Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬರೋಬ್ಬರಿ 70 ಕೋಟಿ ರೂ.ಗೆ ಹರಾಜಾಗಿದೆ ವಿಶ್ವದ ಅತ್ಯಂತ ದುಬಾರಿ ನಂಬರ್ ಪ್ಲೇಟ್
ತಮ್ಮ ವಾಹನಗಳಿಗೆ ವಿಐಪಿ ನಂಬರ್ ಅಥವಾ ಫ್ಯಾನ್ಸಿ ನಂಬರ್ ಪ್ಲೇಟ್‌ಗಳಿಗಾಗಿ ಜನರು ಲಕ್ಷಗಟ್ಟಲೆ ಖರ್ಚು ಮಾಡುವುದನ್ನು ನೋಡಿರುತ್ತೇವೆ. ಅಂತೆಯೇ ದುಬೈನಲ್ಲಿ ನಡೆದ 'ಮೋಸ್ಟ್ ನೋಬಲ್ ನಂಬರ್ಸ್' ಚಾರಿಟಿ ಹರಾಜಿನಲ್ಲಿ ವಿಶೇಷ ನಂಬರ್ ಪ್ಲೇಟ್ ಸಂಖ್ಯೆಗಳು ಮತ್ತು ವಿಶೇಷ ಮೊಬೈಲ್ ಸಂಖ್ಯೆಗಳನ್ನು ಹರಾಜು ಮಾಡಲಾಯಿತು.

ದುಬೈನ ಈ ಚೊಚ್ಚಲ 'ಮೋಸ್ಟ್ ನೋಬಲ್ ನಂಬರ್ಸ್' ಚಾರಿಟಿ ಹರಾಜಿನಲ್ಲಿ, 3.5 ಮಿಲಿಯನ್ ದಿರ್ಹಮ್ (ಅಂದಾಜು ರೂ.70 ಕೋಟಿ) ಮೊತ್ತಕ್ಕೆ ಮಾರಾಟವಾದ ನಂಬರ್ ಪ್ಲೇಟ್‌ವೊಂದು ವಿಶ್ವದ ಮೂರನೇ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಆಗಿ ಹೊರಹೊಮ್ಮಿದೆ.

ವಿಶೇಷ ವಾಹನದ ನಂಬರ್ ಪ್ಲೇಟ್‌ಗಳು ಮತ್ತು ವಿಶೇಷ ಮೊಬೈಲ್ ಫೋನ್ ಸಂಖ್ಯೆಗಳ ಮೇಲೆ ನಡೆದ ಈ ಬಿಡ್‌ನಲ್ಲಿ ವಿಶ್ವದಲ್ಲಿ ಮಾರಾಟವಾದ ಮೂರನೇ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಸಂಖ್ಯೆಯಾಗಿ AA8 ಏಕ-ಅಂಕಿಯ ಸಂಖ್ಯೆ ದುಬೈ ಹರಾಜಿನಲ್ಲಿ Dh35 ಮಿಲಿಯನ್ (ರೂ. 70 ಕೋಟಿ) ಮೊತ್ತವನ್ನು ಗಳಿಸಿ ದಾಖಲೆಯನ್ನು ನಿರ್ಮಿಸಿದೆ.

ಕಳೆದ ವರ್ಷ AA9 ಎಂಬ ಸಂಖ್ಯೆಯ Dh38 ಮಿಲಿಯನ್ (ರೂ. 79 ಕೋಟಿಗೂ ಹೆಚ್ಚು) ಬೆಲೆಯನ್ನು ಪಡೆದುಕೊಂಡಿತ್ತು. ಕಳೆದ ವರ್ಷದ AA9 ಪ್ಲೇಟ್ ಸಂಖ್ಯೆ 38 ಮಿಲಿಯನ್ ದಿರ್ಹಮ್‌ಗಳ (ರೂ. 79 ಕೋಟಿ) ಬೆಲೆ ಪಡೆದಕೊಂಡ ನಂತರ, AA8 ಏಕ-ಅಂಕಿಯ ಸಂಖ್ಯೆ 35 ಮಿಲಿಯನ್ ದಿರ್ಹಮ್‌ಗಳಿಗೆ (ರೂ. 70 ಕೋಟಿಗೂ ಹೆಚ್ಚು) ಮಾರಾಟವಾಗಿವೆ.

ಬಿಡ್ಡಿಂಗ್ ನಂತರ 1 ಬಿಲಿಯನ್ ಮೈಲ್ ಅಭಿಯಾನಕ್ಕೆ ಬೆಂಬಲವಾಗಿ ಹರಾಜು 53 ಮಿಲಿಯನ್ ದಿರ್ಹಮ್‌ಗಳನ್ನು ಸಂಗ್ರಹಿಸಿದೆ. 50ಕ್ಕೂ ಹೆಚ್ಚು ದೇಶಗಳಲ್ಲಿ ದುರ್ಬಲ ಸಮುದಾಯಗಳಿಗೆ ಆಹಾರವನ್ನು ಒದಗಿಸಲು ಈ ಹಣವನ್ನು ಬಳಸಲಾಗುತ್ತದೆ.

ಅಗತ್ಯವಿರುವವರಿಗೆ ಆಹಾರವನ್ನು ಒದಗಿಸುವ ಒಂದು ಬಿಲಿಯನ್ ಮೀಲ್ಸ್ ಅಭಿಯಾನವನ್ನು ಬೆಂಬಲಿಸಲು 'ಮೋಸ್ಟ್ ನೋಬಲ್ ನಂಬರ್ಸ್' ಚಾರಿಟಿ ಹರಾಜಿನಲ್ಲಿ ಭಾರಿ ದುಬಾರಿ ನಂಬರ್ ಪ್ಲೇಟ್ ಅನ್ನು ಮಾರಾಟ ಮಾಡಲಾಯಿತು.

ಮಾಹಿತಿಯ ಪ್ರಕಾರ, ಈ ಹರಾಜನ್ನು ದುಬೈನಲ್ಲಿ ಎಮಿರೇಟ್ಸ್ ಹರಾಜು ಮತ್ತು ರಸ್ತೆ ಮತ್ತು ಸಾರಿಗೆ ಪ್ರಾಧಿಕಾರ (ಆರ್‌ಟಿಎ) ಆಯೋಜಿಸಿದೆ. ಹರಾಜಿನಲ್ಲಿ ಮಾರಾಟವಾದ ವಸ್ತುಗಳ ಪೈಕಿ ದುಬೈನ ಕಾರ್ ನಂಬರ್ ಪ್ಲೇಟ್ 'ಎಫ್ 55' ಕೂಡ ಸೇರಿದೆ.

ಈ ಕಾರಿನ ನಂಬರ್ ಪ್ಲೇಟ್ ಅನ್ನು 4 ಮಿಲಿಯನ್ ದಿರ್ಹಮ್‌ಗಳಿಗಿಂತ ಹೆಚ್ಚು ಅಂದರೆ ಸುಮಾರು 8.23 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ. ಇದಲ್ಲದೇ ಮತ್ತೊಂದು ಕಾರಿನ ನಂಬರ್ ಪ್ಲೇಟ್ -V66 - ಕೂಡ 4 ಮಿಲಿಯನ್ ಗೆ ಮಾರಾಟವಾಗಿದೆ.

ಇನ್ನೊಂದು ಕಾರಿನ Y66 ಎಂಬ ನಂಬರ್ ಪ್ಲೇಟ್ 3.8 ಮಿಲಿಯನ್ ದಿರ್ಹಮ್‌ಗಳಿಗೆ ಅಂದರೆ 7.91 ಕೋಟಿ ರೂಪಾಯಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದೆ. ಈ ಹರಾಜಿನಲ್ಲಿ ವಿಶ್ವದ ಶ್ರೀಮಂತರು ಪಾಲ್ಗೊಂಡಿದ್ದು, ಬಿಡ್‌ನಲ್ಲಿ ಕೋಟ್ಯಾಂತರ ರೂ.ಗಳ ವ್ಯವಹಾರ ನಡೆದಿದೆ.

ಭಾರತದಲ್ಲೂ ದುಬಾರಿ ಹರಾಜು
ಇನ್ನು ಭಾರತದಲ್ಲಿ ಹರಾಜು ಪ್ರಕ್ರಿಯೆ ವಿಷಯಕ್ಕೆ ಬಂದರೆ, ಚಂಡೀಗಢ ನೋಂದಣಿ ಸಂಖ್ಯೆ ಪರವಾನಗಿ ಪ್ರಾಧಿಕಾರವು ಇತ್ತೀಚೆಗೆ ನಡೆಸಿದ ಹರಾಜಿನಲ್ಲಿ ಚಂಡೀಗಢ ಮೂಲದ ಹೋಂಡಾ ಆಕ್ಟಿವಾದ ಮಾಲೀಕರೊಬ್ಬರು ತಮ್ಮ ಸ್ಕೂಟರ್‌ಗಾಗಿ ಸೂಪರ್ ವಿಐಪಿ '0001' ನಂಬರ್ ಪ್ಲೇಟ್ ಅನ್ನು ಬರೋಬ್ಬರಿ 15 ಲಕ್ಷಕ್ಕೂ ಹೆಚ್ಚು ಹಣ ನೀಡಿ ತಮ್ಮ ಹೆಸರಿಗೆ ನೊಂದಾಯಿಸಿಕೊಂಡಿದ್ದರು.

ಚಂಡೀಗಢ ನೋಂದಣಿ ಮತ್ತು ಪರವಾನಗಿ ಪ್ರಾಧಿಕಾರವು ಈ ಹರಾಜಿನಲ್ಲಿ 1.5 ಕೋಟಿ ರೂ.ಗೆ 378 ಸೊಗಸಾದ ನೋಂದಣಿ ಸಂಖ್ಯೆಗಳನ್ನು ಹರಾಜು ಮಾಡಿತ್ತು. 'CH01-CJ-0001' ಅನ್ನು ರೂ. 5,00,000 ಆರಂಭಿಕ ಬೆಲೆಗೆ ಹರಾಜು ಮಾಡಲಾಯಿತು. ಈ ನಂಬರ್ ಪ್ಲೇಟ್ ಅನ್ನು ಜಾಹೀರಾತು ಏಜೆನ್ಸಿ ನಡೆಸುತ್ತಿರುವ ಬ್ರಿಜ್ ಮೋಹನ್ ಎಂಬುವವರಿಗೆ 15.44 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ.

ಶ್ರೀ ಬ್ರಿಜ್ ಮೋಹನ್ ಅವರು ಈ ನಂಬರ್ ಪ್ಲೇಟ್ ಅನ್ನು ತಮ್ಮ ಭವಿಷ್ಯದ ವಾಹನಕ್ಕಾಗಿ ಕಾಯ್ದಿರಿಸಲು ಖರೀದಿಸಿದ್ದಾರೆ, ಅವರು 2022ರ ದೀಪಾವಳಿ ವೇಳೆಗೆ ಹೊಸ ಕಾರನ್ನು ಖರೀದಿಸಲು ಯೋಜಿಸಿದ್ದಾರೆ. ಸದ್ಯ ಈ ಸಂಖ್ಯೆಯು ಅವರ ಹೋಂಡಾ ಆಕ್ಟಿವಾಗೆ ಸೇರಿದ್ದು, ಮುಂದಿನ ದಿನಗಳಲ್ಲಿ ಅವರ ಹೊಸ ಕಾರಿಗೆ ಸೇರಿಸಲಾಗುತ್ತದೆ.

ಚಂಡೀಗಢದಲ್ಲಿ ಏ.14ರಿಂದ 16ರವರೆಗೆ ನಡೆದ ಫ್ಯಾನ್ಸಿ ನಂಬರ್‌ಗಳ ಹರಾಜಿನಲ್ಲಿ 4.4 ಲಕ್ಷ ರೂ.ನಿಂದ ಗರಿಷ್ಠ 30 ಲಕ್ಷ ರೂ.ವರೆಗೂ ನೋಂದಣಿ ಸಂಖ್ಯೆಗಳು ಹರಾಜಾಗಿವೆ. ಹೊಸ ಸರಣಿಯ CH-01-CJ ಗಾಗಿ ಫ್ಯಾನ್ಸಿ ಸಂಖ್ಯೆಗಳ ಹರಾಜು, ಉಳಿದ ಸಂಖ್ಯೆಗಳೊಂದಿಗೆ ಏಪ್ರಿಲ್ 14 ರಿಂದ ಏಪ್ರಿಲ್ 16, 2022 ರವರೆಗೆ ನಡೆಸಲಾಯಿತು.

ನೋಂದಣಿ ಮತ್ತು ಪರವಾನಗಿ ಪ್ರಾಧಿಕಾರವು ಸುಮಾರು 378 ನೋಂದಣಿ ಸಂಖ್ಯೆಗಳನ್ನು ಹರಾಜು ಮಾಡಿದೆ ಎಂದು ವರದಿಯಾಗಿದೆ. ಇದು ಒಟ್ಟು ರೂ.1.5 ಕೋಟಿ ಗಳಿಸಿತು. ಅತ್ಯಂತ ದುಬಾರಿ ನಂಬರ್ ಅನ್ನು ಬ್ರಿಜ್ ಮೋಹನ್ ಖರೀದಿಸಿದರೆ, ಇತರ ದುಬಾರಿ ಫ್ಯಾನ್ಸಿ ನಂಬರ್‌ಗಳಲ್ಲಿ CH-01- CJ-007 ಮತ್ತು CH-01-CJ-003 ಸೇರಿದೆ, ಇವೆರಡೂ ರೂ.4.4 ಲಕ್ಷ ಮತ್ತು ರೂ.4.2 ಲಕ್ಷ ಮೌಲ್ಯವನ್ನು ಪಡೆದುಕೊಂಡವು.