ವ್ಯಕ್ತಿತ್ವ, ಸಾಮರ್ಥ್ಯ, ಆಕರ್ಷತೆ: ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 500

ರಾಯನ್ ಎನ್‌ಫೀಲ್ಡ್‌ನಿಂದ ಬಹು ನಿರೀಕ್ಷಿತ ಥಂಡರ್‌ಬರ್ಡ್ ಬುಲೆಟ್ ಇದೀಗ ಬೆಂಗಳೂರಿನಲ್ಲೂ ಬಿಡುಗಡೆಯಾಗಿದ್ದು, 500 ಸಿಸಿ ಹಾಗೂ 350 ಸಿಸಿಗಳಲ್ಲಿ ಲಭ್ಯವಾಗಲಿದೆ. ಹೆದ್ದಾರಿ ಪಯಣಕ್ಕೆ ಹೊಸ ವ್ಯಾಖ್ಯಾನವಾಗಿರುವ ಥಂಡರ್‌ಬರ್ಡ್ 500ಸಿಸಿ ಬುಲೆಟ್‌ಗೆ ಯುನಿಟ್ ಕನ್‌ಸ್ಟ್ರಕ್ಷನ್‌ನ ಬಿಎಚ್‌ಪಿ ಸಾಮರ್ಥ್ಯದ ಎಂಜಿನ್‌ಗೆ ವಿದ್ಯುನ್ಮಾನ ಇಂಧನ ಪೂರೈಕೆ ವ್ಯವಸ್ಥೆಯನ್ನು ಆಳವಡಿಸಲಾಗಿದ್ದು, ಶಕ್ತಿಯ ಪೂರ್ಣ ಸದುಪಯೋಗ ಪಡೆಯಲು 41.3 ಎನ್‌ಎಂ ಟಾರ್ಕ್ ಆಳವಡಿಸಲಾಗಿದೆ.

ದರ ಮಾಹಿತಿ (ಬೆಂಗಳೂರು ಆನ್‌ ರೋಡ್)

  • ಥಂಡರ್‌ಬರ್ಡ್ 500 ಸಿಸಿ ದರ: 1,86,622 ಲಕ್ಷ ರು.
  • ಥಂಡರ್‌ಬರ್ಡ್ 350 ಸಿಸಿ ದರ: 1,46,466 ಲಕ್ಷ ರು.

ಬೆಂಗಳೂರಿನಲ್ಲಿ ಥಂಡರ್‌ಬರ್ಡ್ 500 ಬಿಡುಗಡೆಯ ವೇಳೆ ಮಾತನಾಡಿದ ರಾಯಲ್ ಎನ್‌ಫೀಲ್ಡ್ ಸಿಇಒ ಡಾ. ವೆಂಕಿ ಪದ್ಮನಾಭನ್, 2002ರಲ್ಲಿ ಥಂಡರ್‌ಬರ್ಡ್ ಬಿಡುಗಡೆ ಮಾಡಿದಾಗ, ಭಾರತೀಯ ರಸ್ತೆಗಳಲ್ಲಿಯೇ ಇದು ವಿಭಿನ್ನವಾದ ಬೈಕ್ ಆಗಿ ಗಮನ ಸೆಳೆದಿತ್ತು. ಇಂದು, ಎಲ್ಲ ಕೋನದಲ್ಲಿಯೂ ಆಕರ್ಷಕತೆ ಉಳಿಸಿಕೊಂಡಿರುವ ಥಂಡರ್‌ಬರ್ಡ್ 500 ಬಿಡುಗಡೆಯೊಂದಿಗೆ ಮೋಟಾರ್ ಸೈಕಲ್ ಚಾಲನೆಯ ಅನುಭವವನ್ನು ಮನ್ನಷ್ಟು ಉತ್ತಮಗೊಳಿಸಲಿದೆ. ಥಂಡರ್‌ಬರ್ಡ್ 500 ಗ್ರಾಹಕರಿಗೆ ಹೆಚ್ಚಿನ ಸಾಮರ್ಥ್ಯ, ಅನುಕೂಲ, ಆಕರ್ಷಕತೆಯನ್ನು ನೀಡಲಿದೆ. ಪೂರ್ಣ ರಾಯಲ್ ಎನ್‌ಫೀಲ್ಡ್ ವ್ಯಾಪ್ತಿಯು ಹೆದ್ದಾರಿಯ ಸಂಚಾರಕ್ಕೆ ಹೊಸ ಅನುಭವ ನೀಡಲಿದೆ. ಇದರ ಜೊತೆಗೆ ಇಂದು ನಾವು ಥಂಡರ್‌ಬರ್ಡ್ 350 ಅನ್ನೂ ಅದೇ ವಿನ್ಯಾಸದೊಂದಿಗೆ ಬಿಡುಗಡೆ ಮಾಡುತ್ತಿದ್ದೇವೆ ಎಂದರು.

ರಾಯಲ್ ಎನ್‌ಫೀಲ್ಡ್ ಈ ಮೂಲಕ ವಿಶ್ವದಲ್ಲಿಯೇ ಸಾಂಪ್ರಾದಾಯಿಕವಾಗಿ ಉತ್ತಮಗೊಳಿಸಿದ ಬೈಕ್‌ಗಳನ್ನು ಬಿಡುಗಡೆ ಮಾಡುವಲ್ಲಿ ತನ್ನದೆ ಆದ ನಿಲುವು ಹೊಂದಿದೆ. ಹೆದ್ದಾರಿ ಸಂಚಾರಕ್ಕೆ ಅಗತ್ಯಗಳಿಗೆ ಪೂರಕವಾಗಿ ವಿನ್ಯಾಸಗೊಳಿಸಿದ್ದು, ದೀರ್ಘ ಅಂತರದ ಪ್ರಯಾಣಕ್ಕೆ ಅನುವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಆಕರ್ಷಕ ನೋಟ, ಅತ್ಯುತ್ತಮ ಬ್ರೇಕಿಂಗ್, ರಾತ್ರಿ ಪ್ರಯಾಣ, ಲಗ್ಗೇಜ್ ಒಯ್ಯುವುದು, ಬಟ್ಟೆ ಮತ್ತಿತ್ತರ ವಸ್ತುಗಳನ್ನು ಒಯ್ಯಲು ಪೂರಕವಾಗುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.

ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಕಲರ್

ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಕಲರ್

ಥಂಡರ್‌ಬರ್ಡ್ 500 ಅನ್ನು ಎಲ್ಲ ಕೋನದಿಂದಲೂ ಆಕರ್ಷಕವಾಗಿ ಇರುವಂತೆ ರೂಪಿಸಲಾಗಿದ್ದು, ಬೈಕ್ ಗಮನಸೆಳೆಯಲಿದೆ. ಪೂರ್ಣ ಬ್ಲಾಕ್ ಥೀಮ್‌ನ ಥಂಡರ್‌ಬರ್ಡ್ 500 ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯ. ಫ್ಲಿಕ್ಕರ್ ಬ್ಲಾಕ್, ಬ್ಲಾಕೆಸ್ಟ್ ಆಫ್ ಬ್ಲಾಕ್ ಮತ್ತು ನೀಲಿ-ಕಪ್ಪು ಬಣ್ಣದ ಸಂಗವಾದ ಟ್ವೈಲೈಟ್ ಸೇರಿದೆ. ಕಪ್ಪು ಬಣ್ಣದ ಎಂಜಿನ್‌ಗೆ ಕಪ್ಪು ವರ್ಣದ ಕ್ರೋಮ್‌ನ ಲೇಪನವಿದ್ದು, ಮಿನುಗಲಿದೆ.

ಥಂಡರ್‌ಬರ್ಡ್ ಸಂಚಾರ ಸುಗಮ

ಥಂಡರ್‌ಬರ್ಡ್ ಸಂಚಾರ ಸುಗಮ

ಈ ಬೈಕ್ ವಿಶೇಷವಾದ ಎಲ್‌ಇಡಿ ರಿಂಗ್ ಆಧಾರಿತ ಹೆಡ್‌ಲ್ಯಾಂಪ್ ಮತ್ತು ಹಿಂಭಾಗದಲ್ಲಿಯೂ ಎಲ್‌ಇಡಿ ಲೈಟ್ ಇದೆ. ಸಮಾನ ಸಾಮರ್ಥ್ಯದ ಲೋ ಮತ್ತು ಹೈ ಭೀಮ್‌ನ ದೀಪಗಳು ರಾತ್ರಿ ಸಮಯದಲ್ಲಿ ಸಂಚಾರವನ್ನು ಸುಗಮಗೊಳಿಸಲಿದೆ. ಅದರ ಜೊತೆಗೆ ಟ್ಯಾಂಕ್‌ನ ಸಾಮರ್ಥ್ಯ 20 ಲೀಟರ್ ಆಗಿದ್ದು, ಆಗಿದ್ದಾಗ್ಗೆ ಪೆಟ್ರೋಲ್ ತುಂಬಿಸಲು ನಿಲ್ಲಿಸುವ ಅಗತ್ಯವಿರುದುವುದಿಲ್ಲ. ಒಮ್ಮೆ ತುಂಬಿಸಿದರೆ 500ಕ್ಕೂ ಹೆಚ್ಚು ಕಿ.ಮೀ. ಸಂಚರಿಸಬಹುದಾಗಿದೆ.

ಥಂಡರ್‌ಬರ್ಡ್ ವಿನ್ಯಾಸ

ಥಂಡರ್‌ಬರ್ಡ್ ವಿನ್ಯಾಸ

ಥಂಡರ್‌ಬರ್ಡ್ 500 ತನ್ನ ಕಾರ್ಯಸಾಧನೆಗೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ, ಸೀಟ್ ಅನ್ನು ಕಾಲು ಆರಾಮವಾಗಿ ಇರಿಸಿ ಕೊಳ್ಳುವಂತೆ ಪೂರಕವಾಗಿ ರೂಪಿಸಲಾಗಿದೆ. ಬದಿಯಲ್ಲಿ ಹೊಂದಿಸಿಕೊಳ್ಳಬಹುದಾದಂತೆ ವಿನ್ಯಾಸಗೊಳಿಸಲಾಗಿದೆ.

ಪ್ರವಾಸಿ ಸ್ನೇಹಿ ಥಂಡರ್‌ಬರ್ಡ್

ಪ್ರವಾಸಿ ಸ್ನೇಹಿ ಥಂಡರ್‌ಬರ್ಡ್

ಪ್ರವಾಸಿ ಸ್ನೇಹಿಯಾಗಿ ರೂಪಿಸುವುದಕ್ಕೆ ಒತ್ತು ನೀಡಿದ್ದು, ಲಗ್ಗೇಜ್ ಇಡಲು ಅನುಕೂಲವಾಗುವಂತೆ ಹಿಂಭಾಗದ ಸೀಟ್ ತೆಗೆಯಲು ಅವಕಾಶವಿದೆ. ಎತ್ತರಿಸಿದ ಹ್ಯಾಂಡಲ್‌ಬಾರ್ ಅನ್ನು ಸುಗಮವಾಗಿ ಕೂರುವಂತೆ ರೂಪಿಸಲಾಗಿದೆ. ಹೆಚ್ಚಿನ ಲಗ್ಗೇಜ್ ಇಡಲು ಆಗುವಂತೆ ಬಂಗೀ ಲಾಕ್‌ಗಳು ಒಳಗೊಂಡಿದೆ. ನವವಿನ್ಯಾಸ ಕನ್ನಡಿಯು ಆಕರ್ಷಕ ರಾಯಲ್ ಎನ್‌ಫೀಲ್ಡ್ ಲಾಂಛನವನ್ನು ಹೊಂದಿದೆ.

ಥಂಡರ್‌ಬರ್ಡ್ ಲಾಂಛನ

ಥಂಡರ್‌ಬರ್ಡ್ ಲಾಂಛನ

ಮುಂಭಾಗದ ವಿನ್ಯಾಸ ಬದಲಿಸಿದ್ದು, 41 ಎಂಎಂನ ಗಟ್ಟಿಯಾದ ಪೋರ್ಕ್ ಆಳವಡಿಸಿದ್ದು, ಎರಡೂ ಬದಿಯಲ್ಲಿ ಥಂಡರ್‌ಬರ್ಡ್ 500 ಲಾಂಛನವಿದೆ. ನೀಲಿ ಬಣ್ಣದ ಬ್ಯಾಕ್‌ಲೈಟ್ ಇರುವ ಡಿಜಿಟಲ್ ಟ್ರಿಪ್ ಮೀಟರ್ ಇದ್ದು, ಪ್ರಯಾಣದ ಅಂತರ, ಒಟ್ಟು ಮೈಲೇಜ್‌ನ ದಾಖಲೆ ಪಡೆಯಬಹುದು. ವೇಗ ಮತ್ತು ಎಂಜಿನ್‌ನ ಆರ್‌ಪಿಎಂ ಅನಲಾಗ್ ಗಡಿಯಾರದ ಮಾದರಿಯಲ್ಲಿ ರೂಪಿಸಲಾಗಿದೆ.

ಥಂಡರ್‌ಬರ್ಡ್ ಸುರಕ್ಷೆತೆಗೆ ಹೆಚ್ಚು ಒತ್ತು

ಥಂಡರ್‌ಬರ್ಡ್ ಸುರಕ್ಷೆತೆಗೆ ಹೆಚ್ಚು ಒತ್ತು

ಹೆದ್ದಾರಿಯ ಪ್ರಯಾಣದಲ್ಲಿ ಸುರಕ್ಷತೆಯನ್ನು ಕಡೆಗಣಿಸಲು ಆಗುವುದಿಲ್ಲ. ಥಂಡರ್‌ಬರ್ಡ್ 500ನಲ್ಲಿ ಬೈಕ್ ಸವಾರ ಮತ್ತು ಬೈಕ್‌ನ ಸುರಕ್ಷತೆಗೆ ಒತ್ತು ನೀಡಲಾಗಿದೆ. ಮುಖ್ಯ ಲಾಕ್, ಕೇಂದ್ರೀಯ ಸ್ಟೀರಿಂಗ್ ಲಾಕ್ ಆಗಿಯೂ ಕಾರ್ಯ ನಿರ್ವಹಿಸಲಿದೆ. ಹಜಾರ್ಡ್ ದೀಪ ಮತ್ತು ಸ್ವಿಚ್ ಗೇರ್ ಅನ್ನು ಇದೇ ಮೊದಲ ಬಾರಿಗೆ ಭಾರತದಲ್ಲಿ ಆಳವಡಿಸಲಾಗಿದೆ. ಹೆಚ್ಚುವರಿಯಾಗಿ ಡಿಸ್ಕ್ ಬ್ರೇಕ್ ಇದ್ದು ಹಠಾತ್ತಾಗಿ ವಾಹನವನ್ನು ನಿಲ್ಲಿಸಲು ಅನುಕೂಲಕರ.

ಥಂಡರ್‌ಬರ್ಡ್ 350 ಸಿಸಿ

ಥಂಡರ್‌ಬರ್ಡ್ 350 ಸಿಸಿ

ಥಂಡರ್‌ಬರ್ಡ್ 500 ಜೊತೆಗೆ ರಾಯಲ್ ಎನ್‌ಫೀಲ್ಡ್ ಹೊಸ ಥಂಡರ್‌ಬರ್ಡ್ 350 ಸಿಸಿ ಅನ್ನೂ ಬಿಡುಗಡೆ ಮಾಡಿದೆ. ಥಂಡರ್‌ಬರ್ಡ್ 500ರ ತತ್ವಗಳಇಗೆ ಆಧಾರವಾಗಿಯೇ ಇದನ್ನೂ ರೂಪಿಸಲಾಗಿದೆ. ಥಂಡರ್‌ಬರ್ಡ್ 350 ಕೂಡಾ ಫ್ಲಿಕ್ಕರ್ ಕಪ್ಪು ಮತ್ತು ಟ್ವೈಲೈಟ್ ವರ್ಣದಲ್ಲಿ ಲಭ್ಯವಿದೆ. ಥಂಡರ್‌ಬರ್ಡ್ 500ರ ಎಲ್ಲ ಲಕ್ಷಣ, ಅನುಕೂಲಗಳನ್ನು ಒಳಗೊಂಡಿದ್ದು, 20 ಲೀಟರ್‌ನ ಸಾಮರ್ಥ್ಯದೊಂದಿಗೆ 600ಕ್ಕೂ ಹೆಚ್ಚು ಕೀ. ಮೀ ಸಂಚರಿಸುವ ಅವಕಾಶವಿದೆ.

Most Read Articles

Kannada
English summary
Chennai-based two-wheeler manufacturer Royal Enfield on Thursday launched a new Thunderbird model in two variants 500 cc and 350 cc at bangalore. The new Thunderbird, are priced at Rs 1,86,622 (on road bangalore for the 500 cc) and Rs 1,46,466 (on road bangalore for the 350 cc).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X