ಟಿವಿಎಸ್ ಬಹುನೀರಿಕ್ಷಿತ ಅಪಾಚೆ ಆರ್‌ಟಿಆರ್ 180 ರೇಸ್ ಎಡಿಷನ್ ಬಿಡುಗಡೆ

Written By:

ದ್ವಿಚಕ್ರ ವಾಹನ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಿವಿಎಸ್ ಸಂಸ್ಥೆಯು ಕಳೆದ ವಾರವಷ್ಟೇ ಅಪಾಚೆ ಆರ್‌ಟಿಆರ್ 160 ರೇಸ್ ಎಡಿಷನ್ ಬಿಡುಗಡೆ ಮಾಡಿದ್ದು, ಇದೀಗ ಅಪಾಚೆ ಆರ್‌ಟಿಆರ್ 180 ರೇಸ್ ಎಡಿಷನ್ ಬಿಡುಗಡೆ ಮಾಡಿದೆ.

ಟಿವಿಎಸ್ ಬಹುನೀರಿಕ್ಷಿತ ಅಪಾಚೆ ಆರ್‌ಟಿಆರ್ 180 ರೇಸ್ ಎಡಿಷನ್ ಬಿಡುಗಡೆ

ರೆಗ್ಯುಲರ್ ಮಾದರಿಗಿಂತ ವಿನ್ಯಾಸದಲ್ಲಿ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿರುವ ಅಪಾಚೆ ಆರ್‌ಟಿಆರ್ 180 ರೇಸ್ ಎಡಿಷನ್ ಬೈಕ್‌ಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 83,233 ಬೆಲೆ ಹೊಂದಿದ್ದು, ಬೈಕಿನ ಹೊರ ವಿನ್ಯಾಸ ಹೆಚ್ಚಿಸಲು ಬೈಕಿನ ಮಡ್ ಗಾರ್ಡ್ ಮೇಲೆ ಬಳೆಯಲಾಗಿರುವ ಪರ್ಲ್ ವೈಟ್ ಮತ್ತು ರೆಡ್ ಸ್ಟ್ರಿಪ್‌ಗಳು ಬೈಕಿಗೆ ರಗಡ್ ಲುಕ್ ನೀಡಿವೆ.

ಟಿವಿಎಸ್ ಬಹುನೀರಿಕ್ಷಿತ ಅಪಾಚೆ ಆರ್‌ಟಿಆರ್ 180 ರೇಸ್ ಎಡಿಷನ್ ಬಿಡುಗಡೆ

ಜೊತೆಗೆ ಇಂಧನ ಟ್ಯಾಂಕ್ ಮತ್ತು ರಿಯರ್ ಕೌಲ್ ಮೇಲೂ ಪರ್ಲ್ ವೈಟ್ ಮತ್ತು ರೆಡ್ ಸ್ಟ್ರಿಪ್‌ ಬಳಕೆ ಮಾಡಲಾಗಿದ್ದು, ಹೆಸರಿಗೆ ತಕ್ಕಂತೆ ಹೊಸ ಬೈಕ್ ಮಾದರಿಯನ್ನು ಸ್ಪೋರ್ಟಿ ವಿನ್ಯಾಸಗಳೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.

ಟಿವಿಎಸ್ ಬಹುನೀರಿಕ್ಷಿತ ಅಪಾಚೆ ಆರ್‌ಟಿಆರ್ 180 ರೇಸ್ ಎಡಿಷನ್ ಬಿಡುಗಡೆ

ಜೊತೆಗೆ ಹೊಸ ಬೈಕ್‌ಗಳಲ್ಲಿ 3ಡಿ ಟಿವಿಎಸ್ ಲೊಗೊ, ರೇಸಿಂಗ್ ಬ್ರಾಂಡ್ ರಿಮ್ ಸ್ಟಿಕ್ಕರಿಂಗ್ ಅಲಾಯ್ ಚಕ್ರಗಳು ಮುಂತಾದ ಫೀಚರ್‌ಗಳನ್ನು ಪಡೆದಿದ್ದು, ಸುರಕ್ಷತೆಗಾಗಿ ಎರಡು ಬದಿಯ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ಸೇರಿಸಲಾಗಿದೆ.

ಟಿವಿಎಸ್ ಬಹುನೀರಿಕ್ಷಿತ ಅಪಾಚೆ ಆರ್‌ಟಿಆರ್ 180 ರೇಸ್ ಎಡಿಷನ್ ಬಿಡುಗಡೆ

ಹಾಗೆಯೇ ಡಿಜಿಟಲ್ ಡ್ಯಾಶ್‌ಬೋರ್ಡ್‌ನಲ್ಲಿ ವೇಗಮಾಪಕ, ಲ್ಯಾಪ್ ಟೈಮರ್, ಸರ್ವಿಸ್ ಇಂಡಿಕೇಟರ್ ಇತ್ಯಾದಿ ಸೌಲಭ್ಯಗಳನ್ನು ಪಡೆಯಲಿದ್ದು, ಒಟ್ಟಾರೆ ವಿನ್ಯಾಸಗಳನ್ನು ಗಮನಿಸಿದ್ದಲ್ಲಿ ತಾಂತ್ರಿಕ ಅಂಶಗಳನ್ನು ಹೊರತುಪಡಿಸಿ ಸಾಮಾನ್ಯ ಅಪಾಚೆ ಆರ್‌ಟಿಆರ್ 180 ಬೈಕ್‌ಗಿಂತ ಇದು ಕೊಂಚ ಭಿನ್ನತೆ ಪಡೆದಿದೆ.

ಟಿವಿಎಸ್ ಬಹುನೀರಿಕ್ಷಿತ ಅಪಾಚೆ ಆರ್‌ಟಿಆರ್ 180 ರೇಸ್ ಎಡಿಷನ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಅಪಾಚೆ ಆರ್‍‍‍ಟಿಆರ್ 180 ರೇಸ್ ಎಡಿಷನ್ ಬೈಕ್‍‍ಗಳು 177.4 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 16.3-ಬಿಹೆಚ್‍ಪಿ ಹಾಗು 15.5-ಎನ್ಎಂ ಟಾರ್ಕ್‍ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಟಿವಿಎಸ್ ಬಹುನೀರಿಕ್ಷಿತ ಅಪಾಚೆ ಆರ್‌ಟಿಆರ್ 180 ರೇಸ್ ಎಡಿಷನ್ ಬಿಡುಗಡೆ

ಈ ಮೂಲಕ ಉತ್ತಮ ಪವರ್ ಉತ್ಪಾದನೆ ಮಾಡುವ ಅಪಾಚೆ ಆರ್‌ಟಿಆರ್ 180 ರೇಸ್ ಎಡಿಷನ್‌ಗಳು ಕೇವಲ 4.96 ಸೆಕೆಂಡುಗಳಲ್ಲೇ 60 ಕೀ.ಮೀ. ವೇಗವರ್ಧನೆ ಮಾಡುವ ಗುಣಹೊಂದಿದ್ದು, ಜೊತೆಗೆ ಬೆಸ್ಟ್ ಇನ್ ಕ್ಲಾಸ್ 'ಪವರ್-ಟು-ವೇಟ್' ಅನುಪಾತ ಪಡೆದಿವೆ.

ಟಿವಿಎಸ್ ಬಹುನೀರಿಕ್ಷಿತ ಅಪಾಚೆ ಆರ್‌ಟಿಆರ್ 180 ರೇಸ್ ಎಡಿಷನ್ ಬಿಡುಗಡೆ

ಹೀಗಾಗಿ ಕಡಿಮೆ ದರಗಳಲ್ಲಿ ರೇಸ್ ಎಡಿಷನ್ ಬೈಕ್ ಇಷ್ಟಪಡುವ ಗ್ರಾಹಕರಿಗೆ ಇದು ಇಷ್ಟವಾಗಲಿದ್ದು, ಫ್ರಂಟ್ ಎಂಡ್ ಶಾರ್ಪ್ ಹೆಡ್‌ಲ್ಯಾಂಪ್ ವಿನ್ಯಾಸಗಳು ಮತ್ತು ಸುರಕ್ಷೆತೆಗಾಗಿ ಎರಡು ಬದಿಯ ಚಕ್ರಗಳಲ್ಲೂ ನೀಡಲಾಗಿರುವ ಡಿಸ್ಕ್ ಬ್ರೇಕ್ ಆಯ್ಕೆಯೂ ಬೈಕಿನ ವಿಶೇಷತೆಯನ್ನು ಹೆಚ್ಚಿಸಿದೆ.

ಟಿವಿಎಸ್ ಬಹುನೀರಿಕ್ಷಿತ ಅಪಾಚೆ ಆರ್‌ಟಿಆರ್ 180 ರೇಸ್ ಎಡಿಷನ್ ಬಿಡುಗಡೆ

ಒಟ್ಟಿನಲ್ಲಿ ಅಪಾಚೆ ಆರ್‌ಟಿಆರ್ 200 4ವಿ ರೇಸ್ ಎಡಿಷನ್ , ಅಪಾಚೆ ಆರ್‌ಟಿಆರ್ 160 ರೇಸ್ ಎಡಿಷನ್ ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಕುತೂಹಲ ಹುಟ್ಟುಹಾಕಿದ್ದ ಟಿವಿಎಸ್ ಸಂಸ್ಥೆಯು ಇದೀಗ ಅಪಾಚೆ ಆರ್‌ಟಿಆರ್ 180 ರೇಸ್ ಎಡಿಷನ್ ಬಿಡುಗಡೆ ಮಾಡಿರುವುದು ಪ್ರಮುಖ ಬೈಕ್ ಮಾದರಿಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Read more on tvs apache
English summary
TVS Apache RTR 180 Race Edition Launched In India; Priced At Rs 83,233.
Story first published: Wednesday, May 9, 2018, 19:51 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark