Just In
Don't Miss!
- Lifestyle
ಮಂಗಳವಾರದ ದಿನ ಭವಿಷ್ಯ 10-12-2019
- News
ಸಿದ್ದು, ದಿನೇಶ್ ಗುಂಡೂರಾವ್ ರಾಜೀನಾಮೆ: ಹಾಗೆ ಸುಮ್ಮನೆ!
- Movies
ಮಹತ್ವದ ಪ್ರಾಜೆಕ್ಟ್ ಗೆ ಕೈ ಹಾಕಿದ ಕ್ರಿಕೆಟಿಗ ಎಂ ಎಸ್ ಧೋನಿ
- Finance
ಡಿಸೆಂಬರ್ 9ರ ಚಿನ್ನ- ಬೆಳ್ಳಿ ದರ ಹೀಗಿದೆ
- Technology
ನಿಮ್ಮ ಪಿಸಿಗೆ ವೈರಸ್ ಅಟ್ಯಾಕ್ ಆಗಿದೆಯಾ ಎಂಬುದನ್ನು ಪರೀಕ್ಷಿಸುವುದು ಹೇಗೆ?
- Sports
ಸಾಮೂಹಿಕ ಉದ್ಧೀಪನ ಸೇವನೆ ಸಾಬೀತು; ನಾಲ್ಕು ವರ್ಷ ರಷ್ಯಾ ಜಾಗತಿಕ ಕ್ರೀಡಾಕೂಟದಿಂದ ನಿಷೇಧ
- Education
KPSC Admit Card 2019: ಗ್ರೂಪ್ "ಬಿ" ಮತ್ತು "ಸಿ" ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಕೆಟಿಎಂ ಡ್ಯೂಕ್ 790 ಬೈಕ್ ಅನ್ನು ಡೀಲರ್‍ಶಿಪ್‍ಗಳಿಗೆ ವಿತರಿಸಲು ಆರಂಭಿಸಿದೆ
ದೀಪಾವಳಿ ಹೊತ್ತಿಗೆ ಬಹುನೀರಿಕ್ಷಿತ ಡ್ಯೂಕ್ 790 ಬಿಡುಗಡೆಯಾಗುವುದು ಖಚಿತ ಎಂಬ ಮೂಲಗಳ ಮಾಹಿತಿಯ ಪ್ರಕಾರ ಸುದ್ದಿಯನ್ನು ನಾವು ಪ್ರಕಟಿಸಿದ್ದೇವೆ. ಆದ್ರೆ ಈ ಚಿತ್ರವನ್ನು ನೋಡಿದ ಮೇಲೆ ಖಚಿತವಾಗಿದೆ ಬೆಂಗಳೂರಿನ ಡೀಲರ್‍ಗಳ ಬಳಿಗೆ ಈ ಮಾದರಿಯಲ್ಲಿ ಬೈಕ್‍ಗಳು ತಲುಪಿದೆ ಎಂಬುವುದು.

ಸಂಸ್ಥೆಯು ಪುಣೆ, ಹೈದರಾಬಾದ್, ಮತ್ತು ದೆಹಲಿಯಂತಹ ಪ್ರಮುಖ ಸಿಟಿಗಳಲ್ಲಿ ಬೈಕ್‍ಗಳನ್ನು ರವಾನೆ ಮಾಡಲು ಪ್ರಾರಂಭಿಸಿದೆ. ಗ್ರಾಹಕರು , ಮಾಲೀಕರು, ಬೈಕ್ ಪ್ರಿಯರು ಹಾಗೂ ಅತ್ಯಂತ ಕೂತಹಲದಿಂದ ಈ ಬೈಕ್‍ಗಾಗಿ ಕಾಯುತ್ತಿದ್ದವರೆಲ್ಲರೂ ಶೀಘ್ರದಲ್ಲೇ ಈ ಆಕರ್ಷಕವಾದ ಬೈಕ್ ಅನ್ನು ನೋಡಬಹುದು. ಇಂಡಿಯ ಸ್ಪೆಕ್‍ನ ಡ್ಯೂಕ್ 790 ಎಂಬುವುದನ್ನು ಸೂಚಿಸಿರುವ ಮೂರು ಸಂಗತಿಗಳು ಈ ಚಿತ್ರದಲ್ಲಿ ಕಾಣಸಿಗುತ್ತದೆ. ಅವುಗಳೆಂದರೆ ಒಂದು ಸ್ಥಳೀಯ ಮಟ್ಟದ ನೋಂದಣೆ ಲೇಬಲ್, ಸಾರಿ ಗಾರ್ಡ್ ಹಾಗೂ ಎಂಜಿನ್ ಗಾರ್ಡ್ ಆಗಿದೆ.

ಕೆಟಿಎಂ ಡ್ಯೂಕ್ 790 ಯಾವ ಕಾರಣಕ್ಕೆ ವಿಶೇಷ ಅಂದ್ರೆ ಇದರ ಎಂಜಿನ್ ಜೋಡನೆ ಸಂಪೋರ್ಣವಾಗಿ ಅಸ್ಟ್ರೀಯದಲ್ಲೇ ಮಾಡಿದ್ದಾರೆ. ಭವಿಷ್ಯದ ಪೇಸ್‍ಲಿಪ್ಟ್ ಆವೃತ್ತಿಗಿಂತಲೂ ಈ ಬೈಕ್ ವೇಗದಲ್ಲಿ ಮತ್ತು ಲುಕ್‍ನಲ್ಲಿಯೂ ಮುಂಚೂಣಿಯಲ್ಲಿ ಇರುತ್ತಾರೆ.

ಈ ಎಲ್ಲಾ ಕಾರಣದಿಂದಾಗಿ ಬೈಕ್‍ನ ಪರ್ಫಾಮೆನ್ಸ್ ಕೂಡ ಅಗ್ರ ಶ್ರೇಣಿಯಲ್ಲಿರುತ್ತದೆ. ನೇಕೆಡ್ ರೋಡ್‍ಸ್ಟರ್ ಬೈಕ್ ಮಾದರಿಯಲ್ಲಿ ಎಲ್‍ಸಿ 799 ಸಿಸಿ ಲಿಕ್ವಿಡ್ ಕೂಲ್ಡ್, ಪ್ಯಾರೆಲ್ ಟ್ವಿನ್ ಎಂಜಿನ್ 105 ಬಿಎಚ್‍ಪಿ ಮತ್ತು 86ಎನ್ಎಂ ಟಾರ್ಕ್ ಉತ್ಪಾದಿಸುವ ಗುಣ ಹೊಂದಿದೆ.

ಎಂಜಿನ್‍ನಲ್ಲಿ 6 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಸ್ಲಿಪ್ ಕ್ಲಚ್ ಇರಲಿದ್ದು, ಈ ಬೈಕಿನಲ್ಲಿ ಸ್ಪೋರ್ಟ್, ಸ್ಟ್ರೀಟ್, ರೇನ್ ಹಾಗೂ ಟ್ರ್ಯಾಕ್ ಎಂಬ ನಾಲ್ಕು ವಿವಿಧ ಬಗೆಯ ರೈಡರ್ ಮೋಡ್‍ಗಳನ್ನು ಒದಗಿಸಲಿದೆ. ಈ ಬೈಕ್ ಬೇರೆ ಬಗೆಯ ರೈಡ್ ಸಹಾಯಗಳಾದ ಮೋಟಾರ್ ಸ್ಲಿಪ್ ರೆಗ್ಯುಲೇಷನ್, ಟ್ರಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್ ಹಾಗೂ ವ್ಹೀಲ್ ಕಂಟ್ರೋಲ್‍ಗಳನ್ನು ಸಹ ಒದಗಿಸಲಿದೆ

ಬ್ರೇಕಿಂಗ್ ಸಿಸ್ಟಮ್ ಅನ್ನು ಮುಂಭಾಗದಲ್ಲಿರುವ ಡಬಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿರುವ ಸಿಂಗಲ್ ಡಿಸ್ಕ್ ಗಳು ನಿಯಂತ್ರಿಸುತ್ತವೆ. ಡ್ಯೂಕ್ 790 ಬೈಕ್ ಸಹ ಪೂರ್ಣವಾದ ಎಲ್‍ಇಡಿ ಲೈಟಿಂಗ್ ಸೆಟ್‍ಅಪ್, ಸ್ಮಾರ್ಟ್ ಫೋನ್‍ಗಳಿಗಾಗಿ ಸುಧಾರಿತ ಟೆಕ್ನಾಲಜಿಯ ಟಿಎಫ್‍ಟಿ ಕ್ಲಸ್ಟರ್‍ನ ಬ್ಲೂಟೂಟ್ ಕನೆಕ್ಟಿವಿಟಿ ಸೌಲಭ್ಯ ಒದಗಿಸಲಾಗಿದೆ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಈ ಬೈಕಿನ ಮತ್ತೊಂದು ವಿಶೇಷತೆಯೆಂದರೆ ಈ ಬೈಕ್ ಸೂಪರ್ ಮೋಟೊ ಮೋಡ್ ನೀಡಲಿದ್ದು, ಇದರಿಂದಾಗಿ ಚಾಲಕರು ಹಿಂದಿರುವ ವ್ಹೀಲ್‍ನಲ್ಲಿನ ಎಬಿಎಸ್ ಸುರಕ್ಷೆಯನ್ನು ಸ್ವಿಚ್ ಆಫ್ ಮಾಡಬಹುದಾಗಿದೆ. ಈ ಬೈಕಿನ ಮುಂಭಾಗದಲ್ಲಿ 43 ಎಂಎಂ ಅಪ್ ಸೈಡ್ ಡೌನ್ ನಾನ್ ಅಡ್ಜಸ್ಟಬಲ್ ಫೋರ್ಕ್‍ಗಳನ್ನು ಹಾಗೂ ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್‍ಗಳನ್ನು ಅಳವಡಿಸಲಾಗಿದೆ.
MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಡ್ಯೂಕ್ 790 ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸುವ ಸಾಧ್ಯತೆಗಳಿವೆ. ಪ್ರತಿ ಸ್ಪರ್ಧಿಗಳಿಗೆ ಪ್ರಬಲ ಪೈಪೋಟಿಯನ್ನು ನೀಡಲಿದ್ದು, ಭಾರತೀಯ ಬೈಕ್ ಪ್ರಿಯರು ಹೆಚ್ಚು ಕೂತಹಲದಿಂದ ಈ ಬೈಕ್ ಅನ್ನು ರೈಡ್ ಮಾಡಲು ಎದುರು ನೋಡುತ್ತಿದ್ದಾರೆ.