ಹೋಂಡಾ ಆಕ್ಟೀವಾ ಸ್ಕೂಟರ್ ಖರೀದಿಸಲು ಮುಗಿಬೀಳುತ್ತಿರುವ ಗ್ರಾಹಕರು

ಹೋಂಡಾ ಮೋಟಾರ್‌ಸೈಕಲ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಸ್ಕೂಟರ್‍‍ಗಳನ್ನು ಬಿಡುಗಡೆಗೊಳಿಸಿದ್ದು, ಅಕ್ಟೀವಾ ಸ್ಕೂಟರ್ ಗ್ರಾಹಕರ ನೆಚ್ಚಿನ ಆಯ್ಕೆಯಾಗಿದೆ. ಯಾಕೆಂದ್ರೆ ಹೋಂಡಾ ಟೂ ವ್ಹೀಲರ್ ಸಂಸ್ಥೆಯ ಆಕ್ಟೀವಾ ಸ್ಕೂಟರ್ ಬಿಡುಗಡೆಗೊಂಡಾಗಿನಿಂದಲೂ ಸುಮಾರು 2 ಕೋಟಿಗೂ ಅಧಿಕ ಸ್ಕೂಟರ್‌ಗಳು ಮಾರಾಟಗೊಂಡಿದೆ.

ಹೋಂಡಾ ಆಕ್ಟೀವಾ ಸ್ಕೂಟರ್ ಖರೀದಿಸಲು ಮುಗಿಬೀಳುತ್ತಿರುವ ಗ್ರಾಹಕರು

ಅಂದ್ರೆ, ಲೆಕ್ಕದ ಪ್ರಕಾರ ದೇಶದಲ್ಲಿ ಪ್ರತೀ 9 ಸೇಕೆಂಡುಗಳಿಗೆ ಒಂದು ಆಕ್ಟೀವಾ ಸ್ಕೂಟರ್ ಮಾರಾಟವಾಗುತ್ತಿದ್ದು, ಇದರಲ್ಲಿರುವ ವಿನೂತನ ವೈಶಿಷ್ಟ್ಯತೆಗಳು ಮತ್ತು ಕಡಿಮೆ ಬೆಲೆಯಿಂದಾಗಿ ಗ್ರಾಹಕರು ಈ ಸ್ಕೂಟರ್ ಅನ್ನು ಕೊಳ್ಳಲು ಮುಗಿಬೀಳುತ್ತಿದ್ದಾರೆ ಎಂದೇ ಹೇಳಬಹುದು.

ಹೋಂಡಾ ಆಕ್ಟೀವಾ ಸ್ಕೂಟರ್ ಖರೀದಿಸಲು ಮುಗಿಬೀಳುತ್ತಿರುವ ಗ್ರಾಹಕರು

ಮೊದಲ ತಲೆಮಾರಿನ ಆಕ್ಟಿವಾ ಸ್ಕೂಟರ್‍‍ಗಳು ಬಿಡುಗಡೆಗೊಂಡ 15 ವರ್ಷದ ನಂತರ 1 ಕೋಟಿ ಸ್ಕೂಟರ್‍‍ಗಳು ಮಾರಾಟವಾಗಿದ್ದು, ಇನ್ನುಳಿದ 1 ಕೋಟಿ ಸ್ಕೂಟರ್‌ಗಳು ಕೇವಲ 3 ವರ್ಷಗಳಲ್ಲಿ ಮಾರಾಟವಾಗಿದೆ ಎಂದರೆ ನೀವು ನಂಬಲೇಬೇಕು.

ಹೋಂಡಾ ಆಕ್ಟೀವಾ ಸ್ಕೂಟರ್ ಖರೀದಿಸಲು ಮುಗಿಬೀಳುತ್ತಿರುವ ಗ್ರಾಹಕರು

2001ರಲ್ಲಿ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಆಕ್ಟೀವಾ ಸ್ಕೂಟರ್‍‍ಗಳು ಮೊದಲ ವರ್ಷದಲ್ಲಿ 55 ಸಾವಿರ, 2003ರಲ್ಲಿ 5 ಲಕ್ಷ, 2005ರಲ್ಲಿ 10 ಲಕ್ಷ, 2012ರಲ್ಲಿ 50 ಲಕ್ಷ ಮತ್ತು 2015ರಲ್ಲಿ ಸರಾಸರಿಯಾಗಿ 1 ಕೋಟಿ ಸ್ಕೂಟರ್‌ಗಳು ಮಾರಾಟವಾಗಿವೆ.

ಹೋಂಡಾ ಆಕ್ಟೀವಾ ಸ್ಕೂಟರ್ ಖರೀದಿಸಲು ಮುಗಿಬೀಳುತ್ತಿರುವ ಗ್ರಾಹಕರು

ಇನ್ನು ಹೋಂಡಾ ಸಂಸ್ಥೆಯು ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಆಕ್ಟೀವಾ 5ಜಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಮಾದರಿಗಳಲ್ಲಿ ಹೋಂಡಾ ಆಕ್ಟಿವಾ 5ಜಿ ಸ್ಕೂಟರ್‌ಗಳನ್ನು ಅಭಿವೃದ್ಧಿ ಮಾಡಲಾಗಿರುವುದು ಸ್ಕೂಟರ್ ಮಾರಾಟಕ್ಕೆ ಮತ್ತಷ್ಟು ಪೂರಕವಾಗಿದೆ.

ಹೋಂಡಾ ಆಕ್ಟಿವಾ

ದೆಹಲಿ ಎಕ್ಸ್‌ಶೋರಂ ಪ್ರಕಾರ ಆಕ್ಟಿವಾ 5ಜಿ ಎಸ್‌ಟಿಡಿ ಆವೃತ್ತಿಯು ರೂ.52,460 ಬೆಲೆ ಪಡೆದುಕೊಂಡಿದ್ದಲ್ಲಿ ಆಕ್ಟಿವಾ 5ಜಿ ಡಿಎಲ್‌ಎಕ್ಸ್ ಮಾದರಿಯು ರೂ.54,325ಕ್ಕೆ ಮಾರಾಟವಾಗುತ್ತಿದೆ.

ಹೋಂಡಾ ಆಕ್ಟೀವಾ ಸ್ಕೂಟರ್ ಖರೀದಿಸಲು ಮುಗಿಬೀಳುತ್ತಿರುವ ಗ್ರಾಹಕರು

ಎಂಜಿನ್ ಸಾಮರ್ಥ್ಯ

ಆಕ್ಟಿವಾ 4ಜಿ ಸ್ಕೂಟರ್‌ಗಳಿಂದಲೇ ಎರವಲು ಪಡೆಯಲಾಗಿರುವ 109.19 ಸಿಸಿ ಎಂಜಿನ್ ಹೊಂದಿರುವ ಆಕ್ಟಿವಾ 5ಜಿ ಆವೃತ್ತಿಗಳು, 8-ಬಿಎಚ್‌ಪಿ, 9-ಎನ್ಎಂ ಟಾರ್ಕ್ ಉತ್ಪಾದನಾ ಶೈಲಿಯನ್ನು ಹೊಂದಿವೆ.

ಹೋಂಡಾ ಆಕ್ಟೀವಾ ಸ್ಕೂಟರ್ ಖರೀದಿಸಲು ಮುಗಿಬೀಳುತ್ತಿರುವ ಗ್ರಾಹಕರು

ಜೊತೆಗೆ 5.3 ಲೀಟರ್ ಇಂಧನ ಟ್ಯಾಂಕ್, 130 ಎಂಎಂ ಡ್ರಮ್ ಬ್ರೇಕ್, ಕೊಂಬಿ ಬ್ರೇಕ್ ಸಿಸ್ಟಂ, ನ್ಯೂ ಕ್ರೋಮ್ ಹೈಲೆಟ್ಸ್, ಮೆಟಲ್ ಮಫ್ಲರ್ ಪ್ರೋಜೆಕ್ಟರ್ ಮತ್ತು ಸಾಂಪ್ರದಾಯಿಕ ಬಣ್ಣಗಳೊಂದಿಗೆ ಹೊಸ ರೂಪದಲ್ಲಿ ಅಭಿವೃದ್ಧಿಪಡಿಸಲಾದ 5 ಪ್ರಮುಖ ಬಣ್ಣಗಳಲ್ಲಿ ಲಭ್ಯವಾಗಿವೆ.

ಹೋಂಡಾ ಆಕ್ಟೀವಾ ಸ್ಕೂಟರ್ ಖರೀದಿಸಲು ಮುಗಿಬೀಳುತ್ತಿರುವ ಗ್ರಾಹಕರು

ಮೊದಲ ಬಾರಿಗೆ 110 ಸಿಸಿ ಸ್ಕೂಟರ್ ಮಾದರಿಗಳಲ್ಲಿ ಫುಲ್ ಎಲ್ಇಡಿ ಹೆಡ್‌ಲೈಟ್ ನೀಡಲಾಗಿದ್ದು, ಡಿಜಿಟಲ್ ಅನ್‌ಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಇಕೋ ಸ್ಪೀಡ್, ಸರ್ವಿಸ್ ಡಿವ್ ಇಂಡಿಕೇಟರ್ ಸಹ ಇದರಲ್ಲಿದೆ.

ಹೋಂಡಾ ಆಕ್ಟೀವಾ ಸ್ಕೂಟರ್ ಖರೀದಿಸಲು ಮುಗಿಬೀಳುತ್ತಿರುವ ಗ್ರಾಹಕರು

ಮತ್ತೊಂದು ಪ್ರಮುಖ ವಿಚಾರ ಅಂದ್ರೆ ಈ ಸ್ಕೂಟರಿನಲ್ಲಿರುವ ನಾಲ್ಕು ಬಗೆಯ ಲಾಕಿಂಗ್ ಓಪನರ್ ಸಿಸ್ಟಂಗಳಿಗೆ ಒಂದೇ ಬಗೆಯ ಓಪನರ್ ಸ್ವಿಚ್ ನೀಡಲಾಗಿದ್ದು, ಹಳೆಯ ಮಾದರಿಗಳಿಂದ ಹೆಚ್ಚಿನ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ.

MOST READ: ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

ಹೋಂಡಾ ಆಕ್ಟೀವಾ ಸ್ಕೂಟರ್ ಖರೀದಿಸಲು ಮುಗಿಬೀಳುತ್ತಿರುವ ಗ್ರಾಹಕರು

ಬ್ರೇಕಿಂಗ್ ಸಿಸ್ಟಂ

ಹೊಸ ಆಕ್ಟಿವಾ 5ಜಿ ಸ್ಕೂಟರ್‌ಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 10 ಇಂಚಿನ ಟ್ಯೂಬ್ ಲೆಸ್ ಟೈರ್ ಜೊತೆ ಹೋಂಡಾ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ(ಸಿಬಿಎಸ್) ಪಡೆದಿರುವುದಲ್ಲದೇ ಎರಡು ಬದಿ ಚಕ್ರಗಳಿಗೂ 130 ಎಂಎಂ ಡ್ರಮ್ ಬ್ರೇಕ್ ಒದಗಿಸಲಾಗಿದೆ.

Most Read Articles

Kannada
English summary
Honda Activa sales cross 2 crore in India – 1 new Activa is sold every 9 seconds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X