ಮತ್ತಷ್ಟು ಆಕರ್ಷಕ ಬಣ್ಣದೊಂದಿಗೆ ಬರುತ್ತಿದೆ ಮೊಜೊ

Written By:

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಟು ವೀಲರ್ಸ್ ಕೆಲವು ಸಮಯಗಳ ಹಿಂದೆಯಷ್ಟೇ ಮೊಜೊ ಅತ್ಯಾಕರ್ಷಕ ಕ್ರೀಡಾ ಬೈಕ್ ಬಿಡುಗಡೆಗೊಳಿಸಿತ್ತು. ಈಗ ಮೊಜೊ ಬೈಕನ್ನು ಮತ್ತಷ್ಟು ತಾಜಾತನ ಕಾಪಾಡಿಕೊಳ್ಳಲು ಮುಂದಾಗಿರುವ ಮಹೀಂದ್ರ, ಕ್ರಿಮ್ಸನ್ ಮ್ಯಾಟ್ ಬಣ್ಣದ ಆವೃತ್ತಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ನೂತನ ಮೊಜೊ ಬೈಕ್ ಕಡುಕೆಂಪು ಮ್ಯಾಟ್ ಬಣ್ಣದೊಂದಿಗೆ ಕಡು ಕಪ್ಪು ಬಣ್ಣದ ಮಿಶ್ರಣವನ್ನು ಪಡೆಯಲಿದೆ. ಇದಕ್ಕೂ ಮೊದಲು 2016 ಆಟೋ ಎಕ್ಸ್ ಪೋದಲ್ಲಿ ವಿವಿಧ ವರ್ಣಗಳ ಮೊಜೊ ಆವೃತ್ತಿಗಳನ್ನು ಪರಿಚಯಿಸಿತ್ತು.

ಮತ್ತಷ್ಟು ಆಕರ್ಷಕ ಬಣ್ಣದೊಂದಿಗೆ ಬರುತ್ತಿದೆ ಮೊಜೊ

ಪ್ರಸ್ತುತ ಮೂರು ಆಕರ್ಷಕ ಬಣ್ಣಗಳಲ್ಲಿ ಮಹೀಂದ್ರ ಮೊಜೊ ಲಭ್ಯವಿದೆ. ಅವುಗಳೆಂದರೆ ರೇಸಿಂಗ್ ರೆಡ್, ವೈಟ್ ಮತ್ತು ಬ್ಲ್ಯಾಕ್ ಬಣ್ಣಗಳಾಗಿದೆ. ಈಗ ನೂತನ ಬಣ್ಣವು ಮತ್ತಷ್ಟು ತಾಜಾತನವನ್ನು ತುಂಬಲಿದೆ.

ಮತ್ತಷ್ಟು ಆಕರ್ಷಕ ಬಣ್ಣದೊಂದಿಗೆ ಬರುತ್ತಿದೆ ಮೊಜೊ

295 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಮಹಿಂದ್ರ ಮೊಜೊ, 30 ಎನ್ ಎಂ ತಿರುಗುಬಲದಲ್ಲಿ 26.83 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಆರು ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆಯಲಿದೆ.

ಮತ್ತಷ್ಟು ಆಕರ್ಷಕ ಬಣ್ಣದೊಂದಿಗೆ ಬರುತ್ತಿದೆ ಮೊಜೊ

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಮೊಜೊಗೆ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ. ಹಾಗಿದ್ದರೂ ಹೋಂಡಾ ಸಿಬಿಆರ್250ಆರ್, ಕೆಟಿಎಂ390 ಡ್ಯೂಕ್ ಮತ್ತು ರಾಯಲ್ ಎನ್ ಫೀಲ್ಡ್ 350 ಶ್ರೇಣಿಯ ಮಾದರಿಗಳಿಂದ ಸ್ಪರ್ಧೆಯನ್ನು ಎದುರಿಸುತ್ತಿದೆ.

ಮತ್ತಷ್ಟು ಆಕರ್ಷಕ ಬಣ್ಣದೊಂದಿಗೆ ಬರುತ್ತಿದೆ ಮೊಜೊ

ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಅನಲಾಗ್ ಟ್ಯಾಕೋಮೀಟರ್, ಟ್ವಿನ್ ಪೊಡ್ ಹೆಡ್ ಲೈಟ್, ಐಬ್ರೋ ಶೈಲಿಯ ಎಲ್ ಇಡಿ ಗೈಡ್ ಲ್ಯಾಂಪ್, ಟ್ವಿನ್ ಎಕ್ಸಾಸ್ಟ್ ಸಿಸ್ಟಂ, ಪೈರಲ್ಲಿ ಚಕ್ರಗಳು, ಯುಎಸ್ ಡಿ ಫಾರ್ಕ್ ಮುಂತಾದ ವ್ಯವಸ್ಥೆಗಳನ್ನು ಪಡೆಯಲಿದೆ.

ಆಯಾಮ

ಆಯಾಮ

ಉದ್ದ: 2100 ಎಂಎಂ

ಅಗಲ: 800 ಎಂಎಂ

ಎತ್ತರ: 1165.5 ಎಂಎಂ

ಸೀಟು ಎತ್ತರ: 814.5 ಎಂಎಂ

ಎಕ್ಸ್ ಶೋ ರೂಂ ಬೆಲೆ

ಎಕ್ಸ್ ಶೋ ರೂಂ ಬೆಲೆ

ದೆಹಲಿ: 1,63,000 ರು.

ಮುಂಬೈ: 1,65,500 ರು.

ಪುಣೆ: 1,65,500 ರು.

ಬೆಂಗಳೂರು: 1,68,500 ರು.

English summary
Mahindra Mojo Crimson Matte Colour Launching Soon
Story first published: Saturday, May 28, 2016, 16:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark