ಲಂಬೋರ್ಗಿನಿ ಕಾರನ್ನು ಯುಟರ್ನ್ ಮಾಡಲು ಹರಸಾಹಸಪಟ್ಟ ಜಸ್ಟಿನ್ ಬಿಬರ್..

Written By:

ಪಾಪ್ ಗಾಯಕ ಜಸ್ಟಿನ್ ಬಿಬರ್ ಏನ್ ಮಾಡಿದ್ರೂ ಸೆನ್ಸೇಶನ್ ಸುದ್ದಿ ಆಗಿರುತ್ತೆ. ಇತ್ತೀಚೆಗೆ ಹೋಟೆಲ್ ಒಂದಕ್ಕೆ ಭೇಟಿ ನೀಡಿದ್ದ ವೇಳೆ ತನ್ನ ಲಂಬೋರ್ಗಿನಿ ಕಾರನ್ನು ಪಾರ್ಕಿಂಗ್ ಸ್ಲಾಟ್‌ನಲ್ಲಿ ಯುಟರ್ನ್ ತೆಗೆದುಕೊಳ್ಳಲು ಹೋಗಿ ಹರಸಾಪಟ್ಟಿದ್ದಲ್ಲದೇ ಸಾಮಾಜಿಕ ಜಾಣತಾಣಗಳಲ್ಲಿ ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ.

ಲಂಬೋರ್ಗಿನಿ ಕಾರನ್ನು ಯುಟರ್ನ್ ಮಾಡಲು ಹರಸಾಹಸಪಟ್ಟ ಜಸ್ಟಿನ್ ಬಿಬರ್..

ಕಳೆದ ದಿನಗಳ ಹಿಂದಷ್ಟೇ ಲಂಬೋರ್ಗಿನಿ ಅವೆಂಟಡೊರ್ ಎಸ್ ಸೂಪರ್ ಕಾರು ಖರೀದಿಸಿರುವ ಜಸ್ಟಿನ್ ಬಿಬರ್, ಕಾರಿನಲ್ಲಿರುವ ಚಾಲನಾ ಸೌಲಭ್ಯಗಳನ್ನು ಬಳಕೆ ಮಾಡುವ ಕುರಿತು ಇನ್ನು ಕಲಿಕಾ ಹಂತದಲ್ಲಿದ್ದಾರೆ. ಹೀಗಾಗಿ ಕಠಿಣ ಪರಿಸ್ಥಿತಿ ಕಾರು ಚಾಲನೆಗೆ ಹರಸಾಹಸಪಟ್ಟಿದ್ದು, ಜಸ್ಟಿನ್ ಬಿಬರ್ ಕಾರು ಚಾಲನೆ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಲಂಬೋರ್ಗಿನಿ ಕಾರನ್ನು ಯುಟರ್ನ್ ಮಾಡಲು ಹರಸಾಹಸಪಟ್ಟ ಜಸ್ಟಿನ್ ಬಿಬರ್..

ಯುಟ್ಯೂಬ್‌ ಒಂದರಲ್ಲೇ ಸುಮಾರು 13 ಲಕ್ಷಕ್ಕಿಂತ ಹೆಚ್ಚು ಜನ ವೀಕ್ಷಿಸಿದ್ದು, ಕೆಲವರು ಜಸ್ಟಿನ್ ಬಿಬರ್ ಕಾರು ಚಾಲನಾ ವೈಖರಿಯನ್ನು ಅಪಹಾಸ್ಯ ಮಾಡಿದ್ದರೇ ಮತ್ತೆ ಕೆಲವರು ಜಸ್ಟಿನ್ ಬಿಬರ್‌ಗೆ ಸೂಪರ್ ಕಾರು ಸರಿ ಹೋಗೊದಿಲ್ಲ ಎಂದಿದ್ದಾರೆ.

ಲಂಬೋರ್ಗಿನಿ ಕಾರನ್ನು ಯುಟರ್ನ್ ಮಾಡಲು ಹರಸಾಹಸಪಟ್ಟ ಜಸ್ಟಿನ್ ಬಿಬರ್..

ಕೆಲವರಂತೂ ಜಸ್ಟಿನ್ ಬಿಬರ್‌ಗೆ ಮತ್ತೊಮ್ಮೆ ಚಾಲನಾ ತರಬೇತಿ ಅವಶ್ಯಕತೆಯಿದೆ ಎಂದು ಕಾಲೆಳೆಯುವ ಪ್ರಯತ್ನ ಮಾಡಿದ್ದು, ತಮ್ಮ ನೆಚ್ಚಿನ ಸಿಂಗರ್ ಬಗ್ಗೆ ಅಪಹಾಸ್ಯ ಮಾಡಿದ ಕೆಲವರಿಗೆ ಜಸ್ಟಿನ್ ಬಿಬರ್ ಅಭಿಮಾನಗಳೇ ಸರಿಯಾದ ಉತ್ತರ ನೀಡಿದ್ದಾರೆ.

ಲಂಬೋರ್ಗಿನಿ ಕಾರನ್ನು ಯುಟರ್ನ್ ಮಾಡಲು ಹರಸಾಹಸಪಟ್ಟ ಜಸ್ಟಿನ್ ಬಿಬರ್..

ಆದರೂ ಸೂಪರ್ ಕಾರು ಚಾಲನೆಯಲ್ಲಿ ಒಂದಿಷ್ಟು ಅನುಭವ ಹೊಂದಿರುವ ಜಸ್ಟಿನ್ ಬಿಬರ್, ಪಾರ್ಕಿಂಗ್ ಸ್ಲಾಟ್‌ನಲ್ಲಿ ಯುಟರ್ನ್ ತೆಗೆದುಕೊಳ್ಳಲು ಹೋಗಿ ಹರಸಾಹಸಪಟ್ಟರು ಸುರಕ್ಷತೆಯಿಂದ ಕಾರು ಚಾಲನೆ ಮಾಡುವ ಬಗ್ಗೆ ಅರಿವು ಹೊಂದಿದ್ದಾರೆ ಎಂಬುದನ್ನು ತೊರಿಸಿಕೊಟ್ಟಿದ್ದಾರೆ.

ಒಟ್ಟಿನಲ್ಲಿ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಜಸ್ಟಿನ್ ಬಿಬರ್ ಇದೀಗ ತನ್ನದೇ ಲಂಬೋರ್ಗಿನಿ ಕಾರನ್ನು ಚಾಲನೆ ಮಾಡಲು ಹೋಗಿ ಸುದ್ದಿಯಾಗಿದ್ದು, ಸೂಪರ್ ಕಾರುಗಳ ಬಗೆಗೆ ಸಾಕಷ್ಟು ಕ್ರೇಜ್ ಹೊಂದಿರುವ ಜಸ್ಟಿನ್ ಲಂಬೋರ್ಗಿನಿ ಸೇರಿದಂತೆ ಹಲವು ದುಬಾರಿ ಕಾರುಗಳ ಸಂಗ್ರಹ ಹೊಂದಿದ್ದಾರೆ.

ಲಂಬೋರ್ಗಿನಿ ಕಾರನ್ನು ಯುಟರ್ನ್ ಮಾಡಲು ಹರಸಾಹಸಪಟ್ಟ ಜಸ್ಟಿನ್ ಬಿಬರ್..

ಲಂಬೋರ್ಗಿನಿ ಅವೆಂಟಡೊರ್ ಎಸ್ ಸ್ಪೆಷಲ್ ಏನು?

ಕಳೆದ ವರ್ಷ ಮಾರ್ಚ್‌ನಲ್ಲಿ ಬಿಡುಗಡೆಯಾಗಿರುವ ಲಂಬೋರ್ಗಿನಿ ಅವೆಂಟಡೊರ್ ಎಸ್ ಕಾರುಗಳು ಭಾರತದಲ್ಲಿ ಎಕ್ಸ್ ಶೋರಂ ಪ್ರಕಾರ ರೂ. 5.01 ಕೋಟಿ ಬೆಲೆ ಹೊಂದಿದ್ದು, ಜಸ್ಟಿನ್ ಬಿಬರ್ ಖರೀದಿಸಿರುವ ಕಾರು ಸ್ಪೆಷಲ್ ಎಡಿಷನ್ ಮಾದರಿಯಾಗಿದೆ.

ಲಂಬೋರ್ಗಿನಿ ಕಾರನ್ನು ಯುಟರ್ನ್ ಮಾಡಲು ಹರಸಾಹಸಪಟ್ಟ ಜಸ್ಟಿನ್ ಬಿಬರ್..

ಬರೋಬ್ಬರಿ 690-ಬಿಎಚ್‌ಪಿ ಉತ್ಪಾದಿಸಬಲ್ಲ ಲಂಬೋರ್ಗಿನಿ ಅವೆಂಟಡೊರ್ ಎಸ್ ಕಾರುಗಳು ಈ ಹಿಂದಿನ ಮಾದರಿಗಿಂತಲೂ ಹೆಚ್ಚುವರಿ 40-ಬಿಎಚ್‌ಪಿ ಉತ್ಪಾದಿಸುವ ಗುಣ ಹೊಂದಿದೆ. ಹೀಗಾಗಿ ಇದು ಪರ್ಫಾಮೆನ್ಸ್ ಪ್ರಿಯರನ್ನು ಹೆಚ್ಚು ಸೆಳೆಯುತ್ತಿದೆ ಎನ್ನಬುಹುದು.

ಲಂಬೋರ್ಗಿನಿ ಕಾರನ್ನು ಯುಟರ್ನ್ ಮಾಡಲು ಹರಸಾಹಸಪಟ್ಟ ಜಸ್ಟಿನ್ ಬಿಬರ್..

ಎಂಜಿನ್ ಸಾಮರ್ಥ್ಯ

ನೂತನ ಲಂಬೋರ್ಗಿನಿ ಅವೆಂಟಡೊರ್ ಎಸ್ ಕಾರಿನಲ್ಲಿರುವ ಅತ್ಯಂತ ಶಕ್ತಿಶಾಲಿ 6.5-ಲೀಟರ್ ವಿ12 ಸೂಪರ್ ಕಾರು ಎಂಜಿನ್ ಅಳವಡಿಸಲಾಗಿದ್ದು, ಇದೇ ಕಾರಣಕ್ಕೆ ಕೇವಲ 2.9 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮಿ ವೇಗ ಸಾಧಿಸುವುದಲ್ಲದೇ ಗಂಟೆಗೆ 350 ಕಿ.ಮಿ ಟಾಪ್ ಸ್ಪೀಡ್‌ನಲ್ಲಿ ಚಲಿಸಬಲ್ಲವು.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

01.ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...

02. ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

03.'ರೋಲ್ಸ್ ರಾಯ್ಸ್' ಕಾರನ್ನು ಕಸ ತುಂಬಲು ಬಳಸಿದ ಭಾರತದ ಹೆಮ್ಮೆಯ ರಾಜ !!

04. ಅಂಬಾನಿ ಮಗನ ಕಾರಿನಲ್ಲಿರುವ ಈ ಗಡಿಯಾರದ ಬೆಲೆ ಕೇವಲ 1.95 ಕೋಟಿ !! ಇನ್ನು ಈ ಕಾರಿನ ಬೆಲೆ ಕೇಳ್ಬೇಡಿ

05. ಇವು ಪ್ರತಿಷ್ಠಿತ ಕಂಪನಿಗಳಿಂದಲೇ ನಿರ್ಮಾಣವಾದ 10 ಕಳಪೆ ಕಾರುಗಳು..!!

06. ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

English summary
Justin Bieber Tries Hard To Turn His New Lamborghini — Video Of Bieber Driving Goes Viral.
Story first published: Thursday, March 29, 2018, 19:05 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark