ಬೆಂಗಳೂರಿನಲ್ಲೂ ಹಿಂಬದಿ ಸವಾರನಿಗೂ ಹೆಲ್ಮೆಟ್ ಕಡ್ಡಾಯ?

By Nagaraja

ಸಾರ್ವಜನಿಕ ಹಿತದೃಷ್ಟಿ ಹಾಗೂ ರಸ್ತೆ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅತಿ ಶೀಘ್ರದಲ್ಲೇ ಬೆಂಗಳೂರು ನಗರದಲ್ಲೂ ದ್ವಿಚಕ್ರದಲ್ಲಿ ಸಂಚರಿಸುವ ಹಿಂಬದಿ ಸವಾರನಿಗೂ ಹೆಲ್ಮೆಟ್ ಬಳಕೆ ಕಡ್ಡಾಯವಾಗುವ ಸಾಧ್ಯತೆಯಿದೆ.

ದೇಶದ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಈ ಸಂಬಂಧ ಸಾರಿಗೆ ಇಲಾಖೆಯು ರಾಜ್ಯ ಸರಕಾರದ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿದೆ. ಒಮ್ಮೆ ರಾಜ್ಯ ಸರಕಾರದ ಅನುಮತಿ ದೊರಕಿದ ಬಳಿಕ ನಗರದೆಲ್ಲೆಡೆ ನೂತನ ನಿಯಮ ಜಾರಿಗೆ ಬರಲಿದೆ.

ಬೆಂಗಳೂರಿನಲ್ಲಿ ಹಿಂಬದಿ ಸವಾರನಿಗೂ ಹೆಲ್ಮೆಟ್ ಕಡ್ಡಾಯ

ಸಹ ಸವಾರನೂ ಹೆಲ್ಮೆಟ್ ಧರಿಸುವ ಮೂಲಕ ಅಪಘಾತದ ವೇಳೆಯಲ್ಲಿ ತಲೆಗೆ ಪೆಟ್ಟಾಗುವ ಪರಿಣಾಮವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬಹುದಾಗಿದೆ. ಪ್ರಸ್ತುತ ದ್ವಿಚಕ್ರ ಸವಾರ ಸಂಚಾರದ ವೇಳೆ ಶಿರಸ್ತ್ರಾಣ ಧರಿಸುವುದು ಕಡ್ಡಾಯವಾಗಿದೆ.

ಬಲ್ಲ ಮೂಲಗಳ ಪ್ರಕಾರ ನಗರದಲ್ಲಿ 39 ಲಕ್ಷಗಳಷ್ಟು ದ್ವಿಚಕ್ರ ವಾಹನ ಸವಾರರಿದ್ದಾರೆ. ಅಂದರೆ ಬೆಂಗಳೂರಿನಲ್ಲಿ ವಾಹನ ದಾಖಲಾತಿಯ ಶೇಕಡಾ 70ರಷ್ಟಾಗಿದೆ.

ಹಿಂಬದಿ ಸವಾರನೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದಕ್ಕೆ ಈಗಾಗಲೇ ಪರ-ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಯಾವನೇ ಒಬ್ಬ ಸವಾರ ತನ್ನ ಮಿತ್ರನಿಗೆ ಡ್ರಾಪ್ ನೀಡಬೇಕಾದ್ದಲ್ಲಿ ತನ್ನ ಜೊತೆ ಬೈಕ್‌ನಲ್ಲಿ ಹೆಚ್ಚುವರಿ ಹೆಲ್ಮೆಟ್ ಇಟ್ಟುಕೊಳ್ಳಬೇಕಾಗುತ್ತದೆ.

ಅಂದ ಹಾಗೆ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಿಂಬದಿ ಸವಾರನಿಗೂ ಹೆಲ್ಮೆಟ್ ಧರಿಸಬೇಕು ಎಂಬ ನಿಯಮ ಜಾರಿಯಲ್ಲಿದೆ. ಈಗ ಬೆಂಗಳೂರಿನಲ್ಲೂ ಈ ನಿಯಮ ಕಡ್ಡಾಯಗೊಳಿಸುವುದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್‌ನಲ್ಲಿ ಉಲ್ಲೇಖಿಸಲು ಮರೆಯದಿರಿ.

Most Read Articles

Kannada
English summary
Helmets to be made mandatory for pillion riders in Bengaluru
Story first published: Thursday, June 11, 2015, 12:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X