ದಂತೆರಾಸ್ ಹಬ್ಬದ ಎಫೆಕ್ಟ್; ಹೀರೊ 1 ಲಕ್ಷ ಸೇಲ್!

Posted By:

ದೇಶದಲ್ಲಿ ಹೀರೊಗೆ ಸರಿಸಾಟಿ ಹೀರೊ ಮಾತ್ರ ಎಂಬುದನ್ನು ನಿಶ್ಚಿಂತತೆಯಿಂದ ಹೇಳಬಹುದು. ಯಾಕೆಂದರೆ ಈ ಹಬ್ಬದ ಸೀಸನ್ ಜೋರಾಗಿರುವಂತೆಯೇ ದ್ವಿಚಕ್ರ ವಾಹನ ಮಾರಾಟ ಪ್ರಕ್ರಿಯೆ ಸಹ ಗಗನಕ್ಕೇರಿದೆ. ದಶಕಗಳಿಂದಲೂ ತಮ್ಮ ಬ್ರಾಂಡ್ ಉಳಿಸಿಕೊಂಡು ಬಂದಿರುವ ಹೀರೊ ಮೊಟೊಕಾರ್ಪ್, ಐದು ದಿನಗಳ ಪರ್ಯಂತ ಸಾಗಲಿರುವ ದೀಪಾವಳಿ ಹಬ್ಬದ ಮೊದಲ ದಿನವಾದ 'ದಂತೆರಾಸ್' ದಿನದಲ್ಲಿ ಒಂದು ಲಕ್ಷ ಮಾರಾಟ ಗಿಟ್ಟಿಸುವ ಮೂಲಕ ನೂತನ ದಾಖಲೆ ಬರೆದಿದೆ.

ಆಟೋ ಮೊಬೈಲ್ ರಂಗದಲ್ಲಿ ಇದೇ ಮೊದಲ ಬಾರಿಗೆ ದಿನವೊಂದರಲ್ಲೇ ಇಷ್ಟೊಂದು ಸಂಖ್ಯೆಯ ಮಾರಾಟ ಪ್ರಕ್ರಿಯೆ ಕಂಡುಬಂದಿದೆ. ಹೀರೊ ಬ್ರಾಂಡ್‌ಗಳಾದ ಸ್ಪೆಂಡರ್, ಫ್ಯಾಷನ್, ಮ್ಯಾಸ್ಟ್ರೋ ಹಾಗೂ ಪ್ಲೆಷರ್ ಸ್ಕೂಟರ್‌ಗಳಿಗೆ ಭಾರಿ ಬೇಡಿಕೆ ಕಂಡುಬಂದಿರುವುದು ಇಂತಹದೊಂದು ದಾಖಲೆಗೆ ಕಾರಣವಾಗಿದೆ. ಇತ್ತೀಚೆಗಷ್ಟೇ ಲಾಂಚ್ ಆಗಿರುವ ಇಗ್ನಿಟರ್ ಹಾಗೂ ಹಂಕ್ ಎಕ್ಸ್‌‍ಟ್ರೀಮ್‌ಗೂ ಕೂಡಾ ಭಾರಿ ಬೇಡಿಕೆ ಕಂಡುಬಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಅಧಿಪತ್ಯ ಮುಂದುವರಿಸಿರುವ ಹೀರೊ ಮೊಟೊಕಾರ್ಪ್‌ನ ಅತಿ ನಿಷ್ಠೆಯ ಮಾದರಿ ಸ್ಪೆಂಡರ್ ದಂತೆರಾಸ್ ಹಬ್ಬದ ದಿನದಲ್ಲಿ 40,000 ಯುನಿಟ್ ಮಾರಾಟವಾಗಿವೆ. ಈ ಮೂಲಕ ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಸವಾರಿ ಮಾಡಿದ್ದ ಹೀರೊ ನವೆಂಬರ್ ತಿಂಗಳಲ್ಲೂ ಭಾರಿ ಏರಿಕೆ ಕಂಡುಬರುವ ನಿರೀಕ್ಷೆಯಿದೆ. ಅಕ್ಟೋಬರ್ ತಿಂಗಳಲ್ಲಿ ಸ್ಪೆಂಡರ್ ಆವೃತ್ತಿ 1.8 ಲಕ್ಷ ಮಾರಾಟವಾಗಿದ್ದವು.

ಹೀರೊ ದಾಖಲೆಯ ಸೇಲ್

ಹೀರೊದ ಜನಪ್ರಿಯ ಸ್ಪೆಂಡರ್ ಆವೃತ್ತಿಗೆ ಭಾರಿ ಡಿಮ್ಯಾಂಡ್

ಹೀರೊ ದಾಖಲೆಯ ಸೇಲ್

ಇತ್ತೀಚೆಗಷ್ಟೇ ಲಾಂಚ್ ಆದ ಇಗ್ನಿಟರ್‌ಗೂ ಉತ್ತಮ ಬೇಡಿಕೆ

ಹೀರೊ ದಾಖಲೆಯ ಸೇಲ್

ಹಬ್ಬದ ಸೀಸನ್‌ನಲ್ಲಿ ಹೆಚ್ಚಿದ ಬೇಡಿಕೆ

ಹೀರೊ ದಾಖಲೆಯ ಸೇಲ್

ಹೀರೊ ಈ ಹಬ್ಬದ ಸೀಸನ್‌ನಲ್ಲಿ ನವನವೀನ ಪ್ಯಾಷನ್ ಎಕ್ಸ್-ಪ್ರೊ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಹೀರೊ ದಾಖಲೆಯ ಸೇಲ್

ಹೀರೊ ಫ್ಯಾಷನ್ ಏಕ್ಸ್-ಪ್ರೊ ಒಂದು ಜಲಕ್!

English summary
Hero MotoCorp, India's leading two wheeler manufacturer had an auspicious Dhanteras and Diwali indeed. The company has managed to sell as many as one lakh units of two wheelers on the auspicious day of Dhanteras. This is probably the highest ever sales for a two wheeler company on a single day.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark