ಈ ಹೋಟೆಲಲ್ಲಿ ತಂಗಿ ಸೂಪರ್ ಕಾರು ಓಡಿಸುವ ಕನಸು ನನಸಾಗಿಸಿ!

Written By:

ಜೀವನದಲ್ಲಿ ಎಂದಾದರೂ ಸೂಪರ್ ಕಾರುಗಳನ್ನು ಚಾಲನೆ ಮಾಡಬೇಕೆಂಬ ಆಸೆ ಪ್ರತಿಯೊಬ್ಬ ಕಾರು ಪ್ರೇಮಿಯಲ್ಲೂ ಇದ್ದೇ ಇರುತ್ತದೆ. ಆದರೆ ಕೋಟಿಗಟ್ಟಲೆ ರುಪಾಯಿಗಳಷ್ಟು ಬೆಲೆಬಾಳುವ ಸೂಪರ್ ಕಾರುಗಳನ್ನು ಖರೀದಿಸುವುದು ಕಷ್ಟದ ಮಾತು.

ಇಂತಹ ಈ ಸನ್ನಿವೇಶದಲ್ಲಿ ವಿನೂತನ ಯೋಜನೆಯೊಂದಿಗೆ ಮುಂದೆ ಬಂದಿರುವ ಐಷಾರಾಮಿ ಹೋಟೆಲ್ ವೊಂದು, ತಮ್ಮ ಹೋಟೆಲ್ ನಲ್ಲಿ ತಂಗಿದರೆ ಸಾಕು, ಸೂಪರ್ ಕಾರು ಚಾಲನೆ ಮಾಡುವ ಆಸೆಯು ಈಡೇರಲಿದೆಯೆಂಬ ಆಫರನ್ನು ಮುಂದಿಟ್ಟಿದೆ.

ಈ ಹೋಟೆಲಲ್ಲಿ ತಂಗಿ ಸೂಪರ್ ಕಾರು ಓಡಿಸುವ ಕನಸು ನನಸಾಗಿಸಿ!

ಸಹಜವಾಗಿಯೇ ಐಷಾರಾಮಿ ಹೋಟೆಲ್ ಗಳು ಗ್ರಾಹಕರನ್ನು ತನ್ನತ್ತ ಹೆಚ್ಚೆಚ್ಚು ಸೆಳೆಯುವ ನಿಟ್ಟಿನಲ್ಲಿ ಅನೇಕ ರೀತಿಯ ಗಿಮಿಕ್ ಗಳನ್ನು ಅನುಸರಿಸುತ್ತದೆ.

ಈ ಹೋಟೆಲಲ್ಲಿ ತಂಗಿ ಸೂಪರ್ ಕಾರು ಓಡಿಸುವ ಕನಸು ನನಸಾಗಿಸಿ!

ವಾಲ್ಡೋರ್ಫ್ ಹೋಟೆಲ್ಸ್ ಆಂಡ್ ರಿಸಾರ್ಟ್ ಎಂಬ ಐಷಾರಾಮಿ ಹೋಟೆಲ್, ಇಟಲಿಯ ಐಕಾನಿಕ್ ಲಂಬೋರ್ಗಿನಿ ಸೂಪರ್ ಕಾರು ಚಾಲನೆ ಮಾಡಲು ಗ್ರಾಹಕರಿಗೆ ಅವಕಾಶವನ್ನು ಒದಗಿಸುತ್ತಿದೆ.

ಈ ಹೋಟೆಲಲ್ಲಿ ತಂಗಿ ಸೂಪರ್ ಕಾರು ಓಡಿಸುವ ಕನಸು ನನಸಾಗಿಸಿ!

2014ರಿಂದಲೇ ವಿನೂತನ ಯೋಜನೆಯೊಂದಿಗೆ ಮುಂದೆ ಬಂದಿರುವ ಸಂಸ್ಥೆಯು, ಈ ಹೋಟೆಲ್ ನಲ್ಲಿ ತಂಗಿದರೆ 30 ನಿಮಿಷಗಳ ವರೆಗೆ ಸೂಪರ್ ಕಾರು ಚಾಲನೆ ಮಾಡಲು ಅವಕಾಶವೊದಗಿಸುತ್ತದೆ.

ಈ ಹೋಟೆಲಲ್ಲಿ ತಂಗಿ ಸೂಪರ್ ಕಾರು ಓಡಿಸುವ ಕನಸು ನನಸಾಗಿಸಿ!

ಹಾಗೊಂದು ವೇಳೆ ನಿಮಗೆ ಸೂಪರ್ ಕಾರು ಚಾಲನೆ ಮಾಡುವ ಭಯ ಕಾಡುತ್ತಿದ್ದಲ್ಲಿ ಇದಕ್ಕೂ ಇಲ್ಲಿ ಪರಿಹಾರವಿದೆ. ನುರಿತ ತಜ್ಞರು ನಿಮ್ಮ ನೆರವಿಗೆ ಬರಲಿದ್ದಾರೆ.

ಈ ಹೋಟೆಲಲ್ಲಿ ತಂಗಿ ಸೂಪರ್ ಕಾರು ಓಡಿಸುವ ಕನಸು ನನಸಾಗಿಸಿ!

ಇನ್ನು ಹೋಟೆಲ್ ಬಗ್ಗೆ ಮಾತನಾಡುವುದಾದ್ದಲ್ಲಿ ಜಾಗತಿಕವಾಗಿ ಆರು ಖಂಡಗಳಲ್ಲಿ ತನ್ನ ಮಾರಾಟ ವ್ಯಾಪ್ತಿಯನ್ನು ಹರಡಿರುವ ವಾಲ್ಡೋರ್ಫ್ 530ಕ್ಕೂ ಹೆಚ್ಚು ಹೋಟೆಲ್ ಗಳನ್ನು ಹೊಂದಿದೆ. ಅಲ್ಲದೆ ಗ್ರಾಹಕರಿಗೆ ತನ್ನದೇ ಆದ ವಿಶಿಷ್ಟ ಸೇವೆಯನ್ನು ನೀಡುವ ಮೂಲಕ ಹೆಸರು ಮಾಡಿದೆ.

English summary
If You Want To Drive A Lamborghini, You Should Stay In This Hotel
Story first published: Saturday, July 30, 2016, 14:17 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark