ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ರಾಷ್ಟ್ರಪ್ರಶಸ್ತಿ ವಿಜೇತ ನಟಿ

ಸಿನಿಮಾ ರಂಗದಲ್ಲಿ ನಟರು ಮಾತ್ರವಲ್ಲದೇ ನಟಿಯರೂ ಕೂಡ ಕಾರು ಕ್ರೇಜ್ ಹೆಚ್ಚು ಹೊಂದಿರುತ್ತಾರೆ. ಇತ್ತೀಚೆಗೆ ದಕ್ಷಿಣ ಭಾರತದ ಖ್ಯಾತ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಅಪರ್ಣ ಬಾಲಮುರಳಿ ಅವರು ಐಷಾರಾಮಿ ಮರ್ಸಿಡಿಸ್ ಬೆಂಝ್ ಎಎಂಜಿ ಜಿಎಲ್ಎ 35 ಕಾರನ್ನು ಖರೀದಿಸಿದ್ದಾರೆ.

ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ರಾಷ್ಟ್ರಪ್ರಶಸ್ತಿ ವಿಜೇತ ನಟಿ

ನಟಿ ಅಪರ್ಣ ಬಾಲಮುರಳಿ ಅವರು ತಮ್ಮ ಹೊಸ ಮರ್ಸಿಡಿಸ್ ಬೆಂಝ್ ಎಎಂಜಿ ಜಿಎಲ್ಎ 35 ಕಾರಿನ ಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರಗಳ ಕೆಳಗೆ ಹಲವಾರು ಅಭಿಮಾನಿಗಳು ಶುಭಾಶಯಗಳನ್ನು ಕೋರಿದ್ದಾರೆ. ಈ ಹೊಸ ಮರ್ಸಿಡಿಸ್ ಬೆಂಝ್ ಎಎಂಜಿ ಜಿಎಲ್ಎ 35 ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.59.40 ಲಕ್ಷವಾಗಿದೆ. ಇದು ಸಣ್ಣ ಎಸ್‍ಯುವಿ ಜಿಎಲ್ಎ ಪರ್ಫಾಮೆನ್ಸ್ ಆವೃತ್ತಿಯಾಗಿದೆ.

ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ರಾಷ್ಟ್ರಪ್ರಶಸ್ತಿ ವಿಜೇತ ನಟಿ

ತಮಿಳು ನಟ ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾ ಮೂಲಕ ಸ್ಟಾರ್ ಆಗಿ ಹೊರಹೊಮ್ಮಿದ ಅಪರ್ಣ ಅದೇ ಸಿನಿಮಾದ ಅದ್ಭುತ ನಟನೆಗೆ ರಾಷ್ಟ್ರ ಪ್ರಶಸ್ತಿ ಸಹ ಮುಡಿಗೇರಿಸಿಕೊಂಡಿದ್ದರು. ನಟಿ ಅಪರ್ಣ ಬಾಲಮುರಳಿ ತಮ್ಮ ಸಹಜ ಅಭಿನಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ.

ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ರಾಷ್ಟ್ರಪ್ರಶಸ್ತಿ ವಿಜೇತ ನಟಿ

ನಟಿ ಅಪರ್ಣ ಬಾಲಮುರಳಿ ಸೂರರೈ ಪೊಟ್ರು ಚಿತ್ರದಲ್ಲಿ ನಟ ಸೂರ್ಯ ಅವರ ಪತ್ನಿಯಾಗಿ ನಟಿಸಿದ್ದರು. ಸೂರರೈ ಪೊಟ್ರು ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧಾರಿತ ಸಿನಿಮಾವಾಗಿದೆ. ಈ ಸಿನಿಮಾದ ಅಭಿನಯದ ಮೂಲಕ ಅಪರ್ಣ ಸಿನಿರಸಿಕರ ಹೃದಯ ಗೆದ್ದಿದ್ದರು.

ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ರಾಷ್ಟ್ರಪ್ರಶಸ್ತಿ ವಿಜೇತ ನಟಿ

ಈ ಸಿನಿಮಾ ಮೂಲಕ ಅಪರ್ಣ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದರು. ಕೇರಳ ಮೂಲದ ಈ ನಟಿ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ನಟಿ ಅಪರ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದೆ. ಉತ್ತರಮ್, ಆಕಾಶಂ, ಪದ್ಮಿನಿ, ಕಾಪ ಸೇರಿದಂತೆ ಆನೇಕ ಸಿನಿಮಾಗಳು ಅವರ ಕೈಯಲಿದೆ.

ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ರಾಷ್ಟ್ರಪ್ರಶಸ್ತಿ ವಿಜೇತ ನಟಿ

ನಟಿ ಅಪರ್ಣ ಬಾಲಮುರಳಿ ಅವರು ಖರೀದಿಸಿದ ಹೊಸ ಮರ್ಸಿಡಿಸ್ ಬೆಂಝ್ ಎಎಂಜಿ ಜಿಎಲ್ಎ 35 ಕಾರಿನ ಬಗ್ಗೆ ಹೇಳುವುದಾದರೆ, ಇದು ಭಾರತದಲ್ಲಿ ನಿರ್ಮಾಣಗೊಂಡ ಕಾರು ಮಾದರಿಯಾಗಿದೆ. ಈ ಹಿಂದೆ ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಗಳಿಂದಲೇ ಆಮದು ಮಾಡಿಕೊಳ್ಳುತ್ತಿದ್ದ ಮರ್ಸಿಡಿಸ್ ಬೆಂಝ್ ಕಂಪನಿಯು ಇದೀಗ ಭಾರತದಲ್ಲೇ ಪ್ರಮುಖ ಕಾರುಗಳ ಅಸೆಂಬ್ಲಿ ಪ್ರಕ್ರಿಯೆ ಕೈಗೊಳುತ್ತಿದೆ.

ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ರಾಷ್ಟ್ರಪ್ರಶಸ್ತಿ ವಿಜೇತ ನಟಿ

ಈ ಐಷಾರಾಮಿ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಹಲವು ಹೊಸ ಫೀಚರ್ಸ್ ಮತ್ತು ಉನ್ನತೀಕರಿಸಲಾದ ಕ್ಯಾಬಿನ್ ಸ್ಪೆಸ್ ಸೌಲಭ್ಯದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ಈ ಆವೃತ್ತಿಯು ಇದರ ಹಿಂದಿನ ಮಾದರಿಗಿಂತ 30 ಎಂಎಂ ಹೆಚ್ಚುವರಿ ಉದ್ದಳತೆ ಮತ್ತು 104 ಎಂಎಂ ಕಡಿಮೆ ಎತ್ತರ ಹೊಂದಿದೆ.

ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ರಾಷ್ಟ್ರಪ್ರಶಸ್ತಿ ವಿಜೇತ ನಟಿ

ಈ ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ನವೀಕರಿಸಲಾದ ಗ್ರಿಲ್ ವಿನ್ಯಾಸ, ಮರುವಿನ್ಯಾಸಗೊಳಿಸಲಾದ ಬಂಪರ್, ದೊಡ್ಡ ಗಾತ್ರದ 19-ಇಂಚಿನ ಅಲಾಯ್ ವೀಲ್ಹ್, ಆಕ್ರಮಣಕಾರಿಯಾಗಿರುವ ಟ್ವಿನ್ ಎಕ್ಸಾಸ್ಟ್, ಆಕರ್ಷಕವಾಗಿರುವ ಎಎಂಜಿ ಬ್ಯಾಡ್ಜ್ ಸೇರಿದಂತೆ ಹಲವಾರು ಉನ್ನತೀಕರಿಸಿದ ಐಷಾರಾಮಿ ಫೀಚರ್ಸ್ ಹೊಂದಿದೆ.

ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ರಾಷ್ಟ್ರಪ್ರಶಸ್ತಿ ವಿಜೇತ ನಟಿ

ಮರ್ಸಿಡಿಸ್ ಬೆಂಝ್ ಜಿಎಲ್ಎ 35 ಕಾರಿನಲ್ಲಿ 1.3-ಲೀಟರ್ ಟರ್ಬೊ ಪೆಟ್ರೋಲ್, 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.0-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ 1.3-ಲೀಟರ್ ಪೆಟ್ರೋಲ್ ಎಂಜಿನ್ 161 ಬಿಎಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ರಾಷ್ಟ್ರಪ್ರಶಸ್ತಿ ವಿಜೇತ ನಟಿ

ಈ ಎಂಜಿನ್ ಅನ್ನು 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಈ ಕಾರು 8.7 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ಸ್ಪಿಡ್‌ ಪಡೆದುಕೊಳ್ಳುತ್ತದೆ. ಇನ್ನು 2.0-ಲೀಟರ್ ಟರ್ಬೊ ಡೀಸೆಲ್ ಮಾದರಿಯು 8-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ನೊಂದಿಗೆ 189 ಬಿಎಚ್‌ಪಿ ಮತ್ತು 400 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 7.3 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ಸ್ಪಿಡ್ ಅನ್ನು ಪಡೆದುಕೊಳ್ಳುತ್ತದೆ.

ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ರಾಷ್ಟ್ರಪ್ರಶಸ್ತಿ ವಿಜೇತ ನಟಿ

ಇನ್ನು 200ಡಿ ಎಎಂಜಿ ಆವೃತ್ತಿಗಳಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡುತ್ತಿದ್ದು, ಟಾಪ್ ಎಂಡ್ ಮಾದರಿಯಲ್ಲಿ ನೀಡಲಾಗಿರುವ 2.0-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯು 8-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ನೊಂದಿಗೆ 304-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನಲ್ಲಿ ಕಾರಿನಲ್ಲಿ 'ಮಿ ಕನೆಕ್ಟ್' ಕಾರ್ ಕೆನೆಕ್ಟ್ ಟೆಕ್ನಾಲಜಿ ಮೂಲಕ ಗರಿಷ್ಠ ಸೇಫ್ಟಿ ಫೀಚರ್ಸ್‌ಗಳನ್ನು ಹೆಚ್ಚಿಸಿದ್ದು, ವಾಯ್ಸ್ ಅಸಿಸ್ಟ್ ಮತ್ತು ಗೂಗಲ್ ಹೋಂ ಸೌಲಭ್ಯಗಳು ಕಾರು ಪ್ರಯಾಣವನ್ನು ಮತ್ತಷ್ಟು ಸುಲಭ ಮತ್ತು ಸುರಕ್ಷಿತಗೊಳಿಸುತ್ತವೆ.

ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ರಾಷ್ಟ್ರಪ್ರಶಸ್ತಿ ವಿಜೇತ ನಟಿ

ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಎರಡನೇ ಎಲೆಕ್ಟ್ರಿಕ್ ಕಾರನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ತನ್ನ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಸೆಡಾನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹೊಸ ಮರ್ಸಿಡಿಸ್-ಎಎಂಜಿ ಇಕ್ಯೂಎಸ್ 53 4ಮ್ಯಾಟಿಕ್+ ಎಲೆಕ್ಟ್ರಿಕ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ಆರಂಭಿಕ ಬೆಲೆಯು ರೂ.2.45 ಕೋಟಿಯಾಗಿದೆ.

Most Read Articles

Kannada
English summary
National award winner actress aparna balamurali buys mercedes benz amg gla 35 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X