Just In
Don't Miss!
- Movies
KSRTC ಬಸ್ಸಿನಲ್ಲಿ ನಿರ್ಮಾಣವಾದ ವಿಶೇಷ ಸ್ತ್ರೀ ಶೌಚಾಲಯ ಪರಿಶೀಲಿಸಿದ ನಟಿ ಶ್ರುತಿ
- News
ಕಬ್ಬನ್ ಉದ್ಯಾನ ವ್ಯಾಪ್ತಿಯಲ್ಲಿ ನಿಯಮಬಾಹಿರ ಕಟ್ಟಡ ನಿರ್ಮಾಣ: ನೋಟಿಸ್
- Lifestyle
ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಈ ಆಹಾರಗಳನ್ನು ಸೇವಿಸುವುದನ್ನು ಮರೆಯಬೇಡಿ..
- Sports
ಹೊಸ ಪರೀಕ್ಷೆಗೆ ಒಳಗಾಗಬೇಕು ಕ್ರಿಕೆಟ್ ತಾರೆಯರು: 8.30 ನಿಮಿಷದಲ್ಲಿ 2 ಕಿ.ಮೀ ಗುರಿ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತೀಯ ಸೇನಾಪಡೆಯ ಆತ್ಮವಿಶ್ವಾಸ ಹೆಚ್ಚಿಸಿದ ರಫೇಲ್ ಯುದ್ದವಿಮಾನಗಳು!
ಭಾರತೀಯ ಸೇನಾ ಪಡೆಯಲ್ಲಿ ಇಂದಿನಿಂದ ಹೊಸ ಯುಗಾಂಭವಾಗಿದೆ ಎಂದರೆ ತಪ್ಪಾಗುವುದಿಲ್ಲ. ಬಹುನೀರಿಕ್ಷಿತ ರಫೇಲ್ ಯುದ್ದವಿಮಾನಗಳು ಭಾರತಕ್ಕೆ ಬಂದಿಳಿಯುವ ಮೂಲಕ ಸೇನೆಗೆ ಆತ್ಮವಿಶ್ವಾಸ ಹೆಚ್ಚಿಸಿದ್ದು, ಹೊಸ ಫೈಟರ್ ಜೆಟ್‌ಗಳಿಗೆ ಅಂಬಾಲ ಏರ್‌ಬೇಸ್‌ನಲ್ಲಿ ಭವ್ಯ ಸ್ವಾಗತ ಕೋರಲಾಯ್ತು.

ಗಡಿ ಪ್ರದೇಶಗಳಲ್ಲಿ ಶತ್ರು ರಾಷ್ಟ್ರಗಳ ಉಪಟಳ ಹೆಚ್ಚಾಗುತ್ತಿರುವ ಸಂದರ್ಭದದಲ್ಲೇ ಹೊಸ ಫೈಟರ್ ಜೆಟ್‌ಗಳು ಭಾರತೀಯ ಸೇನೆಯಲ್ಲಿ ಸೇರ್ಪಡೆಯಾಗಿರುವುದು ಮತ್ತಷ್ಟು ಬಲತುಂಬಿದ್ದು, ಅತ್ಯಾಧುನಿಕ ಯುದ್ದತಂತ್ರಗಳನ್ನು ಹೊಂದಿರುವ ಹೊಸ ಫೈಟರ್ ಜೆಟ್‌ಗಳು ಶತ್ರುಗಳನ್ನು ಹಿಮ್ಮೆಟ್ಟಿಸುವಲ್ಲಿ ಮಹತ್ವದ ಪಾತ್ರವಹಿಸಲಿವೆ. ಕೇಂದ್ರ ಸರ್ಕಾರ ಬೇಡಿಕೆ ಸಲ್ಲಿಸಿದ್ದ 36 ರಫೇಲ್ ಯುದ್ದ ವಿಮಾನಗಳಲ್ಲಿ ಸದ್ಯಕ್ಕೆ 5 ಯುದ್ದವಿಮಾನಗಳನ್ನು ಭಾರತೀಯ ವಾಯುಪಡೆಗೆ ಹಸ್ತಾಂತರ ಮಾಡಲಾಗಿದೆ.

ಭಾರತೀಯ ವಾಯುಪಡೆಯ ಕಮಾಂಡರ್-ಇನ್-ಚೀಫ್ ರಾಕೇಶ್ ಭದೌರಿಯಾ ನೇತೃತ್ವದಲ್ಲಿ ಹೊಸ ಫೈಟರ್ ಜೆಟ್‌ಗಳನ್ನು ಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದ್ದು, ಸೇನಾ ಬತ್ತಳಿಕೆಯಲ್ಲಿ ನೂರಾನೆ ಬಲ ಬಂದಂತಾಗಿದೆ.

ಎರಡು ಸುಖೋಯ್ ಯುದ್ದ ವಿಮಾನಗಳ ಎಸ್ಕಾರ್ಟ್‌ನೊಂದಿಗೆ ಹರಿಣಾಯದ ಅಂಬಾಲ ಏರ್‌ಬೇಸ್‌ಗೆ ಪ್ರವೇಶಿಸುತ್ತಿದ್ದಂತೆ ರಫೇಲ್ ಯುದ್ದವಿಮಾನಗಳಿಗೆ ಕೋಲ್ಕತ್ತಾದಲ್ಲಿ ಎಟಿಸಿ(ಏರ್ ಟ್ರಾಫಿಕ್ ಕಂಟ್ರೋಲ್) ರೂಂ ಹ್ಯಾಪಿ ಲ್ಯಾಂಡಿಂಗ್ ಎನ್ನುವ ಸಂದೇಶ ಹೊರಡಿಸಿತು.

ಇದರೊಂದಿಗೆ ಅಧಿಕೃತವಾಗಿ ಭಾರತೀಯ ವಾಯುಸೇನಾ ಪಡೆಯನ್ನು ಸೇರ್ಪಡೆಗೊಂಡ ರಫೆಲ್ ಯುದ್ದವಿಮಾನಗಳು ಭಾರತದ ವಾಯುಪಡೆಯ ಶಕ್ತಿಯನ್ನು ಹೆಚ್ಚಿಸಿದ್ದು, ಶತ್ರು ರಾಷ್ಟ್ರಗಳ ಬಳಿಯಿರುವ ಯುದ್ದವಿಮಾನಗಳಿಂತಲೂ ರಫೇಲ್ ಯುದ್ದವಿಮಾನಗಳು ಹೊಸ ವೈಶಿಷ್ಟ್ಯತೆ ಹೊಂದಿವೆ.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣವೇನು?

ಶತ್ರು ರಾಷ್ಟ್ರಗಳ ಬಳಿಯಿರುವ ಯುದ್ದವಿಮಾನಕ್ಕೂ ರಫೇಲ್ ಯುದ್ದ ವಿಮಾನಗಳಿಗೂ ಸಾಕಷ್ಟು ವ್ಯತ್ಯಾಸಗಳಿದ್ದು, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಂಡಿರುವ ರಫೇಲ್ ಯುದ್ದ ವಿಮಾನಗಳು ನಾಲ್ಕನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಸಿದ್ದಗೊಂಡಿದೆ.

ಶತ್ರು ರಾಷ್ಟ್ರಗಳ ಬಳಿಯಿರುವ ಎಫ್-16 ಯುದ್ದವಿಮಾನಕ್ಕಿಂತಲೂ ಹೆಚ್ಚು ಉದ್ದಳತೆ ಹೊಂದಿರುವ ರಫೆಲ್ ಯುದ್ದವಿಮಾನವು ಸರಿಸುಮಾರು 50 ಅಡಿ ಉದ್ದಳತೆ ಹೊಂದಿದ್ದು, ಒಂದೇ ಬಾರಿಗೆ 17 ಟನ್ ಶಸ್ತಾಸ್ತ್ರ ಹೊತ್ತೊಯ್ಯುವ ಸಾಮಾರ್ಥ್ಯ ಹೊಂದಿದೆ.
MOST READ: ವಿಮಾನಗಳೇಕೆ ಶಬ್ದ ಮಾಡುತ್ತವೆ? ವಿಮಾನದ ಕ್ಯಾಬಿನ್ ಬಗ್ಗೆ ನಿಮಗೆಷ್ಟು ಗೊತ್ತು?

ಹಾಗೆಯೇ ಇತರೆ ಯುದ್ದವಿಮಾನಗಳಿಂತಲೂ ವೇಗವಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುವ ರಫೆಟ್ ಫೈಟರ್ ಜೆಟ್‌ಗಳು ಪ್ರತಿ ಗಂಟೆ 1,912 ಕಿ.ಮೀ ವೇಗದಲ್ಲಿ ಚಲಿಸಲಿದ್ದು, ಕೇವಲ 1 ನಿಮಿಷದಲ್ಲಿ 18 ಸಾವಿರ ಮೀಟರ್ ಎತ್ತರಕ್ಕೆ ಹಾರಬಲ್ಲ ವೈಶಿಷ್ಟ್ಯತೆ ಹೊಂದಿದೆ.

ಈ ಎಲ್ಲಾ ಅಂಶಗಳು ಶತ್ರು ರಾಷ್ಟ್ರಗಳ ಬತ್ತಳಿಕೆಯಲ್ಲಿರುವ ಎಫ್-16 ಯುದ್ದವಿಮಾನಗಳಿಗೆ ಪ್ರಬಲ ಪೈಪೋಟಿ ನೀಡುವ ಎಲ್ಲಾ ಗುಣವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಇದು ಸೇನಾಪಡೆಯಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಇನ್ನು ಫ್ರೆಂಚ್ ಯುದ್ದ ವಿಮಾನ ತಯಾರಿಕಾ ಕಂಪನಿಯಾದ ಡಸಾಲ್ಟ್ ಏವಿಯೇಷನ್ ಭಾರತಕ್ಕೆ ರೂ.58 ಸಾವಿರ ಕೋಟಿ ವೆಚ್ಚದಲ್ಲಿ ಒಟ್ಟು 36 ಫೈಟರ್ ಜೆಟ್ ಪೂರೈಕೆಮಾಡುವ ಹೊಣೆಹೊತ್ತಿದ್ದು, ಸದ್ಯ 5 ಯುದ್ದ ವಿಮಾನಗಳನ್ನು ವಿತರಣೆ ಮಾಡಿದೆ. ಇನ್ನುಳಿದ 31 ಫೈಟರ್ ಜೆಟ್‌ಗಳು ಹಂತ-ಹಂತವಾಗಿ ವಿತರಣೆಯಾಗಲಿದ್ದು, ಕಳೆದ ಮೇ ನಲ್ಲಿಯೇ ವಿತರಣೆಯಾಗಬೇಕಿದ್ದ ಹೊಸ ಯುದ್ದವಿಮಾನಗಳು ಕರೋನಾ ವೈರಸ್ ಪರಿಣಾಮ ವಿಳಂಬವಾಗಿ ಭಾರತೀಯ ವಾಯುಪಡೆಗೆ ಎಂಟ್ರಿ ನೀಡಿವೆ.