ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬೈಕ್

ಕೆಟಿಎಂ ಸಂಸ್ಥೆಯು ತಮ್ಮ ಜನಪ್ರಿಯ ಕೆಟಿಎಂ 790 ಬೈಕಿನ ಅಡ್ವೆಂಚರ್ ಆರ್ ಮತ್ತು 790 ಅಡ್ವೆಂಚರ್ ಎಂಬ ಎರಡು ಮಾದರಿಗಳನ್ನು ಇಟಾಲಿಯ ಮಿಲಾನ್‍‍ನಲ್ಲಿ ನಡೆದ ಇಐಸಿಎಂಎ ಮೋಟಾರ್‍‍‍ಸೈಕಲ್ ಶೋನಲ್ಲಿ ಅನಾವರಣಗೊಳಿಸಿದ್ದು, ಇದೀಗ ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ಕೆಟಿಎಂ 390 ಬೈಕ್ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸುವ ವೇಳೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬೈಕ್

ಈ ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬೈಕಿನಲ್ಲಿ ಹೊಸದಾಗಿ ಲಗೇಜ್ ಬ್ಯಾಗ್ ಮತ್ತು ಟಿಎಫ್‍ಟಿ ಸ್ಕ್ರೀನ್ ಅನು ಕಾಣಬಹುದಾಗಿದೆ. ಕೆಟಿಎಂ ಸಂಸ್ಥೆಯು ಬಿಡುಗಡೆ ಮಾಡಲು ನಿರ್ಧರಿಸಿರುವ 390 ಅಡ್ವೆಂಚರ್ ಬೈಕ್‌ಗಳು ಕೆಟಿಎಂ ಜನಪ್ರಿಯ 1290 ಸೂಪರ್ ಅಡ್ವೆಂಚರ್ ಹೋಲಿಕೆಯನ್ನೇ ಪಡೆದುಕೊಂಡಿದ್ದು, ಇನ್ನು ಆರ್‌ಸಿ 390 ಬೈಕ್‌ಗಳು ಸದ್ಯ ಮಾರುಕಟ್ಟೆಯಲ್ಲಿರುವ ಮಾದರಿಯಲ್ಲಿ ಕೆಲವು ಅಡ್ವೆಂಚರ್ ವೈಶಿಷ್ಟ್ಯತೆಗಳನ್ನು ಹೊತ್ತು ಮಾರುಕಟ್ಟೆ ಪ್ರವೇಶ ಮಾಡುವ ಸಾಧ್ಯತೆಗಳಿವೆ. ಈ ಬೈಕಿನ ಜೊತೆಗೆ ಕೆಟಿಎಂ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ 790 ಡ್ಯೂಕ್ ಅನ್ನು ಸಹ ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಬೆಲೆಯಲ್ಲಿ ತುಸು ದುಬಾರಿಯಾಗಿರಲಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬೈಕ್

ಎಂಜಿನ್ ಸಾಮರ್ಥ್ಯ

ಬಿಡುಗಡೆಗೆ ಸಜ್ಜಾದ ಕೆಟಿಎಂ 390 ಅಡ್ವೆಂಚರ್ ಬೈಕ್‌ಗಳು 373ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರಲಿದ್ದು, ಬೆಸ್ಟ್ ಪರ್ಫಾಮೆನ್ಸ್ ಮಾದರಿಯಾಗಿ 43-ಬಿಎಚ್‌ಪಿ ಮತ್ತು 37-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬೈಕ್

ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಅಳವಡಿಕೆ ಹೊಂದಿರುವ ಕೆಟಿಎಂ 390 ಅಡ್ವೆಂಚರ್ ಬೈಕ್‌ ಮಾದರಿಯು, ಸುಧಾರಿತ ವಿನ್ಯಾಸಗಳಾದ ಟಿಪಿಎಫ್ ಇನ್ಟ್ರುಮೆಂಟ್ ಡಿಸ್‌ಪ್ಲೇ, ಲಾಂಗ್ ಟ್ರಾವೆಲ್ ಫ್ರಂಟ್ ಮತ್ತು ರಿಯರ್ ಸಸ್ಷೆನ್ ಜೋಡಣೆ ಹೊಂದಿರಲಿವೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬೈಕ್

ಇವುಗಳಲ್ಲದೇ ಬೈಕಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್ ತಂತ್ರಜ್ಞಾನದೊಂದಿಗೆ ಡ್ಯುಯಲ್ ಡಿಸ್ಕ್ ಬ್ರೇಕ್, ಸ್ಲಿಪ್ಪರ್ ಕ್ಲಚ್, ರೈಡ್ ಬೈ ವೈರ್ ಟೆಕ್ನಾಲಜಿ ಮತ್ತು ಪರ್ಫಾಮೆನ್ಸ್‌ಗೆ ಸಹಕಾರಿಯಾಗಬಲ್ಲ ಡ್ಯುಯಲ್-ಸ್ಪೋಟ್ ಟೈರ್ ಮಾದರಿಗಳನ್ನು ಬಳಕೆ ಮಾಡಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬೈಕ್

ಬಿಡುಗಡೆಯ ಅವಧಿ ಮತ್ತು ಬೆಲೆಗಳು (ಅಂದಾಜು)

2020ರಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋ ಮೇಳದಲ್ಲಿ ಡ್ಯೂಕ್ 390 ಅಡ್ವೆಂಚರ್ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಯೋಜಿಸಿರುವ ಕೆಟಿಎಂ ಸಂಸ್ಥೆಯು ಹೊಸ ಬೈಕಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ. 3 ಲಕ್ಷದಿಂದ ರೂ. 3.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬೈಕ್

ಕೆಟಿಎಂ 390 ಅಡ್ವೆಂಚರ್ ಬೈಕ್‌ಗಳು ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಗೊಂಡಿದ್ದೆ ಆದಲ್ಲಿ ಮಾರುಕಟ್ಟೆಯಲ್ಲಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮತ್ತು ಇತ್ತೀಚೆಗಷ್ಟೆ ಬಿಡುಗಡೆಯಾದ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ.

MOST READ: ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಕೆಟಿಎಂ ಡ್ಯೂಕ್ 390 ಅಡ್ವೆಂಚರ್ ಬೈಕ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತೀಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಆವೃತ್ತಿಗಳಿಗೆ ವಿಶೇಷ ಬೇಡಿಕೆಯಿದ್ದು, ಈ ಹಿನ್ನೆಲೆಯಲ್ಲಿ ಕೆಟಿಎಂ ಸಂಸ್ಥೆಯು ತನ್ನ ಬಹುನೀರಿಕ್ಷಿತ 390 ಅಡ್ವೆಂಚರ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿದೆ. ನಿಗದಿತ ಅವಧಿಯಲ್ಲಿ ಬಿಡುಗಡೆಗೊಂಡಲ್ಲಿ ಹೊಸ ಬೈಕ್‌ಗಳು ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಠಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
Read more on ಕೆಟಿಎಂ ktm duke
English summary
KTM Duke 390 Adventure Bike Production Model Spotted With Touring Accessories. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X