ಒಂದೊಂದು ಕಾರು ಡೈಮಂಡ್‌: ತಮ್ಮ ಐಷಾರಾಮಿ ಕಾರುಗಳ ವಿಡಿಯೋ ಹಂಚಿಕೊಂಡ ದಕ್ಷಿಣದ ಜನಪ್ರಿಯ ನಟ

ಮಳಯಾಳಂ ಸಿನಿಮಾ ಇಂಡಸ್ಟ್ರಿಯ ಜನಪ್ರಿಯ ನಟ ಹಾಗೂ ದಕ್ಷಿಣ ಭಾರತದ ಬಹು ಬೇಡಿಕೆಯ ನಟ ದುಲ್ಕರ್ ಸಲ್ಮಾನ್ ಅವರು, ಮೊದಲ ಬಾರಿಗೆ ತಮ್ಮ ಐಷಾರಾಮಿ ಕಾರ್ ಕಲೆಕ್ಷನ್ ಕುರಿತು ಸ್ವತಃ ಅವರೇ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

ಒಂದೊಂದು ಕಾರು ಡೈಮಂಡ್‌: ತಮ್ಮ ಐಷಾರಾಮಿ ಕಾರುಗಳ ವಿಡಿಯೋ ಹಂಚಿಕೊಂಡ ದಕ್ಷಿಣದ ಜನಪ್ರಿಯ ನಟ

ನಟ ದುಲ್ಕರ್ ಸಲ್ಮಾನ್ ಈ ಹಿಂದೆ ಇಂಟರ್ವ್ಯೂ ಒಂದರಲ್ಲಿ ತಾವು ಆಟೋಮೊಬೈಲ್ ಉತ್ಸಾಹಿ ಎಂದು ಹೇಳಿಕೊಂಡಿದ್ದರು. ಅವರ ತಂದೆ ಮಮ್ಮುಟ್ಟಿ ಅವರಂತೆ, ದುಲ್ಕರ್ ಕೂಡ ಐಷಾರಾಮಿ ಕಾರುಗಳ ಸೊಗಸಾದ ಸಂಗ್ರಹವನ್ನು ಹೊಂದಿದ್ದಾರೆ. ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ನಟ ತನ್ನ ಕಾರು ಸಂಗ್ರಹದ ವಿಡಿಯೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಒಂದೊಂದು ಕಾರು ಡೈಮಂಡ್‌: ತಮ್ಮ ಐಷಾರಾಮಿ ಕಾರುಗಳ ವಿಡಿಯೋ ಹಂಚಿಕೊಂಡ ದಕ್ಷಿಣದ ಜನಪ್ರಿಯ ನಟ

ಈ ಪೋಸ್ಟ್‌ನಲ್ಲಿ ದುಲ್ಕರ್ ಇತರ ಕಾರು ಉತ್ಸಾಹಿಗಳನ್ನು ಉದ್ದೇಶಿಸಿ ತಮ್ಮ ಕಾರುಗಳ ಬಗ್ಗೆ ವಿವರಿಸಿದ್ದಾರೆ. ಈ ಹಿಂದೆ ದುಲ್ಕರ್ ಅವರ ಕಾರುಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿರಬಹುದು, ಆದರೆ ಅವರ ಕಾರು ಸಂಗ್ರಹದ ವೀಡಿಯೊವನ್ನು ನಟನ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿರುವುದು ಇದೇ ಮೊದಲು.

ಒಂದೊಂದು ಕಾರು ಡೈಮಂಡ್‌: ತಮ್ಮ ಐಷಾರಾಮಿ ಕಾರುಗಳ ವಿಡಿಯೋ ಹಂಚಿಕೊಂಡ ದಕ್ಷಿಣದ ಜನಪ್ರಿಯ ನಟ

ವೀಡಿಯೊವನ್ನು ಹಂಚಿಕೊಂಡ ದುಲ್ಕರ್ ಅವರು, ಕಳೆದ ಹಲವು ದಿನಗಳಿಂದ ವೀಡಿಯೊವನ್ನು ಪೋಸ್ಟ್ ಮಾಡಲು ಬಯಸಿದ್ದರು, ಆದರೆ ಬಿಡುವು ಸಿಕ್ಕಿರಲಿಲ್ಲ. ನನ್ನಂತೆ ಕಾರುಗಳ ಮೇಲೆ ಪ್ರೀತಿ ಮತ್ತು ಮೋಹ ಇರುವವರು ಲಕ್ಷಾಂತರ ಜನರಿದ್ದಾರೆ. ಅವರೊಂದಿಗೆ ಸಂವಹನ ನಡೆಸಲು ಇದು ಅತ್ಯುತ್ತಮ ಮಾರ್ಗವೆಂದು ನಾನು ಭಾವಿಸುತ್ತೇನೆ. ಹಾಗಾಗಿ ಕಳೆದ ಕೆಲವು ವರ್ಷಗಳಿಂದ ನಾನು ಸಂಗ್ರಹಿಸಲು ಸಾಧ್ಯವಾದ ಕೆಲವು ಕಾರುಗಳನ್ನು ನಾನು ನಿಮಗೆ ಪರಿಚಯಿಸುತ್ತಿದ್ದೇನೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ದುಲ್ಕರ್ ಅವರು ವಿಡಿಯೋದಲ್ಲಿ BMW ನ 2002 ಮಾಡೆಲ್ M3 ಕಾರನ್ನು ಅತ್ಯುತ್ತಮ ಕಾರು ಎಂದು ಪರಿಗಣಿಸಿದ್ದಾರೆ. ಜೊತೆಗೆ E46 (BMW ಮಾಡೆಲ್ ಕೋಡ್) ಕಾರಿಗೆ ದೊಡ್ಡ ಅಭಿಮಾನಿ ಎಂದು ವೀಡಿಯೊದಲ್ಲಿ ಉಲ್ಲೇಖಿಸಿದ್ದಾರೆ. ಕಾರು ತನಗೆ ಎಷ್ಟು ಅಮೂಲ್ಯವಾದುದು ಎಂಬುದನ್ನು ವಿವರಿಸಿದ್ದಾರೆ.

ಒಂದೊಂದು ಕಾರು ಡೈಮಂಡ್‌: ತಮ್ಮ ಐಷಾರಾಮಿ ಕಾರುಗಳ ವಿಡಿಯೋ ಹಂಚಿಕೊಂಡ ದಕ್ಷಿಣದ ಜನಪ್ರಿಯ ನಟ

ನಾನು ಹಲವು ವರ್ಷಗಳಿಂದ ಸಂಗ್ರಹಿಸಿರುವ ಕೆಲವು ರತ್ನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನನ್ನ ಫೇವರೆಟ್ '02 BMW M3 ಯೊಂದಿಗೆ ವಿಡಿಯೋವನ್ನು ಪ್ರಾರಂಭಿಸುತ್ತಿದ್ದೇನೆ. ಇದಾದ ಬಳಿಕ ಇನ್ನೂ ಹಲವು ವಿಡಿಯೋಗಳು ಬರಲಿದ್ದು, ನೀವು ಕಂಡಿತ ಈ ವಿಡಿಯೋಗಳನ್ನು ಆನಂದಿಸುತ್ತೀರಿ ಎಂದು ದುಲ್ಕರ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಒಂದೊಂದು ಕಾರು ಡೈಮಂಡ್‌: ತಮ್ಮ ಐಷಾರಾಮಿ ಕಾರುಗಳ ವಿಡಿಯೋ ಹಂಚಿಕೊಂಡ ದಕ್ಷಿಣದ ಜನಪ್ರಿಯ ನಟ

ಇನ್ನು ವಿಡಿಯೋದಲ್ಲಿ ಕಾಣಸಿಗುವ M3 ಕಾರಿನ ಬಗ್ಗೆ ಹೇಳುವುದಾದರೆ ಆಫ್ಟರ್ ಮಾರ್ಕೆಟ್ ಅಲಾಯ್ ವೀಲ್‌ಗಳಿಂದ ಮಾಡಿಫೈಗೊಳಿಸಿದ್ದಾರೆ. ಕಾರಿನ ಒಟ್ಟಾರೆ ನೋಟದ ಜೊತೆಗೆ ವೀಲ್ ವಿನ್ಯಾಸವೂ ಆಕರ್ಷಕವಾಗಿದೆ. ಇದಲ್ಲದೆ, ಸಸ್ಪೆನ್ಷನ್ ಸೆಟಪ್ ಅನ್ನು ನವೀಕರಿಸಲಾಗಿದ್ದು, ಎಕ್ಸಾಸ್ಟ್ ಸಿಸ್ಟಮ್ ಅನ್ನು ಸಹ ಮಾರ್ಪಡಿಸಲಾಗಿದೆ.

ಒಂದೊಂದು ಕಾರು ಡೈಮಂಡ್‌: ತಮ್ಮ ಐಷಾರಾಮಿ ಕಾರುಗಳ ವಿಡಿಯೋ ಹಂಚಿಕೊಂಡ ದಕ್ಷಿಣದ ಜನಪ್ರಿಯ ನಟ

ವಾಹನವು 3.2 ಲೀಟರ್ ಇನ್-ಲೈನ್ 6 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 343 bhp ಪವರ್ ಮತ್ತು 365 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಐಷಾರಾಮಿ ಕಾರಿನ ಪಿನ್‌ವೀಲ್ ಡ್ರೈವ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಿದೆ.

ಒಂದೊಂದು ಕಾರು ಡೈಮಂಡ್‌: ತಮ್ಮ ಐಷಾರಾಮಿ ಕಾರುಗಳ ವಿಡಿಯೋ ಹಂಚಿಕೊಂಡ ದಕ್ಷಿಣದ ಜನಪ್ರಿಯ ನಟ

ದುಲ್ಕರ್ ಹೇಳುವಂತೆ M3 E46 ಅವರು ಓಡಿಸಲು ಇಷ್ಟಪಡುವ ಕಾರಾಗಿದೆ. BMW M3 ಕಾರು ಪ್ರಪಂಚದಾದ್ಯಂತದ ಕಾರು ಉತ್ಸಾಹಿಗಳಿಂದ ಇಷ್ಟಪಟ್ಟ ಕಾರು. M3 E46 ಅನ್ನು ಮೊದಲು 2000 ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಯಿತು. ಇದು ಕೂಪ್ ಮತ್ತು ಕನ್ವರ್ಟಿಬಲ್ ಬಾಡಿ ಸ್ಟೈಲ್‌ಗಳಲ್ಲಿ ಲಭ್ಯವಿತ್ತು.

ಒಂದೊಂದು ಕಾರು ಡೈಮಂಡ್‌: ತಮ್ಮ ಐಷಾರಾಮಿ ಕಾರುಗಳ ವಿಡಿಯೋ ಹಂಚಿಕೊಂಡ ದಕ್ಷಿಣದ ಜನಪ್ರಿಯ ನಟ

ಇನ್ನು ಇದಾದ ಬಳಿಕ ಇನ್ನೊಂದು ವಿಡಿಯೋ ಪೋಸ್ಟ್‌ ಮಾಡಿರುವ ಅವರು, ಮುಂದೆ ನನ್ನ 2011 Mercedes-Benz SLS AMG ಅನ್ನು ಹಂಚಿಕೊಳ್ಳುತ್ತಿದ್ದೇನೆ. ಇದನ್ನು ಖರೀದಿಸುವ ಬಗ್ಗೆ ಎಂದೂ ಕನಸು ಕಂಡಿರಲಿಲ್ಲ, ಆದರೆ ಕೊನೆಗೂ ಕೈ ಸೇರಿದೆ. ಈ ಕಾರು ಮುಂದೊಂದು ದಿನ ಕ್ಲಾಸಿಕ್ ಆಗುತ್ತದೆ ಎಂದು ಭಾವಿಸಿದ್ದೆ, ಅದರಂತೆ ಇಂದು ಸಾಬೀತಾಗಿದೆ.

ಒಂದೊಂದು ಕಾರು ಡೈಮಂಡ್‌: ತಮ್ಮ ಐಷಾರಾಮಿ ಕಾರುಗಳ ವಿಡಿಯೋ ಹಂಚಿಕೊಂಡ ದಕ್ಷಿಣದ ಜನಪ್ರಿಯ ನಟ

ಯಾವ ಪೀಳಿಗೆಯನ್ನು ಲೆಕ್ಕಿಸದೆ ಗುಲ್ವಿಂಗ್‌ನ ಓನರ್ ಆಗಿರುವುದು ಹೆಮ್ಮೆಯಾಗಿದೆ. ಇದು ನನ್ನೊಂದಿಗೆ 8 ವರ್ಷಗಳನ್ನು ಪೂರೈಸಿದೆ ಎಂಬುದನ್ನು ನಂಬಲಸಾಧ್ಯವಾಗಿದೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಕಾರಿನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ದುಲ್ಕರ್ ಅವರು ಮುಂದಿನ ವಿಡಿಯೋದಲ್ಲಿ ಹಂಚಿಕೊಳ್ಳಬಹುದು.

ಒಂದೊಂದು ಕಾರು ಡೈಮಂಡ್‌: ತಮ್ಮ ಐಷಾರಾಮಿ ಕಾರುಗಳ ವಿಡಿಯೋ ಹಂಚಿಕೊಂಡ ದಕ್ಷಿಣದ ಜನಪ್ರಿಯ ನಟ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ನಟ ಮಮ್ಮುಟ್ಟಿ ಮತ್ತು ಅವರ ಪುತ್ರ ದುಲ್ಕರ್ ಸಲ್ಮಾನ್ ಸಿನಿಮಾ ಮತ್ತು ಕಾರುಗಳ ಮೇಲಿನ ಪ್ರೀತಿಯಿಂದ ಅಭಿಮಾನಿಗಳಲ್ಲಿ ಜನಪ್ರಿಯರಾಗಿದ್ದಾರೆ. ಈ ತಂದೆ-ಮಗ ಜೋಡಿಯು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಕಾರುಗಳ ದೊಡ್ಡ ಸಂಗ್ರಹವನ್ನು ಹೊಂದಿದೆ. ಇವರಿಬ್ಬರ ವಾಹನ ಸಂಗ್ರಹವನ್ನು ಕಾಣಲು ಹಲವರು ವಾಹನ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.

Most Read Articles

Kannada
English summary
A popular south actor shared a video explaining about his luxury cars
Story first published: Tuesday, October 18, 2022, 12:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X