ಜಾವಾ ಬೈಕ್ ಚಾಲನೆ ಮಾಡಿದ ಮೊದಲ ಭಾರತೀಯ ಸಿ‍ಎಂ ಯಾರು ಗೊತ್ತಾ?

ಜನಪ್ರಿಯ ಜಾವಾ ಕಂಪನಿಯು ಹಲವು ವರ್ಷಗಳ ನಂತರ ಕಳೆದ ವರ್ಷ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಹೊಸ ರೂಪದಲ್ಲಿ ಬಿಡುಗಡೆಯಾಗಿರುವ ಜಾವಾ ಕಂಪನಿಯ ಬೈಕ್‍‍ಗಳು ರಾಯಲ್ ಎನ್‌ಫೀಲ್ಡ್ ಬೈಕ್‍‍ಗಳಿಗೆ ನೇರ ಸ್ಪರ್ಧೆಯನ್ನು ನೀಡುತ್ತವೆ.

ಜಾವಾ ಬೈಕ್ ಚಾಲನೆ ಮಾಡಿದ ಮೊದಲ ಭಾರತೀಯ ಸಿ‍ಎಂ ಯಾರು ಗೊತ್ತಾ?

ಜಾವಾ ಬೈಕ್‌ಗಳು ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿವೆ. ಹೀಗಾಗಿ ಜನರು ಇತರ ಬೈಕ್‍‍ಗಳಿಗಿಂತ ಈ ಬೈಕ್ ಅನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಜಾರ್ಖಂಡ್‌ನ ಹೊಸ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಸುದ್ದಿ ಚಾನೆಲ್‌ಗೆ ಸಂದರ್ಶನ ನೀಡುವಾಗ ಜಾವಾ ಕ್ಲಾಸಿಕ್‌ನಲ್ಲಿ ಸವಾರಿ ಮಾಡುತ್ತಿದ್ದರು.

ಜಾವಾ ಬೈಕ್ ಚಾಲನೆ ಮಾಡಿದ ಮೊದಲ ಭಾರತೀಯ ಸಿ‍ಎಂ ಯಾರು ಗೊತ್ತಾ?

ಅಂದ ಹಾಗೆ ಹೇಮಂತ್ ಸೊರೆನ್‍‍ರವರು ಜಾವಾ ಬೈಕ್ ಅನ್ನು ಚಾಲನೆ ಮಾಡಿದ ಭಾರತದ ರಾಜ್ಯವೊಂದರ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಜಾವಾ ಕಂಪನಿಯು ಕ್ಲಾಸಿಕ್ ಲೆಜೆಂಡ್ಸ್ ಎಂಬ ಕಂಪನಿಯ ಜೊತೆಗೂಡಿ ದೇಶಿಯ ಮಾರುಕಟ್ಟೆಗೆ ಮತ್ತೆ ಕಾಲಿಟ್ಟಿತು.

ಜಾವಾ ಬೈಕ್ ಚಾಲನೆ ಮಾಡಿದ ಮೊದಲ ಭಾರತೀಯ ಸಿ‍ಎಂ ಯಾರು ಗೊತ್ತಾ?

ಜಾರ್ಖಂಡ್ ಸಿ‍ಎಂರವರು ಚಲಾಯಿಸುತ್ತಿರುವ ಬೈಕಿನ ನಂಬರ್ ಪ್ಲೇಟ್‍‍ನಲ್ಲಿ ಬೈಕಿನ ನಂಬರ್ ಬದಲಿಗೆ ಜೆ‍ಎಂಎಂ ಎಂಬ ಬರಹವನ್ನು ಕಾಣಬಹುದು. ಈ ಬೈಕ್ ಸಿ‍ಎಂರವರ ಸ್ವಂತ ಬೈಕ್ ಹೌದೋ ಅಲ್ಲವೋ ಎಂದು ತಿಳಿದುಬಂದಿಲ್ಲ.

ಜಾವಾ ಬೈಕ್ ಚಾಲನೆ ಮಾಡಿದ ಮೊದಲ ಭಾರತೀಯ ಸಿ‍ಎಂ ಯಾರು ಗೊತ್ತಾ?

ಆದರೆ ಈ ಬೈಕ್ ಜೆಎಂಎಂ ರಾಜಕೀಯ ಪಕ್ಷದ ಯಾವುದಾದರೂ ಕಾರ್ಯಕರ್ತರ ಬೈಕ್ ಆಗಿರಬಹುದು. ಇತ್ತೀಚಿಗೆ ಜಾರ್ಖಂಡ್‍ನಲ್ಲಿ ಮುಕ್ತಾಯಗೊಂಡ ಚುನಾವಣೆಯಲ್ಲಿ ಜೆಎಂಎಂ ಹೆಚ್ಚಿನ ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದಿದೆ.

ಜಾವಾ ಬೈಕ್ ಚಾಲನೆ ಮಾಡಿದ ಮೊದಲ ಭಾರತೀಯ ಸಿ‍ಎಂ ಯಾರು ಗೊತ್ತಾ?

ಹೊಸ ಜಾವಾ ಬೈಕ್‍‍ಗಳು ಆಧುನಿಕ ಎಂಜಿನ್ ಹಾಗೂ ಟೆಕ್ನಾಲಜಿಯನ್ನು ಹೊಂದಿದ್ದರೂ, ಹಳೆಯ ಬೈಕ್‍‍ಗಳಲ್ಲಿದ್ದ ಸ್ಟೈಲ್ ಅನ್ನು ಮುಂದುವರೆಸಲಾಗಿದೆ. ಭಾರತದಲ್ಲಿ ಜಾವಾ ಕಂಪನಿಯನ್ನು ಮತ್ತೆ ಮಾರುಕಟ್ಟೆಗೆ ಕರೆತಂದ ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಜಂಟಿ ಒಡೆತನದಲ್ಲಿದೆ.

ಜಾವಾ ಬೈಕ್ ಚಾಲನೆ ಮಾಡಿದ ಮೊದಲ ಭಾರತೀಯ ಸಿ‍ಎಂ ಯಾರು ಗೊತ್ತಾ?

ಈ ಕಾರಣಕ್ಕಾಗಿ ಜಾವಾ ಬೈಕ್‍‍ನಲ್ಲಿರುವ ಅನೇಕ ಬಿಡಿಭಾಗಗಳನ್ನು ಮಹೀಂದ್ರಾ ಮೊಜೊ ಬೈಕಿನಿಂದ ಪಡೆಯಲಾಗಿದೆ. ಜಾವಾ ಬೈಕ್‌ಗಳಲ್ಲಿ ಅಳವಡಿಸಲಾಗಿರುವ ಎಂಜಿನ್ ಅನ್ನು ಸಹ ಮಹೀಂದ್ರಾ ಮೊಜೊದಿಂದ ಪಡೆಯಲಾಗಿದೆ.

ಜಾವಾ ಬೈಕ್ ಚಾಲನೆ ಮಾಡಿದ ಮೊದಲ ಭಾರತೀಯ ಸಿ‍ಎಂ ಯಾರು ಗೊತ್ತಾ?

293 ಸಿಸಿಯ, ಸಿಂಗಲ್ ಸಿಲಿಂಡರ್‍‍ನ ಈ ಎಂಜಿನ್ 27 ಬಿಹೆಚ್‌ಪಿ ಪವರ್ ಹಾಗೂ 28 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ, ಲಿಕ್ವಿಡ್-ಕೂಲಿಂಗ್, 4 ವಾಲ್ವ್ ಹೆಡ್, ಟ್ವಿನ್ ಎಕ್ಸಾಸ್ಟ್ ಪೋರ್ಟ್‌ ಹಾಗೂ ಟ್ವಿನ್ ಕ್ಯಾಮ್‌ಶಾಫ್ಟ್‌ಗಳಂತಹ ಫೀಚರ್‍‍ಗಳಿವೆ.

ಜಾವಾ ಬೈಕ್ ಚಾಲನೆ ಮಾಡಿದ ಮೊದಲ ಭಾರತೀಯ ಸಿ‍ಎಂ ಯಾರು ಗೊತ್ತಾ?

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ಹೋಲಿಸಿದರೆ, ಜಾವಾ ಕ್ಲಾಸಿಕ್ 300 ಬೈಕ್ ಹೆಚ್ಚು ಸ್ಮೂಥ್ ಆಗಿದ್ದು, ಕೆಲವು ವೈಬ್ರೇಷನ್‍‍ಗಳನ್ನು ಹೊಂದಿದೆ. ಜಾವಾ ಕ್ಲಾಸಿಕ್ ಬೈಕ್‍‍ಗಳು ಹಳೆಯ ಕ್ಲಾಸಿಕ್ ಜಾವಾ ಟು-ಸ್ಟ್ರೋಕ್ ಬೈಕ್‍‍ಗಳಿಂದ ಸ್ಪೂರ್ತಿ ಪಡೆದು ತಯಾರಾಗಿವೆ.

ಜಾವಾ ಬೈಕ್ ಚಾಲನೆ ಮಾಡಿದ ಮೊದಲ ಭಾರತೀಯ ಸಿ‍ಎಂ ಯಾರು ಗೊತ್ತಾ?

ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿರುವ ಅತ್ಯಂತ ಜನಪ್ರಿಯ ಬೈಕ್‍‍ಗಳಲ್ಲಿ ಒಂದಾಗಿದೆ. ಈ ಬೈಕ್‌ಗಳ ವಿತರಣೆಗಾಗಿ ಹೆಚ್ಚು ಕಾಲ ಕಾಯಬೇಕಾಗುತ್ತದೆ. ವಿತರಣಾ ಅವಧಿಯನ್ನು ಇಳಿಸುವುದಕ್ಕಾಗಿ ಜಾವಾ ಕಂಪನಿಯು ಹೆಚ್ಚಿನ ಸಂಖ್ಯೆಯಲ್ಲಿ ಬೈಕ್‍‍ಗಳನ್ನು ಉತ್ಪಾದಿಸುತ್ತಿದೆ.

ಬೆಲೆಯನ್ನು ಘೋಷಿಸಿದ ನಂತರ ಉಂಟಾದ ಭಾರಿ ಪ್ರತಿಕ್ರಿಯೆಯಿಂದಾಗಿ ಜಾವಾ ಕಂಪನಿಯು ಬೈಕ್‌ಗಳ ಆನ್‌ಲೈನ್ ಬುಕ್ಕಿಂಗ್‍‍ಗಳನ್ನು ಸ್ಥಗಿತಗೊಳಿಸಿತ್ತು. ಜಾರ್ಖಂಡ್ ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹೇಮಂತ್ ಸೊರೆನ್‍‍ರವರು ಬೈಕ್ ಪ್ರಿಯರಾಗಿದ್ದಾರೆ.

ಜಾವಾ ಬೈಕ್ ಚಾಲನೆ ಮಾಡಿದ ಮೊದಲ ಭಾರತೀಯ ಸಿ‍ಎಂ ಯಾರು ಗೊತ್ತಾ?

ಈ ಹಿಂದೆ ರಾಯಲ್ ಎನ್‍‍ಫೀಲ್ಡ್ ಸೇರಿದಂತೆ ಹಲವು ಬೈಕ್‍‍ಗಳನ್ನು ಚಲಾಯಿಸಿದ್ದರು. ಚುನಾವಣೆಯಲ್ಲಿ ಜಯಗಳಿಸಿದ ನಂತರ ಸೊರೆನ್ ತಮ್ಮ ಮನೆಗೆ ಜಾವಾ ಬೈಕಿನಲ್ಲಿಯೇ ಹೋಗಿ ವಿಜಯೋತ್ಸವವನ್ನು ಆಚರಿಸಿದ್ದಾರೆ. ಇದು ಅವರು ಬೈಕ್‍‍ಗಳ ಬಗ್ಗೆ ಹೊಂದಿರುವ ಆಸಕ್ತಿಯನ್ನು ತೋರಿಸುತ್ತದೆ.

Most Read Articles

Kannada
English summary
Jharkhand’s new CM is the first politician on a Jawa Bike - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X