2016ರಲ್ಲಿ ಫೋಕ್ಸ್‌ವ್ಯಾಗನ್ ಸಣ್ಣ ಎಸ್‌ಯುವಿ ಭಾರತ ಎಂಟ್ರಿ

Written By:

ಇದೀಗ ಎಲ್ಲೂ ನೋಡಿದರೂ ಎಸ್‌ಯುವಿಗಳ ಸುದ್ದಿ. ಭಾರತ ಕಾರು ಮಾರುಕಟ್ಟೆಯಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ದೊರಕುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆ ಇಂತಹದೊಂದು ಬೆಳವಣಿಗೆಗೆ ಕಾರಣವಾಗಿದೆ.

ಫ್ರಾಂಕ್‌ಫರ್ಟ್ ಮೋಟಾರ್ ಶೋದಲ್ಲಿ ಸುಜುಕಿಯ ಎಸ್‌ಯುವಿ ಅನಾವರಣಗೊಳ್ಳುವ ಕುರಿತು ನಾವು ಮಾಹಿತಿ ನೀಡಿದ್ದೆವು. ಇದರ ಬೆನ್ನಲ್ಲೇ ಹ್ಯುಂಡೈ ಬೇಬಿ ಎಸ್‌ಯುವಿ ಸುದ್ದಿ ಆಗಮನವಾಗಿತ್ತು.

ಇದೀಗ ಮತ್ತೊಂದು ಎಸ್‌ಯುವಿ ಸರದಿ. ಜರ್ಮನಿ ಮೂಲದ ಕಾರು ತಯಾರಕ ಸಂಸ್ಥೆಯಾದ ಫೋಕ್ಸ್‌ವ್ಯಾಗನ್ ಭಾರತಕ್ಕೆ ಸಣ್ಣ ಎಸ್‌ಯುವಿ ಟೈಗನ್ ಪರಿಚಯಿಸಲು ಯೋಜನೆ ಇರಿಸಿಕೊಂಡಿದೆ. ಇದು ಬಹುತೇಕ 2016ರಲ್ಲಿ ಭಾರತ ಎಂಟ್ರಿ ಕೊಡುವ ಸಾಧ್ಯತೆಯಿದೆ.

To Follow DriveSpark On Facebook, Click The Like Button
ಫೋಕ್ಸ್ ವ್ಯಾಗನ್ ಟೈಗನ್

ಫೋಕ್ಸ್ ವ್ಯಾಗನ್ ಟೈಗನ್

ಕಾಂಪಾಕ್ಟ್ ಎಸ್‌‍ಯುವಿ ಟೈಗನ್‌ ಸಣ್ಣ ಕ್ರಾಸೋವರ್ ಕಾರಿಗೆ ಫೋಕ್ಸ್‌ವ್ಯಾಗನ್ ಹಸಿರು ನಿಶಾನೆ ತೋರಿದ್ದು, ಸದ್ಯದಲ್ಲೇ ಉತ್ಪಾದನಾ ವರ್ಷನ್ ಪಡೆದುಕೊಳ್ಳಲಿದೆ.

2016ರಲ್ಲಿ ಎಂಟ್ರಿ

2016ರಲ್ಲಿ ಎಂಟ್ರಿ

ಕಳೆದ ವರ್ಷದ ಸಾವೊ ಪೌಲೊ ಮೋಟಾರ್ ಶೋದಲ್ಲಿ ಅನಾವರಣಗೊಂಡಿದ್ದ ಫೋಕ್ಸ್‌ವ್ಯಾಗನ್ ಟೈಗನ್ 2016ರಲ್ಲಿ ಉತ್ಪಾದನಾ ವರ್ಷನ್ ಪಡೆದುಕೊಳ್ಳಲಿದೆ.

ಇಕೊಸ್ಪೋರ್ಟ್ ಪ್ರತಿಸ್ಪರ್ಧಿ

ಇಕೊಸ್ಪೋರ್ಟ್ ಪ್ರತಿಸ್ಪರ್ಧಿ

ಪ್ರಮುಖವಾಗಿಯೂ ಫೋರ್ಡ್ ಇಕೊಸ್ಪೋರ್ಟ್ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯಲಿರುವ ಫೋಕ್ಸ್ ವ್ಯಾಗನ್ ಟೈಗನ್, ಬೆಳೆದು ಬರುತ್ತಿರುವ ಭಾರತ ಹಾಗೂ ಬ್ರೆಜಿಲ್‌ಗಳಂತಹ ಕಾರು ಮಾರುಕಟ್ಟೆಗಳನ್ನು ಗುರಿಯಾಗಿರಿಸಿಕೊಳ್ಳಲಿದೆ.

ಸಣ್ಣ ಎಸ್‌ಯುವಿ

ಸಣ್ಣ ಎಸ್‌ಯುವಿ

ಫೋಕ್ಸ್‌ವ್ಯಾಗನ್ ಸಣ್ಣ ಕಾರುಗಳ ತಲಹದಿಯಲ್ಲಿ ಟೈಗನ್ ಕಾಂಪಾಕ್ಟ್ ಎಸ್‌ಯುವಿ ನಿರ್ಮಾಣವಾಗಲಿದೆ.

ಸಬ್ ಫೋರ್ ಮೀಟರ್

ಸಬ್ ಫೋರ್ ಮೀಟರ್

ಸಬ್ ಫೋರ್ ಮೀಟರ್ ಪರಿಮಿತಿಯೊಳಗೆ ಆಗಮನವಾಗಲಿರುವುದರಿಂದ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ನೆರವಾಗಲಿದೆ.

ಸುತ್ತಳತೆ

ಸುತ್ತಳತೆ

ಇದು 3.86 ಮೀಟರ್ ಉದ್ದವಿರಲಿದ್ದು, 1.73 ಮೀಟರ್ ಅಗಲ ಹಾಗೂ 1.57 ಮೀಟರ್ ಎತ್ತರವಿರಲಿದೆ.

ಸ್ಮರ್ಧಾತ್ಮಕ ದರ

ಸ್ಮರ್ಧಾತ್ಮಕ ದರ

ಇನ್ನು ಸ್ಪರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಕಂಪನಿ ಹೊಂದಿದೆ.

ಎಂಜಿನ್

ಎಂಜಿನ್

ಫೋಕ್ಸ್‌ವ್ಯಾಗನ್ ಟೈಗನ್‌ನಲ್ಲಿ 1.0 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಳವಡಿಸುವ ಸಾಧ್ಯತೆಯಿದ್ದು, ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ.

ಎಸ್‌ಯುವಿ ಪರ್ವಕಾಲ

ಎಸ್‌ಯುವಿ ಪರ್ವಕಾಲ

ಒಟ್ಟಾರೆಯಾಗಿ ಕಾರು ಪ್ರಿಯರಿಗಿದು ಸುಗ್ಗಿಯ ಕಾಲವಾಗಿದೆ. ಯಾಕೆಂದರೆ ಒಂದರ ಬಳಿಕ ಒಂದರಂತೆ ಪ್ರಮುಖ ಕಾರು ತಯಾರಕ ಸಂಸ್ಥೆಗಳು ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡುವುದರಲ್ಲಿ ಕಾರ್ಯಮಗ್ನವಾಗಿದೆ.

ಪ್ರತಿಕ್ರಿಯಿಸಿ

ಪ್ರತಿಕ್ರಿಯಿಸಿ

ಇದೀಗ ಕ್ರೀಡಾ ಬಳಕೆಯ ವಾಹನಗಳ ಬಗ್ಗೆ ಹಾಗೂ ಅದು ದೇಶದ ರಸ್ತೆಗಳಲ್ಲಿ ಸಾಧಿಸುತ್ತಿರುವ ಯಶಸ್ಸಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

English summary
Volkswagen officials have given the green light for the Taigun small crossover, which will launch in 2016, if all goes according to plan.
Story first published: Thursday, August 1, 2013, 9:56 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark