ಹೊಸದೊಂದು ಬಣ್ಣದಲ್ಲಿ ಕಾಣಿಸಿಕೊಂಡ ಯಮಹಾ ಆರ್‍15 ವಿ3.0 ಬೈಕ್..

Written By: Rahul TS

ಜನವರಿ ತಿಂಗಳಲ್ಲಿ ಬಿಡುಗಡೆಗೊಂಡ ಯಮಾಹ ಸಂಸ್ಥೆಯ ಹೊಸ ಆರ್15 ವಿ3.0 ಬೈಕುಗಳು ಆರಂಭದಲ್ಲಿ ರೇಸಿಂಗ್ ಬ್ಲೂ ಹಾಗು ಥಂಡರ್ ಗ್ರೇ ಬಣ್ಣಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿತ್ತು. ಆದರೆ ಇದೀಗ ಚೆನ್ನೈ‍‍ನಲ್ಲಿನ ಯಮಹಾ ಡೀಲರ್ ಹತ್ತಿರ ಮೇಟ್ ಬ್ಲಾಕ್ ಬಣ್ಣದಲ್ಲಿ ಕಾಣಿಸಿಕೊಂಡಿದೆ.

ಹೊಸದೊಂದು ಬಣ್ಣದಲ್ಲಿ ಕಾಣಿಸಿಕೊಂಡ ಯಮಹಾ ಆರ್‍15 ವಿ3.0 ಬೈಕ್..

ಈಗಾಗಲೆ ಬಿಡುಗಡೆಗೊಂಡು ಜನಪ್ರಿಯತೆಯನ್ನು ಪಡೆದಿರುವ ಯಮಹಾ ಆರ್15 ವಿ3.0 ಬೈಕುಗಳು ಹೊಸ ಬಣ್ಣವನ್ನು ಪಡೆದಿದ್ದು, ಹೊಸ ಬಣ್ಣ ಪಡೆದಿರುವ ಬೈಕ್ ಪ್ರದರ್ಶಿಸಲು ಮಾತ್ರ ಎಂದು ಹೇಳಲಾಗಿದೆ. ಆದರೆ ಮೇಟ್ ಬ್ಲಾಕ್ ಬಣ್ಣವನ್ನು ಹೊತ್ತ ಯಮಹಾ ಆರ್15 ವಿ3.0 ಬೈಕುಗಳು ಈಗಾಗಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿದೆ.

ಹೊಸದೊಂದು ಬಣ್ಣದಲ್ಲಿ ಕಾಣಿಸಿಕೊಂಡ ಯಮಹಾ ಆರ್‍15 ವಿ3.0 ಬೈಕ್..

ಮೇಟ್ ಬ್ಲಾಕ್ ಬಣ್ಣದಲ್ಲಿ ಕಾಣಿಸಿಕೊಂಡ ಆರ್15 ವಿ3.0 ಬೈಕ್ ಇಂಡೋನೇಶಿಯಾದ ಮಾನ್ಸ್ಟರ್ ಎನರ್ಜಿ ಎಡಿಶನ್ ಥೀಮ್ ಅನ್ನು ಅಲಂಕರಿಸಿದೆ. ಜೊತೆಗೆ ಫ್ಯುಯಲ್ ಟ್ಯಾಂಕ್‍‍ನ ಮೇಲೆ ಮಾನ್ಸ್ಟರ್ ಲೋಗೊವನ್ನು ಕೂಡ ಬಳಾಸಲಾಗಿದೆ. ಬಣ್ಣವನ್ನು ಹೊರತು ಪಡಿಸಿ ಈ ಬೈಕ್ ಬೇರಾವ ಮಾರ್ಪಾಡುಗಳನ್ನು ಪಡೆದಿಲ್ಲ ಎನ್ನಲಾಗಿದೆ.

ಹೊಸದೊಂದು ಬಣ್ಣದಲ್ಲಿ ಕಾಣಿಸಿಕೊಂಡ ಯಮಹಾ ಆರ್‍15 ವಿ3.0 ಬೈಕ್..

ಅಂತರ್‌ರಾಷ್ಟ್ರೀಯ ಮಟ್ಟದ ಗುಣವಿಶೇಷಗಳನ್ನು ಹೊಂದಿರುವ ವೈಝಡ್ಎಫ್ ಆರ್ 15 ವಿ3 ಮಾದರಿಯು ಈ ಹಿಂದಿನ ವಿ2 ಮಾದರಿಯಲ್ಲೇ ಮುಂಭಾಗದ ವಿನ್ಯಾಸವನ್ನು ಪಡೆದುಕೊಂಡಿದೆ. ಜೊತೆಗೆ ಎಬಿಎಸ್, ಎಂಆರ್‌ಎಫ್ ಟೈರ್ ಸೇರಿದಂತೆ ಹಲವು ಸುಧಾರಿತ ಸುರಕ್ಷಾ ವಿಧಾನಗಳನ್ನು ಪಡೆದುಕೊಂಡಿದೆ.

ಹೊಸದೊಂದು ಬಣ್ಣದಲ್ಲಿ ಕಾಣಿಸಿಕೊಂಡ ಯಮಹಾ ಆರ್‍15 ವಿ3.0 ಬೈಕ್..

ಎಂಜಿನ್ ಸಾಮರ್ಥ್ಯ

155ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೊತೆ ಫ್ಯೂಲ್ ಇಂಜೆಕ್ಷನ್ ಹೊಂದಿರುವ ವೈಝಡ್ಎಫ್ ಆರ್ 15 ವಿ3 ಮಾದರಿಯು 19.7-ಬಿಎಚ್‌ಪಿ ಮತ್ತು 14.7-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೊಸದೊಂದು ಬಣ್ಣದಲ್ಲಿ ಕಾಣಿಸಿಕೊಂಡ ಯಮಹಾ ಆರ್‍15 ವಿ3.0 ಬೈಕ್..

ಇದಲ್ಲದೇ 6-ಸ್ಪೀಡ್ ಗೇರ್‌ಬಾಕ್ಸ್ ಸೇರಿದಂತೆ ಎಲ್ಇಡಿ ಹೆಡ್‌ಲ್ಯಾಂಪ್, ಸ್ಲಿಪರ್ ಕ್ಲಚ್ ಹೊಂದಿರುವ ವೈಝಡ್ಎಫ್ ಆರ್ 15 ವಿ3 ಬೈಕ್ ಆವೃತ್ತಿಯು ಸದ್ಯ ಮಾರುಕಟ್ಟೆಯಲ್ಲಿರುವ ಸುಜುಕಿ ಜಿಕ್ಸರ್ ಎಸ್ಎಫ್, ಹೋಂಡಾ ಹಾರ್ನೆಟ್, ಬಜಾಜ್ ಪಲ್ಸರ್ ಬೈಕ್‌ಗಳಿಗೆ ತೀವ್ರ ಸ್ಪರ್ಧೆ ಒಡ್ಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೊಸದೊಂದು ಬಣ್ಣದಲ್ಲಿ ಕಾಣಿಸಿಕೊಂಡ ಯಮಹಾ ಆರ್‍15 ವಿ3.0 ಬೈಕ್..

ಮೇಲೆ ಹೇಳಿರುವ ಹಾಗೆ ಭಾರತದಲ್ಲಿ ಎರಡು ಬಣ್ಣಗಳಲ್ಲಿ ಮಾತ್ರ ಯಮಹಾ ಆರ್15 ವಿ3.0 ಬೈಕ್ ಅನ್ನು ಪರಿಚಯಿಸಿದ್ದು, ಹೊಸದಾಗಿ ಮೇಟ್ ಬ್ಲಾಕ್ ಬಣ್ಣದಲ್ಲಿ ಕಾಣಿಸಿಕೊಂಡ ಬೈಕ್ ಕೇವಲ ಪ್ರದರ್ಶನಕ್ಕೆ ಮಾತ್ರವೇ ಹೊತ್ತು ಮಾರಾಟಕಲ್ಲ.

Source : Cartoq

ಹೊಸದೊಂದು ಬಣ್ಣದಲ್ಲಿ ಕಾಣಿಸಿಕೊಂಡ ಯಮಹಾ ಆರ್‍15 ವಿ3.0 ಬೈಕ್..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ಭಾರತದಲ್ಲಿ ನಡೆದ ಭೀಕರ 10 ರೈಲು ದುರಂತಗಳಿವು...

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

Read more on yamaha r15
English summary
Yamaha R15 V3.0 motorcycle in new colour spotted at a dealership in Chennai.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark