2300 ಕೆಜಿ ತೂಕದ ಮಹೀಂದ್ರಾ ಟ್ರಾಕ್ಟರ್ ಅನ್ನು ಸಲೀಸಾಗಿ ಎಳೆದ ಡೋಮಿನಾರ್ 400...

2300 ಕೆಜಿ ತೂಕದ ಮಹೀಂದ್ರಾ ಟ್ರಾಕ್ಟರ್ ಅನ್ನು ಸಲೀಸಾಗಿ ಎಳೆದ ಡೋಮಿನಾರ್ 400...

By Praveen Sannamani

ಭಾರತದಲ್ಲಿ ಬಜಾಜ್ ಡೋಮಿನಾರ್ 400 ಬೈಕ್‌ಗಳನ್ನು ಬಿಡುಗೊಂಡ ದಿನದಿಂದಲೂ ನೇರವಾಗಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನೇ ಟಾರ್ಗೆಟ್ ಮಾಡುತ್ತಿದ್ದು, ಹಾಥಿ ಮತ್ ಪಾಲೊ ಎನ್ನುವ ಜಾಹೀರಾತು ಸರಣಿ ಮೂಲಕ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಸಾಮರ್ಥ್ಯದ ಕುರಿತು ಕಾಲೆಳೆಯುವ ಪ್ರಯತ್ನ ಮಾಡುತ್ತಲೇ ಇದೆ. ಇದೀಗ ಮತ್ತೊಂದು ಆಪ್ ರೋಡ್ ಕಸರತ್ತು ಪ್ರದರ್ಶನ ಮಾಡಿದ್ದು, ಮಹೀಂದ್ರಾ ಟ್ರಾಕ್ಟರ್ ಅನ್ನು ಸಲೀಸಾಗಿ ಎಳೆದು ಬೈಕ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

2300 ಕೆಜಿ ತೂಕದ ಮಹೀಂದ್ರಾ ಟ್ರಾಕ್ಟರ್ ಅನ್ನು ಸಲೀಸಾಗಿ ಎಳೆದ ಡೋಮಿನಾರ್ 400...

ಕಳೆದ ಕೆಲ ದಿನಗಳಿಂದ 'ಹಾಥಿ ಮತ್ ಪಾಲೊ' ಎನ್ನುವ ಜಾಹೀರಾತು ಸರಣಿ ಮೂಲಕ ಬರೋಬ್ಬರಿ 6 ಜಾಹೀರಾತುಗಳನ್ನು ಹೊರತಂದಿರುವ ಬಜಾಜ್ ಸಂಸ್ಥೆಯು, ಪ್ರತಿ ಜಾಹೀರಾತಿನಲ್ಲೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಟಾರ್ಗೆಟ್ ಮಾಡುವ ಮೂಲಕ ಡೋಮಿನಾರ್ 400 ಬೈಕ್‌ಗಳ ಮುಂದೆ ಅವು ಬಚ್ಚಾ ಎನ್ನುವಂತೆ ಬಿಂಬಿಸುತ್ತಲೇ ಬಂದಿದೆ. ಅದಕ್ಕೆ ಮತ್ತೊಂದು ಟಾಂಗ್ ಎನ್ನುವಂತೆ ಟ್ರಾಕ್ಟರ್ ಅನ್ನು ಎಳೆಯುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

2300 ಕೆಜಿ ತೂಕದ ಮಹೀಂದ್ರಾ ಟ್ರಾಕ್ಟರ್ ಅನ್ನು ಸಲೀಸಾಗಿ ಎಳೆದ ಡೋಮಿನಾರ್ 400...

ಆಪ್ ರೋಡ್ ಕಸರತ್ತು ಪ್ರದರ್ಶನದಲ್ಲಿ ದಿನಕ್ಕೊಂದು ಸುದ್ದಿಮಾಡುತ್ತಿರುವ ಡೋಮಿನಾರ್ 400 ಬೈಕ್‌ಗಳು ಇತರೆ ಬೈಕ್ ಮಾದರಿಗಳಿಂತ ಹೆಚ್ಚಿನ ಮಟ್ಟದ ಆಪ್ ರೋಡ್ ಕೌಶಲ್ಯವನ್ನು ಹೊಂದಿದ್ದು, ಮಹೀಂದ್ರಾ ಟ್ರಾಕ್ಟರ್ ಅನ್ನು ಸಲೀಸಾಗಿ ಎಳೆಯುವ ಮೂಲಕ ಬೈಕಿನ ಎಂಜಿನ್ ಬಲಿಷ್ಠತೆಗೆ ಬಗ್ಗೆ ಬೈಕ್ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ.

2300 ಕೆಜಿ ತೂಕದ ಮಹೀಂದ್ರಾ ಟ್ರಾಕ್ಟರ್ ಅನ್ನು ಸಲೀಸಾಗಿ ಎಳೆದ ಡೋಮಿನಾರ್ 400...

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಈ ಆಪ್ ರೋಡ್ ಕೌಶಲ್ಯವನ್ನು ಪ್ರದರ್ಶನ ಮಾಡಿದ್ದು, ಯಾವುದೇ ಸರಕು ಇಲ್ಲದ ಖಾಲಿ ಟ್ರಾಕ್ಟರ್ ಅನ್ನು ಸಲೀಸಾಗಿ ಎಳೆದಿದೆ. ಈ ಮೂಲಕ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಂತಲೂ ಹೆಚ್ಚಿನ ಮಟ್ಟದ ಎಂಜಿನ್ ಬಲಿಷ್ಠತೆ ಇದೆ ಎಂಬುವುದನ್ನು ತೋರಿಸಿಕೊಟ್ಟಿದೆ.

2300 ಕೆಜಿ ತೂಕದ ಮಹೀಂದ್ರಾ ಟ್ರಾಕ್ಟರ್ ಅನ್ನು ಸಲೀಸಾಗಿ ಎಳೆದ ಡೋಮಿನಾರ್ 400...

ಯಾವುದೇ ಸಹಾಯವಿಲ್ಲದೇ ಟ್ರಾಕ್ಟರ್ ಮುಂಭಾಗದಲ್ಲಿ ಬೈಕಿನ ಹಿಂಭಾಗದ ಸಸ್ಷೆಷನ್‌ಗೆ ಹಗ್ಗವನ್ನು ಬಿಗಿಯುವ ಮೂಲಕ ಟ್ರಾಕ್ಟರ್ ಅನ್ನು ಎಳೆಯಲಾಗಿದ್ದು, ಈ ವೇಳೆ ಇತರೆ ಬೈಕ್ ಸವಾರರು ಡೋಮಿನಾರ್ 400 ಬೈಕಿನ ಆಪ್ ರೋಡ್ ಕೌಶಲ್ಯ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

2300 ಕೆಜಿ ತೂಕದ ಮಹೀಂದ್ರಾ ಟ್ರಾಕ್ಟರ್ ಅನ್ನು ಸಲೀಸಾಗಿ ಎಳೆದ ಡೋಮಿನಾರ್ 400...

ಇನ್ನು 373 ಸಿಸಿ ಸಿಂಗಲ್ ಸಿಲಿಂಡರ್ ಸೌಲಭ್ಯ ಹೊಂದಿರುವ ಬಜಾಜ್ ಡೋಮಿನಾರ್ 400 ಬೈಕ್ ಸದ್ಯ ವೈಟ್ ಮತ್ತು ಮ್ಯಾಟೆ ಬ್ಲ್ಯಾಕ್ ಶೆಡ್‌ನೊಂದಿಗೆ ಖರೀದಿಗೆ ಲಭ್ಯವಿದ್ದು, ಬಿಡುಗಡೆಯಾಗಲಿರುವ 2018ರ ಆವೃತ್ತಿಯು ರೆಡ್ ಬಣ್ಣದೊಂದಿಗೆ ಲಭ್ಯವಾಗಲಿದೆ.

2300 ಕೆಜಿ ತೂಕದ ಮಹೀಂದ್ರಾ ಟ್ರಾಕ್ಟರ್ ಅನ್ನು ಸಲೀಸಾಗಿ ಎಳೆದ ಡೋಮಿನಾರ್ 400...

ಈಗಾಗಲೇ ಬಜಾಜ್ ಶೋರಂಗಳಲ್ಲಿ ಮ್ಯಾಟೆ ಬ್ಲ್ಯಾಕ್ ಶೆಡ್ ಹೊಂದಿರುವ ಡೋಮಿನಾರ್ 400 ಆಯ್ಕೆಗೆ ಲಭ್ಯವಿದ್ದು, ಸದ್ಯದಲ್ಲೇ 2018ರ ಆವೃತ್ತಿಯ ಡೋಮಿನಾರ್ 400 ಸಹ ಮಾರಾಟಕ್ಕೆ ಲಭ್ಯವಾಗಲಿದೆ.

ಒಟ್ಟಿನಲ್ಲಿ ಬಿಡುಗಡೆಯಾಗಲಿರುವ 2018ರ ಡೋಮಿನಾರ್ 400 ಬೈಕ್‌ಗಳು ಆಪ್ ರೋಡ್ ಹಾಗೂ ಸೂಪರ್ ಬೈಕ್ ಪ್ರಿಯರನ್ನು ಸೆಳೆಯಬಲ್ಲ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ ಎನ್ನಲಾಗಿದ್ದು, ಮಹೀಂದ್ರಾ ಟ್ರಾಕ್ಟರ್ ಎಳೆಯುತ್ತಿರುವ ವಿಡಿಯೋ ಇಲ್ಲಿದೆ ನೋಡಿ.

2300 ಕೆಜಿ ತೂಕದ ಮಹೀಂದ್ರಾ ಟ್ರಾಕ್ಟರ್ ಅನ್ನು ಸಲೀಸಾಗಿ ಎಳೆದ ಡೋಮಿನಾರ್ 400...

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಬಹುನೀರಿಕ್ಷಿತ ಅಥೆರ್ 340 ಮತ್ತು 450 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಿಡುಗಡೆ

ಭಾರತದಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಬೆಸ್ಟ್ ಬೈಕ್‌ಗಳಿವು...

ಈ MLA ಮಾಡಿದ ಕೆಲಸವನ್ನು ನಿಜವಾಗಿಯೂ ಮೆಚ್ಚಲೇಬೇಕು..

ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಹೇಗೆ?

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

Most Read Articles

Kannada
Read more on off road
English summary
Can the Bajaj Dominar 400 pull a 2,300 KG heavy tractor: Video.
Story first published: Tuesday, June 5, 2018, 18:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X