ನಿರೀಕ್ಷಿಸಿ: ಹೊಸ ಕವಾಸಕಿ ನಿಂಜಾ 250ಆರ್ ಬೈಕ್

Posted By:
To Follow DriveSpark On Facebook, Click The Like Button
ದೇಶದ ರಸ್ತೆಗೆ ಕೆಲವು ವರ್ಷಗಳ ಹಿಂದೆ ಆಗಮಿಸಿದ್ದ ಕವಾಸಕಿ ನಿಂಜಾ 250ಆರ್ ಬೈಕಿನ ಪರಿಷ್ಕೃತ ಆವೃತ್ತಿಯೊಂದು ದೇಶದ ರಸ್ತೆಗಿಳಿಯಲಿದೆ. ಪರಿಷ್ಕೃತ ವಿನ್ಯಾಸ, ವಿಶಾಲಗೊಂಡ ಹಿಂದಿನ ಟೈರ್ ಸೇರಿದಂತೆ ಹತ್ತು ಹಲವು ಹೊಸ ಫೀಚರುಗಳು ಹೊಸ ಕವಾಸಕಿ ನಿಂಜಾ ಬೈಕಿನಲ್ಲಿರಲಿದೆ ಎಂದು ಮೂಲಗಳು ತಿಳಿಸಿವೆ.

ಬರೀ ವಿನ್ಯಾಸ ಮಾತ್ರ ಬದಲಾಗಿ ಬರಲಿದೆ ಎಂದು ಭಾವಿಸಬೇಕಿಲ್ಲ. ಹೊಸ ಡಿಒಎಚ್ ಸಿ ಪ್ಯಾರಾಲೆಲ್ ಟ್ವಿನ್ ಎಂಜಿನ್ ಮತ್ತು ಹೊಸ ಪಿಸ್ಟನ್, ಹೊಸ ಸಿಲಿಂಡರ್ ಇರಲಿದೆಯಂತೆ. ಪರಿಷ್ಕೃತ ಸಸ್ಪೆನ್ಷನ್ ಸೇರಿದಂತೆ ಹಲವು ಅಪ್ ಗ್ರೇಡಿನಿಂದಾಗಿ ನೂತನ ಕವಾಸಕಿ ನಿಂಜಾ ಬೊಂಬಾಟ್ ಆಗಿರಲಿದೆ.

ಈಗಾಗಲೇ ಸಿಬಿಆರ್ ಬೈಕಿನಲ್ಲಿ ಎಬಿಎಸ್ ಇದೆ. ನೂತನ ಕವಾಸಕಿ ನಿಂಜಾ ಕೂಡ ಎಬಿಎಸ್ ನೊಂದಿಗೆ ಆಗಮಿಸಲಿದೆ. ನೂತನ ಎಬಿಎಸ್ ಸಿಸ್ಟಮ್ ಚಿಕ್ಕದಾಗಿದ್ದು, ಅತ್ಯಾಕರ್ಷಕ ಕಾರ್ಯಕ್ಷಮತೆ ಹೊಂದಿರಲಿದೆ ಎಂದು ಕಂಪನಿ ತಿಳಿಸಿದೆ.

ನೂತನ ಕವಾಸಕಿ ನಿಂಜಾ ಬೈಕ್ ದೇಶದ ರಸ್ತೆಗೆ ಮುಂದಿನ ವರ್ಷ ಆಗಮಿಸಲಿದೆ. ಹೆಚ್ಚಿನ ಮಾಹಿತಿಗೆ ಕನ್ನಡ ಡ್ರೈವ್ ಸ್ಪಾರ್ಕ್ ಓದ್ತಾ ಇರಿ!

ಕಳೆದ ವರ್ಷ ರಸ್ತೆಗಿಳಿದ ನಿಂಜಾ ಮಾಹಿತಿ

ಎಂಜಿನ್: 4 ಸ್ಟ್ರೋಕ್, ಲಿಕ್ವಿಡ್ ಕೂಲ್ಡ್, ಡಿಒಎಚ್ಸಿ, ನಾಲ್ಕು ಕವಾಟ

ಗೇರ್: 6 ಸ್ಪೀಡ್ ಟ್ರಾನ್ಸ್ ಮಿಷನ್

ಇಂಧನ ಸಂಗ್ರಹ ಸಾಮರ್ಥ್ಯ: 4.1 ಗ್ಯಾಲನ್ (ಸುಮಾರು 18 ಲೀಟರ್ ನಷ್ಟು)

ಟ್ರಿಪಲ್ ಪೆಡಲ್ ಡಿಸ್ಕ್ ಬ್ರೇಕ್.

ದೆಹಲಿ ಎಕ್ಸ್ ಶೋರೂಂ ದರ: 4.57 ಲಕ್ಷ ರು.

English summary
New Kawasaki Ninja 250R will launch India by 2014. New Ninja 250R will gets a new parallel twin DOHC engine with new crankcase and pistons.
Story first published: Monday, August 6, 2012, 10:40 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark