ಗ್ರೀಸ್‌ನಲ್ಲಿ ಭೀಕರ ರಸ್ತೆ ಅಪಘಾತ- ಒಂದೇ ಹೊಡೆತಕ್ಕೆ ಕಾರಿನಲ್ಲಿದ್ದ ನಾಲ್ವರು ಛಿದ್ರ ಛಿದ್ರ

Written By:

ಐಷಾರಾಮಿ ಫೋರ್ಷೆ‌ ಕಾರಿನಲ್ಲಿ ಅತಿವೇಗವಾಗಿ ಪ್ರಯಾಣ ಮಾಡುತ್ತಿದ್ದಾಗ ಭೀಕರ ರಸ್ತೆ ಅಪಘಾತ ನಡೆದಿರುವ ಘಟನೆ ಗ್ರೀಸ್‌ನಲ್ಲಿ ನಡೆದಿದೆ. ಅಪಘಾತದ ರಭಸಕ್ಕೆ ಕಾರು ಸ್ಫೋಟಗೊಂಡಿದ್ದು, ಕಾರಿನಲ್ಲಿದ್ದ ನಾಲ್ವರ ದೇಹಗಳು ಛಿದ್ರ ಛಿದ್ರಗೊಂಡಿವೆ.

ರಸ್ತೆಯ ಪಕ್ಕದಲ್ಲೇ ಇದ್ದ ವಾಹನ ತಪಾಸಣಾ ಕೇಂದ್ರಕ್ಕೆ ಕಾರು ಡಿಕ್ಕಿ ಹೊಡೆದ್ದು, ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕಾರು ಡಿಕ್ಕಿಯಾಗುತ್ತಿದ್ದಂತೆ ಕಾರು ತಕ್ಷಣಕ್ಕೆ ಸ್ಫೋಟಗೊಂಡ ಪರಿಣಾಮ ಕಾರಿನಲ್ಲಿದ್ದವರು ಸಜೀವ ದಹನವಾಗಿದ್ದಾರೆ.

ಅಪಘಾತ ನಡೆದ ಫೋರ್ಷೆ ಕಾರಿನಲ್ಲಿ ಸುಮಾರು 6 ಜನ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಪತಿ- ಪತ್ನಿ ಮತ್ತು ಅವರ ಇಬ್ಬರೂ ಮಕ್ಕಳು ದುರ್ಮರಣಕ್ಕಿಡಾಗಿದ್ದಾರೆ.

ಇನ್ನು ರೇಸ್ ಕಾರುಗಳಲ್ಲಿ ಒಂದಾಗಿರುವ ಫೋರ್ಷೆ ಕಾರಿನ ಸವಾರಿ ಅಷ್ಟು ಸುಲಭ ಅಲ್ಲ ಅದಕ್ಕೆ ಸಾಕಷ್ಟು ಮುಂಜಾಗ್ರತೆ ಅವಶ್ಯ. ಆದ್ರೆ ಗ್ರೀಸ್ ನಡೆದ ಅಪಘಾತದ ದೃಶ್ಯ ಭೀಕರತೆ ಹುಟ್ಟಿಸುವಂತಿದ್ದು, ರೇಸ್ ಕಾರುಗಳ ಚಾಲನೆಗೂ ಮುನ್ನ ಎಚ್ಚರಿಕೆ ವಹಿಸುವುದು ಒಳಿತು.

ಹೊಚ್ಚ ಹೊಸ ಫೋರ್ಷೆ ಕಯೆನ್ನ್ ಕಾರು ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಅಪಘಾತ accident
English summary
In a horrific crash in Greece, a out of control Porsche rammed into a parked car and killed mother and child sitting in the parked vehicle.
Story first published: Thursday, March 2, 2017, 19:19 [IST]
Please Wait while comments are loading...

Latest Photos