ಭಾರತಕ್ಕೆ 2017ರ ಕೆಟಿಎಂ 250 ಡ್ಯೂಕ್ ಭರ್ಜರಿ ಎಂಟ್ರಿ..!!

Written By:

ಆಸ್ಟ್ರಿಯನ್ ಪ್ರಮುಖ ದ್ವಿಚಕ್ರ ವಾಹನಗಳ ತಯಾರಕ ಕಂಪನಿ ಕೆಟಿಎಂ, 2017ರ 250 ಡ್ಯೂಕ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಹಿಂದೆ ಟೆಸ್ಟಿಂಗ್ ವೇಳೆ ಸೆರೆಹಿಡಿಯಲಾಗಿದ್ದ ಚಿತ್ರಗಳನ್ನೇ ಹೋಲುತ್ತಿರುವ ವಿನೂತ ಆವೃತ್ತಿಯು, ವಿನೂತನ ವೈಶಿಷ್ಠ್ಯತೆಗಳಿಂದಾಗಿ ಸಾಹಸಿ ಬೈಕ್ ಪ್ರಿಯರ ಮನಸೆಳೆಯುವ ತವಕದಲ್ಲಿದೆ.

ಬಿಡುಗಡೆಗೊಂಡಿರುವ ವಿನೂತನ 250 ಡ್ಯೂಕ್ ವಿನ್ಯಾಸ ಈ ಹಿಂದೆ ಭರ್ಜರಿ ಮಾರಾಟಗೊಂಡಿದ್ದ 390 ಡ್ಯೂಕ್ ಮಾದರಿಯನ್ನೇ ಹೋಲುತ್ತಿದೆ. ಅಲ್ಲದೇ ಡ್ಯೂಕ್ ಚಿಹ್ನೆ ಕೂಡಾ ದೊಡ್ಡದಾಗಿದ್ದು, ಬೈಕ್ ಲುಕ್ ಹೆಚ್ಚಿಸಿದೆ. 

ನೂತನ 250 ಡ್ಯೂಕ್ ಬೆಲೆ:
ಬೆಲೆ- ರೂ. 1.73 ಲಕ್ಷ ಮಾತ್ರ ( ದೆಹಲಿ ಎಕ್ಸ್‌ಶೋರಂ)

250 ಡ್ಯೂಕ್ ವಿನ್ಯಾಸ:
ಸಂಪೂರ್ಣ ಹೊಸತನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ 250 ಡ್ಯೂಕ್, ಭಾರತದಲ್ಲೇ ಅಂತಿಮ ರೂಪ ಪಡೆದುಕೊಂಡಿದೆ. ಈ ಹಿಂದಿನ 390 ಡ್ಯೂಕ್ ಮಾದರಿಯನ್ನೇ ಹೋಲುವ 250 ಡ್ಯೂಕ್ ಹೊಸ 390 ಡ್ಯೂಕ್ ಮತ್ತು 200 ಡ್ಯೂಕ್ ಮಾದರಿಗಿಂತಲೂ ಭಿನ್ನವಾಗಿದೆ. ಜೊತೆಗೆ ಎಲ್ಇಡಿ ಹೆಡ್‍‌ಲೈಟ್ ಮತ್ತು ಇತರೆ ವಿನ್ಯಾಸಗಳು ಬೈಕಿಗೆ ಹೊಸ ಲುಕ್ ನೀಡಿವೆ.

ಎಂಜಿನ್ ಸಾಮರ್ಥ್ಯ ಮತ್ತು ವೈಶಿಷ್ಠ್ಯತೆಗಳು:
248 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರುವ 2017ರ 250 ಡ್ಯೂಕ್, 31 ಬಿಎಚ್‌ಪಿ ಮತ್ತು 24 ಎನ್ಎಂ ಟಾರ್ಕ್ ಉತ್ಪಾದಿಸುತ್ತೆ. 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದ್ದು, ಪ್ರತಿಸ್ಪರ್ಧಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ. ಹೀಗಾಗಿ ಯಮಹಾ FZ 25 ಮತ್ತು ಕವಾಸಕಿ Z250 ಬೈಕಿಗೆ ನೇರ ಸ್ಪರ್ಧಿಯಾಗಲಿದೆ.

250 ಡ್ಯೂಕ್ ಬೈಕ್ ಅಂತರ್ರಾಷ್ಟ್ರೀಯ ದರ್ಜೆಯಲ್ಲಿ ಸಿದ್ಧಗೊಂಡಿದ್ದು, ಸ್ಪೋರ್ಟ್ಸ್ ಬಳಕೆಯ ಎಂಆರ್‌ಎಫ್ Revz-FC1 ಟೈರ್ ಬಳಸಲಾಗಿದೆ. ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ವ್ಯವಸ್ಥೆ ಹೊಂದಿರುವ 250 ಡ್ಯೂಕ್ ಬೈಕಿನಲ್ಲಿ ಫ್ರಂಟ್ ಪೋರ್ಕ್ಸ್, ಹಿಂಬದಿಯಲ್ಲಿ ಮೋನೋ ಶಾರ್ಕ್ ಅಳವಡಿಸಲಾಗಿದೆ.

ಜೊತೆಗೆ ಎಬಿಎಸ್ ವ್ಯವಸ್ಥೆಯಿರುವ 250 ಡ್ಯೂಕ್‌ನಲ್ಲಿ ಡಿಜಿಟಲ್ ಸಾಧನದ ಕನ್ಸೋಲ್, ಸಿಫ್ಲರ್ ಕ್ಲಚ್ ಹೊಂದಿದ್ದು, ಮೇಲ್ನೋಟಕ್ಕೆ 390 ಡ್ಯೂಕ್ ಮಾದರಿಯನ್ನೇ ನೆನಪಿಸುತ್ತೆ. ಒಟ್ಟಿನಲ್ಲಿ ಬಹುನೀರಿಕ್ಷೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ನೂತನ ಮಾದರಿಯನ್ನು ಗ್ರಾಹಕರ ಹೇಗೆ ಸ್ವೀಕರಿಸುತ್ತಾರೆ ಎಂಬುವುದನ್ನು ಕಾಯ್ದುನೋಡಬೇಕಿದೆ.

ಸದ್ಯ ಬಿಡುಗಡೆಗೊಂಡಿರುವ ಕೆಟಿಎಂ 250 ಡ್ಯೂಕ್ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
2017 KTM Duke 250 model launched in India. The much-awaited all new KTM 250 Duke is a new model. Read on to know more about the KTM Duke 250's design, specifications, and more.
Please Wait while comments are loading...

Latest Photos