ದೇವರ ಬದಲಾಗಿ ಪಾರ್ನ್ ಸ್ಟಾರ್‌ಗಳನ್ನ ಜಪಿಸುತ್ತಿದ್ದಾನೆ ಈ ಬಸ್ ಡ್ರೈವರ್..!!

By Rahul Ts

ಬಸ್‌ಗಳ ಮೇಲೆ ಸಾಮಾನ್ಯವಾಗಿ ದೇವರ ಚಿತ್ರಗಳು ಇಲ್ಲವೇ ಜನಪ್ರಿಯ ಹೀರೋಗಳ ಚಿತ್ರಗಳನ್ನು ಅಂಟಿಸುವುದು ಕಾಮನ್. ಆದ್ರೆ ಇಲ್ಲೊಬ್ಬ ಖಾಸಗಿ ಬಸ್ ಮಾಲೀಕ ಮಾತ್ರ ತನ್ನ ಪಾರ್ನ್ ಸ್ಟಾರ್‌ಗಳ ಚಿತ್ರಗಳನ್ನು ಅಂಟಿಸಿಕೊಂಡಿದ್ದು,ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಾನೆ.

ಕೇರಳ ರಾಜ್ಯದಲ್ಲಿನ ಒಂದು ಟ್ರಾವೆಲ್ಸ್ ಯುವ ಸಮುದಾಯವನ್ನು ಸೆಳೆಯಲು ತಮ್ಮ 8 ಪ್ರೈವೇಟ್ ಬಸ್ಸುಗಳಿಗೆ ಪ್ರಸಿದ್ಧ ಪಾರ್ನ್ ಸ್ಟಾರ್ ಸನ್ನಿ ಲಿಯಾನ್, ಮಿಯಾ ಖಾಲಿಫ್ಫಾ ಮತ್ತು ಜಾನಿ ಸಿನ್ಸ್ ಚಿತ್ರಗಳಿಂದ ಪೆಯಿಂಟ್ ಮಾಡಿದ್ದು, ಇದೀಗ ಈ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕೇರಳದ ಪ್ರೈವೇಟ್ ಬಸ್ ಸುತ್ತಾ ಪಾರ್ನ್ ಸ್ಟಾರ್‍‍ಗಳ ಚಿತ್ರ..!!

ಹೌದು, ಕೇರಳದ ತ್ರಿವೇಂಡ್ರಮ್‍‍ನ ಚಿಕ್ಕುಸ್ ಎಂಬ ಪ್ರೈವೇಟ್ ಟೂರ್ಸ್ ಆಂಡ್ ಟ್ರಾವೆಲ್ಸ್ ಕಂಪೆನಿಯು ಈ ಸಾಹಸಕ್ಕೆ ಕೈ ಹಾಕಿದ್ದು, ತಮ್ಮ ಗ್ರಾಹಕರನ್ನು ವಿನೂತನವಾಗಿ ಆಕರ್ಷಿಸಲು ತಮ್ಮ ಪ್ರೈವೇಟ್ ಬಸ್ಸುಗಳಲ್ಲಿ ಜನಪ್ರಿಯ ಹಾಲಿವುಡ್ ಸಿನಿಮಾಗಳಾದ ಅವೆಂಜರ್ಸ್, ಪೈರೆಟ್ಸ್ ಆಫ್ ದಿ ಕೆರಿಬಿಯನ್ ಚಿತ್ರದಲ್ಲಿನ ತಾರೆಯರ ಪೆಯಿಂಟ್ ಮಾಡಿಸಿದ್ದಾರೆ.

ಕೇರಳದ ಪ್ರೈವೇಟ್ ಬಸ್ ಸುತ್ತಾ ಪಾರ್ನ್ ಸ್ಟಾರ್‍‍ಗಳ ಚಿತ್ರ..!!

ಕೇವಲ ಚಲನಚಿತ್ರ ತಾರೆಯರ ಚಿತ್ರಗಳನ್ನಲ್ಲದೆ ಫೇಮಸ್ ಪಾರ್ನ್ ಸ್ಟಾರ್‍‍ಗಳಾದ ಸನ್ನಿ ಲಿಯೋನ್, ಮಿಯಾ ಖಾಲಿಫ್ಫಾ, ಜಾನಿ ಸಿನ್ಸ್, ಕೌರ್ಟ್ನಿ ಕೇನ್, ಜಾರ್ಡಾನ್ ಎಲ್ ಮತ್ತು ಇನ್ನಿತರೆ ಪಾರ್ನ್ ಸ್ಟಾರ್‍‍ಗಳ ಚಿತ್ರವನ್ನು ಸಹ ತಮ್ಮ ಬಸ್ಸುಗಳ ಮೇಲೆ ಏರ್ ಬ್ರಷ್‍‍ನಿಂದ ಪೇಯಿಂಟ್ ಮಾಡಿಸಲಾಗಿದೆ.

ಕೇರಳದ ಪ್ರೈವೇಟ್ ಬಸ್ ಸುತ್ತಾ ಪಾರ್ನ್ ಸ್ಟಾರ್‍‍ಗಳ ಚಿತ್ರ..!!

ಮೇಲೆ ಹೇಳಿರುವ ಎಲ್ಲಾ ಪಾರ್ನ್ ತಾರೆಯರು ಜಾಗತೀಕವಾಗಿ ಅಲ್ಲದೇ ಭಾರತದಲ್ಲೂ ಫೇಮಸ್‍ ಆಗಿದ್ದು, ಪ್ರಯಾಣಿಕರ ಆದ್ಯತೆ ಮೇರೆಗೆ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಕೇರಳದ ಪ್ರೈವೇಟ್ ಬಸ್ ಸುತ್ತಾ ಪಾರ್ನ್ ಸ್ಟಾರ್‍‍ಗಳ ಚಿತ್ರ..!!

ಸಾಮಾನ್ಯವಾಗಿ ನಮ್ಮ ಟ್ರಾವೆಲ್ಸ್ ನಲ್ಲಿ ಯುವ ಸಮುದಾಯವೇ ಹೆಚ್ಚು ಬರುತ್ತಿರುವ ಕಾರಣಕ್ಕೆ ಅವರನ್ನು ಮನರಂಜಿಸಲು ಈ ಕಾರ್ಯವನ್ನು ಮಾಡಲಾಗಿದ್ದು, ನಮ್ಮಲ್ಲಿರುವ ಒಟ್ಟು 8 ಬಸ್ಸುಗಳಿಗೆ ವಿವಿಧ ಪಾರ್ನ್ ಸ್ಟಾರ್ಸ್, ಹಾಲಿವುಡ್ ಸಿನಿಮಾ ತಾರೆಯರು, ದೇಶದ ಫೇಮಸ್ ಸಿನಿಮಾ ತಾರೆಯರ ಚಿತ್ರವನ್ನು ನಮ್ಮ ಬಸ್ಸುಗಳ ಮೇಲೆ ಪೆಯಿಂಟ್ ಮಾಡಲಾಗಿದೆಯೆಂತೆ.

ಪಾರ್ನ್ ಸ್ಟಾರ್ ಚಿತ್ರ

ಪೇಯಿಂಟ್ ಮಾಡಲು ಲಕ್ಷ ಲಕ್ಷ ಖರ್ಚು

ಅಂದಹಾಗೆ ಒಂದು ಬಸ್ಸಿನ ಪೇಯಿಂಟ್‍‍ಗಾಗಿ ಸುಮ್ಮರು 4 ರಿಂದ 5 ಲಕ್ಷ ಖರ್ಚು ಮಾಡಲಾಗಿದ್ದು, ಚಿಕ್ಕುಸ್ ಟ್ರಾವೆಲ್‌ನ ಒಡೆಯ ಶಿರಿನ್ ಇದೀಗ ಯುವಕರಿಗೆ ವಿನೂತನ ರೀತಿಯ ಪ್ರಮಾಣದ ಅನುಭವ ನೀಡುತ್ತಿದ್ದಾರೆ.

ಕೇರಳದ ಪ್ರೈವೇಟ್ ಬಸ್ ಸುತ್ತಾ ಪಾರ್ನ್ ಸ್ಟಾರ್‍‍ಗಳ ಚಿತ್ರ..!!

ಬಸ್ ಮೇಲೆ ಬಳಿಯಲಾಗಿರುವ ಗ್ರಾಫಿಕ್ಸ್ ಮತ್ತು ವರ್ಣಚಿತ್ರಗಳನ್ನು ಸ್ಥಳೀಯ ಕಲಾವಿದ ರೀಷೆಶ್ ಎನ್ನುವರಿಂದ ರಚನೆಗೊಂಡಿದ್ದು, ಚಿಕ್ಕೂಸ್ ಟೂರ್ಸ್ ಆಂಡ್ ಟ್ರಾವೆಲ್ಸ್ ಅವರದೆಯಾದ ಪ್ರತ್ಯೇಕ YouTube ಚಾನೆಲ್ ಅನ್ನು ಹೊಂದಿದ್ದಾರೆ. ಈ ಯೂಟ್ಯೂಬ್ ಚಾನಲ್‍‍ನಲ್ಲಿ ಅವರು ನಡೆಸುತ್ತಿರುವ ಎಲ್ಲಾ ಬಸ್ ಸೇವೆಗಳ ವೀಡಿಯೊಗಳನ್ನು ಸಹ ಪೋಸ್ಟ್ ಮಾಡುತ್ತಿದ್ದಾರೆ.

ಕೇರಳದ ಪ್ರೈವೇಟ್ ಬಸ್ ಸುತ್ತಾ ಪಾರ್ನ್ ಸ್ಟಾರ್‍‍ಗಳ ಚಿತ್ರ..!!

ಮತ್ತೊಂದು ವಿಚಾರ ಅಂದ್ರೆ ಕೇರಳದಲ್ಲಿನ ಖಾಸಗಿ ಬಸ್ಸುಗಳಿಗೆ ಬಣ್ಣಗಳಿಗೆ ನಿಯಮಗಳಿಲ್ಲ. ಹೀಗಾಗಿ ಈ ರೀತಿ ಪಾರ್ನ್ ಸ್ಟಾರ್‌ಗಳ ಫೋಟೋಗಳನ್ನು ಬಳಕೆ ಮಾಡಲಾಗಿದ್ದು, ಹಾಕುವ ಫೋಟೋಗಳು ಅಶ್ಲೀಲತೆಯಿಂದ ಇರಬಾರದು ಎಂಬ ನಿಯಮವಿದೆಯೆಂತೆ ಅಷ್ಟೇ. ಹೀಗಾಗಿ ಪಾರ್ನ್ ಚಿತ್ರಗಳಲ್ಲಿ ಅಭಿನಯಿಸಿದ ನಟರು ಮತ್ತು ನಟಿಯರ ಕೇವಲ ಮುಖಭಾಗವನ್ನು ಮಾತ್ರ ಈ ಬಸ್ಸುಗಳಲ್ಲಿ ಚಿತ್ರಿಸಲಾಗಿದೆ.

ಕೇರಳದ ಪ್ರೈವೇಟ್ ಬಸ್ ಸುತ್ತಾ ಪಾರ್ನ್ ಸ್ಟಾರ್‍‍ಗಳ ಚಿತ್ರ..!!

ಇನ್ನೊಂದು ವಿಷೇಶವೆಂದರೆ, ಈ ಪ್ರೈವೇಟ್ ಬಸ್ಸುಗಳಲ್ಲಿ ಡಿಜೆ ಸಿಸ್ಟಮ್ ಕೂಡಾ ಅಳವಡಿಸಲಾಗಿದ್ದು, ಪ್ರಯಾಣಿಕರಿಗೆ ಮನರಂಜನೆ ನೀಡಲು ತಾವೇ ಏರ್ಪಾಡು ಮಾಡಿರುವುದಾಗಿ ಚಿಕ್ಕೂಸ್ ಟೂರ್ಸ್ ಆಂಡ್ ಟ್ರಾವೆಲ್ಸ್ ಹೇಳಿಕೊಂಡಿದ್ದಾರೆ.

ಕೇರಳದ ಪ್ರೈವೇಟ್ ಬಸ್ ಸುತ್ತಾ ಪಾರ್ನ್ ಸ್ಟಾರ್‍‍ಗಳ ಚಿತ್ರ..!!

ಕೇರಳದಲ್ಲಿನ ಈ ರೀತಿಯಾದ ಬೆಳವಣಿಗೆಯು ದೇಶದ ಇನ್ನಿತರೆ ಪ್ರದೇಶಗಳಲ್ಲಿಯೂ ಶೀಘ್ರದಲ್ಲೇ ಪ್ರಾರಂಭಿಸಬೇಕೆಂದು ಯುವಕರು ಮಹಾದಾಸೆಯಿಂದ ಇದ್ದಾರೆ. ಆದರೆ ಕೇರಳದಲ್ಲಿ ಪ್ರಾರಂಭಿಸಿದ ಈ ಕಾರ್ಯವನ್ನು ಬೇರೆ ರಾಜ್ಯದ ಸಾರಿಗೆ ಸಂಸ್ಥೆಯು ಅಲ್ಲಿನ ಪ್ರೈವೇಟ್ ಬಸ್ಸುಗಳಲ್ಲಿ ಚಿತ್ರೀಕರಿಸಲು ಅವಕಾಶ ಮಾಡಿಕೊಡುತ್ತಾರೆಯೆ? ಎನ್ನುವುದೇ ನಮ್ಮ ಪ್ರಶ್ನೆ..

ಕೇರಳದ ಪ್ರೈವೇಟ್ ಬಸ್ ಸುತ್ತಾ ಪಾರ್ನ್ ಸ್ಟಾರ್‍‍ಗಳ ಚಿತ್ರ..!!

ಒಟ್ಟಿನಲ್ಲಿ ತಪ್ಪೋ.. ಸರಿಯೋ ಗೊತ್ತಿಲ್ಲಾ... ಬಸ್ ಮಾಲೀಕ ಮಾಡಿದ ಪ್ಲ್ಯಾನ್ ಮಾತ್ರ ಸಖತ್ ವೈರಲ್ ಆಗುತ್ತಿದ್ದು, ಟ್ವಿಟರ್ ಮತ್ತು ಫೇಸ್‌ಬುಕ್ ಈ ಬಗ್ಗೆ ಸ್ವಾರಸ್ಯಕರ ಚರ್ಚೆ ಆಗುತ್ತಿರುವುದು ಮಾತ್ರ ಸತ್ಯ. ಇದರ ಜೊತೆಗೆ ಬಸ್ ಮೇಲಿನ ಚಿತ್ರಗಳ ಕುರಿತಾಗಿ ಪಾರ್ನ್ ಸ್ಟಾರ್‌ಗಳು ಕೂಡಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರಂತೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಕೊನೆಗೂ ಮರ್ಸಿಡಿಸ್ ಬೆಂಝ್ ಕಾರನ್ನ ಖರೀದಿ ಮಾಡಿಯೇ ಬಿಟ್ಟ ರೈತ..!!

ಕಾರು ಮಾಲೀಕರೇ ಹುಷಾರ್- ವೀಲ್ಹ್‌ಗಳನ್ನು ಮಾತ್ರ ಕಳ್ಳತನ ಮಾಡ್ತಾರೆ ಈ ಖದೀಮರು...

ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಲಿಯಾದ ಮತ್ತೊಂದು ಜೀವ..!?

ಹೆದ್ದಾರಿಯಲ್ಲಿ 40 ಬೈಕ್‍‍ಗಳನ್ನು ಹಿಡಿದು ದಂಡ ಹಾಕಿದ ಪೊಲೀಸ್.. ಕಾರಣ ಏನು ಗೊತ್ತಾ..??

ನಿಮಗೆ ಗೊತ್ತಿರದ ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಇಂಟ್ರಸ್ಟಿಂಗ್ ವಿಚಾರಗಳಿವು..

Most Read Articles

Kannada
Read more on auto news bus celebrity
English summary
Kerala private bus painted with sunny leone mia khalifa images to attaract youths.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more