ಶುರುವಾಗಿದೆ ವಿಶೇಷ ಕಾರ್ಯಾಚರಣೆ- ಬೈಕ್‌ ವೀಲಿಂಗ್‌ ಮಾಡುವವರಿಗೆ ಕಾದಿದೆ ಗ್ರಹಚಾರ

By Praveen Sannamani

ನಗರಪ್ರದೇಶಗಳಲ್ಲಿ ಇತ್ತೀಚೆಗೆ ಬೈಕ್ ವೀಲಿಂಗ್ ಹುಚ್ಚು ಹೆಚ್ಚುತ್ತಿದ್ದು, ಇದರ ಪರಿಣಾಮ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿರುವುದಲ್ಲದೇ ಕೆಲವು ಪ್ರಕರಣಗಳಲ್ಲಿ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಬೈಕ್ ವೀಲಿಂಗ್ ಜೀವಕ್ಕೆ ಕುತ್ತು ಎಂದು ಗೊತ್ತಿದ್ದರೂ ಯುವಕರು ಮಾತ್ರ ಬೈಕ್ ವೀಲಿಂಗ್‌ ಕ್ರೇಜ್ ಹಿಂದೆ ಬಿದ್ದಿರುವುದು ಸಾರ್ವಜನಿಕರಿಗೆ ಅಷ್ಟೇ ಅಲ್ಲದೇ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಶುರುವಾಗಿದೆ ವಿಶೇಷ ಕಾರ್ಯಾಚರಣೆ- ಬೈಕ್‌ ವೀಲಿಂಗ್‌ ಮಾಡುವವರಿಗೆ ಕಾದಿದೆ ಗ್ರಹಚಾರ

ಸಿಲಿಕಾನ್ ಬೆಂಗಳೂರಿನಲ್ಲೂ ಸಹ ದಿನದಿಂದ ದಿನಕ್ಕೆ ಬೈಕ್ ವೀಲಿಂಗ್ ಪ್ರಕರಣಗಳು ಹೆಚ್ಚುತ್ತಿದ್ದು, ಈ ವೇಳೆ ದುರಂತಕ್ಕಿಡಾಗಿ ಸಾವನ್ನಪ್ಪುವರರ ಸಂಖ್ಯೆಯು ಹೆಚ್ಚುತ್ತಿದೆ. ಬೈಕ್ ವೀಲಿಂಗ್ ತಡೆಯಲು ಟ್ರಾಫಿಕ್ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಬೈಕ್ ವೀಲಿಂಗ್ ಹುಚ್ಚು ಮಾತ್ರ ಕೆಲವರಿಗೆ ಕಡಿಮೆ ಆದಂತೆ ಕಾಣುತ್ತಿಲ್ಲ.

ಶುರುವಾಗಿದೆ ವಿಶೇಷ ಕಾರ್ಯಾಚರಣೆ- ಬೈಕ್‌ ವೀಲಿಂಗ್‌ ಮಾಡುವವರಿಗೆ ಕಾದಿದೆ ಗ್ರಹಚಾರ

ಇದಕ್ಕಾಗಿಯೇ ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು ಬೈಕ್ ವೀಲಿಂಗ್ ಮಾಡುತ್ತಿರುವ ಯುವಕರನ್ನ ಬಂಧಿಸಿ ಜೈಲಿಗಟ್ಟುತ್ತಿದ್ದಾರೆ. ಜೊತೆಗೆ ವೀಲಿಂಗ್ ಮಾಡಲು ಬಳಸಲಾಗುವ ಬೈಕ್‌ಗಳನ್ನು ಸಹ ಸೀಜ್ ಮಾಡಲಾಗುತ್ತಿದೆ.

ಶುರುವಾಗಿದೆ ವಿಶೇಷ ಕಾರ್ಯಾಚರಣೆ- ಬೈಕ್‌ ವೀಲಿಂಗ್‌ ಮಾಡುವವರಿಗೆ ಕಾದಿದೆ ಗ್ರಹಚಾರ

ಬೆಂಗಳೂರಿನ ಹೊರವಲಯಗಳಲ್ಲೇ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದ್ದು, ಮೊನ್ನೆಯಷ್ಟೇ ನಗರದ ವಿವಿಧಡೆ ನಡೆದ ಬೈಕ್ ವೀಲಿಂಗ್ ವಿರುದ್ಧ ಕಾರ್ಯಾಚರಣೆಯಲ್ಲಿ ಒಂದೇ ದಿನ 19 ಯುವಕರನ್ನು ಬಂಧಿಸಿ ಬೈಕ್‌ಗಳ ವಶಕ್ಕೆ ಪಡೆಯಲಾಗಿದೆ.

ಶುರುವಾಗಿದೆ ವಿಶೇಷ ಕಾರ್ಯಾಚರಣೆ- ಬೈಕ್‌ ವೀಲಿಂಗ್‌ ಮಾಡುವವರಿಗೆ ಕಾದಿದೆ ಗ್ರಹಚಾರ

ನಗರದ ದೇವನಹಳ್ಳಿ, ದೊಡ್ಡಬಳ್ಳಾಪುರ ಮುಖ್ಯ ರಸ್ತೆ, ನಂದಿ ಹಿಲ್ಸ್‌ ರಸ್ತೆ, ಕನ್ನಮಂಗಲ ಗೇಟ್‌, ನೈಸ್ ರಸ್ತೆ, ಚಿಕ್ಕಜಾಲ, ನೆಲಮಂಗಲ, ತುಮಕೂರು ರಸ್ತೆ, ರಾಷ್ಟ್ರೀಯ ಹೆದ್ದಾರಿ 7, ನ್ಯೂ ಹಾರಿಜನ್‌ ರಸ್ತೆ, ಟಿ.ಸಿಪಾಳ್ಯ, ಭಟ್ಟರ ಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75, ಲಗ್ಗೆರೆ ರಸ್ತೆ, ಮೈಸೂರು ರಸ್ತೆಯಲ್ಲಿ ಬೈಕ್ ವೀಲಿಂಗ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇದಕ್ಕಾಗಿಯೇ ವೀಲಿಂಗ್ ಮಾಡುವರರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಿರುವ ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.

ಶುರುವಾಗಿದೆ ವಿಶೇಷ ಕಾರ್ಯಾಚರಣೆ- ಬೈಕ್‌ ವೀಲಿಂಗ್‌ ಮಾಡುವವರಿಗೆ ಕಾದಿದೆ ಗ್ರಹಚಾರ

ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಟ್ರಾಫಿಕ್ ಪೊಲೀಸರು ಬೈಕ್ ವೀಲಿಂಗ್ ಮಾಡುವವರನ್ನು ಆಯಕಟ್ಟಿನ ಜಾಗದಲ್ಲಿ ನಿಂತು ಲಾಕ್ ಮಾಡುತ್ತಿದ್ದು, ಸಿಕ್ಕಿಬಿದ್ದವರಿಂದ ದಂಡ ವಸೂಲಿ ಮಾಡುವುದಲ್ಲದೇ ಜೈಲಿಗಟ್ಟುತ್ತಿರುವುದು ಬೈಕ್ ವೀಲಿಂಗ್ ಮಾಡುವವರಿಗೆ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದಾರೆ.

ಶುರುವಾಗಿದೆ ವಿಶೇಷ ಕಾರ್ಯಾಚರಣೆ- ಬೈಕ್‌ ವೀಲಿಂಗ್‌ ಮಾಡುವವರಿಗೆ ಕಾದಿದೆ ಗ್ರಹಚಾರ

ಪೋಷಕರೇ ನಿಮಗೂ ಕಾದಿದೆ ದಂಡ

ಹೌದು, ಬೈಕ್ ವೀಲಿಂಗ್ ಪ್ರಕರಣಗಳಲ್ಲಿ ಹೆಚ್ಚಾಗಿ 17ರಿಂದ 22 ವಯಸ್ಸಿನವರೇ ಹೆಚ್ಚಿದ್ದು, ಅಪ್ರಾಪ್ತರಿಗೆ ಬೈಕ್ ಕೊಡುವ ಪೋಷಕರಿಗೂ ದಂಡ ಹಾಕಲಾಗುತ್ತಿದೆ. ಮೊನ್ನೆಯಷ್ಟೇ ಇದೇ ಪ್ರಕರಣಕ್ಕೆ ಸಂಬಂಧಿಸಿ 16 ವರ್ಷದ ಬಾಲಕ ಸಹ ಸಿಕ್ಕಿಬಿದ್ದು, ಬೈಕ್ ನೀಡಿದ ಬಾಲಕ ಪೋಷಕನ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ ಅಪ್ರಾಪ್ತ ಮಕ್ಕಳ ಕೈಗೆ ಬೈಕ್ ನೀಡುವ ಮುನ್ನ ಎಚ್ಚರವಿರಲಿ.

ಶುರುವಾಗಿದೆ ವಿಶೇಷ ಕಾರ್ಯಾಚರಣೆ- ಬೈಕ್‌ ವೀಲಿಂಗ್‌ ಮಾಡುವವರಿಗೆ ಕಾದಿದೆ ಗ್ರಹಚಾರ

ಫೇಸ್‌ಬುಕ್‌ಗೆ ಹಾಕಿ ಸಿಕ್ಕಿಬಿದ್ದ.!

ಬೈಕ್ ವೀಲಿಂಗ್ ಮಾಡಿದಲ್ಲದೇ ಫೇಸ್‌ಬುಕ್​ಗೆ ಪೋಸ್ಟ್ ಮಾಡಿದ್ದ ಬಾಲಕನೊಬ್ಬ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬೈಕ್ ವೀಲಿಂಗ್ ಮಾಡಿ ಫೇಸ್​ಬುಕ್​ಗೆ ಪೋಸ್ಟ್ ಮಾಡಿದ್ದ ಡಾಲರ್ಸ್‌ ಕಾಲೋನಿಯ ಬಾಲಕನನ್ನು ಪೊಲೀಸರು ಬಂಧಿಸಿದ್ದು, ಫೇಸ್‌ಬುಕ್ ಪೋಸ್ಟ್ ನೋಡಿದ ಪೊಲೀಸರು ಬಾಲಕನ ಮನೆಗೆ ಬಂದು ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಶುರುವಾಗಿದೆ ವಿಶೇಷ ಕಾರ್ಯಾಚರಣೆ- ಬೈಕ್‌ ವೀಲಿಂಗ್‌ ಮಾಡುವವರಿಗೆ ಕಾದಿದೆ ಗ್ರಹಚಾರ

ಬೈಕ್ ವೀಲಿಂಗ್‌ ವೇಳೆ ಬಾಲಕ‌ ಬಳಸಿದ್ದ ಯಮಹಾ ಬೈಕ್ ‌ವಶಕ್ಕೆ ಪಡೆದಿರುವ ಪೊಲೀಸರು ಅಪ್ರಾಪ್ತನಿಗೆ ಬೈಕ್ ಕೊಟ್ಟ ಆರೋಪದ ಮೇಲೆ ಪೋಷಕರ ಮೇಲೂ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ಪೋಷಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಬಾಲಕನನ್ನು ಬಂಧಿಸಿ ಬಾಲಮಂದಿರಕ್ಕೆ ಕಳುಹಿಸಲಾಗಿದೆ.

ಶುರುವಾಗಿದೆ ವಿಶೇಷ ಕಾರ್ಯಾಚರಣೆ- ಬೈಕ್‌ ವೀಲಿಂಗ್‌ ಮಾಡುವವರಿಗೆ ಕಾದಿದೆ ಗ್ರಹಚಾರ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಬೈಕ್ ವೀಲಿಂಗ್ ಪ್ರಕರಣಗಳಲ್ಲಿ ಹೋಂಡಾ ಆಕ್ಟಿವಾ ಮತ್ತು ಡಿಯೋ ಸ್ಕೂಟರ್‌ಗಳೇ ಹೆಚ್ಚಾಗಿ ಕಂಡುಬರುತ್ತಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬೈಕ್ ವೀಲಿಂಗ್ ಹುಚ್ಚಿಗೆ ಬಲಿಯಾಗುತ್ತಿದ್ದಾರೆ.

ಶುರುವಾಗಿದೆ ವಿಶೇಷ ಕಾರ್ಯಾಚರಣೆ- ಬೈಕ್‌ ವೀಲಿಂಗ್‌ ಮಾಡುವವರಿಗೆ ಕಾದಿದೆ ಗ್ರಹಚಾರ

ಹೀಗಾಗಿ ಬೈಕ್ ವೀಲಿಂಗ್ ದುಸ್ಸಾಹಸಕ್ಕೆ ಕೈ ಹಾಕುವ ಮುನ್ನ ಜಾರಿಯಲ್ಲಿರುವ ಕಠಿಣ ಕಾನೂನು ಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅವಶ್ಯಕತೆಯಿದ್ದು, ಬೆಂಗಳೂರು ಟ್ರಾಫಿಕ್ ಪೊಲೀಸರು ನಡೆಸಿರುವ ವಿಶೇಷ ಕಾರ್ಯಾಚರಣೆಯಿಂದಾಗಾಗಿ ನಗರದ ಕೆಲ ಕಡೆಗಳಲ್ಲಿ ಸಾರ್ವಜನಿಕರು ನೆಮ್ಮದಿಯಿಂದ ರಸ್ತೆ ದಾಟುವಂತಾಗಿದೆ.

ಶುರುವಾಗಿದೆ ವಿಶೇಷ ಕಾರ್ಯಾಚರಣೆ- ಬೈಕ್‌ ವೀಲಿಂಗ್‌ ಮಾಡುವವರಿಗೆ ಕಾದಿದೆ ಗ್ರಹಚಾರ

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಅಟಲ್ ಜೀ ಅವರು ಅಂಬಾಸಿಡರ್ ಬಿಟ್ಟು ಬಿಎಂಡಬ್ಲ್ಯು 7 ಸೀರಿಸ್ ಕಾರು ಏರಿದ್ದೇಕೆ ಗೊತ್ತಾ?

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

Most Read Articles

Kannada
English summary
Bangalore police SEIZE Honda Activa & Dio scooters for ‘Wheelies’.
Story first published: Saturday, August 18, 2018, 16:12 [IST]

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more