ಹೆಚ್ಚಳವಾಗಲಿದೆ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳ ಬೆಲೆ

ಕಾಂಟಿನೆಂಟಲ್ ಜಿಟಿ 650 ಮತ್ತು ಇಂಟರ್‍‍ಸೆಪ್ಟರ್ 650 ಬೈಕ್‍ಗಳು ರಾಯಲ್ ಎನ್‍ಫೀಲ್ಡ್ ಸಂಸ್ಥೆಯಲ್ಲಿರುವ ಉನ್ನತ್ತ ಮಟ್ಟದ ಸಾಮರ್ಥ್ಯ ಹೊಂದಿರುವ ಬೈಕ್‍ಗಳಾಗಿದ್ದು, ಇಂಡಿಯನ್ ಕ್ರೂಸರ್ ಬೈಕ್‍ಗಳಲ್ಲಿ ಹೊಸ ಇತಿಹಾಸ ಹುಟ್ಟುಹಾಕಿತ್ತು. ಈ ಬೈಕ್ ಕೇವಲ ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆಯೆ ಜಾಗತಿಕ ಮಾರುಕಟ್ಟೆಯಲ್ಲಿಯು ಸಹ ಉತ್ತಮ ಬೇಡಿಕೆಯನ್ನು ಪಡೆದಿದ್ದು, ಚೆನ್ನೈನಲ್ಲಿರುವ ಉತ್ಪಾದನ ಘಟಕದಿಂದಲೇ ಈ ಬೈಕ್‍ಗಳನ್ನು ಇನ್ನಿತರೆ ದೇಶದ ಮಾರಕಟ್ಟೆಗೆ ರಫ್ತುಮಾಡಲಾಗುತ್ತಿದೆ.

ಹೆಚ್ಚಳವಾಗಲಿದೆ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳ ಬೆಲೆ

ಇದೀಗ ಲಭ್ಯವಾದ ಮಾಹಿತಿಗಳ ಪ್ರಕಾರ ರಾಯಲ್ ಎನ್‍ಫೀಲ್ಡ್ ಸಂಸ್ಥೆಯಲ್ಲಿನ ಜನಪ್ರಿಯ 650 ಟ್ವಿನ್ ಬೈಕ್‍ಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದ್ದು, ಸಾಧಾರಣ ಬೆಲೆಗಿಂತಲು ಸುಮಾರು ರೂ. 5000 ರಿಂದ ರೂ. 10,000 ವರೆಗು ಏರಿಕೆಯಾಗಲಿದೆ. ಇನ್ನು ಈ ಬೈಕ್‍ಗಳ ಬೆಲೆಯ ಕುರಿತಾಗಿ ಸಂಸ್ಥೆಯು ಅಧಿಕೃತ ಹೇಳಿಕೆಯನ್ನು ನೀಡಲಿಲ್ಲವಾದರೂ, ಈ ಬೈಕ್‍ಗಳು ಮಾರುಕಟ್ಟೆಯಲ್ಲಿರುವ ಬಜಾಜ್ ಡಾಮಿನಾರ್ 400, ಕೆಟಿಎಂ 390 ಮತ್ತು ಇನ್ನಿತರೆ 400 ಸಿಸಿ ಬೈಕ್‍ಗಳಿಗೆ ಪೈಪೋಟಿ ನೀಡುತ್ತಿದೆ.

ಹೆಚ್ಚಳವಾಗಲಿದೆ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳ ಬೆಲೆ

ಆರ್‍ಇ ಇಂಟರ್‍‍ಸೆಪ್ಟರ್ 650 ಬೈಕ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 2.50 ಲಕ್ಷ ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್ ರೂ. 2.66 ಲಕ್ಷದ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಅಂದರೆ ಈ ಸಾಧಾರಣ ಬೆಲೆಗಿಂತಲೂ ಈ ಬೈಕ್‍ಗಳ ಎಕ್ಸ್ ಶೋರುಂ ಬೆಲೆಯಲ್ಲಿ ರೂ. 5,000 ರಿಂದ ರೂ. 10,000 ಏರಿಕೆಯಾಗಲಿದ್ದು, ಈ ಪ್ರಕ್ರಿಯೆಯು ಇದೇ ಆಗಸ್ಟ್ ತಿಂಗಳ ಮೂರನೆಯೆ ವಾರದಿಂದ ಪ್ರಾರಂಭವಾಗಲಿದೆ ಎಂದು ಗಾಡಿವಾಡಿ ವರದಿಗಳು ಹೇಳುತ್ತಿದೆ.

ಹೆಚ್ಚಳವಾಗಲಿದೆ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳ ಬೆಲೆ

ನವೆಂಬರ್ 2018 ರಿಂದ ಜೂನ್ 2019ರ ವರೆಗು ರಾಯಲ್ ಎನ್‍ಫೀಲ್ಡ್ 60 ಟ್ವಿನ್ ಬೈಕ್‍ಗಳು ಧಾಖಲೆಯ ಸಂಖ್ಯೆಯಲ್ಲಿ ಮಾರಾಟವಾಗಿದ್ದು, ಸುಮಾರು 7 ತಿಂಗಳ ಗಡುವಿನಲ್ಲಿ 11000ಕ್ಕು ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ ಎಂದು ಹೇಳಲಾಗಿದೆ. ಬೆಲೆಯಲ್ಲಿ ಕೆಟಿಎಂಡ್ಯೂಕ್ 390, ಕವಾಸಕಿ ನಿಂಜ 300, ಅಪಚೆ ಆರ್‍‍ಆರ್ 310 ಮತ್ತು ಯಮಾಹಾ ಆರ್‍3 ಎಂಬ ಕಡಿಮೆ ಸಾಮರ್ಥ್ಯದ ಬೈಕ್‍ಗಳಿಗೆ ಪೈಪೋಟಿ ನೀಡುತ್ತಿದೆ.

ಹೆಚ್ಚಳವಾಗಲಿದೆ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳ ಬೆಲೆ

ದೇಶಿಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನಗಳ ಸರಣಿಯಲ್ಲಿ ಈ ಎರಡೂ ಬೈಕ್‍‍ಗಳು ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಎರಡೂ ಬೈಕ್‍ಗಳು ಆಧುನಿಕ ಕ್ಲಾಸಿಕ್ ನೋಟವನ್ನು ಪಡೆದುಕೊಂಡಿದೆ. ಕಾಂಟಿನೆಂಟಲ್ ಜಿಟಿ 650 ಕೆಫ್ ರೇಸರ್ ವಿನ್ಯಾಸವನ್ನು ಆಧರಿಸಿದರೆ ಇನ್ನು ಇಂಟರ್‍‍ಸೆಪ್ಟರ್ 650 ಸ್ಕ್ರ್ಯಾಂಬ್ಲರ್ ಶೈಲಿಯ ವಿನ್ಯಾಸವನ್ನು ಆಧರಿಸಿದೆ.

ಹೆಚ್ಚಳವಾಗಲಿದೆ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳ ಬೆಲೆ

ಬೈಕ್‍ಗಳ ವಿನ್ಯಾಸ

ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 60ರ ದಶಕದ ಇಂಟರ್‍‍ಸೆಪ್ಟರ್‍‍ನಿಂದ ಪ್ರೇರಣೆಯನ್ನು ಹೊಂದಿದ್ದು, ಬ್ರಿಟಿಷ್ ರೋಡ್‍ಸ್ಟರ್ ಮಾದರಿಯ ನೋಟವನ್ನು ಪಡೆದುಕೊಂಡಿದೆ. ಇನ್ನು ಇಂಟರ್‍‍‍ಸೆಪ್ಟರ್ 650 ಬೈಕ್ ಕ್ಲೀನ್-ಲೈನ್, ಕ್ಲಾಸಿಕ್ ಟಿಯರ್‍‍ಡ್ರಾಪ್ ಆಕಾರದ ಫ್ಯುಯಲ್ ಟ್ಯಾಂಕ್ ಮತ್ತು ಡೈಮಂಡ್-ಕ್ವಿಲ್ಟ್-ಪ್ಯಾಟರ್ನ್ಡ್ ಟ್ವಿನ್ ಸೀಟ್‍ಗಳನ್ನು ನೀಡಲಾಗಿದೆ.

ಕೇಫ್ ರೇಸರ್ ವಿನ್ಯಾಸವನ್ನು ಪಡೆದುಕೊಂಡಿರುವ ರಾಯಲ್ ಎನ್‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ 1950ರ ದಶಕದಲ್ಲಿನ ಕೆಫ್‍ ರೇಸರ್ ವಿನ್ಯಾಸವನ್ನು ಆಧರಿಸಿದ್ದು, ಕೆತ್ತಲಾದ ಫ್ಯುಯಲ್ ಟ್ಯಾಂಕ್, ತೂಕದ ನಿಲುವು, ರಿಯರ್-ಫೂಟ್ ಪೆಗ್ಸ್ ಮತ್ತು ಹ್ಯಾಂಡಲ್‍ಬಾರ್‍‍ನ ಮೇಲೆ ಕ್ಲಿಪ್ ಅನ್ನು ಒದಗಿಸಲಾಗಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಎಂಜಿನ್ ವೈಶಿಷ್ಟ್ಯತೆ

ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳು ಹೊಸ 649ಸಿಸಿ ಏರ್ ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಸಹಾಯದಿಂದ 47ಬಿಹೆಚ್‍ಪಿ ಮತ್ತು 52ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ಹೆಚ್ಚಳವಾಗಲಿದೆ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳ ಬೆಲೆ

ಎರಡು ಬೈಕ್‍ಗಳು 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 110ಎಂಎಂ ಟ್ವಿನ್ ಕಾಯಿಲ್-ಕವರ್ ಶಾಕ್ ಅಬ್ಸಾರ್ಬರ್ ಅನ್ನು ಒದಗಿಸಲಾಗಿದೆ. 650 ಟ್ವಿನ್ ಬೈಕ್‍ಗಳು 18 ಇಂಚಿನ 360 ಸ್ಪೋಕ್ ಅಲ್ಯುಮಿನಿಯಂ ಅಲಾಯ್ ವ್ಹೀಲ್ ಮತ್ತು ಪಿರೆಲ್ಲಿ ಪ್ಯಾಂಥಂ ಸ್ಪೋರ್ಟ್‍‍ಕಾಂಪ್ ಟೈ‍‍ರ್‍‍ಗಳನ್ನು ಅಳವಡಿಸಲಾಗಿದೆ.

MOST READ: ವ್ಯವಸಾಯಕ್ಕಾಗಿ ರೂ.50 ಲಕ್ಷ ಬೆಲೆ ಬಾಳುವ ಐಷಾರಾಮಿ ಕಾರನ್ನು ಬಳಸಿದ ರೈತ

ಹೆಚ್ಚಳವಾಗಲಿದೆ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳ ಬೆಲೆ

ಬೈಕ್ ಸವಾರರ ಸುರಕ್ಷತೆಗಾಗಿ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍‍ಗಳಲ್ಲಿ ಬೈಬ್ರೆ (ಬೈ ಬ್ರೆಂಬೊ) ಸಂಸ್ಥೆಯಿಂದ ಪಡೆದ 320ಎಂಎಂ ಮತ್ತು 240ಎಂಎಂನ ಡಿಸ್ಕ್ ಬ್ರೇಕ್‍‍ಗಳನ್ನು ಅಳವಡಿಸಲಾಗಿದ್ದು, ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಹೆಚ್ಚಳವಾಗಲಿದೆ ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳ ಬೆಲೆ

ಬಣ್ಣಗಳು

ರಾಯಲ್ ಎನ್‍ಫೀಲ್ಡ್ 650 ಟ್ವಿನ್ ಬೈಕ್‍ಗಳು ವಿವಿಧ ಮತ್ತು ಆಕರ್ಷಕ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಇಂಟರ್‍‍ಸೆಪ್ಟರ್ 650 - ಮಾರ್ಕ್ ತ್ರೀ, ಗ್ಲಿಟ್ಟರ್ & ಡಸ್ಟ್, ಆರೆಂಜ್ ಕ್ರಶ್, ರ್‍ಯಾವಿಶಿಂಗ್ ರೆಡ್, ಸಿಲ್ವರ್ ಸ್ಪೆಕ್ಟ್ರಾ ಮತ್ತು ಬೇಕರ್ ಎಕ್ಸ್ಪ್ರೆಸ್ ಎಂಬ 7 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ರಾಯಲ್ ಎನ್‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ - ಬ್ಲಾಕ್ ಮ್ಯಾಜಿಕ್, ವೆಂಚುರ ಬ್ಲೂ, ಮಿಸ್ಟರ್ ಕ್ಲೀನ್, ಡಾ.ಮೈಹೆಂ ಮತ್ತು ಐಸ್ ಕ್ವೀನ್ ಎಂಬ 5 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

Most Read Articles

Kannada
English summary
Royal Enfield To Hike Price On 650 Twins Bikes Soon. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X