ಹೊಸ ಹೊಸ ಬಣ್ಣಗಳಲ್ಲಿ ಬುಲೆಟ್ ರಾಜ ಎನ್‌ಫೀಲ್ಡ್

Written By:

ನೂತನ ಲೊಗೊ, ಕ್ರೆಸ್ಟ್, ಮೊನೊಗ್ರಾಂ ಹಾಗೂ ಬ್ಯಾಡ್ಜ್ ಪರಿಚಯಿಸಿರುವ ಬೆನ್ನಲ್ಲೇ ದೇಶದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ರಾಯಲ್ ಎನ್‌ಫೀಲ್ಡ್, ತನ್ನ ಜನಪ್ರಿಯ ಬುಲೆಟ್ ಆವೃತ್ತಿಗಳನ್ನು ಹೊಸ ಹೊಸ ಬಣ್ಣಗಳಲ್ಲಿ ಪರಿಚಯಿಸಿದೆ.

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500, ಕ್ಲಾಸಿಕ್ 350, ಥಂಡರ್‌ಬರ್ಡ್ 500, ಥಂಡರ್‌ಬರ್ಡ್ 350, ಬುಲೆಟ್ 500 ಹಾಗೂ ಬುಲೆಟ್ ಎಲೆಕ್ಟ್ರಾ ಹೊಸ ಬಣ್ಣಗಳಲ್ಲಿ ಲಭ್ಯವಾಗಲಿದೆ.

Royal Enfield

ನೂತನ ಕ್ಲಾಸಿಕ್ 500, ಕ್ಲಾಸಿಕ್ ಟ್ಯಾನ್ ಪಡೆದುಕೊಂಡರೆ ಕ್ಲಾಸಿಕ್ 350, ಲಾಗೂನ್ ಹಾಗೂ ಆಶ್, ಕಪ್ಪು ಹಾಗೂ ಬೆಳ್ಳಿ ಬಣ್ಣಗಳನ್ನು ಪಡೆದುಕೊಂಡಿದೆ. ಹಾಗೆಯೇ ಥಂಡರ್ ಬರ್ಡ್ 500 ಹಾಗೂ ಥಂಡರ್‌ಬರ್ಡ್ 350 ಮರೈನ್ ಹಾಗೂ ಸ್ಟೋನ್ ಬಣ್ಣಗಳಲ್ಲಿ ಲಭ್ಯವಾಗಲಿದೆ.

ಹಾಗಿದ್ದರೂ ಮೇಲೆ ಸೂಚಿಸಲಾದ ಬೈಕ್‌ಗಳ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

Story first published: Friday, May 16, 2014, 15:05 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark