ತಳ್ಳಿದರೂ ಬೀಳದ ಸ್ಕೂಟರ್‍‍ಯಿದು..!

ಸ್ವಯಂ ಸಮತೋಲನಗೊಳ್ಳುವ (ಬ್ಯಾಲೆನ್ಸ್) ಸ್ಕೂಟರ್‍‍ಗಳು ಅಭಿವೃದ್ಧಿಯ ಹಂತದಲ್ಲಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ. ಭಾರತೀಯ ಮೂಲದ ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟ್ ಅಪ್ ಕಂಪನಿಯಾದ ಲೈಗರ್ ಮೊಬಿಲಿಟಿ ವಾಯ್ಸ್ ಕಮಾಂಡ್ ಹೊಂದಿರುವ ಸ್ವಯಂ ನಿಯಂತ್ರಣಗೊಳ್ಳುವ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಅಭಿವೃದ್ಧಿಪಡಿಸಿದೆ.

ತಳ್ಳಿದರೂ ಬೀಳದ ಸ್ಕೂಟರ್‍‍ಯಿದು..!

ಯೂಟ್ಯೂಬ್‍‍ನಲ್ಲಿ ಅಪ್‍‍ಲೋಡ್ ಮಾಡಲಾಗಿರುವ ಎಲೆಕ್ಟ್ರಿಕ್ ವೆಹಿಕಲ್‍‍ನ ವೀಡಿಯೊ ಈ ಸ್ಕೂಟರಿನ ಸಾಮರ್ಥ್ಯದ ಬಗ್ಗೆ ಹೇಳುತ್ತಿದೆ. ಈ ಸ್ಕೂಟರ್ ಗಮನ ಸೆಳೆಯುವಂತಿದೆ. ಭಾರತದ ಆಟೋಮೊಬೈಲ್ ಉದ್ಯಮವು ವಿಭಿನ್ನವಾಗಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತಹ ವಾಹನಗಳನ್ನು ವಿನ್ಯಾಸಗೊಳಿಸಲಾಗಿದೆ. ಬೈಕುಗಳಲ್ಲಿ ಸಾಹಸವನ್ನು ಬಯಸುವವರಿಗಾಗಿ ಪರ್ಫಾಮೆನ್ಸ್ ಬೈಕುಗಳಿದ್ದರೆ, ಆರಾಮದಾಯಕ ಸವಾರಿ ಬಯಸುವವರಿಗಾಗಿ ಲಗ್ಷುರಿ ಬೈಕುಗಳಿವೆ. ಪ್ರಯಾಣಕ್ಕೆ ಮಾತ್ರವೇ ವಾಹನಗಳನ್ನು ಬಯಸುವವರಿಗಾಗಿ ಪ್ರಯಾಣಿಕ ಬೈಕ್ ಹಾಗೂ ಸ್ಕೂಟರ್‍‍ಗಳಿವೆ.

ಕಳೆದ ಕೆಲವು ವರ್ಷಗಳಿಂದ ದ್ವಿಚಕ್ರ ವಾಹನಗಳಲ್ಲಿನ ಎಲೆಕ್ಟ್ರಿಕ್ ವಾಹನಗಳ ಸೆಗ್‍‍ಮೆಂಟ್ ಹೆಚ್ಚು ಜನಪ್ರಿಯವಾಗುತ್ತಿದೆ. ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿದೆ. ಎಲೆಕ್ಟ್ರಿಕ್ ವಾಹನಗಳು ಭವಿಷ್ಯದ ವಾಹನಗಳಾಗಿ ಉಳಿದಿಲ್ಲ, ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ.

ತಳ್ಳಿದರೂ ಬೀಳದ ಸ್ಕೂಟರ್‍‍ಯಿದು..!

ಬಹುತೇಕ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಸ್ಪರ್ಧೆಯನ್ನು ಒಡ್ಡುತ್ತಿವೆ. ಲೈಗರ್ ಮೊಬಿಲಿಟಿ, ಮೊದಲಿಗೆ ಮತ್ತೊಂದು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸ್ಟಾರ್ಟ್ ಅಪ್ ಕಂಪನಿಯಂತೆ ಕಂಡರೂ, ಈ ಸೆಗ್‍‍ಮೆಂಟಿನಲ್ಲಿರುವ ಸ್ಪರ್ಧೆಯನ್ನು ಹೆಚ್ಚಿಸುತ್ತದೆ.

ತಳ್ಳಿದರೂ ಬೀಳದ ಸ್ಕೂಟರ್‍‍ಯಿದು..!

ಲೈಗರ್ ಮೊಬಿಲಿಟಿಯಲ್ಲಿರುವ ತಂಡವು ಸ್ವಯಂ ಸಮತೋಲನ ಹೊಂದುವ ಸ್ಕೂಟರ್‍‍ಗಳನ್ನು ಅಭಿವೃದ್ಧಿಪಡಿಸಿವೆ. ಸ್ವಯಂ ಸಮತೋಲನ ದ್ವಿಚಕ್ರ ವಾಹನಗಳ ಪರಿಕಲ್ಪನೆಯು ಹೊಸದಲ್ಲ. ಬಿಎಂಡಬ್ಲ್ಯು ಮೋಟರ್‌ರಾಡ್ ಹಾಗೂ ಹೋಂಡಾದಂತಹ ದೊಡ್ಡ ಕಂಪನಿಗಳು ಈಗಾಗಲೇ ಸ್ವಯಂ ಸಮತೋಲನ ಬೈಕುಗಳನ್ನು ಈಗಾಗಲೇ ಪ್ರದರ್ಶಿಸಿದ್ದವು.

ತಳ್ಳಿದರೂ ಬೀಳದ ಸ್ಕೂಟರ್‍‍ಯಿದು..!

ಈ ಬೈಕುಗಳು ಗಮನಸೆಳೆಯುವಂತಿದ್ದವು. 2017 ರಲ್ಲಿ, ಹೋಂಡಾ ಕಂಪನಿಯು ಸ್ವಯಂ ಸಮತೋಲನ ಬೈಕ್ ಅನ್ನು ಸಿಇಎಸ್‍ನಲ್ಲಿ ಸುಧಾರಿತ ಸವಾರಿ ಸಾಧನಗಳೊಂದಿಗೆ ಪ್ರದರ್ಶಿಸಿತ್ತು. ಬಿಎಂಡಬ್ಲ್ಯು 2018ರಲ್ಲಿ ಸೆಲ್ಫ್ ರೈಡ್‍‍ನ ಆರ್ 1200 ಜಿಎಸ್ ಅನ್ನು ಪ್ರದರ್ಶಿಸಿತ್ತು.

ತಳ್ಳಿದರೂ ಬೀಳದ ಸ್ಕೂಟರ್‍‍ಯಿದು..!

ಯಮಹಾ ತನ್ನ ಮೋಟೋ ಜಿಪಿ ಚಾಂಪಿಯನ್ ವ್ಯಾಲೆಂಟಿನೋ ರೊಸ್ಸಿಯನ್ನು ಪ್ರದರ್ಶಿಸಿತು. ಆದರೆ ಈ ಬೈಕುಗಳನ್ನು ಉತ್ಪಾದಿಸಲಿಲ್ಲ. ಅವುಗಳನ್ನು ಉತ್ಪಾದಿಸಿದರೂ ಸಹ ಅವು ದುಬಾರಿ ದರವನ್ನು ಹೊಂದಲಿರುವ ಕಾರಣಕ್ಕೆ ಜನಸಾಮಾನ್ಯನ ಕೈಗೆಟಕುವುದಿಲ್ಲ. ಈ ಕಾರಣಕ್ಕೆ ಲೈಗರ್ ಮೊಬಿಲಿಟಿಯ ಸ್ವಯಂ ಸಮತೋಲನ ಸ್ಕೂಟರ್ ಗಮನ ಸೆಳೆಯುತ್ತದೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ತಳ್ಳಿದರೂ ಬೀಳದ ಸ್ಕೂಟರ್‍‍ಯಿದು..!

ಲೈಗರ್ ಮೊಬಿಲಿಟಿ ಸಹ ಸಂಸ್ಥಾಪಕರಾದ ಅಶುತೋಷ್ ಉಪಾಧ್ಯಾಯರವರು ಮಾತನಾಡಿ, ತಮ್ಮ ಕಂಪನಿಯ ಸ್ವಯಂ ಸಮತೋಲನ ತಂತ್ರಜ್ಞಾನವನ್ನು ಹೊಂದಿರುವ ಸ್ಕೂಟರ್‍‍ಗಳ ಬೆಲೆಯು ಸಾಮಾನ್ಯಾ ಸ್ಕೂಟರ್‍‍ಗಳ ಬೆಲೆಗಿಂತ ಕೇವಲ 10%ನಷ್ಟು ಹೆಚ್ಚಿರಲಿದೆ ಎಂದು ಹೇಳಿದರು.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ತಳ್ಳಿದರೂ ಬೀಳದ ಸ್ಕೂಟರ್‍‍ಯಿದು..!

ಕೈಗೆಟುಕುವ ದರದಲ್ಲಿ ದೊರೆಯುವುದರಿಂದ, ದೊಡ್ಡ ಕಂಪನಿಯ ಬೈಕ್‌ಗಳಿಗಿಂತ ಭಿನ್ನವಾಗಿ ಜನಸಾಮಾನ್ಯರು ಈ ಸ್ಕೂಟರ್‍‍ಗಳನ್ನು ಖರೀದಿಸಲಿದ್ದಾರೆ. ಗೈರೊಸ್ಕೋಪ್, ಸ್ಕೂಟರಿನ ಸುತ್ತಲೂ ಚಲಿಸಿ ಸ್ಕೂಟರ್ ಅನ್ನು ಸ್ಥಿರವಾಗಿಡುವುದನ್ನು ಈ ವೀಡಿಯೊದಲ್ಲಿ ನೋಡಬಹುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ತಳ್ಳಿದರೂ ಬೀಳದ ಸ್ಕೂಟರ್‍‍ಯಿದು..!

ಈ ಟೆಕ್ನಾಲಜಿಯು ಸ್ಕೂಟರ್‌ನ ಹಿಂಬದಿಯ ಸವಾರನಿಗೂ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಎಲೆಕ್ಟ್ರಿಕ್ ಸ್ಕೂಟರ್‌ನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಸ್ಕೂಟರ್ ಮಹೀಂದ್ರಾ ಡುರೊನಂತೆ ಕಂಡುಬರುತ್ತದೆ. ವೀಡಿಯೊದಲ್ಲಿ ಕಾಣುತ್ತಿರುವ ಸ್ಕೂಟರಿನಿಂದ ಇಂಟರ್ನಲ್ ಕಂಜಸ್ಜನ್ ಎಂಜಿನ್ ಅನ್ನು ತೆಗೆದುಹಾಕಲಾಗಿದೆ.

ತಳ್ಳಿದರೂ ಬೀಳದ ಸ್ಕೂಟರ್‍‍ಯಿದು..!

ಈ ಸ್ಕೂಟರಿನಲ್ಲಿ ಸ್ವಿಂಗಾರ್ಮ್ ಒಂದು ಮೂಲ ಘಟಕವಾಗಿದ್ದು, ಸ್ಕೂಟರ್ ಅನ್ನು ಹಬ್ ಮೌಂಟೆಡ್ ಮೋಟರ್‍‍ನಿಂದ ಚಲಿಸಲಾಗುತ್ತದೆ. ಈ ಸ್ಕೂಟರಿನ ಪಾರ್ಕಿಂಗ್ ಹಾಗೂ ರಿವರ್ಸ್‌ಗಾಗಿ ವಾಯ್ಸ್ ಕಮಾಂಡ್‍‍ಗಳನ್ನು ಅಳವಡಿಸಲಾಗಿದೆ.

ತಳ್ಳಿದರೂ ಬೀಳದ ಸ್ಕೂಟರ್‍‍ಯಿದು..!

ಯಾವುದೇ ವಾಹನವು ಈ ಸ್ಕೂಟರಿಗೆ ಗುದ್ದಿದರೂ ಈ ಸ್ಕೂಟರಿನಲ್ಲಿರುವ ಗೈರೊಸ್ಕೋಪಿಕ್ ಸ್ಟೆಬಿಲಿಟಿ ಸಿಸ್ಟಮ್, ಸ್ಕೂಟರ್ ಅನ್ನು ನೇರವಾಗಿ ನಿಲ್ಲಿಸಲಿದೆ. ಇದು ಸ್ಕೂಟರ್ ಸವಾರರಿಗೆ ಸುರಕ್ಷತೆಯನ್ನು ನೀಡಲಿದೆ. ಸದ್ಯಕ್ಕೆ ಈ ಸ್ವಯಂ ಸಮತೋಲನ ಸ್ಕೂಟರ್ ಅನ್ನು ಯಾವಾಗ ಉತ್ಪಾದಿಸಲಾಗುವುದು ಎಂದು ಖಚಿತವಾಗಿಲ್ಲ.

ತಳ್ಳಿದರೂ ಬೀಳದ ಸ್ಕೂಟರ್‍‍ಯಿದು..!

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ದ್ವಿಚಕ್ರ ವಾಹನ ಸವಾರರ ದೊಡ್ಡ ಸಮಸ್ಯೆ ಎಂದರೆ ವಾಹನವನ್ನು ಸಮತೋಲನದಲ್ಲಿಡುವುದು. ಆದರೆ ಸವಾರಿ ಮಾಡಲು ಇಷ್ಟ ಪಡುವ ಜನರು ಈ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಯಾವುದೇ ದ್ವಿಚಕ್ರ ವಾಹನಗಳು ಬ್ಯಾಲೆನ್ಸ್ ಕಳೆದು ಕೊಳ್ಳುವುದು ಅವುಗಳ ಮಿತಿ ಮೀರಿದಾಗ. ವಾಹನ ಸವಾರರು, ಪ್ರತಿದಿನವೂ ತಮ್ಮ ವಾಹನಗಳಲ್ಲಿ ಬ್ಯಾಲೆನ್ಸ್ ಕಳೆದುಕೊಳ್ಳುತ್ತಲೇ ಇರುತ್ತಾರೆ. ಟ್ರಾಫಿಕ್‍‍ನಲ್ಲಿದ್ದಾಗ ಕಾಲುಗಳನ್ನು ಎತ್ತುವುದು, ನೆಲಕ್ಕೆ ಇಡುವುದು ನಡೆಯುತ್ತಲೇ ಇರುತ್ತದೆ. ಲೈಗರ್‍‍ನ ಸ್ವಯಂ ಬ್ಯಾಲೆನ್ಸಿಂಗ್ ಎಲೆಕ್ಟ್ರಿಕ್ ಸ್ಕೂಟರ್ ಈ ಸಮಸ್ಯೆಗೆ ಸರಿಯಾದ ಪರಿಹಾರವಾಗಿದೆ. ಸ್ಕೂಟರ್‌ನ ಉತ್ಪಾದನಾ ಆವೃತ್ತಿಯು ಹೇಗಿರಲಿದೆ ಹಾಗೂ ಹೇಗೆ ಸವಾರಿ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Self-Balancing Electric Scooter In India: Liger Mobility Electric Scooter’s Video & Details - Read in kannada
Story first published: Friday, September 20, 2019, 15:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X