ಅಚ್ಚರಿ! ಬೆಲ್ಜಿಯಂ ದಟ್ಟಾರಣ್ಯದಲ್ಲಿ 70 ವರ್ಷಕ್ಕೂ ಹಳೆಯ ಕಾರು ಸ್ಮಶಾನ

By Nagaraja

ಬೆಚ್ಚಿಬೀಳಿಸುವ ಈ ಸುದ್ದಿಯನ್ನು ಓದಿದಾಗ ನಿಮ್ಮ ಮನದಲ್ಲೂ ಖಂಡಿತವಾಗಿಯೂ ಹೆಸರಾಂತ ಸುದ್ದಿ ಮಾಧ್ಯಮದ 'ಹೀಗೂ ಉಂಟೆ' ಎಂಬ ಡೈಲಾಗ್ ನೆನಪಿಗೆ ಬರಲಿದೆ. ಹೌದು, ಇದು ಸಹ ನಡೆದಿರುವ ಸತ್ಯ ಘಟನೆ ಎಂಬುದನ್ನು ನಂಬಲೇಬೇಕಾಗುತ್ತದೆ.

ಇವನ್ನೂ ಓದಿ: ವಿಮಾನಗಳಿಗೆ ಇರುತ್ತಾ ಸ್ಮಶಾನ ?

ಇದನ್ನೂ ಓದಿ: ಭಾರತೀಯ ರೈಲ್ವೆ 40 ಸತ್ಯಗಳು

ವಿಷಯ ಏನೆಂದರೆ, ಬೆಲ್ಜಿಯಂ ದಟ್ಟಾರಣ್ಯದಲ್ಲಿ 70 ವರ್ಷಕ್ಕೂ ಹಳೆಯದಾದ 'ಕಾರು ಸ್ಮಶಾನ'ವೊಂದು ಕಂಡುಬಂದಿದೆ. ಅಷ್ಟಕ್ಕೂ ಇದರ ಹಿಂದಿರುವ ಘೋರ ರಹಸ್ಯವಾದರೂ ಏನು? ಇದೇಗೆ ಸೃಷ್ಟಿಯಾಯಿತು ? ಎಂಬಿತ್ಯಾದಿ ಕುತೂಹಲಕಾರಿ ಮಾಹಿತಿಗಾಗಿ ಮುಂದಕ್ಕೆ ಓದಿರಿ...

ಕಾರು ಸ್ಮಶಾನ

ಕಾರು ಸ್ಮಶಾನ

ಇಹಲೋಕ ತ್ಯಜಿಸಿದವರನ್ನು ನಾವು ಹೇಗೆ 'ರೆಸ್ಟ್ ಇನ್ ಪೀಸ್' ಎಂದು ಸಂಬೋಧಿಸುತ್ತೇವೆಯೋ ಅದೇ ರೀತಿಯಲ್ಲಿ ಈ ಕಾರುಗಳು ಇಲ್ಲಿ ಅನಾಥವಾಗಿ ಬಿದ್ದು ಹೋಗಿವೆ.

ರಹಸ್ಯ ಬಯಲು

ರಹಸ್ಯ ಬಯಲು

ಎರಡನೇ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಅಮೆರಿಕ ಸೈನಿಕರು ಸರಿ ಸುಮಾರು 500ರಷ್ಟು ಕಾರುಗಳನ್ನು ಇಲ್ಲಿ ಒಟ್ಟಾಗಿ ಇಟ್ಟಿದ್ದರು.

ಆಮೇಲೆ ಬಂದೇ ಇಲ್ಲ...

ಆಮೇಲೆ ಬಂದೇ ಇಲ್ಲ...

ಅಲ್ಲಿಂದ ಕಾರುಗಳನ್ನು ತವರೂರಿಗೆ ರವಾನಿಸುವುದು ಕಷ್ಟವೆನಿಸಿದ್ದರಿಂದ ಆಮೇಲೆ ಬಂದು ತೆಗೆದುಕೊಂಡು ಹೋಗೋಣ ಎಂಬುದು ಅವರ ಇರಾದೆಯಾಗಿತ್ತು.

ರೆಸ್ಟ್ ಇನ್ ಪೀಸ್...

ರೆಸ್ಟ್ ಇನ್ ಪೀಸ್...

ಬಳಿಕ ಎಂದೂ ಅವರು ಇಲ್ಲಿಗೆ ಹಿಂತಿರುಗಿ ಬಂದೇ ಇಲ್ಲ. ಪರಿಣಾಮ ಈ ಎಲ್ಲ ಕಾರುಗಳು ಇಲ್ಲಿ ಪಾಲು ಬಿದ್ದು ಹೋಗಿದೆ. ಪ್ರಸ್ತುತ ಸ್ಮಶಾನವೀಗ ಜಗತ್ತಿನ ಬೆಳಕಿಗೆ ಬಂದಿದೆ.

ವಿಂಟೇಜ್ ಕಾರುಗಳು

ವಿಂಟೇಜ್ ಕಾರುಗಳು

ಪ್ರಸ್ತುತ ವಿಂಟೇಜ್ ಅಥವಾ ಹಳೆಯ ಕಾರುಗಳಿಗೆ ಈ ಸ್ಮಶಾನ ಅತ್ಯುತ್ತಮ ಉದಾಹರಣೆಯಾಗಿದೆ. ಬೆಲ್ಜಿಯಂನ ಚಾಟಿಲಾನ್ ( Chatillon) ಪ್ರದೇಶದಲ್ಲಿ ಇದನ್ನು ಬಿಟ್ಟು ಅಮೆರಿಕ ಸೈನಿಕರು ತಮ್ಮ ದೇಶಕ್ಕೆ ಹಿಂತಿರುಗಿದ್ದರು.

ಪ್ರವಾಸ ತಾಣ

ಪ್ರವಾಸ ತಾಣ

ಪ್ರಸ್ತುತ ಪ್ರದೇಶವೀಗ ಬೆಲ್ಜಿಯಂ ಪ್ರವಾಸದ ಕೇಂದ್ರ ಬಿಂದುವಾಗಿ ಮಾರ್ಪಾಟ್ಟಿದೆ. ವಾಹನ ಉತ್ಸಾಹಿಗಳು ಹಳೆಯ ಕಾರುಗಳ ವಿನ್ಯಾಸ ಚಿತ್ತಾರ ನೋಡಲು ಇಲ್ಲಿಗೆ ಹರಿದು ಬರುತ್ತಿದ್ದಾರೆ.

ಅನಾಥ ಶವ...

ಅನಾಥ ಶವ...

ಆದರೆ ಹಲವಾರು ವರ್ಷಗಳಿಂದ ಅನಾಥವಾಗಿ ಬಿದ್ದಿದ್ದುದರಿಂದ ವಾಹನಗಳಲ್ಲಿ ಹುಲ್ಲು, ಗಿಡ, ಪೊದರು ಬೆಳೆದಿದೆ.

ಹಿನ್ನೆಲೆ

ಹಿನ್ನೆಲೆ

70 ವರ್ಷಗಳ ಹಿಂದೆ ಸೈನಿಕರು ಈ ಕಾರುಗಳನ್ನು ಬಿಟ್ಟು ತೆರಳಿದ್ದರು ಎಂದು ಹೇಳಲಾಗುತ್ತಿದೆ. ಇದಕ್ಕೆ ಪುರಾವೆಗಳಿವೆ.

ಪುರಾವೆ

ಪುರಾವೆ

ಇಡೀ ಜಗತ್ತನ್ನೇ ನಡುಗಿಸಿದ್ದ ಎರಡನೇ ಮಹಾಯುದ್ಧದಲ್ಲಿ ಜಯಶಾಲಿಯಾಗಿದ್ದ ಅಮೆರಿಕ, 1947 ಮಾರ್ಚ್ 2ನೇ ದಿನಾಂಕದಂದು ತನ್ನ ಸೈನಿಕ ಪಡೆಯನ್ನು ಬೆಲ್ಜಿಯಂನಿಂದ ಹಿಂಪಡೆದಿತ್ತು.

ಕಳ್ಳತನ

ಕಳ್ಳತನ

ಮಗದೊಂದು ವರದಿಯ ಪ್ರಕಾರ ಈ ಅತಿ ಪುರಾತನ ಬೆಲೆ ಬಾಳುವ ಕಾರುಗಳನ್ನು ಹೇಳುವವರು ಕೇಳುವವರು ಯಾರು ಇಲ್ಲದಿದ್ದುದರಿಂದ ಇಲ್ಲಿದ್ದ ಕೆಲವು ಸ್ಥಳೀಯರು ಹಾಗೂ ಕಾರು ಸಂಗ್ರಹಾಗಾರರು ಕಾರಿನಲ್ಲಿದ್ದ ಉಪಕರಣಗಳನ್ನು ದೋಚಿರುತ್ತಾರೆ.

ನವೀಕರಣ ಕಷ್ಟ

ನವೀಕರಣ ಕಷ್ಟ

ಪ್ರಸ್ತುತ ಕಾರನ್ನು ನವೀಕರಣಗೊಳಿಸುವುದು ಕಷ್ಟದ ಮಾತೆನಿಸಿದ್ದು, ಅಲ್ಲಲ್ಲ ರಿಪೇರಿ ಮಾಡುವ ಸ್ಥಿತಿಯಲ್ಲಿಲ್ಲ ಎಂದು ವ್ಯಾಖ್ಯಾನಿಸುವುದು ಹೆಚ್ಚು ಸೂಕ್ತವೆನಿಸುವುದು.

ಅಚ್ಚರಿ ಅಚ್ಚರಿ

ಅಚ್ಚರಿ ಅಚ್ಚರಿ

ಈಗ ದಟ್ಟವಾಗಿ ಬೆಳೆದಿರುವ ಮರಗಳ ನಡುವೆ ತನ್ನ ಅಸ್ತಿತ್ವಕ್ಕಾಗಿ ಅಳಲನ್ನು ತೋಡಿಕೊಳ್ಳುತ್ತಿದೆ. ಅಂದರೆ ಮತ್ತೆ ಪರಿಸರವನ್ನು ಸೇರಿಕೊಂಡಿದೆ. ಈ ಲೇಖನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿರಿ.

ಹೆಲ್ಮೆಟ್ ಸತ್ಯಾಸತ್ಯತೆ; ಇತಿಹಾಸದತ್ತ ಒಂದು ಪಯಣ

ಹೆಲ್ಮೆಟ್ ಸತ್ಯಾಸತ್ಯತೆ



Most Read Articles

Kannada
English summary
Truth Behind Belgian 'car graveyard'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X