ದೇಶದ ಚೊಚ್ಚಲ ಹೈಬ್ರಿಡ್ ಸ್ಕೂಟರ್ ಬಿಡುಗಡೆಗೆ ರೆಡಿ

Written By:

ಭಾರತದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಟಿವಿಎಸ್ ಮೋಟಾರ್, ದೇಶದ ಚೊಚ್ಚಲ ಹೈಬ್ರಿಡ್ ಸ್ಕೂಟರ್ ಬಿಡುಗಡೆ ಮಾಡುವ ತಯಾರಿಯಲ್ಲಿದೆ. ಬಲ್ಲ ಮೂಲಗಳ ಪ್ರಕಾರ ಪ್ರಸಕ್ತ ಸಾಲಿನಲ್ಲೇ ಟಿವಿಎಸ್ ಐಕ್ಯೂಬ್ (IQube) ಹೈಬ್ರಿಡ್ ಸ್ಕೂಟರ್ ಬಿಡುಗಡೆಯಾಗಲಿದೆ.

ಭಾರತದಲ್ಲಿ ದ್ವಿಚಕ್ರ ವಾಹನಗಳಿಗೆ ಅದರಲ್ಲೂ ಸ್ಕೂಟರ್ ವಿಭಾಗಕ್ಕೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದ್ದು, ಈ ನಿಟ್ಟಿನಲ್ಲಿ ಹೆಚ್ಚು ಇಂಧನ ಕ್ಷಮತೆ ಕಾಪಾಡಿಕೊಳ್ಳುವ ಹೈಬ್ರಿಡ್ ಸ್ಕೂಟರ್ ಗಳು ಸೂಕ್ತ ಆಯ್ಕೆಯಾಗಿರಲಿದೆ.

ದೇಶದ ಚೊಚ್ಚಲ ಹೈಬ್ರಿಡ್ ಸ್ಕೂಟರ್ ಬಿಡುಗಡೆಗೆ ರೆಡಿ

2012 ಆಟೋ ಎಕ್ಸ್ ಪೋದಲ್ಲಿ ಸಂಸ್ಥೆಯು ಪ್ರದರ್ಶನಕ್ಕಿರಿಸಿರುವ ಕ್ಯೂಬ್ ಕಾನ್ಸೆಪ್ಟ್ ತಳಹದಿಯಲ್ಲಿ ನೂನತ ಐಕ್ಯೂಬ್ ಹೈಬ್ರಿಡ್ ಸ್ಕೂಟರನ್ನು ನಿರ್ಮಿಸಲಾಗಿದೆ.

ದೇಶದ ಚೊಚ್ಚಲ ಹೈಬ್ರಿಡ್ ಸ್ಕೂಟರ್ ಬಿಡುಗಡೆಗೆ ರೆಡಿ

ಇದು ಪರಿಸರದ ಮಾಲಿನ್ಯ ಕಡಿಮೆ ಮಾಡುವ ಕೇಂದ್ರ ಸರಕಾರದ ಯೋಜನೆಯ ಭಾಗವಾಗಿರಲಿದ್ದು, ಸ್ಪರ್ದಾತ್ಮಕ ಬೆಲೆ ಕಾಪಾಡಿಕೊಳ್ಳಲಿದೆ. ಸರಕಾರದಿಂದ ಸಬ್ಸಿಡಿ ದೊರಕುವ ನಿರೀಕ್ಷೆಯೂ ಇದೆ.

ದೇಶದ ಚೊಚ್ಚಲ ಹೈಬ್ರಿಡ್ ಸ್ಕೂಟರ್ ಬಿಡುಗಡೆಗೆ ರೆಡಿ

ಐಕ್ಯೂಬ್ ಸ್ಕೂಟರ್ ನಲ್ಲಿ 100 ಸಿಸಿ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರು ಲಗತ್ತಿಸಲಾಗುವುದು. ಇದು ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆಯಲಿದೆ.

ದೇಶದ ಚೊಚ್ಚಲ ಹೈಬ್ರಿಡ್ ಸ್ಕೂಟರ್ ಬಿಡುಗಡೆಗೆ ರೆಡಿ

ಇನ್ನು ಸವಾರನ ಅಗತ್ಯಗಳಿಗಾನುಸಾರವಾಗಿ ವಿವಿಧ ಚಾಲನಾ ವಿಧಗಳನ್ನು ನೀಡಲಾಗುವುದು.

ದೇಶದ ಚೊಚ್ಚಲ ಹೈಬ್ರಿಡ್ ಸ್ಕೂಟರ್ ಬಿಡುಗಡೆಗೆ ರೆಡಿ

ಬ್ರೇಕ್ ಎನರ್ಜಿ ರಿ ಜನರೇಷನ್ ಅಥವಾ ಸವಾರ ಬ್ರೇಕ್ ಅದುಮಿದಾಗ ಲಿಥಿಯಂ ಇಯಾನ್ ಬ್ಯಾಟರಿಯಲ್ಲಿ ಪವರ್ ಶೇಖರಣೆಯಾಗಲಿದೆ. ಇದು ಬಳಿಕ ಎಲೆಕ್ಟ್ರಿಕ್ ಮೋಟಾರು ಮುಖಾಂತರ ಚಾಲನೆ ಮಾಡಲು ಸಹಕಾರಿಯಾಗಲಿದೆ.

ದೇಶದ ಚೊಚ್ಚಲ ಹೈಬ್ರಿಡ್ ಸ್ಕೂಟರ್ ಬಿಡುಗಡೆಗೆ ರೆಡಿ

ಇದು ಹೈಬ್ರಿಡ್ ಎಕಾನಮಿ ಮತ್ತು ಹೈಬ್ರಿಡ್ ಪವರ್ ಮೋಡ್ ಗಳನ್ನು ಪಡೆಯಲಿದೆ. ಪವರ್ ಮೋಡ್ ನಲ್ಲಿ ಹೆಚ್ಚು ಶಕ್ತಿ ವಿತರಣೆಯಾಗಲಿದ್ದು, ಎಕಾನಮಿ ಮೋಡ್ ನಲ್ಲಿ ಇಂಧನ ಕ್ಷಮತೆಗೆ ಆದ್ಯತೆ ಕೊಡಲಾಗುವುದು.

ದೇಶದ ಚೊಚ್ಚಲ ಹೈಬ್ರಿಡ್ ಸ್ಕೂಟರ್ ಬಿಡುಗಡೆಗೆ ರೆಡಿ

ಸಂಪೂರ್ಣವಾಗಿಯೂ ಎಲೆಕ್ಟ್ರಿಕ್ ಚಾಲಿತ ವಾಹನಗಳಿಗೆ ಬೇಡಿಕೆ ಕುಸಿದಿದೆ. ಇನ್ನೊಂದೆಡೆ ಎಲೆಕ್ಟ್ರಿಕ್ ಗಿಂತಲೂ ಹೆಚ್ಚು ಶಕ್ತಿಶಾಲಿ ಹೈಬ್ರಿಡ್ ವಾಹನಗಳನ್ನು ಭವಿಷ್ಯದ ಪರ್ಯಾಯ ವಾಹಕವೆಂದೇ ಪರಿಗಣಿಸಲಾಗುತ್ತದೆ.

ದೇಶದ ಚೊಚ್ಚಲ ಹೈಬ್ರಿಡ್ ಸ್ಕೂಟರ್ ಬಿಡುಗಡೆಗೆ ರೆಡಿ

ಟಿವಿಎಸ್ ನೂತನ ಹೈಬ್ರಿಡ್ ಸ್ಕೂಟರ್ ಪ್ರಯೋಗವು ದೇಶದ ಮಾರುಕಟ್ಟೆಯಲ್ಲಿ ಎಷ್ಟರ ಮಟ್ಟಿನಲ್ಲಿ ಯಶ ಕಾಣಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ದೇಶದ ಚೊಚ್ಚಲ ಹೈಬ್ರಿಡ್ ಸ್ಕೂಟರ್ ಬಿಡುಗಡೆಗೆ ರೆಡಿ

ಟಿವಿಎಸ್ ನೂತನ ಹೈಬ್ರಿಡ್ ಸ್ಕೂಟರ್ ಪ್ರಯೋಗವು ದೇಶದ ಮಾರುಕಟ್ಟೆಯಲ್ಲಿ ಎಷ್ಟರ ಮಟ್ಟಿನಲ್ಲಿ ಯಶ ಕಾಣಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

English summary
TVS IQube To Launch In India As The First Hybrid Scooter
Story first published: Saturday, May 28, 2016, 11:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark