ಈ ನಿಯಮ ಜಾರಿಗೆ ಬಂದ್ರೆ ಪಾದಾಚಾರಿಗಳನ್ನು ದೇವ್ರೇ ಕಾಪಾಡಬೇಕು!!

ಇನ್ನು ಮುಂದೆ ಪಾದಾಚಾರಿಗಳಿಗೆ ಮತ್ತು ಸೈಕಲ್ ಸವಾರರಿಗೆ ಭಾರತದ ಹೆದ್ದಾರಿ ಮತ್ತು ಮುಖ್ಯ ರಸ್ತೆಗಳಲ್ಲಿ ಪ್ರವೇಶ ಮಾಡದಿರುವಂತೆ ನಿರ್ಬಂಧ ಹೇರಲು ತೀರ್ಮಾನಿಸಲಾಗಿದೆ.

By Girish

ಪಾರ್ಲಿಮೆಂಟರಿ ಸ್ಟಾಂಡ್ ಸಮಿತಿಯು ನೀಡಿರುವ ವರದಿ ಪ್ರಕಾರ ಇನ್ನು ಮುಂದೆ ಹೆದ್ದಾರಿ ಮತ್ತು ಮುಖ್ಯ ರಸ್ತೆಗಳಲ್ಲಿ ಪಾದಾಚಾರಿಗಳಿಗೆ ಮತ್ತು ಸೈಕಲ್ ಸವಾರರಿಗೆ ಪ್ರವೇಶ ಮಾಡದಿರಲು ಸೂಚಿಸಿದೆ.

ಈ ನಿಯಮ ಜಾರಿಗೆ ಬಂದ್ರೆ ಪಾದಾಚಾರಿಗಳನ್ನು ದೇವ್ರೇ ಕಾಪಾಡಬೇಕು!!

ಮೋಟಾರ್ ವಾಹನಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಬದಲಾವಣೆ ತರುವ ನಿಟ್ಟಿನಲ್ಲಿ ಸರ್ಕಾರ ರಚಿಸಿದ ಸಮೀತಿಯಲ್ಲಿ ಈ ರೀತಿಯ ಸಲಹೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ನಿಯಮ ಜಾರಿಗೆ ತರಲು ಈಗಾಗಲೇ ಚಿಂತನೆ ನೆಡೆಸಿದೆ.

ಈ ನಿಯಮ ಜಾರಿಗೆ ಬಂದ್ರೆ ಪಾದಾಚಾರಿಗಳನ್ನು ದೇವ್ರೇ ಕಾಪಾಡಬೇಕು!!

2016 ಮೋಟಾರ್ ಕಾಯ್ದೆಯ ಪ್ರಕಾರ ಸರ್ಕಾರ ಸಲಹೆ ಸೂಚನೆ ಪಡೆದುಕೊಳ್ಳುವ ಸಲುವಾಗಿ ಈ ಪಾರ್ಲಿಮೆಂಟರಿ ಸ್ಟಾಂಡ್ ಸಮಿತಿ ರಚನೆ ಮಾಡಿತ್ತು.

ಈ ನಿಯಮ ಜಾರಿಗೆ ಬಂದ್ರೆ ಪಾದಾಚಾರಿಗಳನ್ನು ದೇವ್ರೇ ಕಾಪಾಡಬೇಕು!!

ಮೋಟಾರ್ ಹೊಂದಿಲ್ಲದೆ ಇರುವ ಸಂಚಾರಿ ಸಾಧನಗಳಿಗೆ ಈ ನಿರ್ಬಂಧ ಹೇರಲಾಗುವುದು ಎನ್ನಲಾಗಿದ್ದು, ಸರ್ಕಾರ ಈ ನಿಯಮವನ್ನು ಜಾರಿಗೆ ತರುವ ಸಂಭವವಿದೆ ಎನ್ನಲಾಗಿದೆ.

ಈ ನಿಯಮ ಜಾರಿಗೆ ಬಂದ್ರೆ ಪಾದಾಚಾರಿಗಳನ್ನು ದೇವ್ರೇ ಕಾಪಾಡಬೇಕು!!

ಜನರು ರಸ್ತೆ ಮಧ್ಯೆ ಹಾದು ಹೋಗುವ ಸಂದರ್ಭದಲ್ಲಿ ಅತಿ ಹೆಚ್ಚು ಸಾವು ನೋವುಗಳು ಸಂಭವಿಸುತ್ತಿರುವ ಕಾರಣ ಈ ನಿರ್ಧಾರಕ್ಕೆ ಸಮೀತಿ ಬಂದಿದೆ.

ಈ ನಿಯಮ ಜಾರಿಗೆ ಬಂದ್ರೆ ಪಾದಾಚಾರಿಗಳನ್ನು ದೇವ್ರೇ ಕಾಪಾಡಬೇಕು!!

ಸಮೀತಿಯ 243 ನಿಯಮದ ಪ್ರಕಾರ ಪಾದಚಾರಿಗಳು ಅತಿ ಹೆಚ್ಚು ನಿಧಾನಗತಿಯಲ್ಲಿ ಸಂಚಾರ ಮಾಡುವವರಾಗಿದ್ದು, ಇದರಿಂದಾಗಿ ಅತಿ ವೇಗದ ವಾಹನಗಳಿಗೆ ಸಿಲುಕಿ ಸಾವನ್ನಪ್ಪುವ ಸಂಭವಗಳು ಹೆಚ್ಚಿಗೆ ಇರುವ ಕಾರಣ ಈ ನಿರ್ಣಯಕ್ಕೆ ಬರಲಾಗಿದೆ.

ಈ ನಿಯಮ ಜಾರಿಗೆ ಬಂದ್ರೆ ಪಾದಾಚಾರಿಗಳನ್ನು ದೇವ್ರೇ ಕಾಪಾಡಬೇಕು!!

ಈ ನಿಯಮಗಳನ್ನು ಮೀರಿ ಪಾದಾಚಾರಿಗಳು ಮುಖ್ಯ ರಸ್ತೆ ಅಥವಾ ಹೆದ್ದಾರಿಗಳಲ್ಲಿ ಹೋದಲ್ಲಿ ದಂಡ ಕಟ್ಟಬೇಕು ಅಥವಾ ಶಿಕ್ಷೆಗೆ ಗುರಿಪಡಿಸಬೇಕು ಎಂಬ ನಿಯಮ ತರಬೇಕು ಎಂದು ಸಮೀತಿ ಒತ್ತಾಯಿಸಿದೆ.

ಈ ನಿಯಮ ಜಾರಿಗೆ ಬಂದ್ರೆ ಪಾದಾಚಾರಿಗಳನ್ನು ದೇವ್ರೇ ಕಾಪಾಡಬೇಕು!!

ಪಾದಾಚಾರಿಗಳ ಮತ್ತು ಸೈಕಲ್ ಸವಾರರ ಪರ ಸಾಮಾಜಿಕ ಕಾರ್ಯಕರ್ತರು ಈಗಾಗಲೇ ಬ್ಯಾಟ್ ಬೀಸಿದ್ದು, ಸಮೀತಿ ನೀಡಿರುವ ವರದಿ ಅವೈಜ್ಞಾನಿಕ ಎಂದಿದ್ದಾರೆ.

ಈ ನಿಯಮ ಜಾರಿಗೆ ಬಂದ್ರೆ ಪಾದಾಚಾರಿಗಳನ್ನು ದೇವ್ರೇ ಕಾಪಾಡಬೇಕು!!

ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ಕಡಿಮೆ ಮಾಡಿ ಮೋಟಾರ್ ಇಲ್ಲದ ಸಂಚಾರಿ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುವ ಬದಲು, ಪಾದಾಚಾರಿಗಳಿಗೆ ಮತ್ತು ಸೈಕಲ್ ಸವಾರರಿಗೆ ಕೊಡಲಿ ಏಟು ಇಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರೆಶ್ನಿಸಿದ್ದಾರೆ.

ಈ ನಿಯಮ ಜಾರಿಗೆ ಬಂದ್ರೆ ಪಾದಾಚಾರಿಗಳನ್ನು ದೇವ್ರೇ ಕಾಪಾಡಬೇಕು!!

ಈ ವರದಿ ಅತ್ಯಂತ ಅವೈಜ್ಞಾನಿಕವಾಗಿದ್ದು, ಸರ್ಕಾರ ಈ ಬಿಲ್ ಅನುಷ್ಠಾನಕ್ಕೆ ತಂದರೆ ಹೆಚ್ಚು ಜನರಿಗೆ ತೊಂದರೆಯಾಗಲಿದ್ದು, ಈ ಬಿಲ್ ವಿರೋಧಿಸಿ ನಾವು ಉಗ್ರ ಪ್ರತಿಭಟನೆ ನೆಡೆಸಲಿದ್ದೇವೆ ಎಂದಿದ್ದಾರೆ.

ಈ ನಿಯಮ ಜಾರಿಗೆ ಬಂದ್ರೆ ಪಾದಾಚಾರಿಗಳನ್ನು ದೇವ್ರೇ ಕಾಪಾಡಬೇಕು!!

ಎಲ್ಲಾ ಹೆದ್ದಾರಿಗಳಲ್ಲಿ ಸೈಕಲ್ ಸವಾರರಿಗೆ ಮತ್ತು ಪಾದಚಾರಿಗಳಿಗೆ ಪ್ರತ್ಯೇಕ ರಸ್ತೆ ಅಥವಾ ಫುಟ್‌ಪಾತ್ ಇಲ್ಲದೆ ಇರುವುದು ಈ ನಿಯಮ ಜಾರಿಗೆ ತರುವುದಕ್ಕೆ ದೊಡ್ಡ ಮಟ್ಟದ ಹಿನ್ನಡೆ ಉಂಟು ಮಾಡಿದೆ ಎನ್ನಲಾಗಿದೆ.

ಈ ನಿಯಮ ಜಾರಿಗೆ ಬಂದ್ರೆ ಪಾದಾಚಾರಿಗಳನ್ನು ದೇವ್ರೇ ಕಾಪಾಡಬೇಕು!!

ಇಷ್ಟೆಲ್ಲಾ ತೊಂದರೆಗಳ ನಡುವೆ ಸರ್ಕಾರಕ್ಕೆ ಪಾರ್ಲಿಮೆಂಟರಿ ಸ್ಟಾಂಡ್ ಸಮಿತಿಯು ಸಲ್ಲಿಸಿರುವ ಈ ಕಾಯ್ದೆ ಕಾರ್ಯರೂಪಕ್ಕೆ ಬಂದರೆ ಹೆಚ್ಚಿನ ಜನಕ್ಕೆ ತೊಂದರೆಯಾಗುವುದಂತೂ ಖಂಡಿತ.

Most Read Articles

Kannada
English summary
The Parliamentary Standing Committee on Transport has proposed a strange recommendation to ban pedestrians and cyclists from main roads in cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X