ಆರ್‍ಇ ಇಂಟರ್‍‍ಸೆಪ್ಟರ್ 650 ಬೈಕ್ ಖರೀದಿಸಿದ ಮೊದಲ ಬೆಂಗಳೂರಿನ ಮಹಿಳೆ..

ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಕಳೆದ ವರ್ಷವಷ್ಟೆ ತಮ್ಮ 650 ಟ್ವಿನ್ ಬೈಕ್‍ಗಳನ್ನು ಬಿಡುಗಡೆಗೊಳಿಸಿದ್ದು, ಸಧ್ಯಕ್ಕೆ ರಾಯಲ್ ಎ‍ನ್‍ಫೀಲ್ಡ್ ಸಂಸ್ಥೆಯಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಬೈಕ್‍ಗಳು ಇದಾಗಿದೆ. ಆಷ್ಟೆ ಅಲ್ಲದೆಯೆ ಈ ಬೈಕ್‍ಗಳು ಸಂಸ್ಥೆಯಲ್ಲಿನ ಅತಿ ಹೆಚ್ಚು ಸಾಮರ್ಥ್ಯವುಳ್ಳ ಬೈಕ್‍ಗಳು ಎಂದು ಕೂಡಾ ಹೇಳಬಹುದು.

ಆರ್‍ಇ ಇಂಟರ್‍‍ಸೆಪ್ಟರ್ 650 ಬೈಕ್ ಖರೀದಿಸಿದ ಮೊದಲ ಬೆಂಗಳೂರಿನ ಮಹಿಳೆ..

ಈ ಲೇಖನದ ಉದ್ದೇಶ ಏನಪ್ಪಾ ಅಂದ್ರೆ ರಾಯಲ್ ಎನ್‍ಫೀಲ್ಡ್ ಬೈಕ್‍ಗಳನ್ನು ಹಲವಾರು ಯುವಕರು ಖರೀದಿಸಿದ್ದು, ಇನ್ನು ಕೆಲವು ಮಹಿಳೆಯರು ತಾವು ರೈಡ್ ಮಾಡಲು ಸಾಧ್ಯವಾಗದ ಕಾರಣ ಅವರವರ ಪತಿಗೆ ಕೊಡಿಸಿರುವ ಉದಾಹರಣೆಯನ್ನು ಸಹ ಕಂಡಿದ್ದೇವೆ. ಆದ್ರೆ ಇಂದು ನಮ್ಮ ಬೆಂಗಳೂರಿನ ವೈಟ್‍ಫೀಲ್ಡ್ ಅಲ್ಲಿರುವ ವೈಟ್‍ಫೀಲ್ಡ್ ಮೋಟಾರ್ಸ್ ರಾಯಲ್ ಎನ್‍ಫೀಲ್ಡ್ ಡೀಲರ್‍‍ನ ಬಳಿ ರಾಯಲ್ ಎನ್‍ಫೀಲ್ದ್ ಇಂಟರ್‍‍ಸೆಪ್ಟರ್ 650 ಬೈಕ್ ಅನ್ನು ಒಬ್ಬ ಮಹಿಳೆ ಖರೀದಿಸಿದ್ದಾಳೆ.

ಆರ್‍ಇ ಇಂಟರ್‍‍ಸೆಪ್ಟರ್ 650 ಬೈಕ್ ಖರೀದಿಸಿದ ಮೊದಲ ಬೆಂಗಳೂರಿನ ಮಹಿಳೆ..

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕ್ ಅನ್ನು ಖರೀದಿಸಿದ ಮೊದಲ ಮಹಿಳೆ ನಮ್ಮ ಬೆಂಗಳೂರಿನವರೆ ಎಂಬುದು ಖಚಿತವಾಗಿದೆ. ಬೈಕ್ ಆನ್ನು ಖರೀದಿಸಿದ ಈ ಮಹಿಳೆಗೆ ಶೋರುಂನವರು ಅಥಿತಿ ಸತ್ಕಾರದಿಂದ ಆಕೆಗೆ ಬೈಕ್ ಅನ್ನು ಡೆಲಿವರಿ ಮಾಡಿರುವುದು ಮತ್ತು ಡೆಲಿವರಿ ಪಡೆದ ನಂತರ ಶೋರುಂ ಮುಂದೆಯೆ ರೈಡ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 60ರ ದಶಕದ ಇಂಟರ್‍‍ಸೆಪ್ಟರ್‍‍ನಿಂದ ಪ್ರೇರಣೆಯನ್ನು ಹೊಂದಿದ್ದು, ಬ್ರಿಟಿಷ್ ರೋಡ್‍ಸ್ಟರ್ ಮಾದರಿಯ ನೋಟವನ್ನು ಪಡೆದುಕೊಂಡಿದೆ. ಇನ್ನು ಇಂಟರ್‍‍‍ಸೆಪ್ಟರ್ 650 ಬೈಕ್ ಕ್ಲೀನ್-ಲೈನ್, ಕ್ಲಾಸಿಕ್ ಟಿಯರ್‍‍ಡ್ರಾಪ್ ಆಕಾರದ ಫ್ಯುಯಲ್ ಟ್ಯಾಂಕ್ ಮತ್ತು ಡೈಮಂಡ್-ಕ್ವಿಲ್ಟ್-ಪ್ಯಾಟರ್ನ್ಡ್ ಟ್ವಿನ್ ಸೀಟ್‍ಗಳನ್ನು ನೀಡಲಾಗಿದೆ.

MOST READ: ಸೇಫ್ಟಿ ಪರವಾಗಿ 5 ಸ್ಟಾರ್ ರೇಟಿಂಗ್ ಹೊಂದಿರುವ ವಾಹನಗಳನ್ನೆ ನೀಡುತ್ತೇವೆ - ಟಾಟಾ ಮೋಟಾರ್ಸ್

ಇನ್ನು ಈ ಬೈಕಿನ ಬಗ್ಗೆ ಹೇಳೊದಾದರೆ ಎಕ್ಸ್ ಶೋರುಂ ಪ್ರಕಾರ ರೂ. 2.49 ಲಕ್ಷದ ಬೆಲೆಯನ್ನು ಪಡೆದುಕೊಂದಿದ್ದು, ಪ್ಯಾರಲಲ್ ಟ್ವಿನ್ ಎಂಜಿನ್‍‍ನಿಂದ ಚಲಿಸುತ್ತದೆ. ಇಂಟರ್‍‍ಸೆಪ್ಟರ್ 650 ಬೈಕ್ 649ಸಿಸಿ ಏರ್ ಕೂಲ್ಡ್, ಪ್ಯಾರಲಲ್ ಟ್ವಿನ್ ಸಿಲೆಂಡರ್ ಎಂಜಿನ್ ಸಹಾಯದಿಂದ 47ಬಿಹೆಚ್‍ಪಿ ಮತ್ತು 52ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬೈಕಿನಲ್ಲಿ 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್ ಮತ್ತು ಪಿರೆಲ್ಲಿ ಪ್ಯಾಂಥಂ ಸ್ಪೋರ್ಟ್‍‍ಕಾಂಪ್ ಟೈ‍‍ರ್‍‍ಗಳನ್ನು ಅಳವಡಿಸಲಾಗಿದೆ.

MOST READ: ಲೇನ್ ಚೇಂಜ್ ಮಾಡುತ್ತಿದ್ದ ಆಟೋಗೆ ಗುದ್ದಿದ ಬಲೆನೊ ಪರಿಸ್ಥಿತಿ ಏನಾಯ್ತು ಅಂತ ನೀವೆ ನೋಡಿ...

ಆರ್‍ಇ ಇಂಟರ್‍‍ಸೆಪ್ಟರ್ 650 ಬೈಕ್ ಖರೀದಿಸಿದ ಮೊದಲ ಬೆಂಗಳೂರಿನ ಮಹಿಳೆ..

ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಲ್ಲಿ ಬೈಬ್ರೆ (ಬೈ ಬ್ರೆಂಬೊ) ಸಂಸ್ಥೆಯಿಂದ ಪಡೆದ 320ಎಂಎಂ ಮತ್ತು 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಬೈಕ್‍ಗಳು ವಿವಿಧ ಮತ್ತು ಆಕರ್ಷಕ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, - ಮಾರ್ಕ್ ತ್ರೀ, ಗ್ಲಿಟ್ಟರ್ & ಡಸ್ಟ್, ಆರೆಂಜ್ ಕ್ರಶ್, ರ್‍ಯಾವಿಶಿಂಗ್ ರೆಡ್, ಸಿಲ್ವರ್ ಸ್ಪೆಕ್ಟ್ರಾ ಮತ್ತು ಬೇಕರ್ ಎಕ್ಸ್ಪ್ರೆಸ್ ಎಂಬ 7 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

Source: Jacob's Tribe

Most Read Articles

Kannada
English summary
India’s first woman Royal Enfield Interceptor 650 owner is here. Read In Kannada
Story first published: Friday, March 8, 2019, 16:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X