ಟೊಯೊಟಾ ಎಟಿಯೋಸ್ ಲಿವಾ ಡೀಸೆಲ್ ಟಾಪ್ ವೆರಿಯಂಟ್ ಲಾಂಚ್

Written By:

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಟೊಯೊಟಾದ ಜನಪ್ರಿಯ ಎಟಿಯೋಸ್ ಲಿವಾ ಆವೃತ್ತಿಯ ಬಗ್ಗೆ ನಮೆಗೆಲ್ಲರಿಗೂ ತಿಳಿದಿದೆ. ಪ್ರಸ್ತುತ ವಾಹನ ತಯಾರಕ ಸಂಸ್ಥೆಯು ಡೀಸೆಲ್ ಆವೃತ್ತಿಯಲ್ಲಿ ಎರಡು ನೂತನ ವೆರಿಯಂಟ್‌ಗಳನ್ನು ಲಾಂಚ್ ಮಾಡಿದೆ.

ಈ ಹಿಂದೆ ಎರಡು ಡೀಸೆಲ್ ವೆರಿಯಂಟ್‌ನಲ್ಲಿ ಮಾತ್ರ ಲಭ್ಯವಾಗಿದ್ದ ಎಟಿಯೋಸ್ ಲಿವಾ ಹ್ಯಾಚ್‌ಬ್ಯಾಕ್ ಕಾರಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಲಿದೆ. ಅವುಗಳೆಂದರೆ

ವಿಡಿ ಮತ್ತು ವಿಡಿಎಸ್‌ಪಿ

ಇದುವರೆಗೆ ಟೊಯೊಟಾ ಎಟಿಯೋಸ್ ಲಿವಾ ಮೂರು ಪೆಟ್ರೋಲ್ (ಜೆ, ಜಿ ಮತ್ತು ವಿ) ಹಾಗೂ ಎರಡು ಡೀಸೆಲ್ (ಜೆಡಿ ಮತ್ತು ಜಿಡಿ) ವೆರಿಯಂಟ್‌ಗಳಲ್ಲಿ ಲಭ್ಯವಾಗುತ್ತಿತ್ತು. ಇದೀಗ ಆಗಮನವಾಗಿರುವ ನೂತನ ವಿಡಿ ಮತ್ತು ವಿಡಿಎಸ್‌ಪಿ ಮಾದರಿಗಳು ಟಾಪ್ ವೆರಿಯಂಟ್‌ನಲ್ಲಿ ಗುರುತಿಸಿಕೊಳ್ಳಲಿದೆ.

To Follow DriveSpark On Facebook, Click The Like Button
ಟೊಯೊಟಾ ಎಟಿಯೋಸ್ ಲಿವಾ ಡೀಸೆಲ್ ಟಾಪ್ ವೆರಿಯಂಟ್ ಲಾಂಚ್

ನೂತನ ಟಾಪ್ ಎಂಡ್ ವೆರಿಯಂಟ್‌ನಲ್ಲಿ ಹಲವಾರು ಹೆಚ್ಚುವರಿ ವೈಶಿಷ್ಟ್ಯಗಳು ಲಭ್ಯವಿರಲಿದೆ. ಇದು ಕಾರಿನ ಒಳಗಡೆ ಹಾಗೂ ಹೊರಮೈಯಿಂದಲೂ ಹೆಚ್ಚು ಆಕರ್ಷಕವಾಗಿ ಗೋಚರಿಸಲಿದೆ.

ಟೊಯೊಟಾ ಎಟಿಯೋಸ್ ಲಿವಾ ಡೀಸೆಲ್ ಟಾಪ್ ವೆರಿಯಂಟ್ ಲಾಂಚ್

ಇದನ್ನು ಆರಂಭಿಸಬೇಕೆಂದರೆ ಕಾರಿನ ಮುಂಭಾಗದಲ್ಲಿ ಕ್ರೋಮ್ ಗ್ರಿಲ್, ಫಾಗ್ ಲ್ಯಾಂಪ್, ರಿಯರ್ ವೈಪರ್ ಮತ್ತು ವಾಶರ್, 12 ಸ್ಪೋಕ್ ಅಲಾಯ್ ವೀಲ್ ಮತ್ತು ಬೂಟ್ (ಹಿಂದುಗಡೆ ಲಗ್ಗೇಜ್) ಡೋರ್‌ನಲ್ಲಿ ಕ್ರೋಮ್ ಗಾರ್ನಿಶ್, ಟರ್ನ್ ಸಿಗ್ನಲ್ ಲ್ಯಾಂಪ್ ಮತ್ತು ಹೊರಗಡೆ ರಿಯರ್ ವ್ಯೂ ಮಿರರ್ ಸೌಲಭ್ಯವಿರಲಿದೆ.

ಟೊಯೊಟಾ ಎಟಿಯೋಸ್ ಲಿವಾ ಡೀಸೆಲ್ ಟಾಪ್ ವೆರಿಯಂಟ್ ಲಾಂಚ್

ಇನ್ನು ಕಾರಿನ ಒಳಗಡೆ ಎರಡೂ ಆವೃತ್ತಿಗಳು ಟ್ಯಾಕೋಮೀಟರ್, ಡ್ಯುಯಲ್ ಟೋನ್ ಇಂಟಿರಿಯರ್, ವುಡ್ ಗ್ರೈನ್ ಫಿನಿಶ್ ಪಡೆದ ಡೋರ್ ಆರ್ಮ್‌ರೆಸ್ಟ್, ಕ್ರೋಮ್ ಫಿನಿಶ್ ಪಡೆದ ಗೇರ್ ಶಿಫ್ಟ್ ನಾಬ್, ಬ್ಲೂಟೂತ್ ಆಡಿಯೋ ಸಿಸ್ಟಂ ಮತ್ತು ರಿಯರ್ ಡಿಫಾಗರ್ ವ್ಯವಸ್ಥೆ ಹೊಂದಿರಲಿದೆ.

ಟೊಯೊಟಾ ಎಟಿಯೋಸ್ ಲಿವಾ ಡೀಸೆಲ್ ಟಾಪ್ ವೆರಿಯಂಟ್ ಲಾಂಚ್

ಅದೇ ರೀತಿ ಎಬಿಎಸ್ ಹಾಗೂ ಇಬಿಡಿ ಜತೆ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು ಸ್ಟಾಂಡರ್ಡ್ ಸುರಕ್ಷತಾ ವೈಶಿಷ್ಟ್ಯವಾಗಿರಲಿದೆ. ಹಾಗೆಯೇ ಟಾಪ್ ವಿಡಿಎಸ್‌ಪಿ ವೆರಿಯಂಟ್‌ಗಳು ಲೆಥರ್ಸ್ ಹೋದಿಕೆಯ ಸ್ಟೀರಿಂಗ್ ವೀಲ್ ಮತ್ತು ಸ್ಟೀರಿಂಗ್ ವೀಲ್‌ನಲ್ಲೇ ಆಡಿಯೋ ನಿಯಂತ್ರಣದ ಸೌಲಭ್ಯ ಪಡೆಯಲಿದೆ.

ಟೊಯೊಟಾ ಎಟಿಯೋಸ್ ಲಿವಾ ಡೀಸೆಲ್ ಟಾಪ್ ವೆರಿಯಂಟ್ ಲಾಂಚ್

ಅಂದ ಹಾಗೆ ಟೊಯೊಟಾ ಎಟಿಯೋಸ್ ಲಿವಾ ಡೀಸೆಲ್ ಆವೃತ್ತಿಯು 1.3 ಲೀಟರ್ 4 ಸಿಲಿಂಡರ್ ಡಿ-4ಡಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 68 ಅಶ್ವಶಕ್ತಿ (170 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ಟೊಯೊಟಾ ಎಟಿಯೋಸ್ ಲಿವಾ ಡೀಸೆಲ್ ಟಾಪ್ ವೆರಿಯಂಟ್ ಲಾಂಚ್

ಅಂತಿಮವಾಗಿ ಟೊಯೊಟಾ ಲಿವಾ ವಿಡಿ ಮತ್ತು ವಿಡಿಎಸ್‌ಪಿ ವೆರಿಯಂಟ್‌ಗಳು ಅನುಕ್ರಮವಾಗಿ 6.72 ಹಾಗೂ 7.12 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ ದರ) ದುಬಾರಿಯಾಗಲಿದೆ.

English summary
Toyota Etios Liva was until now offered in three petrol - J, G and V - and two diesel trims - JD and GD. The new variant trims which have joined the diesel lineup are the top of the line VD and VDSP.
Story first published: Monday, January 6, 2014, 10:00 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark