ಕೆಎಸ್‌ಆರ್‌ಟಿಸಿ ಬಸ್ ಮತ್ತು ಟಿಟಿ ಮುಖಾಮುಖಿ- ಘಟನೆಯಲ್ಲಿ ಐವರು ದುರ್ಮರಣ

Written By:

ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟಿಟಿ ವಾಹನ ನಡುವೆ ಮಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮಹಿಳೆಯರು ಸೇರಿ ಐವರು ಸಾವನ್ನಪ್ಪಿದ್ದು, 11 ಜನ ಗಂಭೀರವಾಗಿ ಗಾಯಗೊಂಡಿರುವ ಭೀಕರ ಅವಘಡ ನಡೆದಿದೆ.

ಕೆಎಸ್‌ಆರ್‌ಟಿಸಿ ಬಸ್ ಮತ್ತು ಟಿಟಿ ಮುಖಾಮುಖಿ- ಘಟನೆಯಲ್ಲಿ ಐವರು ದುರ್ಮರಣ

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಂಗಾರುಪಾಳ್ಯಂನಲ್ಲಿ ಗುರುವಾರ ನಸುಕಿನ ಜಾವ ಈ ಘಟನೆ ನಡೆದಿದ್ದು, ಬೆಂಗಳೂರಿನಿಂದ ತಿರುಪತಿಗೆ ತೆರಳುತ್ತಿದ್ದ ಸಾರಿಗೆ ಬಸ್‍ಗೆ ತಿರುಪತಿಯಿಂದ ಬರುತ್ತಿದ್ದ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದಿದೆ.

ಕೆಎಸ್‌ಆರ್‌ಟಿಸಿ ಬಸ್ ಮತ್ತು ಟಿಟಿ ಮುಖಾಮುಖಿ- ಘಟನೆಯಲ್ಲಿ ಐವರು ದುರ್ಮರಣ

ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಟೆಂಪೋದಲ್ಲಿದ್ದ 11 ಜನ ಗಾಯಗೊಂಡಿದ್ದಾರೆ. ಮೃತರೆಲ್ಲರು ಮಹಾರಾಷ್ಟ್ರ ಮೂಲದವರೆಂದು ತಿಳಿದು ಬಂದಿದೆ.

Recommended Video - Watch Now!
Driverless Auto Rickshaw On Indian Highway
ಕೆಎಸ್‌ಆರ್‌ಟಿಸಿ ಬಸ್ ಮತ್ತು ಟಿಟಿ ಮುಖಾಮುಖಿ- ಘಟನೆಯಲ್ಲಿ ಐವರು ದುರ್ಮರಣ

ಟೆಂಪೋ ಟ್ರಾವೆಲರ್ ನಲ್ಲಿದ್ದ 18 ಮಂದಿ ತಿರುಪತಿ ದರ್ಶನ ಪಡೆದು ಮೈಸೂರು ಪ್ರವಾಸ ಕೈಗೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಘಟನೆಯಲ್ಲಿ ಸಾರಿಗೆ ಬಸ್‍ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳನ್ನು ಹೊರತು ಪಡಿಸಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ ಮತ್ತು ಟಿಟಿ ಮುಖಾಮುಖಿ- ಘಟನೆಯಲ್ಲಿ ಐವರು ದುರ್ಮರಣ

ಇನ್ನು ಮೃತರನ್ನು ಟಿಟಿ ವಾಹನ ಚಾಲಕ ಕಮ್ಮಗಿರಿ(35), ತುಷಾರ(23), ರೂಪಾಲಿ(22), ಸಲುಕುಮಾರಿ(45) ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಗಾಯಗೊಂಡ 11 ಜನರಿಗೆ ಚಿತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಪ್ಪದೇ ಓದಿ-60 ಸಾವಿರ ಬೆಲೆಯ ಹೆಲ್ಮೆಟ್ ಹಾಕಿದ್ರು ಆ ಯುವಕನ ಜೀವ ಉಳಿಲಿಲ್ಲ...

ಕೆಎಸ್‌ಆರ್‌ಟಿಸಿ ಬಸ್ ಮತ್ತು ಟಿಟಿ ಮುಖಾಮುಖಿ- ಘಟನೆಯಲ್ಲಿ ಐವರು ದುರ್ಮರಣ

ಸ್ಥಳಕ್ಕೆ ಚಿತ್ತೂರು ಡಿವೈಎಸ್‌ಪಿ ಸೇರಿದಂತೆ ಬಂಗಾರುಪಾಳ್ಯಂ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಾಸಿಕೊಂಡಿದ್ದು, ಘಟನಾ ಸ್ಥಳದಿಂದ ಟಿಟಿ ವಾಹನವನ್ನು ತೆರವು ಮಾಡಲಾಗುತ್ತಿದೆ.

ಚಿತ್ರಗಳ ಕೃಪೆ- ಪಬ್ಲಿಕ್ ಟಿವಿ

ಕೆಎಸ್‌ಆರ್‌ಟಿಸಿ ಬಸ್ ಮತ್ತು ಟಿಟಿ ಮುಖಾಮುಖಿ- ಘಟನೆಯಲ್ಲಿ ಐವರು ದುರ್ಮರಣ

ಕೆಲವು ವರದಿಗಳ ಪ್ರಕಾರ ಟೆಂಪೊ ಟ್ರಾವೆಲರ್ ಚಾಲಕ ನಿದ್ದೆ ಮಂಪರಿನಲ್ಲಿ ವಾಹನ ಚಲಾಯಿಸಿದ್ದೆ ಅವಘಡಕ್ಕೆ ಕಾರಣ ಇರಬಹುದೆಂದು ಹೇಳಲಾಗುತ್ತಿದ್ದು, ಈ ಸಂಬಂಧ ಕೆಎಸ್‌ಆರ್‌ಟಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದಿರುವ ಪೊಲೀಸರು ಘಟನೆ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ತಪ್ಪದೇ ಓದಿ-ಐಷಾರಾಮಿ ಕಾರು ನೋಂದಣಿಯಲ್ಲಿ ದೋಖಾ- ನಟ ಫಹಾದ್ ಫಾಸಿಲ್ ಅರೆಸ್ಟ್..!

ಬಿಎಂಡಬ್ಲ್ಯು ಜಿಎಸ್ 1200 ಬೈಕ್ ಮೇಲೆ ಹರಿದ ಟ್ರಕ್- ಘಟನೆಯಲ್ಲಿ ಪೈಲಟ್ ದುರ್ಮರಣ

Trending DriveSpark YouTube Videos

Subscribe To DriveSpark Kannada YouTube Channel - Click Here

Read more on accident ಅಪಘಾತ
English summary
Read in Kannada about accident between tempo traveller and ksrtc bus.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark