ಬಿಎಸ್ 6 ಎಂಜಿನ್ ಪ್ರೇರಿತ ಬೈಕ್‌ಗಳನ್ನು ರಸ್ತೆಗಿಳಿಸಲಿದೆ ರಾಯಲ್ ಎನ್‌ಫೀಲ್ಡ್
ಇತ್ತೀಚೆಗಷ್ಟೇ ಬಿಎಸ್-3 ವಾಹನಗಳು ನಿಷೇಧಗೊಂಡ ಬಳಿಕ ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಮಾತ್ರ ಅವಕಾಶವಿದ್ದು, ಈ ನಡುವೆ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಒಂದು ಹೆಜ್ಜೆ ಮುಂದೆ ಹೋಗಿ ಬಿಎಸ್-6 ಎಂಜಿನ್ ಉತ್ಪಾದನೆಗೆ ಮುಂದಾಗಿದೆ.
ಭಾರತೀಯ ಆಟೋಮೊಬೈಲ್ ಉದ್ಯಮದಲ್ಲಿ ಇತ್ತೀಚೆಗಷ್ಟೇ ಬಿಎಸ್-3 ವಾಹನಗಳು ನಿಷೇಧಗೊಂಡ ಬಳಿಕ ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಮಾತ್ರ ಅವಕಾಶವಿದ್ದು, ಈ ನಡುವೆ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಒಂದು ಹೆಜ್ಜೆ ಮುಂದೆ ಹೋಗಿ ಬಿಎಸ್-6 ಎಂಜಿನ್ ಉತ್ಪಾದನೆಗೆ ಮುಂದಾಗಿದೆ.

ಭವಿಷ್ಯದಲ್ಲಿ ಬರಲಿರುವ ಬಿಎಸ್-6 ಎಂಜಿನ್ ಪ್ರೇರಿತ ವಾಹನಗಳ ಉತ್ಪಾದನೆಗೆ ಯೋಜನೆ ರೂಪಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು, ಮುಂಬರುವ ದಿನಗಳಲ್ಲಿ ತನ್ನ ಜನಪ್ರಿಯ ಎಂಜಿನ್ ಮಾದರಿಗಳಾದ 346ಸಿಸಿ ಮತ್ತು 499ಸಿಸಿ ಎಂಜಿನ್‌ಗಳನ್ನು ಬಿಎಸ್6 ವೈಶಿಷ್ಟ್ಯತೆಗಳೊಂದಿಗೆ ಉನ್ನತಿಕರಿಸಲಿದೆ.

ಇದಲ್ಲದೇ ಇದೇ ವರ್ಷ ಏಪ್ರಿಲ್‌ನಿಂದ 125ಸಿಸಿ ಮೇಲ್ಪಟ್ಟ ಬೈಕ್ ಮಾದರಿಗಳಲ್ಲಿ ಎಬಿಎಸ್ ಕೂಡಾ ಕಡ್ಡಾಯಗೊಳ್ಳಲಿದ್ದರೇ 2020ರ ವೇಳೆಗೆ ಬಿಎಸ್ 6 ಕೂಡಾ ಕಡ್ಡಾಯಗೊಳ್ಳಲಿದ್ದು, ಈ ಹಿನ್ನೆಲೆ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಬೈಕ್ ಮಾದರಿಗಳನ್ನು ಹೊಸತನದೊಂದಿಗೆ ಪರಿಚಯಿಸುತ್ತಿದೆ.

ಹೀಗಾಗಿ ರಾಯಲ್ ಎನ್‌ಫೀಲ್ಡ್ ಜನಪ್ರಿಯ ಉತ್ಪನ್ನಗಳಾದ ಬುಲೆಟ್, ಕ್ಲಾಸಿಕ್, ಥಂಡರ್‌ಬರ್ಡ್ ಮತ್ತು ಹಿಮಾಲಯನ್ ಬೈಕ್ ಮಾದರಿಗಳಲ್ಲಿ ಬಿಎಸ್ 6 ವೈಶಿಷ್ಟ್ಯತೆಗಳನ್ನು ಸೇರಿಸಲಿದ್ದು, ಪ್ರತಿ ಮಾದರಿಯು ಎಬಿಎಸ್ ಸೇರಿದಂತೆ ಹಲವು ಸುರಕ್ಷಾ ಸೌಲಭ್ಯಗಳನ್ನು ಪಡೆಯಲಿದೆ.

ಜೊತೆಗೆ ಬಿಎಸ್ 6 ಪ್ರಕಾರ 350 ಸಿಸಿ ಮೇಲ್ಪಟ್ಟ ಬೈಕ್ ಮಾದರಿಗಳಲ್ಲಿ ಫ್ಯೂಲ್ ಇಂಜೆಕ್ಷನ್ ಎಂಜಿನ್ ಕಡ್ಡಾಯವಾಗಿರಲಿದ್ದು, ಈಗಾಗಲೇ ರಾಯಲ್ ಎನ್‌ಫೀಲ್ಡ್ ತನ್ನ ಹಿಮಾಲಯನ್ ಬೈಕ್‌ಗಳಲ್ಲಿ ಪರಿಚಯಿಸುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನಬಹುದು.

ಇದಲ್ಲದೇ ಭಾರತ ಸೇರಿದಂತೆ ಹಲವು ಮುಂದುವರಿದ ರಾಷ್ಟ್ರಗಳಲ್ಲಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಉತ್ಪನ್ನಗಳ ಮಾರಾಟ ಪ್ರಕ್ರಿಯೆ ಇದ್ದು, ಒಂದು ವೇಳೆ 2019ರ ಒಳಗಾಗಿ ಬಿಎಸ್-6 ವಾಹನಗಳು ಬಿಡುಗಡೆಯಾಗಲಿದ್ದಲ್ಲಿ ಜಾಗತಿಕ ಮಟ್ಟದಲ್ಲೂ ಆರ್‌ಇ ಹೊಸ ಮೈಲಿಗಲ್ಲು ಸಾಧಿಸಲಿದೆ.

ಏನಿದು ಬಿಎಸ್ 6?
ಯುರೋಪಿನ್ ಮಾರುಕಟ್ಟೆಗಳಲ್ಲಿ ಈಗಾಗಲೇ ಯುರೊ 6 ಕಡ್ಡಾಯವಾಗಿದ್ದು, ಬಿಡುಗಡೆಯಾಗುವ ಎಲ್ಲಾ ವಾಹನಗಳು ಹೆಚ್ಚಿನ ಸುರಕ್ಷಾ ಸೌಲಭ್ಯ ಹೊಂದಿರಬೇಕಲ್ಲದೇ ಪರಿಸರ ಮಾಲಿನ್ಯ ತಗ್ಗಿಸಬಹುದು ಸುಧಾರಿತ ಎಂಜಿನ್ ಪಡೆದುಕೊಂಡಿರುವುದು ಕಡ್ಡಾಯ.

ಹೀಗಾಗಿ ಕೇಂದ್ರ ಸರ್ಕಾರ ಕೂಡಾ 2020ರ ವೇಳೆಗೆ ಬಿಎಸ್ 4 ಮಾದರಿಗಳನ್ನು ನಿಷೇಧಗೊಳಿಸಿ ಬಿಎಸ್ 6 ಜಾರಿ ಮಾಡಲಿದ್ದು, ಈ ಹಿನ್ನೆಲೆ ಎಲ್ಲಾ ವಾಹನ ಉತ್ಪಾದಕರು ಕೂಡಾ ಬಿಎಸ್ 6 ಎಂಜಿನ್ ಮಾದರಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದ್ದಾರೆ ಎನ್ನಬಹುದು.
Trending On DriveSpark Kannada:
ರಸ್ತೆ ಮಧ್ಯೆದಲ್ಲೇ ಹೊತ್ತಿ ಉರಿದ ಕೆಟಿಎಂ ಡ್ಯೂಕ್ 390 ಬೈಕ್
ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?


Click it and Unblock the Notifications








