ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆದ ಕ್ರಿಸ್ಟಲ್ ಡಿಸೈನ್ ಬುಲೆಟ್ 350

Written By:

ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಭಾರತೀಯ ಮೋಟಾರ್ ಸೈಕಲ್ ಇತಿಹಾಸದ ಒಂದು ಪ್ರಮುಖ ಭಾಗವೇ ಆಗಿದೆ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ಕಳೆದ 4 ದಶಕಗಳ ಅವಧಿಯಲ್ಲಿ ಲಕ್ಷಾಂತರ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇವತ್ತಿನ ತನಕವೂ ತನ್ನ ಜನಪ್ರಿಯತೆಯಲ್ಲಿ ಹಿಂದೆ ಬಿದ್ದಿಲ್ಲ.

ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆದ ಕ್ರಿಸ್ಟಲ್ ಡಿಸೈನ್ ಬುಲೆಟ್ 350

ದೇಶಿಯವಾಗಿ ಕ್ಲಾಸಿಕ್ ಬೈಕ್‌ಗಳ ಉತ್ಪಾದನೆಯಲ್ಲಿ ತನ್ನದೆ ಆದ ಪ್ರಾಬಲ್ಯ ಹೊಂದಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಉತ್ಪನ್ನಗಳ ಗುಣಮಟ್ಟ ಹಾಗೂ ಬಲಿಷ್ಠತೆಯ ಮೂಲಕವೇ ಇತರೆ ಬೈಕ್ ಉತ್ಪನ್ನಗಳಿಂತ ಭಿನ್ನವಾಗಿದ್ದು, ಮಾಡಿಫೈಡ್ ಬೈಕ್‌ಗಳ ಲೋಕದಲ್ಲೂ ತನ್ನದೇ ಆದ ಇತಿಹಾಸವನ್ನೇ ಹೊಂದಿದೆ.

ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆದ ಕ್ರಿಸ್ಟಲ್ ಡಿಸೈನ್ ಬುಲೆಟ್ 350

ಇದಕ್ಕೆ ನಿದರ್ಶನ ಎಂಬಂತೆ ಮೊನ್ನೆಯಷ್ಟೇ ದೆಹಲಿಯಲ್ಲಿ ಪ್ರದರ್ಶನವಾದ ಕ್ರಿಸ್ಟಲ್ ಡಿಸೈನ್ ವಿನ್ಯಾಸದ ಬುಲೆಟ್ 350 ಬೈಕ್ ಮಾದರಿಯೊಂದು ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುವ ಮೂಲಕ ಬೈಕ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆದ ಕ್ರಿಸ್ಟಲ್ ಡಿಸೈನ್ ಬುಲೆಟ್ 350

ದೆಹಲಿ ಮೂಲದ ಹೆರಿಟೆಜ್ ಟ್ರಾನ್‌ಸ್ಪೋರ್ಟ್ ಸಂಸ್ಥೆಯು ತನ್ನ ವಸ್ತುಸಂಗ್ರಹಾಲಯದಲ್ಲಿ ಈ ಬೈಕ್ ಅನ್ನು ಪ್ರದರ್ಶನಕ್ಕಿಟ್ಟಿದ್ದು, ಬುಲೆಟ್ 350 ಬೈಕಿನ ಮಾಡಿಫೈ ಮಾದರಿಯು ಹತ್ತು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದಲ್ಲದೇ ಮಾಡಿಫೈ ತಯಾಕರಲ್ಲೂ ಕುತೂಹಲ ಹುಟ್ಟುಹಾಕಿದೆ.

ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆದ ಕ್ರಿಸ್ಟಲ್ ಡಿಸೈನ್ ಬುಲೆಟ್ 350

ಮಾಡಿಫೈಗೊಂಡಿರುವ ಈ ಬೈಕಿನ ಹೊರಮೈ ಭಾಗವನ್ನು ಸ್ಫಟಿಕದ(ಕ್ರಿಸ್ಟಲ್) ಮಾದರಿಯಲ್ಲಿ ಬಾಡಿ ಕವರ್ ಬಳಕೆ ಮಾಡಲಾಗಿದ್ದು, ಮೂಲ ಬೈಕಿನಲ್ಲಿ ನೀಡಲಾಗಿದ್ದ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ.

ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆದ ಕ್ರಿಸ್ಟಲ್ ಡಿಸೈನ್ ಬುಲೆಟ್ 350

ನಿಮಗೆ ಇನ್ನೊಂದು ಪ್ರಮುಖ ವಿಚಾರವನ್ನು ಹೇಳುವುದಾದರೇ, ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಇತರೆ ಬೈಕ್‌ಗಳಂತೆ ವರ್ಷದಿಂದ ವರ್ಷಕ್ಕೆ ಗುರುತರ ಬದಲಾವಣೆಯನ್ನು ಪಡೆಯುವುದೇ ಇಲ್ಲಾ. ಇದಕ್ಕೆ ಉದಾಹರಣೆ ಅಂದ್ರೆ ಆರಂಭಿಕ ದಿನಗಳಲ್ಲಿ ಬಂದಿದ್ದ ಬುಲೆಟ್ ಬೈಕ್‌ಗಳ ವಿನ್ಯಾಸಕ್ಕೂ ಈ ತಲೆಮಾರಿನ ಬುಲೆಟ್ ಮಾದರಿಗಳಿಗೂ ಅಷ್ಟೇನು ದೊಡ್ಡ ಬದಲಾವಣೆ ಆಗದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆದ ಕ್ರಿಸ್ಟಲ್ ಡಿಸೈನ್ ಬುಲೆಟ್ 350

ಇದೇ ಕಾರಣಕ್ಕೆ ಬುಲೆಟ್ ಬೈಕ್‌ಗಳ ವಿನ್ಯಾಸಕ್ಕೆ ಹೊಸ ರಂಗು ನೀಡಲು ಮುಂದಾದ ಹೆರಿಟೆಜ್ ಟ್ರಾನ್‌ಸ್ಪೋರ್ಟ್ ಸಂಸ್ಥೆಯು ಕ್ರಿಸ್ಟಲ್ ಡಿಸೈನ್ ಮಾದರಿ ಬುಲೆಟ್ 350 ತಯಾರಿಸಿದ್ದು, ಮಾಡಿಫೈ ತಯಾಕರಿಗೆ ಮತ್ತಷ್ಟು ಹೊಸ ಬಗೆಯ ವಿನ್ಯಾಸಗಳನ್ನು ಸಿದ್ದಪಡಿಸಬಹುದು ಎಂದು ತೊರಿಸಿಕೊಟ್ಟಿದೆ.

ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆದ ಕ್ರಿಸ್ಟಲ್ ಡಿಸೈನ್ ಬುಲೆಟ್ 350

ಆದ್ರೆ ಬೈಕ್ ಎಂಜಿನ್ ಸಾಮರ್ಥ್ಯದಲ್ಲಿ ಈ ಹಿಂದಿನ ಮಾದರಿಯಂತೆ 346 ಸಿಸಿ ಎಂಜಿನ್ ಮಾದರಿಯನ್ನೇ ಇಲ್ಲೂ ಮುಂದುವರಿಸಲಾಗಿದ್ದು, ಕ್ರಿಸ್ಟಲ್ ಡಿಸೈನ್‌ಗಳು ನೋಡುಗರ ಕಣ್ಣು ಕುಕ್ಕುವಂತೆ ಮಾಡಿವೆ.

ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆದ ಕ್ರಿಸ್ಟಲ್ ಡಿಸೈನ್ ಬುಲೆಟ್ 350

ಇನ್ನು ಹೆರಿಟೆಜ್ ಟ್ರಾನ್‌ಸ್ಪೋರ್ಟ್ ಸಂಸ್ಥೆಯು ಈ ಬೈಕ್‌ ಅನ್ನು ಕೆಲ ದಿನಗಳ ಕಾಲ ಪ್ರದರ್ಶನಗೊಳಿಸಿ ನಂತರ ಮಾರಾಟ ಮಾಡಲಿದೆ ಎನ್ನಲಾಗಿದ್ದು, ಆಸಕ್ತ ಮಾಡಿಫೈ ಬುಲೆಟ್ ಪ್ರಿಯರು ಈ ಬೈಕ್ ಅನ್ನು ಖರೀದಿ ಮಾಡಬಹುದು.

English summary
Read in Kannada about Encrusted Royal Enfield Bullet 350.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark