ಕೇಂದ್ರದ ಆದೇಶದಂತೆ ಟೋಲ್ ಸಿಬ್ಬಂದಿ ಇನ್ಮುಂದೆ ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು....

ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಇದೀಗ ಮಹತ್ವದ ಆದೇಶವೊಂದನ್ನು ಜಾರಿಗೆ ತಂದಿದ್ದು, ಸಿಬ್ಬಂದಿಗಳಿಗೆ ಹೊಸ ಆದೇಶವನ್ನು ಕಡ್ಡಾಯವಾಗಿ ಪಾಲಿಬೇಕೆಂಬ ಸೂಚನೆ ನೀಡಿದೆ.

By Praveen

ಕಳೆದ ಒಂದು ವರ್ಷದ ಅವಧಿಯಲ್ಲಿ ಟೋಲ್ ಬೂತ್‌ಗಳನ್ನು ಉನ್ನತಿಕರಿಸುವ ನಿಟ್ಟಿನಲ್ಲಿ ಹಲವು ಮಾರ್ಪಾಡುಗಳನ್ನು ತಂದಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಇದೀಗ ಮಹತ್ವದ ಆದೇಶವೊಂದನ್ನು ಜಾರಿಗೆ ತಂದಿದ್ದು, ಸಿಬ್ಬಂದಿಗಳಿಗೆ ಹೊಸ ಆದೇಶವನ್ನು ಕಡ್ಡಾಯವಾಗಿ ಪಾಲಿಬೇಕೆಂಬ ಸೂಚನೆ ನೀಡಿದೆ.

ಟೋಲ್ ಸಿಬ್ಬಂದಿ ಇನ್ಮುಂದೆ ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು....

ಗಡಿಯಲ್ಲಿ ದೇಶದ ಭದ್ರತೆಗಾಗಿ ಶತ್ರುಗಳ ಜೊತೆ ಸದಾ ಕಾಲ ಹೋರಾಡುವ ನಮ್ಮ ಸೈನಿಕರು ರಾಷ್ಟ್ರದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಸೈನಿಕರ ಕಾರ್ಯವನ್ನು ಸ್ಮರಿಸುವ ಉದ್ದೇಶದೊಂದಿಗೆ ಟೊಲ್ ಬೂತ್‌ಗಳಲ್ಲಿ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.

ಟೋಲ್ ಸಿಬ್ಬಂದಿ ಇನ್ಮುಂದೆ ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು....

ಹೊಸ ನಿಯಮ ಪ್ರಕಾರ ಟೋಲ್ ಬೂತ್‌ಗಳಲ್ಲಿ ಹಾಯ್ದು ಹೋಗುವ ಸೇನಾಪಡೆಗಳ ವಾಹನಗಳಿಗೆ ಸಿಬ್ಬಂದಿಯು ವಿಶೇಷ ಗೌರವ ನೀಡುವುದಲ್ಲದೇ ಹಿರಿಯ ಸೇನಾಧಿಕಾರಿಗಳಿಗೆ ಎದ್ದು ನಿಂತು ನಮಸ್ಕಿರಿಸುವಂತೆ ಸೂಚಿಸಲಾಗಿದೆ.

Recommended Video

Driverless Auto Rickshaw On Indian Highway
ಟೋಲ್ ಸಿಬ್ಬಂದಿ ಇನ್ಮುಂದೆ ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು....

ಇದಲ್ಲದೇ ಈ ಹಿಂದಿನ ಮಾದರಿಯಲ್ಲೇ ಸೇನಾ ಸಿಬ್ಬಂದಿ ವಾಹನಗಳಿಗೆ ಶುಲ್ಕ ವಿನಾಯ್ತಿಯನ್ನು ಮುಂದುವರಿಸಲಾಗಿದ್ದು, ಕೇಂದ್ರದ ಸಲಹೆಯಂತೆ ದೇಶದ ಭದ್ರತೆಗಾಗಿ ಶ್ರಮವಹಿಸುವ ಸೇನಾಪಡೆಗೆ ಗೌರವಿಸುವ ಉದ್ದೇಶದಿಂದ ಇಂತದೊಂದು ನಿಯಮವನ್ನು ಕಡ್ಡಾಯ ಮಾಡಲಾಗಿದೆ.

ಟೋಲ್ ಸಿಬ್ಬಂದಿ ಇನ್ಮುಂದೆ ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು....

ಈ ಬಗ್ಗೆ ಮಾಹಿತಿ ನೀಡಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರಿವು ದೇಶ ಸೇವೆ ಮಾಡುವ ಸೇನಾಪಡೆಗಳಿಗೆ ಗೌರವ ಸಲ್ಲಿಸಲು ಇದೊಂದು ಅವಕಾಶ. ಹೀಗಾಗಿ ಜಾರಿಗೆ ತಂದಿರುವ ಹೊಸ ಆದೇಶವು ನಾಳೆಯಿಂದಲೇ ಕಡ್ಡಾಯಗೊಳ್ಳಲಿದೆ ಎಂದಿದೆ.

ಟೋಲ್ ಸಿಬ್ಬಂದಿ ಇನ್ಮುಂದೆ ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು....

ಇನ್ನು ಮೂಲಗಳ ಪ್ರಕಾರ ಸೇನಾಪಡೆಗಳಿಗೆ ಟೋಲ್‌ಗಳಲ್ಲಿ ಅಗೌರವ ತೋರಲಾಗುತ್ತಿದೆ ಎಂದು ನೀಡಿರುವ ದೂರ ಹಿನ್ನೆಲೆ ಇಂತದೊಂದು ಕಡ್ಡಾಯ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಟೋಲ್ ಸಿಬ್ಬಂದಿ ಇನ್ಮುಂದೆ ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು....

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಆದ್ರೆ ಅದೇನೇ ಇರಲಿ ದೇಶಕ್ಕಾಗಿ ಪ್ರಾಣ ನೀಡುವ ವೀರಯೋಧರಿಗೆ ಗೌರವಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಮಹತ್ವದ ಆದೇಶವನ್ನು ನೀಡಿದ್ದು, ಸದಾ ಯುದ್ದದ ಸನ್ನಿವೇಶಗಳಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ಸೈನಿಕರಿಗೆ ಗೌರವ ಸಲ್ಲಿಸುತ್ತಿರುವ ಹೆಮ್ಮೆಯ ವಿಚಾರ ಎನ್ನಬಹುದು.

Most Read Articles

Kannada
English summary
Read in Kannada about Salute soldiers when they pass by, NHAI tells toll staff.
Story first published: Friday, December 15, 2017, 19:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X