ಶೋರಂನವರು ಮಾಡಿದ ಮಹಾ ಮೋಸಕ್ಕೆ ನೊಂದ ಬೈಕ್ ಸವಾರ ಮಾಡಿದ್ದೇನು ಗೊತ್ತಾ.?

ಪ್ರತಿಯೊಬ್ಬರಿಗೂ ತಮ್ಮಿಷ್ಟದ ವಾಹನವನ್ನ ಖರೀದಿಸುವ ಆಸೆ ಇದ್ದೇ ಇರುತ್ತೆ. ಅದಕ್ಕಾಗಿ ಬಹುತೇಕರು ಒಂದೊಂದು ರುಪಾಯಿ ಕೂಡಾ ಕೂಡಿಟ್ಟು ವಾಹನ ಖರೀದಿ ಮಾಡಿರುತ್ತಾರೆ. ಆದ್ರೆ ಸಾವಿರಾರು ರುಪಾಯಿ ಬಂಡವಾಳ ಹಾಕಿದ್ರು ಶೋರಂನವರು ಮಾಡುವ ಮಹಾಮೋಸ ಎಂತವರಿಗಾದರೂಕೋಪ ತರಿಸದೇ ಇರಲಾರದು. ಇಲ್ಲು ಕೂಡಾ ಆಗಿದ್ದು ಅದೆ.

ಶೋರಂನವರು ಮಾಡಿದ ಮಹಾ ಮೋಸಕ್ಕೆ ನೊಂದ ಬೈಕ್ ಸವಾರ ಮಾಡಿದ್ದೇನು ಗೊತ್ತಾ.?

ಚೆನ್ನೈ ನಗರದ ಈ ವ್ಯಕ್ತಿಯು ಬಹಳ ಆಸೆ ಇಂದ ಖರೀದಿಸಿದ ವಾಹನವು ಪದೇ ಪದೇ ತೊಂದರೆ ಕೊಡ್ಡುತ್ತಿದ್ದ ಕಾರಣ ಆ ವಾಹನವನ್ನು ಖರೀದಿಸಿದ ಶೋರಂ‍ನ ಮುಂದೆಯೆ ಬೆಂಕಿ ಹಾಕಿ ಸುಟ್ಟಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ.

ಶೋರಂನವರು ಮಾಡಿದ ಮಹಾ ಮೋಸಕ್ಕೆ ನೊಂದ ಬೈಕ್ ಸವಾರ ಮಾಡಿದ್ದೇನು ಗೊತ್ತಾ.?

ಹೌದು, ತಮಿಳು ನಾಡಿನ ಚೆನ್ನೈ ನಗರದ ನಿವಾಸಿಯಾದ ಗೋಪಿಯವರು ಶ್ರಮ ಪಟ್ಟು ಆಸೆಯಿಂದ ಟಿವಿಎಸ್ ವಿಕ್ಟರ್ ಬೈಕ್ ಅನ್ನು ರೂ.60,000 ಸಾವಿರ ನೀಡಿ ಖರೀದಿಸಿದ್ದಾರೆ. ಆದ್ರೆ ಖರೀದಿಸಿದ ಆರು ತಿಂಗಳಿನೊಳಗೆ ಬೈಕಿನ ಕೆಲ ಉಪಕರಣಗಳು ಸರಿಯಾಗಿ ಕೆಲಸ ಮಾಡದ ಕಾರಣ ಬೈಕ್ ಖರೀದಿಸಿದ ಶೋರಂನ ಮುಂದೆಯೆ ಆ ಬೈಕ್ ಅನ್ನು ಸುಟ್ಟಿದ್ದಾರೆ.

ಶೋರಂನವರು ಮಾಡಿದ ಮಹಾ ಮೋಸಕ್ಕೆ ನೊಂದ ಬೈಕ್ ಸವಾರ ಮಾಡಿದ್ದೇನು ಗೊತ್ತಾ.?

ಚೆನ್ನೈ ನಗರದಲ್ಲಿನ ಅಯನಾವರಂ ಏರಿಯಾದಲ್ಲಿನ ಎಸ್‍ಪಿಎಂ ಟಿವಿಎಸ್ ಶೋರಂನಲ್ಲಿ ಗೋಪಿಯವರು ಟಿವಿಎಸ್ ವಿಕ್ಟರ್ ಬೈಕ್ ಅನ್ನು ಖರೀದಿಸಿದ್ದರು, ಖರೀದಿಸಿದ ನಂತರ ಬೈಕ್ ತೊಂದರೆ ನೀಡುತ್ತಿರುವುದಾಗಿ ಶೋರಂಗೆ ತೆಗೆದುಕೊಂಡು ಹೋದಾಗ ಅವರು ಅದನ್ನು ಸರಿಪಡಿಸಿರುವುದಾಗಿ ಹೇಳಿದ್ದಾರೆ.

ಶೋರಂನವರು ಮಾಡಿದ ಮಹಾ ಮೋಸಕ್ಕೆ ನೊಂದ ಬೈಕ್ ಸವಾರ ಮಾಡಿದ್ದೇನು ಗೊತ್ತಾ.?

ಬೈಕ್‍ನಲ್ಲಿನ ಲೋಪದೋಷವನ್ನ ಸರಿ ಪಡಿಸಲಾಗಿದೆ ಎಂದು ಹೇಳಿದ ಕೆಲ ದಿನಗಳ ನಂತರವೇ ಮತ್ತೊಂದು ಲೋಪವು ಕಂಡುಬರುತ್ತಿತ್ತು, ಎಷ್ಟು ಬಾರಿ ರಿಪೇರಿ ಮಾಡಿದರೂ ತೊಂದರೆಗೆ ಕೊನೆಯೆ ಇಲ್ಲದಂತಾಯಿತು.

ಶೋರಂನವರು ಮಾಡಿದ ಮಹಾ ಮೋಸಕ್ಕೆ ನೊಂದ ಬೈಕ್ ಸವಾರ ಮಾಡಿದ್ದೇನು ಗೊತ್ತಾ.?

ಗೋಪಿಯವರು ಟಿವಿಎಸ್ ವಿಕ್ಟರ್ ಬೈಕ್ ಅನ್ನು ಖರೀದಿಸಿ ಆರು ತಿಂಗಳಾದರೂ ಪ್ರತೀ 15ದಿನಗಳಿಗೊಮ್ಮೆ ಶೋರಂಗೆ ಹೋಗಬೇಕಾದ ಪರಿಸ್ಥಿತಿ ಬಂದರೂ ತೊಂದರೆಯು ಸರಿ ಹೋಗಲಿಲ್ಲ. ಆತ ನಿರಂತರವಾಗಿ ಸರ್ವೀಸ್ ಸೆಂಟರ್‍‍ಗೆ ಹೋಗುವುದನ್ನು ನೋಡಿ ಅಲ್ಲಿರುವವರೆ ಗೋಪಿಯವರನ್ನು ಹೀಯಾಳಿಸಲು ಶುರು ಮಾಡಿದರು.

MOST READ: ಎಲ್ಲೆಂದರಲ್ಲೇ ಪಾರ್ಕಿಂಗ್ ಮಾಡುವ ಮುನ್ನ ಹುಷಾರ್- ನಿಮ್ಮ ವಾಹನಕ್ಕೂ ಇದೇ ಪರಿಸ್ಥಿತಿ ಬರಬಹುದು..!

ಶೋರಂನವರು ಮಾಡಿದ ಮಹಾ ಮೋಸಕ್ಕೆ ನೊಂದ ಬೈಕ್ ಸವಾರ ಮಾಡಿದ್ದೇನು ಗೊತ್ತಾ.?

ಇದರಿಂದ ಬೇಸತ್ತ ಗೋಪಿಯವರು ಒಂದು ನಿರ್ಣಯಕ್ಕೆ ಬಂದರು. ತಾಳ್ಮೆ ಕಳೆದುಕೊಂಡಿದ್ದ ಅವರು ಮಾರನೆಯ ದಿನ ತಾವು ಖರೀದಿಸಿದ್ದ ಶೋರಂನ ಮುಂದೆಯೆ ಬೈಕ್ ಅನ್ನು ಕೊಂಡೊಯ್ದು ಕಲ್ಲಿನಿಂದ ಬೈಕ್ ಅನ್ನು ಚಚ್ಚಿಹಾಕಲು ಮುಂದಾದರು.

ಶೋರಂನವರು ಮಾಡಿದ ಮಹಾ ಮೋಸಕ್ಕೆ ನೊಂದ ಬೈಕ್ ಸವಾರ ಮಾಡಿದ್ದೇನು ಗೊತ್ತಾ.?

ಕಲ್ಲಿನಿಂದ ಆಗದ ಕೆಲಸವನ್ನು ಅರಿತು ಅಲ್ಲೆ ಬೈಕ್‍ನಲ್ಲಿದ್ದ ಪೆಟ್ರೋಲ್ ಅನ್ನು ತೆಗೆದು ಅದನ್ನು ಬೈಕಿನ ಮೇಲೆ ಸುರಿದು ತಡಮಾಡದೆ ನಡುರಸ್ತೆಯಲ್ಲಿಯೆ ಬೆಂಕಿ ಹಚ್ಚಿದರು. ಈ ದೃಶ್ಯ ಕಂಡ ಸ್ಥಳಿಯರು ತಕ್ಷಣವೇ ಅಲ್ಲಿ ಸುತ್ತುವರಿದರು. ಇದನ್ನು ಕಂಡ ಶೋರಂ ಮಂದಿ ಇದನ್ನು ನಿಲ್ಲಿಸಲು ಗೋಪಿಯವರನ್ನು ಒತ್ತಾಯಿಸಿದರು.

ಅಷ್ಟರಲ್ಲೇ ಬೆಂಕಿಯು ಬೈಕಿನ ಸುತ್ತಲೂ ಆವರಿಸಿಕೊಂಡು ಉರಿಯಲು ಶುರುವಾಯಿತು. ಈ ದೃಶ್ಯವನ್ನು ಕಾಣಲು ಬಂದ ಅಲ್ಲಿನ ಜನರು ಗೋಪಿಯವರು ಕೋಪದಿಂದ ಮಾಡಿದ ವರ್ತನೆಗಳನ್ನ ತಮ್ಮ ತಮ್ಮ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ..

ಶೋರಂನವರು ಮಾಡಿದ ಮಹಾ ಮೋಸಕ್ಕೆ ನೊಂದ ಬೈಕ್ ಸವಾರ ಮಾಡಿದ್ದೇನು ಗೊತ್ತಾ.?

ಇಂತಹ ಘಟನೆಗಳು ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲದೇ ದೇಶಾದ್ಯಂತ ನಡೆಯುತ್ತಲೇ ಇರುತ್ತವೆ. ಕೆಲವು ಬಾರಿ ವಾಹನ ತಯಾರಕ ಸಂಸ್ಥೆಗಳು ಮಾಡುವ ತಪ್ಪಿಗೆ ಡೀಲರ್‍‍ಗಳು ಬಲಿಯಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ಡೀಲರ್‍‍‍ಗಳು ಬೈಕ್ ಅನ್ನು ರೀಪ್ಲೇಸ್ ಮಾಡಲೇಬೇಕಾಗಿದ್ದು, ವಾಹನ ತಯಾರಕ ಸಂಸ್ಥೆಗಳು ಇಂತಹ ಘಟನೆಗಳು ಮುಂದಾಗದಂತೆ ಎಚ್ಚೆತ್ತುಕೊಳ್ಳಬೇಕಾಗಿದೆ.

MOST READ: ಭಾರತದಲ್ಲಿಯೆ ತಯಾರಾಗುತ್ತಿದೆ ಮಾರುತಿ ಸುಜುಕಿ ಎರ್ಟಿಗಾ ಕಾರು

ಶೋರಂನವರು ಮಾಡಿದ ಮಹಾ ಮೋಸಕ್ಕೆ ನೊಂದ ಬೈಕ್ ಸವಾರ ಮಾಡಿದ್ದೇನು ಗೊತ್ತಾ.?

ಜೊತೆಗೆ ಸರ್ವೀಸ್ ಸೆಂಟರ್‍‍ಗಳು ಇಂತಹ ಘಟನೆಗಳಾ ಬಗ್ಗೆ ಸರಿಯಾದ ತೀರ್ಮಾನಗಳನ್ನು ಕೈಗೊಳ್ಳಬೇಕಾಗಿದ್ದು, ವಾಹನ ಮಾಲೀಕರು ಕೂಡಾ ತಾಂತ್ರಿಕ ಸಮಸ್ಯೆಗಳ ಬಗ್ಗೆ ಎಚ್ಚರವಹಿಸಿ ಆಗಬಹುದಾದ ಅನಾಹುತಗಳ ಬಗ್ಗೆ ಎಚ್ಚರವಹಿಸುವುದು ಕೂಡಾ ಮುಖ್ಯವಾಗಿರುತ್ತೆ.

Most Read Articles

Kannada
Read more on auto news
English summary
Customer fired new bike because of bad service experience.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X