಲ್ವೊ

4. ವೊಲ್ವೊ

ಸ್ವೀಡಿಷ್ ಕಾರು ತಯಾರಕರಾದ ವೊಲ್ವೊ ಸುರಕ್ಷತೆಗೆ ಹೆಚ್ಚು ಹೆಸರುವಾಸಿಯಾಗಿದ್ದು, ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ವೊಲ್ವೊ ವೈಫಲ್ಯ ರೇಟಿಂಗ್ ಶೇಕಡಾ 0.90 ಆಗಿದೆ.

3. ಮರ್ಸಿಡಿಸ್ ಬೆಂಝ್

3. ಮರ್ಸಿಡಿಸ್ ಬೆಂಝ್

ಜರ್ಮನಿಯ ಪ್ರೀಮಿಯಂ ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಟಾಪ್ 3 ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಬೆಂಝ್ ವೈಫಲ್ಯ ರೇಟಿಂಗ್ ಶೇಕಡಾ 0.84 ಆಗಿದೆ.

2. ಟೊಯೊಟಾ

2. ಟೊಯೊಟಾ

ಭಾರತದಲ್ಲಿ ಇನ್ನೋವಾ ಮುಖಾಂತರ ಅತಿ ಹೆಚ್ಚು ಯಶ ಸಾಧಿಸಿರುವ ಟೊಯೊಟಾ ನಂ. 2 ಸ್ಥಾನ ಪಡೆದಿದ್ದು, ವೈಫಲ್ಯ ರೇಟಿಂಗ್ ಶೇಕಡಾ 0.38 ಆಗಿದೆ.

1. ಹೋಂಡಾ

1. ಹೋಂಡಾ

ಅತ್ಯಂತ ಹೆಚ್ಚು ವಿಶ್ವಾಸಾರ್ಹ ಎಂಜಿನ್ ಪಟ್ಟ ಪಡೆದುಕೊಂಡಿರುವ ಹೋಂಡಾ ನಂ.1 ಸ್ಥಾನ ಪಡೆಯುವ ಮೂಲಕ ನೆಚ್ಚಿನ ಬ್ರಾಂಡ್ ಎನಿಸಿಕೊಂಡಿದೆ. ಹೋಂಡಾ ವೈಫಲ್ಯ ರೇಟಿಂಗ್ ಶೇಕಡಾ 0.29 ಆಗಿದೆ.

English summary
Latest findings by Warranty Direct indicate that if you want a car with the most-reliable engine, buy Japanese. There are also some surprises in the list of worst performers. German reliability is not as strong as many believe, as Audi, BMW and Volkswagen have some of the least reliable engines in their cars.
Story first published: Wednesday, February 20, 2013, 11:03 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark