ಹೀರೋ ಕಾರ್ಮಿಕರ ವೇತನ ಹೆಚ್ಚಳದ ಮಾತುಕತೆ ವಿಫಲ

ಸತೀಶ್ ಬಿ - ನವದೆಹಲಿ

ದೇಶದ ಅಗ್ರಗಣ್ಯ ದ್ವಿಚಕ್ರ ವಾಹನ ಉತ್ಪಾದಕ ಸಂಸ್ಥೆಯಾದ ಹೀರೋ ಮೊಟೋಕಾರ್ಪ್(ಹೀರೋ ಹೋಂಡಾ)ನ ಗುರ್‌ಗಾಂವ್ ಘಟಕದಲ್ಲಿ ವೇತನ ಹೆಚ್ಚಳಕ್ಕೆ ಸಂಬಂಧಿಸಿ ಕಳೆದ 6 ತಿಂಗಳಿಂದ ಕಾರ್ಮಿಕ ಸಂಘಟನೆ ಹಾಗು ಸಂಸ್ಥೆಯ ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ.

1200 ಜನ ಕಾರ್ಮಿಕರಿರುವ ಗುರ್‌ಗಾಂವ್ ಘಟಕದಲ್ಲಿ ದಿನನಿತ್ಯ 7000 ದ್ವಿಚಕ್ರ ವಾಹನಗಳನ್ನು ತಯಾರಿಸಲಾಗುತ್ತಿದ್ದು, ಸಂಸ್ಥೆಯು 6500/- ರೂಗಳನ್ನು 3 ವರ್ಷಗಳಿಗೆ ನೀಡಬಯಸುತ್ತಿದೆ. ಆದರೆ ರಾಷ್ಟ್ರ ರಾಜಧಾನಿಯ ಸಮೀಪವಿರುವ ಕಾರಣ ಜನಜೀವನದ ಖರ್ಚುವೆಚ್ಚ ಹಾಗು ವಿಪರೀತ ಬೆಲೆಯೇರಿಕೆಯಿಂದ ಕಾರ್ಮಿಕ ಸಂಘಟನೆ 15000 ರಿಂದ 18000ರೂಗಳ ಬೇಡಿಕೆಯಿಟ್ಟಿದ್ದಾರೆ.

ದೇಶದ ಪ್ರತಿಷ್ಠಿತ ಕಾರು ಉತ್ಪಾದಕ ಸಂಸ್ಥೆ ಮಾರುತಿ ತನ್ನ ಕಾರ್ಮಿಕರಿಗೆ 20,000ರೂಗಳನ್ನು ನೀಡಲಾಗಿದೆ. ಹಾಗೆಯೇ ಹೋಂಡಾ ಮೋಟರ್‌ಸೈಕಲ್ ಮತ್ತು ಸ್ಕೂಟರ್ ದ್ವಿಚಕ್ರ ವಾಹನ ಸಂಸ್ಥೆಯು ತನ್ನ ಕಾರ್ಮಿಕರಿಗೆ 14,700ರೂಗಳನ್ನು ಮೂರು ವರ್ಷಗಳಿಗೆ ಹೆಚ್ಚಳ ಮಾಡಲಾಗಿದೆ.

ಹೀರೋ ಕಳೆದ ವರ್ಷ ಜಪಾನಿನ ಹೋಂಡಾ ಸಂಸ್ಥೆಯಿಂದ 27 ವರ್ಷಗಳ ಭಾಂದವ್ಯದಿಂದ ಹೊರಬಂದಿದೆ. ವಿಶ್ವದಲ್ಲೇ ಅತಿಹೆಚ್ಚು ದ್ವಿಚಕ್ರ ವಾಹನ ಉತ್ಪಾದಿಸುವ ಕಂಪನಿ ಎಂಬ ಹೆಗ್ಗಳಿಕೆಯಿದೆ.

ಕಾರ್ಮಿಕರು ಒಂದು ತಿಂಗಳಿಂದ ತಮ್ಮ ಕೈಗಳಿಗೆ ಕಪ್ಪುಪಟ್ಟಿ ಧರಿಸಿ, ಸಂಸ್ಥೆ ನೀಡುವ ಟೀ ಮತ್ತು ತಿಂಡಿಯನ್ನು ಬಹಿಷ್ಕರಿಸಿದ್ದಾರೆ, ಉತ್ಪಾದನೆಗೆ ಯಾವುದೇ ರೀತಿಯ ತೊಂದರೆ ಮಾಡದೆ ಶಾಂತ ರೀತಿಯಿಂದ ಪ್ರತಿಭಟಿಸುತ್ತಿದ್ದು, ಗಾಂಧಿಗಿರಿಗೆ ಮೊರೆಹೋಗಿದ್ದಾರೆ.

ಹೀರೋ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕಾಗಿ ರಾಜಸ್ಥಾನದಲ್ಲಿ ನಾಲ್ಕನೇ ಘಟಕ ಮತ್ತು ಗುಜರಾತ್‌ನಲ್ಲಿ ಐದನೇ ಘಟಕ, ವಿಶ್ವಪ್ರಸಿದ್ದ R & D ಘಟಕವನ್ನು 2575 ಕೋಟಿಗಳ ಅಂದಾಜು ವೆಚ್ಚದಿಂದ ಪ್ರಾರಂಭಿಸಲಾಗುವುದೆಂದು ಹೇಳಿಕೊಂಡಿದೆ. ಪ್ರಸಕ್ತ ವರ್ಷಕ್ಕೆ 70 ಲಕ್ಷ ದ್ವಿಚಕ್ರ ವಾಹನಗಳನ್ನು ಉತ್ಪಾದಿಸಲಾಗುತ್ತಿದ್ದು, 2014-2015ರ ವೇಳೆಗೆ ವರ್ಷಕ್ಕೆ ಒಂದು ಕೋಟಿ ವಾಹನಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ.

Most Read Articles

Kannada
English summary
Hero MotoCorp's workers at its plants in Gurgaon, Haryana are demanding increased wages and are on silent protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X