ದೆಹಲಿ ಸಿಎಂ ಕೇಜ್ರಿವಾಲ್‌ರ ವ್ಯಾಗನರ್ ಆರ್ ಕಾರನ್ನೇ ಎಗರಿಸಿದ ಚಾಲಾಕಿ ಕಳ್ಳರು..!!

ಸಿಎಂ ಕೇಜ್ರಿವಾಲ್ ಅವರ ನೆಚ್ಚಿನ ಮಾರುತಿ ಸುಜುಕಿ ವ್ಯಾಗನರ್ ಆರ್ ಕಾರು ಕಳ್ಳತನವಾಗಿದೆ. ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಜ್ಯ ಸರ್ಕಾರದ ಸಚಿವಾಲಯದ ಬಳಿ ನಿಲ್ಲಿಸಿದ್ದಾಗ ನೀಲಿ ಬಣ್ಣದ ವ್ಯಾಗನಾರ್ ಕಾರನ್ನು ಕಳ್ಳರು ಕದ್ದೊಯ್ದಿದ್ದಾರೆ.

By Praveen

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನೆಚ್ಚಿನ ಮಾರುತಿ ಸುಜುಕಿ ವ್ಯಾಗನರ್ ಆರ್ ಕಾರು ಕಳ್ಳತನವಾಗಿದೆ. ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಜ್ಯ ಸರ್ಕಾರದ ಸಚಿವಾಲಯದ ಬಳಿ ನಿಲ್ಲಿಸಿದ್ದಾಗ ನೀಲಿ ಬಣ್ಣದ ವ್ಯಾಗನಾರ್ ಕಾರನ್ನು ಕಳ್ಳರು ಕದ್ದೊಯ್ದಿದ್ದಾರೆ.

ಸಿಎಂ ಕೇಜ್ರಿವಾಲ್‌ರ ವ್ಯಾಗನರ್ ಕಾರನ್ನೇ ಎಗರಿಸಿದ ಚಾಲಾಕಿ ಕಳ್ಳರು..!!

DL 9C G 9769 ನಂಬರ್‌ನ ವ್ಯಾಗನಾರ್ ಆರ್ ಕಾರು ಕೇಜ್ರಿವಾಲ್ ಅವರ ಅಚ್ಚುಮೆಚ್ಚಿನ ಕಾರಾಗಿತ್ತು. ಅವರು ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರವೂ ಸಹ ಇದೇ ಕಾರನ್ನು ಬಳಕೆ ಮಾಡುತ್ತಿದ್ದರು. ಆದ್ರೆ ಇದೀಗ ಕಳ್ಳರ ಪಾಲಾಗಿದೆ.

ಸಿಎಂ ಕೇಜ್ರಿವಾಲ್‌ರ ವ್ಯಾಗನರ್ ಕಾರನ್ನೇ ಎಗರಿಸಿದ ಚಾಲಾಕಿ ಕಳ್ಳರು..!!

ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷ ಕಟ್ಟುವ ಸಂದರ್ಭದಲ್ಲಿ ಮತ್ತು ದೆಹಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಇದೇ ಕಾರಿನಲ್ಲಿ ಎಲ್ಲೆಡೆಗೆ ತೆರಳುತ್ತಿದ್ದರು. ಇದರಿಂದಾಗಿ ತಮ್ಮ ನೆಚ್ಚಿನ ಕಾರು ಕಳ್ಳತನವಾಗಿರುವ ಬಗ್ಗೆ ಅರವಿಂದ್ ಕೇಜ್ರಿವಾಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಸಿಎಂ ಕೇಜ್ರಿವಾಲ್‌ರ ವ್ಯಾಗನರ್ ಕಾರನ್ನೇ ಎಗರಿಸಿದ ಚಾಲಾಕಿ ಕಳ್ಳರು..!!

ಘಟನೆಗೂ ಮುನ್ನ ದೆಹಲಿಯ ಸಚಿವಾಲಯದ ಆವರಣದಲ್ಲಿ ನೀಲಿ ಬಣ್ಣದ ವ್ಯಾಗನರ್ ಆರ್ ಕಾರನ್ನು ನಿಲ್ಲಿಸಲಾಗಿತ್ತು. ಆದ್ರೆ ಅಷ್ಟೇಲ್ಲಾ ಭದ್ರತೆ ನಡುವೆಯೂ ಕಾರು ಕದ್ದುಕೊಂಡು ಹೋಗಿರುವುದೇ ಭಾರೀ ಚರ್ಚೆಗೆ ಕಾರಣವಾಗಿದೆ.

ಸಿಎಂ ಕೇಜ್ರಿವಾಲ್‌ರ ವ್ಯಾಗನರ್ ಕಾರನ್ನೇ ಎಗರಿಸಿದ ಚಾಲಾಕಿ ಕಳ್ಳರು..!!

ಈ ಸಂಬಂಧ ಪ್ರಕರಣ ಕೂಡಾ ದಾಖಲಾಗಿದ್ದು, ಈ ಹಿನ್ನೆಲೆ ಕಾರು ಕಳ್ಳತನ ಪ್ರಕರಣವನ್ನು ಬೇಧಿಸಲು ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ ಎನ್ನಲಾಗಿದೆ.

ಸಿಎಂ ಕೇಜ್ರಿವಾಲ್‌ರ ವ್ಯಾಗನರ್ ಕಾರನ್ನೇ ಎಗರಿಸಿದ ಚಾಲಾಕಿ ಕಳ್ಳರು..!!

ಇನ್ನೊಂದು ಪ್ರಮುಖ ವಿಚಾರ ಎಂದರೆ ಕೇಜ್ರಿವಾಲ್ ಅವರಿಗೆ ವಿದೇಶಿ ಸ್ನೇಹಿತರೊಬ್ಬರು ಈ ಕಾರನ್ನು ಉಡುಗೊರೆಯಾಗಿ ನೀಡಿದ್ದರು. 2014ರಲ್ಲಿ ಪೊಲೀಸರ ವಿರುದ್ಧ ನಡೆಸಿದ ಪ್ರತಿಭಟನೆ ವೇಳೆ ಈ ಕಾರಿನಲ್ಲೇ ಕೇಜ್ರಿವಾಲ್ ರಾತ್ರಿ ನಿದ್ದೆಮಾಡಿ ಸಖತ್ ಸುದ್ಧಿಯಾಗಿದ್ದರು.

ಸಿಎಂ ಕೇಜ್ರಿವಾಲ್‌ರ ವ್ಯಾಗನರ್ ಕಾರನ್ನೇ ಎಗರಿಸಿದ ಚಾಲಾಕಿ ಕಳ್ಳರು..!!

ಆದ್ರೆ ಮುಂದುವರಿರುವ ತಂತ್ರಜ್ಞಾನಗಳ ಸೌಲಭ್ಯ ಅಳವಡಿಕೆ ಮೂಲಕ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬಹುದಾಗಿದ್ದು, ಆ್ಯಂಟಿ ಥೆಫ್ಟ್ ಟೆಕ್ನಾಲಜಿ ಮೂಲಕ ಕಾರು ಕಳ್ಳತನ ಪ್ರಕರಣಗಳನ್ನು ತಡೆಗಟ್ಟಬಹುದಾಗಿದೆ.

ಸಿಎಂ ಕೇಜ್ರಿವಾಲ್‌ರ ವ್ಯಾಗನರ್ ಕಾರನ್ನೇ ಎಗರಿಸಿದ ಚಾಲಾಕಿ ಕಳ್ಳರು..!!

ಇದಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಇಮ್ ಮೊಬಿಲೈಸರ್ ಸಿಸ್ಟಂ, ಜಿಪಿಎಸ್ ಟ್ರಾಕಿಂಗ್ ಸಿಸ್ಟಂ, ಗೇರ್ ಆ್ಯಂಡ್ ಸ್ಟಿರಿಂಗ್ ವೀಲ್ಹ್ ಲಾಕ್ ಸೇರಿದಂತೆ ವಿವಿಧ ಸುರಕ್ಷಾ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬಹುದಾಗಿದ್ದು, ಕಾರು ಕಳ್ಳತನ ತಡೆಯಲು ಇದು ಸೂಕ್ತ ಪರಿಹಾರ ಎನ್ನಬಹುದು.

Most Read Articles

Kannada
English summary
Read in Kannada about Delhi Chief Minister Arvind Kejriwal’s Car Gets Stolen.
Story first published: Friday, October 13, 2017, 14:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X