ಸೀರೆ ಉಟ್ಟ ಮಹಿಳೆಯರ ಯಮಹಾ ಬೈಕ್ ಸವಾರಿ - ವಿಡಿಯೋ ವೈರಲ್

Written By:

ಈ ಕಾಲದಲ್ಲಿ ಹೆಣ್ಣುಮಕ್ಕಳು ಯಾವ ಕ್ಷೇತ್ರದಲ್ಲಿ ಇಲ್ಲ ಹೇಳಿ !! ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಅದರಲ್ಲಿಯೂ ವಾಹನೋದ್ಯಮದಲ್ಲಿ ಬೈಕ್ ಚಲಾಯಿಸುವುದರಿಂದ ಹಿಡಿದ್ದು, ಎಂಜಿನ್ ಅಭಿವೃದ್ಧಿಯ ವರೆಗೆ ತಮ್ಮ ಪ್ರತಿಭೆ ತೋರಿಸಿದ್ದಾರೆ.

To Follow DriveSpark On Facebook, Click The Like Button
ಸೀರೆ ಉಟ್ಟ ಮಹಿಳೆಯರ ಯಮಹಾ ಬೈಕ್ ಸವಾರಿ - ವಿಡಿಯೋ ವೈರಲ್

ಇದಕ್ಕೆ ಪುಷ್ಟಿ ನೀಡುವಂತ ಘಟನೆಯೊಂದು ತೆಲಂಗಾಣದ ಹಾಯತ್‍ನಗರ್‌ನಲ್ಲಿ ನೆಡೆದಿದೆ. ಮಹಿಳೆಯೊಬ್ಬರು, ಇಬ್ಬರು ಹಿಂಬದಿ ಸವಾರರನ್ನು ಕೂರಿಸಿಕೊಂಡು ಯಮಹಾ ಆರ್15 ಬೈಕ್ ಚಲಾಯಿಸಿದ್ದಾರೆ. ಅದರಲ್ಲೂ ಸಾಂಪ್ರದಾಯಿಕ ಸೀರೆಯಲ್ಲಿ ಟ್ರೆಂಡಿ ಸ್ಪೋರ್ಟ್ಸ್ ಬೈಕ್ ಓಡಿಸಿರೋದು ನೋಡುಗರ ಹುಬ್ಬೇರಿಸಿದೆ.

Recommended Video
[Kannada] Bajaj Pulsar NS200 ABS Launched In India - DriveSpark
ಸೀರೆ ಉಟ್ಟ ಮಹಿಳೆಯರ ಯಮಹಾ ಬೈಕ್ ಸವಾರಿ - ವಿಡಿಯೋ ವೈರಲ್

ಮಹಿಳೆಯ ಬೈಕ್ ಹಿಂದೆಯೇ ಬರುತ್ತಿದ್ದ ವ್ಯಕ್ತಿಯೊಬ್ಬರು ಇದನ್ನ ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡ್ತಿರೋದನ್ನ ಕಂಡ ಕೂಡಲೇ ಮಹಿಳೆ ಬೈಕ್ ವೇಗ ಹೆಚ್ಚಿಸಿ ಸ್ವಲ್ಪ ಮುಂದೆ ಹೋಗಿದ್ದಾರೆ.

ಸೀರೆ ಉಟ್ಟ ಮಹಿಳೆಯರ ಯಮಹಾ ಬೈಕ್ ಸವಾರಿ - ವಿಡಿಯೋ ವೈರಲ್

ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ಬೈಕ್‌ ಸವಾರಿ ಮಾಡುತ್ತಿರುವ ಮೂವರು ಮಹಿಳೆಯರು ಹೆಲ್ಮೆಟ್‌ ಧರಿಸಿಲ್ಲದ ಕಾರಣ ಟ್ರಾಫಿಕ್‌ ಪೊಲೀಸರ ಕೆಂಗಣ್ಣಿಗೆ ಗುರಿಯಾಗುವ ಅಪಾಯವಿದೆ.

ಸೀರೆ ಉಟ್ಟ ಮಹಿಳೆಯರ ಯಮಹಾ ಬೈಕ್ ಸವಾರಿ - ವಿಡಿಯೋ ವೈರಲ್

ನಿಯಮದ ಪ್ರಕಾರ ಬೈಕ್‌ನಲ್ಲಿ ಮೂವರು ಪ್ರಯಾಣಿಸುವಂತಿಲ್ಲ ಎನ್ನುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲಿಯೂ ಹೆಲ್ಮೆಟ್ ಹಾಕಿಕೊಳ್ಳದೆ, ಒಂದೇ ಬೈಕ್ ನಲ್ಲಿ ಮೂವರು ರೈಡ್ ಮಾಡಿದ್ದಾರೆ. ಇದಕ್ಕೆ ಪೊಲೀಸರು ಹೇಗೆ ಪ್ರತಿಪ್ರಾಯಿಸುತ್ತಾರೆ ಎನ್ನವುದನ್ನು ಕಾದು ನೋಡಬೇಕಾಗಿದೆ.

ಬೈಕ್ ಓಡಿಸುತ್ತಾ ಇರುವ ಮಹಿಳೆ ಸೀರೆ ಉಟ್ಟಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಹಿಂಬದಿ ಕುಳಿತಿರೋ ಇನ್ನೊಬ್ಬ ಮಹಿಳೆಯೂ ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿದ್ದಾರೆ. ಇನ್ನೂ ಒಂದು ವಿಶೇಷ ಅಂದ್ರೆ ಇವರು ಸವಾರಿ ಮಾಡಿರೋದು ಸ್ಪೋರ್ಟ್ಸ್ ಬೈಕ್‌ನಲ್ಲಿ.

Trending on DriveSpark Kannada :

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

ವಿಡಿಯೋ- ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ಅಪಘಾತದ ಕ್ಷಣಗಳು

ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ

English summary
Three Saree-Clad Women Riding A Sports Bike In Hyderabad. Read in Kannada.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark