ನಿಯಮ ಪಾಲನೆ ಮಾಡುವ ವಾಹನ ಸವಾರರಿಗೆ ಸನ್ಮಾನ ಮಾಡಿದ ಟ್ರಾಫಿಕ್ ಪೊಲೀಸರು..!

ಈ ಹಿಂದೆ ಸಂಚಾರಿ ನಿಯಮ ಪಾಲನೆ ಮಾಡದ ವಾಹನ ಸವಾರರನ್ನು ಹಿಡಿದು ದಂಡ ಹಾಕುವುದರ ಜೊತೆಗೆ ಗುಲಾಬಿ ಹೂವುಗಳನ್ನು ನೀಡಿ ಮತ್ತೆ ತಪ್ಪು ಮಾಡದಂತೆ ತಿಳುವಕೆ ಹೇಳುತ್ತಿದ್ದ ಟ್ರಾಫಿಕ್ ಪೊಲೀಸರು ಈ ಬಾರಿ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದು, ಯಾರಿಗೂ ತೊಂದರೆಯಾಗದಂತೆ ಸುರಕ್ಷಾ ಸಂಚಾರಿ ಮಾರ್ಗಸೂಚಿಯಂತೆ ವಾಹನ ಚಲಾಯಿಸುವ ವಾಹನ ಸವಾರರನ್ನು ಪ್ರೋತ್ಸಾಹಿಸಲು ಸನ್ಮಾನ ಜೊತೆಗೆ ಪ್ರಶಂಸಾ ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತಿದೆ.

ನಿಯಮ ಪಾಲನೆ ಮಾಡುವ ವಾಹನ ಸವಾರರಿಗೆ ಸನ್ಮಾನ ಮಾಡಿದ ಟ್ರಾಫಿಕ್ ಪೊಲೀಸರು..!

ಈ ಹಿಂದೆ ಸಂಚಾರಿ ನಿಯಮ ಪಾಲನೆ ಮಾಡದ ವಾಹನ ಸವಾರರನ್ನು ಹಿಡಿದು ದಂಡ ಹಾಕುವುದರ ಜೊತೆಗೆ ಗುಲಾಬಿ ಹೂವುಗಳನ್ನು ನೀಡಿ ಮತ್ತೆ ತಪ್ಪು ಮಾಡದಂತೆ ತಿಳುವಳಿಕೆ ಹೇಳುತ್ತಿದ್ದ ಟ್ರಾಫಿಕ್ ಪೊಲೀಸರು ಈ ಬಾರಿ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದು, ಯಾರಿಗೂ ತೊಂದರೆಯಾಗದಂತೆ ಸುರಕ್ಷಾ ಸಂಚಾರಿ ಮಾರ್ಗಸೂಚಿಯಂತೆ ವಾಹನ ಚಲಾಯಿಸುವ ವಾಹನ ಸವಾರರನ್ನು ಪ್ರೋತ್ಸಾಹಿಸಲು ಸನ್ಮಾನ ಜೊತೆಗೆ ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತಿದೆ.

ನಿಯಮ ಪಾಲನೆ ಮಾಡುವ ವಾಹನ ಸವಾರರಿಗೆ ಸನ್ಮಾನ ಮಾಡಿದ ಟ್ರಾಫಿಕ್ ಪೊಲೀಸರು..!

ಹೌದು, ದೇಶದಲ್ಲೇ ಅತಿ ಹೆಚ್ಚು ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕುಖ್ಯಾತಿಯಾಗಿರುವ ತೆಲಂಗಾಣದಲ್ಲಿ ಇಂತದೊಂದು ಹೊಸ ಪ್ರಯೋಗವನ್ನು ಮಾಡಲಾಗುತ್ತಿದ್ದು, ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾರ್ಯಾಚರಣೆ ಮಾಡುತ್ತಲೇ ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸುವ ವಾಹನ ಸವಾರರನ್ನು ಗುರುತಿಸಿ ಸನ್ಮಾನ ಮಾಡಲಾಗುತ್ತಿದೆ.

ನಿಯಮ ಪಾಲನೆ ಮಾಡುವ ವಾಹನ ಸವಾರರಿಗೆ ಸನ್ಮಾನ ಮಾಡಿದ ಟ್ರಾಫಿಕ್ ಪೊಲೀಸರು..!

ಯಾವುದೇ ಸಂಚಾರಿ ನಿಯಮ ಉಲ್ಲಂಘನೆ ಕೇಸ್ ಇಲ್ಲದ ವಾಹನ ಸವಾರರನ್ನು ಗುರುತಿಸುತ್ತಿರುವ ಟ್ರಾಫಿಕ್ ಪೊಲೀಸರು, ಹೂಗುಚ್ಚದ ಜೊತೆಗೆ ಪೊಲೀಸ್ ಇಲಾಖೆಯಿಂದಲೇ ಪ್ರಶಂಸಾ ಪ್ರಮಾಣ ಪತ್ರಗಳನ್ನು ನೀಡಲಾಗಿದೆ. ಇದರಿಂದ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ ಸಾಕಷ್ಟು ಇಳಿಕೆಯಾಗಿರುವ ಬಗ್ಗೆ ಟ್ರಾಫಿಕ್ ಪೊಲೀಸರು ಹರ್ಷ ವ್ಯಕ್ತಪಡಿಸಿದ್ದಾರೆ.

ನಿಯಮ ಪಾಲನೆ ಮಾಡುವ ವಾಹನ ಸವಾರರಿಗೆ ಸನ್ಮಾನ ಮಾಡಿದ ಟ್ರಾಫಿಕ್ ಪೊಲೀಸರು..!

ಹೈದ್ರಾಬಾದ್ ಸಮೀಪದ ರಾಚಕೊಂಡ ಪೊಲೀಸ್ ಕಮೀಷನರ್ ವ್ಯಾಪ್ತಿಯಲ್ಲಿ ಈ ಹೊಸ ಪ್ರಯೋಗಕ್ಕೆ ಚಾಲನೆ ನೀಡಲಾಗಿದ್ದು, ಇದುವರೆಗೆ ಬರೋಬ್ಬರಿ 8 ಸಾವಿರ ವಾಹನ ಸವಾರರಿಗೆ ಸನ್ಮಾನ ಮಾಡಿ ಪ್ರಶಂಸಾ ಪ್ರಮಾಣ ಪತ್ರಗಳನ್ನು ನೀಡಲಾಗಿದೆ. ಈ ಬಗ್ಗೆ ಮಾತನಾಡಿರುವ ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಎಂ ಭಾಗವತ್ ಅವರು, ದಂಡಕ್ಕಿಂತ ಸನ್ಮಾನ ಪ್ರಯೋಗವು ಸಾಕಷ್ಟು ಬದಲಾವಣೆ ಕಾರಣವಾಗಿದ್ದು, ರಾಚಕೊಂಡ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ತಗ್ಗಿವೆ ಎಂದಿದ್ದಾರೆ.

ಇದು ದೇಶದಲ್ಲೇ ಮೊದಲ ಬಾರಿಗೆ ಇಂತದೊಂದು ಹೊಸ ಪರಿಕಲ್ಪನೆಯೊಂದಿಗೆ ಸಂಚಾರಿ ನಿಯಮಗಳ ಪಾಲನೆಯನ್ನು ಪ್ರೋತ್ಸಾಹಿಸಲಾಗುತ್ತಿದ್ದು, ವಾಹನ ಸವಾರರು ಸಹ ಈ ಹಿಂದಿಗಿಂತಲೂ ಹೆಚ್ಚು ನಿಯಮ ಪಾಲನೆ ಮಾಡುತ್ತಿರುವುದು ಕಂಡುಬಂದಿದೆ.

ನಿಯಮ ಪಾಲನೆ ಮಾಡುವ ವಾಹನ ಸವಾರರಿಗೆ ಸನ್ಮಾನ ಮಾಡಿದ ಟ್ರಾಫಿಕ್ ಪೊಲೀಸರು..!

'ಪ್ಯಾಟ್ರೊಲ್ ಫಾರ್ ಹ್ಯಾಪಿ ಡ್ರೈವಿಂಗ್' ಹೆಸರಿನಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದ್ದು, ದಂಡ ಹಾಕಿ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಆದೇಶ ಮಾಡುವುದಕ್ಕಿಂತ ಸುಲಭ ಮತ್ತು ಜನಸ್ನೇಹಿಯಾಗಿ ಅರಿವು ಮೂಡಿಸಿದ್ದಲ್ಲಿ ಪ್ರತಿಯೊಬ್ಬರು ಸಂಚಾರಿ ನಿಯಮ ಪಾಲನೆ ಮಾಡಿಯೇ ಮಾಡುತ್ತಾರೆ ಎನ್ನುವುದು ಮಹೇಶ್ ಎಂ ಭಾಗವತ್ ಅಭಿಪ್ರಾಯವಾಗಿದೆ.

ನಿಯಮ ಪಾಲನೆ ಮಾಡುವ ವಾಹನ ಸವಾರರಿಗೆ ಸನ್ಮಾನ ಮಾಡಿದ ಟ್ರಾಫಿಕ್ ಪೊಲೀಸರು..!

ಒಟ್ಟಿನಲ್ಲಿ ದಂಡದ ಮೂಲಕವೋ ಅಥವಾ ಸನ್ಮಾನದ ಮೂಲಕವೋ ಸಂಚಾರಿ ನಿಯಮ ಉಲ್ಲಂಘಿಸುವವ ಸಂಖ್ಯೆಗೆ ಬ್ರೇಕ್ ಹಾಕಲಾಗುತ್ತಿದ್ದು, ದೇಶಾದ್ಯಂತ ದಿನಂಪ್ರತಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಗ್ಗಿಸುವಲ್ಲಿ ಇದು ನಿಜವಾಗಿಯೂ ಸಹಾಯಕಾರಿಯಾಗಿದೆ ಎನ್ನಬಹುದು.

ನಿಯಮ ಪಾಲನೆ ಮಾಡುವ ವಾಹನ ಸವಾರರಿಗೆ ಸನ್ಮಾನ ಮಾಡಿದ ಟ್ರಾಫಿಕ್ ಪೊಲೀಸರು..!

ಇನ್ನು ದೇಶಾದ್ಯಂತ ಹೊಸ ವಾಹನಗಳ ಸಂಖ್ಯೆ ಹೆಚ್ಚಾದಂತೆಲ್ಲಾ ಸಂಚಾರಿ ನಿಯಮಗಳ ಉಲ್ಲಂಘಟನೆ ಪ್ರಕರಣಗಳು ಹೆಚ್ಚುತ್ತಿದ್ದು, ಹೊಸ ಮೋಟಾರ್ ವೆಹಿಕಲ್ ಕಾಯ್ದೆ ಜಾರಿಗೆ ಮಾಡಲು ಈಗಾಗಲೇ ಸಂಸತ್‌ನಲ್ಲಿ ಅನುಮೋದನೆ ಕೂಡಾ ದೊರೆತಿರುವುದು ಭಾರೀ ಪ್ರಮಾಣದ ದಂಡ ತೆತ್ತಬೇಕಾಗುತ್ತೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ನಿಯಮ ಪಾಲನೆ ಮಾಡುವ ವಾಹನ ಸವಾರರಿಗೆ ಸನ್ಮಾನ ಮಾಡಿದ ಟ್ರಾಫಿಕ್ ಪೊಲೀಸರು..!

ಹೊಸ ನಿಯಮ ಜಾರಿಯಿಂದ ಚಾಲ್ತಿಯಲ್ಲಿ ದಂಡದ ಮೊತ್ತಗಳು ದುಪ್ಪಟ್ಟಾಗಿದ್ದು, ಕೆಲವು ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೆ ಗರಿಷ್ಠ ಮಟ್ಟದ ವಿಧಿಸುವ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಹೀಗಾಗಿ ಇಷ್ಟು ದಿನಗಳ ಕಾಲ ನಿಯಮ ಉಲ್ಲಂಘಿಸಿದರೂ ಕಡಿಮೆ ದಂಡದೊಂದಿಗೆ ಬಚಾವ್ ಆಗಬಹುದಾದ ಸನ್ನಿವೇಶ ಇನ್ಮುಂದೆ ಇರುವುದಿಲ್ಲ.

ನಿಯಮ ಪಾಲನೆ ಮಾಡುವ ವಾಹನ ಸವಾರರಿಗೆ ಸನ್ಮಾನ ಮಾಡಿದ ಟ್ರಾಫಿಕ್ ಪೊಲೀಸರು..!

ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಡೆಯಲು ಈಗಾಗಲೇ ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದ್ದು, ಲೈಸೆನ್ಸ್ ಇಲ್ಲದೇ ವಾಹನ ಸವಾರಿ ಮಾಡುವುದು, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡುವುದು, ನೋಂದಣಿಯಿಲ್ಲದ ವಾಹನಗಳ ಚಾಲನೆ ಮತ್ತು ಅಪಾಯಕಾರಿಯಾಗಿ ವಾಹನ ಚಲಾಯಿಸುವುವವರ ವಿರುದ್ಧ ಭಾರೀ ಮೊತ್ತದ ದಂಡವನ್ನು ವಸೂಲಿ ಮಾಡಲಾಗುತ್ತಿದೆ.

ನಿಯಮ ಪಾಲನೆ ಮಾಡುವ ವಾಹನ ಸವಾರರಿಗೆ ಸನ್ಮಾನ ಮಾಡಿದ ಟ್ರಾಫಿಕ್ ಪೊಲೀಸರು..!

ಈ ಹಿಂದೆ ಇದ್ದ ಬಹುತೇಕ ಸಂಚಾರಿ ನಿಯಮಗಳ ದಂಡಗಳ ಮೊತ್ತವು ಕನಿಷ್ಠ ರೂ. 500ಕ್ಕೆ ಏರಿಕೆಯಾಗಿದ್ದಲ್ಲಿ ಆಂಬ್ಯುಲೆನ್ಸ್ ಮತ್ತು ಯೋಗ್ಯತಾ ಪ್ರಮಾಣ ಪತ್ರವಿಲ್ಲದೆ ಸಾರ್ವಜನಿಕ ರಸ್ತೆಯ ಮೇಲೆ ಸಾರಿಗೆ ವಾಹನವನ್ನು ನಡೆಸುವುದು ಅಥವಾ ನಡೆಸಲು ಅನುಮತಿಸುವುದಕ್ಕೆ ರೂ. 3 ಸಾವಿರದಿಂದ ರೂ. 10 ಸಾವಿರ ತನಕ ದಂಡ ವಿಧಿಸಲು ಅನುಮತಿಸಲಾಗಿದೆ.

MOST READ: ಹೆಲ್ಮೆಟ್ ಹಾಕದ ಸಬ್ ಇನ್ಸ್‌ಪೆಕ್ಟರ್‌ಗೆ ಸರಿಯಾಗಿಯೇ ಪಾಠ ಕಲಿಸಿದ ಕಾನ್‌ಸ್ಟೆಬಲ್‌

Most Read Articles

Kannada
English summary
Traffic Police To Honour 8000 Citizens In Rachakonda — Catching The Good Guys.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X