ರೇಸ್ ಟ್ರ್ಯಾಕ್‌ನಲ್ಲಿ ಸಿಗರೇಟ್ ಬ್ರಾಂಡ್ ಲವ್ ಅಫೇರ್

Posted By:

1960ರ ದಶಕದಿಂದ ಆರಂಭವಾಗಿ ಪ್ರಖ್ಯಾತ ಸಿಗರೇಟ್ ಬ್ರಾಂಡ್‌ಗಳು ಮೋಟಾರ್ ಸ್ಪೋರ್ಟ್ಸ್ ರೇಸಿಂಗ್ ಜಗತ್ತಿನ ಜತೆ ನಂಟು ಹೊಂದಿದೆ. ಕಳೆದ ಕೆಲವು ದಶಕಗಳಲ್ಲಿ ಫಾರ್ಮುಲಾ ಒನ್ ಹಲವು ಏರುಬೀಳುಗಳನ್ನು ಕಂಡಿದ್ದರೂ ಆಧಾರ ಸ್ತಂಭವಾಗಿ ನಿಂತಿರುವ ತಂಬಾಕು ಉದ್ಯಮವು ಪ್ರಮುಖ ಪ್ರಾಯೋಜಕತ್ವವನ್ನು ವಹಿಸಿದ್ದವು.

ಇವೆರಡರ ನಂಟು ಒಂಥರ ಪ್ರೇಮಿಗಳ ರೀತಿಯದ್ದಾಗಿತ್ತು. ಇದರಂತೆ ಹೆಸರಾಂತ ರೇಸಿಂಗ್ ಕಾರು, ತಂಡಗಳು ಹಾಗೂ ಚಾಲಕರಲ್ಲಿ ಸಿಗರೇಟ್ ಬ್ರಾಂಡ್‌ಗಳ ಲೊಗೊಗಳು ಕಾಣಸಿಗುತ್ತಿದ್ದವು. ವಿಶ್ವದ ಪ್ರಬಲ ಎಫ್1 ತಂಡಗಳಾದ ಫೆರಾರಿ, ಲೋಟಸ್, ಮೆಕ್‌ಲ್ಯಾರೆನ್, ಹೋಂಡಾ ಹಾಗೂ ವಿಲಿಯಮ್ಸ್ ಎಫ್1 ತಂಡಗಳಿಗೆ ಪ್ರಸಿದ್ಧ ಸಿಗರೇಟ್ ಬ್ರಾಂಡ್‌ಗಳು ಪ್ರಾಯೋಜಕತ್ವ ವಹಿಸಿವೆ. ಅವುಗಳ ಚೊಕ್ಕದಾದ ಪಟ್ಟಿ ಇಲ್ಲಿವೆ ನೋಡಿ

  • ಫೆರಾರಿ-ಮಾರ್ಲ್‌ಬರೊ (Marlboro)
  • ಲೋಟಸ್- ಗೋಲ್ಡ್ ಲೀಫ್ (Gold Leaf)
  • ಮೆಕ್‌ಲ್ಯಾರೆನ್- ವೆಸ್ಟ್ (West)
  • ಹೋಂಡಾ- ಬ್ರಿಟಿಷ್ ಅಮೆರಿಕನ್ ಟೊಬಕೊ (British American Tobacco)
  • ವಿಲಿಯಮ್ಸ್ ಎಫ್1- ಕ್ಯಾಮೆಲ್, ರಾಥ್‌ಮ್ಯಾನ್ಸ್ (Camel, Rothmans)

ತಂಬಾಕು ಉದ್ಯಮ ಕೇವಲ ಎಫ್1 ರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಮೋಟಾರ್ ಸೈಕಲ್ ಹಾಗೂ ಇತರ ವಿಶ್ವ ರ‌್ಯಾಲಿ ಚಾಂಪಿಯನ್‌ಶಿಪ್‌ಗಳಲ್ಲೂ ಪ್ರಮುಖ ಪ್ರಾಯೋಜಕತ್ವ ವಹಿಸಿವೆ. ಹೀಗೆ ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎನಿಸಿದರೂ ಮೋಟಾರ್ ಸ್ಪೋರ್ಟ್ಸ್ ರಂಗಕ್ಕೆ ಪ್ರೋತ್ಸಾಹ ನೀಡುವುದರಲ್ಲಿ ಎಂದೂ ಹಿಂದು ಮುಂದು ನೋಡಿಲ್ಲ.

ಹಾಗಿದ್ದರೆ ಬನ್ನಿ ವಿಶ್ವದ ಅಗ್ರ ರೇಸಿಂಗ್ ತಂಡಗಳಿಗೆ ಯಾವೆಲ್ಲ ಸಿಗರೇಟ್ ಬ್ರಾಂಡ್‌ಗಳು ಪ್ರಾಯೋಜಕತ್ವ ವಹಿಸಿವೆ ಎಂಬುದರ ಬಗೆಗಿನ ಸಚಿತ್ರ ವರದಿಯನ್ನು ವೀಕ್ಷಿಸೋಣ.

Sizzling Hawt Smoking Racing Machines

ವಿಶ್ವದಲ್ಲಿ ಮೋಟಾರ್ ಸ್ಪೋರ್ಟ್ಸ್ ಜನಪ್ರಿಯವಾಗುವುದರಲ್ಲಿ ಸಿಗರೇಟ್ ಬ್ರಾಂಡ್‌ಗಳು ಸಹ ಮಹತ್ತರ ಪಾತ್ರ ವಹಿಸಿತ್ತು. 1970ರ ದಶಕದಿಂದ ಹಿಡಿದು 21ನೇ ಶತಮಾನದ ಆರಂಭದ ವರೆಗೂ ಸಿಗರೇಟ್ ಕಂಪನಿಗಳು ಪ್ರಾಯೋಜಕತ್ವ ವಹಿಸಿವೆ. ಈ ಮೂಲಕ ತಮ್ಮ ಬ್ರಾಂಡ್ ಇಮೇಜ್ ಕುದುರಿಸಿಕೊಂಡಿದ್ದ ತಂಬಾಕು ಉದ್ಯಮವು ಮೋಟಾರ್ ಸ್ಪೋರ್ಟ್ಸ್‌ಗೆ ಉತ್ತೇಜನವನ್ನು ನೀಡಿತ್ತು.

Ayrton Senna - McLaren Honda Marlboro F1 Team

ಪ್ರಸ್ತುತ ತಂಬಾಕು ಕಂಪನಿಗಳು ಮೋಟಾರ್ ಸ್ಪೋರ್ಟ್ಸ್‌ಗೆ ಪ್ರಾಯೋಜಕತ್ವ ವಹಿಸುವುದನ್ನು ನಿಲ್ಲಿಸಿವೆ. ನಿಮ್ಮ ಮನದಲ್ಲಿ ಯಾಕೆ ಎಂಬ ಪ್ರಶ್ನೆ ಉದಯಿಸಿದರೆ ಅದಕ್ಕೆ ಪ್ರಮುಖ ಕಾರಣ ಸರಕಾರದ ಕಟ್ಟುನಿಟ್ಟಿನ ನಿಯಮವಾಗಿದೆ. ಹಲವಾರು ದೇಶಗಳು ಈಗಾಗಲೇ ತಂಬಾಕು ಜಾಹೀರಾತನ್ನು ನಿಷೇಧಿಸಿವೆ.

Colin Mcrae - 555 World Rally Championship Team

ಇದರಂತೆ ಮೊದಲ ಹೆಜ್ಜೆಯನ್ನಿಟ್ಟಿರುವ ಜಪಾನ್ 1976ನೇ ಇಸವಿಯಲ್ಲೇ ರೇಸಿಂಗ್ ಈವೆಂಟ್‌ನಲ್ಲಿ ತಂಬಾಕು ಜಾಹೀರಾತನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.

Kevin Schwantz - Suzuki RGV 500 Lucky Strike Team

ಆದರೆ ಅದೃಷ್ಟವಶಾತ್ ಮೋಟಾರ್ ಸ್ಪೋರ್ಟ್ಸ್ ವಿಭಾಗಕ್ಕೆ ಪ್ರಾಯೋಜಕತ್ವ ವಹಿಸಲು ಇತರ ವಿಭಾಗಗಳು ಸಹಮುಂದೆ ಬಂದವು. ಇದು ರೇಸಿಂಗ್ ದುನಿಯಾದ ಯಶಸ್ಸಿಗೆ ಸಹಕಾರಿಯಾಗಿತ್ತು.

Marlboro Ferrari F1 & Yamaha Motogp Team

ಸಿಗರೇಟ್ ಬ್ರಾಂಡ್ ಉಳಿಸಿಕೊಂಡಿರುವ ಏಕೈಕ ರೇಸಿಂಗ್ ಟೀಮ್ ಅಂದರೆ ಅದು ಫೆರಾರಿ ಆಗಿದೆ. ಹಾಗಿದ್ದರೂ ಮಾರ್ಲ್‌ಬರೊ ತಂಬಾಕು ಲೊಗೊವನ್ನು ಎಲ್ಲಿ ಬಳಸಲಾಗುತ್ತಿಲ್ಲ. ಆದರೆ ಫೆರಾರಿ ಲೊಗೊ ಮಾರ್ಲ್‌ಬರೊ ಚಿಹ್ನೆಗೆ ಸಾಮತ್ಯೆ ಹೊಂದಿದೆ ಎಂಬುದು ಗಮನಾರ್ಹ.

Wayne Gardner - Honda NSR 500 Rothmans Team

ಮಾಜಿ ಗ್ರ್ಯಾನ್ ಪ್ರಿಕ್ಸ್ ಮೋಟಾರ್ ಸೈಕಲ್ ರೋಡ್ ರೇಸರ್ ಹಾಗೂ ಟೂರಿಂಗ್ ಕಾರ್ ರೇಸರ್ ಆಗಿರುವ ಮೈಕಲ್ ಗಾರ್ಡ್‌ನರ್ 1987ನೇ ಇಸವಿಯಲ್ಲಿ 500 ಸಿಸಿ ಮೋಟಾರ್ ಸೈಕಲ್ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದರು.

Tommi Makinen - Marlboro World Rally Championship Team

ಟೊಮಿ ಮೆಕಿನೆನ್ ಅತ್ಯಂತ ಯಶಸ್ವಿ ವಿಶ್ವ ರ‌್ಯಾಲಿ ಚಾಂಪಿಯನ್‌ಶಿಪ್‌ ಡ್ರೈವರ್ ಆಗಿದ್ದಾರೆ. ಅವರ ರ‌್ಯಾಲಿ ಕಾರುಗಳಿಗೆ ಮಾರ್ಲ್‌ಬರೊ ಸಿಗರೇಟ್ ಕಂಪನಿಯು ಪ್ರಾಯೋಜಕತ್ವ ವಹಿಸಿದ್ದವು.

Toyota F1 Panasonic

ತಂತ್ರಜ್ಞಾನ ಬ್ರಾಂಡ್‌ಗಳಾದ ಪ್ಯಾನಸೋನಿಕ್ (ಟೊಯೊಟಾ ಎಫ್), ಕಾಂಪಾಕ್ ಮತ್ತು ಎಚ್‌ಪಿ (ವಿಲಿಯಮಸ್ ಎಫ್1) ಹಾಗೂ ವೋಡಾಫೋನ್ (ಮೆಕ್‌ಲ್ಯಾರೆನ್) ಕೂಡಾ ಎಫ್1 ರೇಸಿಂಗ್‌ನಲ್ಲಿ ಪ್ರಮುಖ ಪ್ರಾಯೋಜಕತ್ವ ವಹಿಸಿವೆ.

Red Bull Racing

ಇನ್ನು ಇತ್ತೀಚೆಗಿನ ವರ್ಷಗಳಲ್ಲಿ ರೆಡ್ ಬುಲ್ ಹಾಗೂ ಮೊನ್‌ಸ್ಟರ್ ಎನರ್ಜಿಗಳಂತಹ ತಂಪು ಪಾನೀಯಗಳು ಸಹ ಮೋಟಾರ್ ಸ್ಪೋರ್ಟ್ಸ್‌ಗೆ ಪ್ರಧಾನ ಪ್ರಾಯೋಜಕತ್ವ ವಹಿಸಿವೆ. ಈ ಪೈಕಿ ತನ್ನದೇ ಆದ ರೇಸಿಂಗ್ ತಂಡ ಹೊಂದಿರುವ ರೆಡ್ ಬುಲ್ ಚಾಂಪಿಯನ್ ಪಟ್ಟ ಕೂಡಾ ಆಲಂಕರಿಸಿದೆ.

Ken Block - Monster World Rally Team

ಹೂನಿಗನ್ ರೇಸಿಂಗ್ ಡಿವಿಷನ್‌ನ ವೃತಿನಿರತ ರ‌್ಯಾಲಿ ಡ್ರೈವರ್ ಆಗಿರುವ ಕೆನ್ ಬ್ಲಾಕ್ ಅವರಿಗೆ ಮೊನ್‌ಸ್ಟರ್ ಎನರ್ಜಿ ಡ್ರಿಂಕ್ ಪ್ರಾಯೋಜಕತ್ವ ವಹಿಸಿತ್ತು. ಈ ಹಿಂದೆ ಅದು ಮೊನ್‌ಸ್ಟರ್ ವರ್ಲ್ಡ್ ರ‌್ಯಾಲಿ ಟೀಮ್ ಎಂದು ಅರಿಯಲ್ಪಟ್ಟಿತ್ತು.

Racing Cars No Longer Smoking

ಆದರೆ ಸರಕಾರದ ಕಟ್ಟುನಿಟ್ಟಿನ ಆದೇಶದಿಂದಾಗಿ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ತಂಬಾಕು ಜಾಹೀರಾತನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದರೊಂದಿಗೆ ಮೋಟಾರ್ ಸ್ಪೋರ್ಟ್ಸ್ ಹಾಗೂ ಸಿಗೆರೇಟ್ ಬ್ರಾಂಡ್‌ಗಳ ನಡುವಣ ಲವ್ ಅಫೇರ್ ಮುರಿದು ಬೀಳುವಂತಾಗಿದೆ.

English summary
Motorsports and sponsorship will definitely take you to one topic - Cigarettes. The Tobacco industry was one of the major sponsor of Formula 1 racing starting from the late 1960s. Cigarette brands found their names and logos on some of the most prominent racing cars, drivers and teams.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark