ದೆಹಲಿಗೆ ಬಂದಿಳಿದ ಪ್ರಪಂಚದ ಅತ್ಯಾಧುನಿಕ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು...?

Written By:

ಎ350 ವಿಮಾನವು 15,000 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸಬಹುದಾಗಿದ್ದು, 325 ಪ್ರಯಾಣಿಕರನ್ನು ಹೊತ್ತೊಯ್ಯಬಹುದಾದ ಸಾಮರ್ಥ್ಯ ಹೊಂದಿದೆ. ಹಾಗು ಈ ವಿಮಾನದ ಭಾರ ಎಷ್ಟು ಗೊತ್ತ ? 280 ಟನ್ !!

ದೆಹಲಿಗೆ ಬಂದಿಳಿದ ಪ್ರಪಂಚದ ಅತ್ಯಂತ ಆಧುನಿಕ ವಿಮಾನ

ಏರ್‌ಬಸ್ ಎ350-900 ವಿಮಾನದಲ್ಲಿ ಬ್ಯುಸಿನೆಸ್, ಪ್ರೀಮಿಯಂ ಮತ್ತು ಇಕಾನಮಿ ಕ್ಲಾಸ್ ಎಂಬ ಆಸನ ವರ್ಗ ಇದೆ. ಲುಫ್ತಾನ್ಸಾ ವಿಮಾನವು ದೊಡ್ಡ ಕಿಟಕಿಗಳನ್ನು ಹೊಂದಿದ್ದು, ಇದರಿಂದಾಗಿ ಕಿಟಕಿ ಪಕ್ಕ ಕುಳಿತುಕೊಳ್ಳುವವರಿಗೆ ಕಣ್ಣಿಗೆ ಹಬ್ಬವೇ ಸರಿ.

ದೆಹಲಿಗೆ ಬಂದಿಳಿದ ಪ್ರಪಂಚದ ಅತ್ಯಂತ ಆಧುನಿಕ ವಿಮಾನ

ದೊಡ್ಡ ಪರದೆಯ ಟಿವಿ ಹೊಂದಿರುವ ಆಸನ ಇರಿಸಲಾಗಿದ್ದು, ಹೊಸ ದೀಪಗಳಿಂದ ವಿಮಾನದ ಒಳಭಾಗ ಸಿಂಗರಿಸಲಾಗಿದೆ.

ದೆಹಲಿಗೆ ಬಂದಿಳಿದ ಪ್ರಪಂಚದ ಅತ್ಯಂತ ಆಧುನಿಕ ವಿಮಾನ

ಏರ್‌ಬಸ್ ಎ350-900 ವಿಮಾನದಲ್ಲಿ ಸಂಗೀತ ಆಲಿಸುವವರನ್ನು ಗಮನದಲ್ಲಿ ಇಟ್ಟುಕೊಂಡು ಅವರಿಗೆ ಬೇಕಾದ ಹಾಡನ್ನು ಕೇಳುವ ಅವಕಾಶ ಕಲ್ಪಿಸಲಾಗಿದೆ.

ದೆಹಲಿಗೆ ಬಂದಿಳಿದ ಪ್ರಪಂಚದ ಅತ್ಯಂತ ಆಧುನಿಕ ವಿಮಾನ

ಎ350-900 ವಿಮಾನದ ಮತ್ತೊಂದು ವಿಶೇಷತೆ ಏನೆಂದರೆ ಈ ವಿಮಾನವು ಸಾಮಾನ್ಯ ವಿಮಾನಕ್ಕಿಂತ ಕಾಲು ಭಾಗದಷ್ಟು ಕಡಿಮೆ ಹೊಗೆ ಹೊರಸೂಸುತ್ತದೆ, ಇದರಿಂದಾಗಿ ವಾಯು ಮಾಲಿನ್ಯ ತಡೆಗಟ್ಟಬಹುದಾಗಿದೆ ಮತ್ತು ವರದಿಯ ಪ್ರಕಾರ ಈ ಆಧುನಿಕ ಲುಫ್ತಾನ್ಸಾ ವಿಮಾನವು ಭೂಮಿಯಿಂದ ಮೇಲಕ್ಕೆ ಏಳುವ ಸಂದರ್ಭದಲ್ಲಿ ಅತಿ ಕಡಿಮೆ ಶಬ್ದ ಮಾಡುತ್ತದೆ.

ದೆಹಲಿಗೆ ಬಂದಿಳಿದ ಪ್ರಪಂಚದ ಅತ್ಯಂತ ಆಧುನಿಕ ವಿಮಾನ

ದೆಹಲಿಗೆ ಬಂದಿಳಿದಾಗ ಏರ್‌ಬಸ್ ಎ350-900 ವಿಮಾನಕ್ಕೆ ನೀರಿನ ಫಿರಂಗಿಗಳಿಂದ ಸ್ವಾಗತಿಸಲಾಯಿತು ಮತ್ತು ಪ್ರಯಾಣಿಕರಿಗೆ ಉಡುಗೊರೆಗಳನ್ನು ನೀಡಿ ಸ್ವಾಗತಿಸಲಾಯಿತು.

ದೆಹಲಿಗೆ ಬಂದಿಳಿದ ಪ್ರಪಂಚದ ಅತ್ಯಂತ ಆಧುನಿಕ ವಿಮಾನ

"ಈ ಪ್ರಯಾಣ ಆರಂಭದಿಂದಾಗಿ ನಮ್ಮ ಮತ್ತು ಭಾರತದ ಸಂಬಂಧ ಮತ್ತೊಷ್ಟು ಗಟ್ಟಿಗೊಳ್ಳಲಿದೆ" ಎಂದು ಲುಫ್ತಾನ್ಸಾ ಪ್ರಯಾಣಿಕ, ದಕ್ಷಿಣ ವಿಭಾಗದ ಹಿರಿಯ ಅಧಿಕಾರಿ ವೂಲ್ಫ್-ಗ್ಯಾಂಗ್ ವಿಲ್ ಹೇಳಿಕೆ ನೀಡಿದ್ದಾರೆ.

ದೆಹಲಿಗೆ ಬಂದಿಳಿದ ಪ್ರಪಂಚದ ಅತ್ಯಂತ ಆಧುನಿಕ ವಿಮಾನ

ಏರ್‌ಬಸ್ ಸಂಸ್ಥೆಯ ಎಲ್ಲಾ ಕಾಲದ ಅತ್ಯಂತ ಯಶಸ್ವಿ ವಿಮಾನ ಎಂದೆನಿಸಿರುವ ಎ350-900 ವಿಮಾನಕ್ಕೆ ಎಲ್ಲಿಲ್ಲದ ಬೇಡಿಕೆ ಇದ್ದು, ಇಲ್ಲಿಯವರೆಗೆ ಸುಮಾರು 800 ವಿಮಾನಗಳಿಗೆ ಬೇಡಿಕೆ ಬಂದಿದೆ ಎನ್ನಲಾಗಿದೆ.

ಮಾರುತಿ ಸುಜುಕಿಯ ಹೊಸ ತಲೆಮಾರಿನ ಸ್ವಿಫ್ಟ್ ಕಾರಿನ ಫೋಟೋಗಳನ್ನು ನೋಡಿ.

Read more on ವಿಮಾನ plane
English summary
Airbus A350-900, the world’s most modern aircraft landed in Delhi on Saturday.
Please Wait while comments are loading...

Latest Photos